ಇತರ ಪ್ರಸಿದ್ದ ಹಣಕಾಸು ಹಾಗೂ ಬ್ಯಾಂಕಿಂಗ್ ಆ್ಯಪ್‌ಗಳಂತೆಯೇ ( Banking App ) ಪೇಟಿಎಂ (Paytm) ಕೂಡ ಮಹತ್ವದ್ದಾಗಿದೆ. ಯುಪಿಐ (UPI) ಆಧಾರಿತ ಹೆಚ್ಚಿನ ವಹಿವಾಟುಗಳನ್ನು ಮಾಡಲು ಜನರು ಹೆಚ್ಚಾಗಿ ಪೇಟಿಎಂ ಅನ್ನು ಬಳಸುತ್ತಾರೆ. ಆ್ಯಪ್‌ಗಳಲ್ಲಿ ಪಾವತಿ ಮಾಡಲು ಯುಪಿಐ ಐಡಿ ಕಡ್ಡಾಯವಾಗಿದೆ. ಯುಪಿಐ ಪಾವತಿಗಳನ್ನು (Payment) ನಡೆಸಲು ನಿಮ್ಮ ಮೊಬೈಲ್ ಸಂಖ್ಯೆ (Mobile Number) ಬ್ಯಾಂಕ್‌ನಲ್ಲಿ ನೋಂದಾವಣೆಗೊಂಡಿರಬೇಕು, ಅದೂ ಅಲ್ಲದೆ ಪ್ರತಿ ಪಾವತಿಯ ಮೊದಲು ನಿಮ್ಮ ರಹಸ್ಯ ಯುಪಿಐ ಪಿನ್ ಅನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಪೇಟಿಎಂ ಮೊಬೈಲ್ ಆ್ಯಪ್‌ನಲ್ಲಿ (Mobile App) ಯುಪಿಐ ಖಾತೆಯನ್ನು ರಚಿಸಿದಾಗ ಯುಪಿಐ ಐಡಿ ಸ್ವಯಂಚಾಲಿತವಾಗಿ ರಚನೆಯಾಗುತ್ತದೆ.
ವರ್ಚುವಲ್ ಪಾವತಿ ವಿಳಾಸವಾಗಿ ಕಾರ್ಯನಿರ್ವಹಿಸುತ್ತದೆ.
ಆನ್‌ಲೈನ್ ವಹಿವಾಟುಗಳು/ಹಣ ವರ್ಗಾವಣೆಗಳಿಗಾಗಿ ಯುಪಿಐ ಐಡಿಯು ವರ್ಚುವಲ್ ಪಾವತಿ ವಿಳಾಸವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮೂಲತಃ ನಿಮ್ಮ ಪಾವತಿ ವಿಳಾಸವಾಗಿದ್ದು, ಹಣವನ್ನು ಕಳುಹಿಸಲು/ಸ್ವೀಕರಿಸಲು ಬಳಸಬಹುದು.
ಪೇಟಿಎಂನಲ್ಲಿ ಯುಪಿಐ ಐಡಿ ರಚನೆ.
ಯುಪಿಐ ಐಡಿಯು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಯಾವುದೇ ಇತರ ವೈಯಕ್ತಿಕ ವಿವರಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿರುತ್ತದೆ. ತ್ವರಿತ, ತೊಂದರೆ-ಮುಕ್ತ ಪಾವತಿ ಅನುಭವವನ್ನು ಆನಂದಿಸಲು ನೀವು ಪೇಟಿಎಂನಲ್ಲಿ ಯುಪಿಐ ಐಡಿಯನ್ನು ರಚಿಸಬಹುದು.
ಖಾಸಗಿ ಯುಪಿಐ ಐಡಿ ರಚಿಸುವುದು ಹೇಗೆ?
ಯುಪಿಐ ಐಡಿ ಎಂಬುದು ಅಂಕೆಗಳು, ವರ್ಣಮಾಲೆಗಳು ಅಥವಾ ಫೋನ್ ಸಂಖ್ಯೆಗಳ ಸಂಯೋಜನೆಯಾಗಿದ್ದು, ಆ್ಯಪ್ ಅಥವಾ ನಿರ್ದಿಷ್ಟ ಬ್ಯಾಂಕ್‌ನೊಂದಿಗೆ ಸುಲಭ ವಹಿವಾಟು ನಡೆಸಲು ಅನುಕೂಲಕರವಾಗಿದೆ.
ಖಾಸಗಿ ಯುಪಿಐ ಐಡಿಯನ್ನು ಯಾರು ಬೇಕಾದರೂ ಹೊಂದಿಸಬಹುದಾಗಿದ್ದು, ಮೊದಲ ಬಾರಿಗೆ ಐಡಿ ರಚಿಸುವ ಸಮಯದಲ್ಲಿ ಸ್ವಯಂಚಾಲಿತವಾಗಿ ನೋಂದಾವಣೆಯಾಗುವ ಖಾಸಗಿ ಮೊಬೈಲ್ ಸಂಖ್ಯೆಯನ್ನು ಮರೆಮಾಡಬಹುದಾಗಿದೆ.
ಖಾಸಗಿ ಯುಪಿಐ ಐಡಿ ರಚಿಸಲು ಹಂತಗಳೇನು?
ಖಾಸಗಿ ಯುಪಿಐ ಐಡಿಯನ್ನು ಬೇರೆ ಬೇರೆ ಪ್ಲ್ಯಾಟ್‌ಫಾರ್ಮ್‌ಗಳಾದ ಫೋನ್‌ಪೇ, ಗೂಗಲ್ ಪೇ, ಪೇ ಪಾಲ್‌ನಲ್ಲಿ ಬಳಸಬಹುದಾಗಿದೆ.
ಪೇಟಿಎಂ ನಲ್ಲಿ ಖಾಸಗಿ ಯುಪಿಐ ಐಡಿ ರಚಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
ಇದಕ್ಕಾಗಿ ಮೊದಲಿಗೆ ನೀವು ಪೇಟಿಎಂ ಆ್ಯಪ್ ಲಾಂಚ್ ಮಾಡಬೇಕಾಗುತ್ತದೆ
ಮೇಲ್ಭಾಗದ ಎಡಮೂಲೆಯಲ್ಲಿ ಪ್ರೊಫೈಲ್ ಚಿತ್ರ ಟ್ಯಾಪ್ ಮಾಡಿ
ಯುಪಿಐ ಹಾಗೂ ಪೇಮೆಂಟ್ ಸೆಟ್ಟಿಂಗ್ಸ್ ವಿಭಾಗದಲ್ಲಿ ಕೆಳಕ್ಕೆ ಸ್ಕ್ರಾಲ್ ಮಾಡಿ
ಮುಂದಿನ ಪುಟದಲ್ಲಿ ಮ್ಯಾನೇಜ್ ಯುಪಿಐ ನಂಬರ್‌ಗೆ ಕೆಳಕ್ಕೆ ಸ್ಕ್ರಾಲ್ ಮಾಡಿ.
ಮ್ಯಾನೇಜ್ ಯುಪಿಐ ನಂಬರ್‌ನಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಇರುವ ಪೇಟಿಎಂ, ಫೋನ್‌ಪೇ, ಜಿಪೇ ಅಥವಾ ಯಾವುದೇ ಯುಪಿಐ ಆ್ಯಪ್‌ನಿಂದ ಹಣ ಸ್ವೀಕರಿಸಬಹುದು.
ಖಾಸಗಿ ಯುಪಿಐ ಸಂಖ್ಯೆ ರಚಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ
ಈ ಯುಪಿಐ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್ ಖಾತೆಯ ಬದಲಿಗೆ ಬಳಸಬಹುದು ಹಾಗೂ ಯಾವುದೇ ಯುಪಿಐ ಆ್ಯಪ್‌ನಿಂದ ಹಣ ಸ್ವೀಕರಿಸಬಹುದಾಗಿದೆ.
ಇದನ್ನೂ ಓದಿ: Paytm: ಪೇಟಿಎಂ ಮೂಲಕ ಗ್ರಾಹಕರು ಎಫ್ಡಿ ಹಣವನ್ನು ಬಳಸಿಕೊಳ್ಬಹುದು! ಹೇಗೆ ಗೊತ್ತಾ?
ಖಾಸಗಿ ಯುಪಿಐ ಸಂಖ್ಯೆ ಮಾನದಂಡಗಳೇನು
ಶೂನ್ಯದಿಂದ ಆರಂಭಗೊಂಡಿರಬಾರದು
ಒಂದೇ ರೀತಿಯ ಅಂಕೆಗಳನ್ನು ಹೊಂದಿರಬಾರದು
ಒಂದೇ ರೀತಿಯ ಮೂರು ಅಂಕೆಗಳಿಂದ ಕೊನೆಗೊಳ್ಳಬಾರದು
8-9 ಅಂಕೆಗಳ ಸಂಖ್ಯೆಗಳಾಗಿರಬೇಕು
ಆರೋಹಣ ಹಾಗೂ ಅವರೋಹಣ ಕ್ರಮದಲ್ಲಿರಬಾರದು ಉದಾ: 12345678, 987654321 ಇತ್ಯಾದಿ.
ಇದಾದ ನಂತರ ಖಾಸಗಿ ಯುಪಿಐ ಸಂಖ್ಯೆ ಹೊಂದಿಸಿ ಕ್ಲಿಕ್ ಮಾಡಿ.
ಯುಪಿಐ ಐಡಿ ನಮೂದಿಸುವ ಅಗತ್ಯವಿಲ್ಲ.
ಪೇಟಿಎಂ ಯುಪಿಐ ಪೇಮೆಂಟ್ ಆ್ಯಪ್‌ನಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಲು ಸ್ವೀಕರಿಸುವವರ ಯುಪಿಐ ಐಡಿಯನ್ನು ನಮೂದಿಸುವ ಅಗತ್ಯವಿಲ್ಲ.
ನಿಮ್ಮ ಸಂಪರ್ಕ ವಿಳಾಸದಿಂದ ಸ್ವೀಕರಿಸುವವರ ಸಂಪರ್ಕವನ್ನು ನೀವು ಸರಳವಾಗಿ ಆಯ್ಕೆ ಮಾಡಬಹುದು ಅಥವಾ ಹಣವನ್ನು ಕಳುಹಿಸಲು ಸ್ವೀಕರಿಸುವವರ ಸಂಪರ್ಕ ಸಂಖ್ಯೆಯನ್ನು ನಮೂದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ