Smart Phone: ಸ್ಮಾರ್ಟ್​ಫೋನ್​ನಿಂದಲೇ ಡೆಸ್ಕ್​ಟಾಪ್​ ಅನ್ನು ನಿಯಂತ್ರಿಸಬಹುದು! ಆದ್ರೆ ಈ ಆ್ಯಪ್​ಗಳಿಂದ ಮಾತ್ರ ಸಾಧ್ಯ

ಆನ್​ಲೈನ್​ನಲ್ಲಿ ಸ್ಮಾರ್ಟ್​ಫೋನ್​ನಿಂದ ಡೆಸ್ಕ್‌ಟಾಪ್ ಅನ್ನು ರನ್ ಮಾಡಬಹುದಾದ ಅನೇಕ ಅಪ್ಲಿಕೇಶನ್‌ಗಳಿವೆ. ಹಾಗಾದರೆ ಕೆಲವು ಆಪ್‌ಗಳು ಮತ್ತು ಅವುಗಳ ಬಳಕೆಯ ಬಗ್ಗೆ ತಿಳಿಯೋಣ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ತಂತ್ರಜ್ಞಾನ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಸ್ಮಾರ್ಟ್​ಫೋನ್​ ಮೂಲಕ ಡೆಸ್ಕ್​ಟಾಪ್​ ಅನ್ನು ನಿಯಂತ್ರಿಸಬಹುದಾಗಿದೆ. ಎಲ್ಲೇ ಇದ್ದರೂ ಕೂಡ ಸ್ಮಾರ್ಟ್​ಫೋನಿನಿಂದ ಕೆಲಸವನ್ನು ಮಾಡಬಹುದಾಗಿದೆ. ಬಹುತೇಕರು ಸ್ಮಾರ್ಟ್​ಫೋನ್​ ಮೂಲಕ  ಕರೆ (Call) ಮಾಡುವುದು, ಚಾಟ್ (Chat) ಮಾಡುವುದು, ಸಾಮಾಜಿಕ ಮಾಧ್ಯಮ ಬಳಸಲು ಮಾತ್ರ ಯೋಗ್ಯವಾಗಿದೆ ಎಂದುಕೊಂಡಿದ್ದರು. ಆದರೆ ಇದರಿಂದ ಲ್ಯಾಪ್​ಟಾಪ್ (Laptop)​ ಅಥವಾ ಡೆಸ್ಕ್​ಟಾಪ್​ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಷ್ಟರ ಮಟ್ಟಿಗೆ ಸ್ಮಾರ್ಟ್​ಫೋನ್​ಗಳು ಅಭಿವೃದ್ಧಿಗೊಂಡಿವೆ. ಸದ್ಯ ಆನ್​ಲೈನ್​ನಲ್ಲಿ (Online) ಸ್ಮಾರ್ಟ್​ಫೋನ್​ನಿಂದ ಡೆಸ್ಕ್‌ಟಾಪ್ ಅನ್ನು ರನ್ ಮಾಡಬಹುದಾದ ಅನೇಕ ಅಪ್ಲಿಕೇಶನ್‌ಗಳಿವೆ. ಹಾಗಾದರೆ ಕೆಲವು ಆಪ್‌ಗಳು ಮತ್ತು ಅವುಗಳ ಬಳಕೆಯ ಬಗ್ಗೆ ತಿಳಿಯೋಣ.

  ಟೀಮ್ ವ್ಯೂವರ್: ನೀವು ಆಲ್ ಇನ್ ಒನ್ ರಿಮೋಟ್ ಕಂಟ್ರೋಲ್ ಪರಿಹಾರವನ್ನು ಹುಡುಕುತ್ತಿದ್ದರೆ, ಟೀಮ್ ವ್ಯೂವರ್ ಬೆಸ್ಟ್ ​ ಅಪ್ಲಿಕೇಶನ್ ಆಗಿದೆ. ಇದು ಕಂಪ್ಯೂಟರ್‌ಗಳು ಮತ್ತು ಮೊಬೈಲ್ ಸಾಧನಗಳಿಗೆ ವೇಗದ ಮತ್ತು ಸುರಕ್ಷಿತ ಪ್ರವೇಶವನ್ನು ಒದಗಿಸುತ್ತದೆ.

  ಈ ಉಪಕರಣವು ನಿಮಗೆ ಅಥವಾ ನಿಮ್ಮ ತಂಡಕ್ಕೆ ಯಾವುದೇ ಸಿಸ್ಟಮ್ ಅನ್ನು ರಿಮೋಟ್ ಆಗಿ ಪ್ರವೇಶಿಸಲು ಸಹಾಯ ಮಾಡುತ್ತದೆ, ಜೊತೆಗೆ ಆನ್‌ಲೈನ್ ಸಪೋರ್ಟ್​ ಒದಗಿಸುತ್ತದೆ. ಇದರ ಮೂಲಕ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಪ್ಯೂಟರ್‌ಗಳು ಅಥವಾ ಸರ್ವರ್‌ಗಳನ್ನು ನಿರ್ವಹಿಸಬಹುದಾಗಿದೆ. ಜೊತೆಗೆ ಪರ್ಸನಲ್​ ಆಗಿ ಬಳಸುವವರಿಗೆ ಸಂಪೂರ್ಣವಾಗಿ ಉಚಿತವಾಗಿದೆ.

  ಇದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ:

  ಹಂತ 1. ಮೊದಲಿಗೆ Google Play Store ನಿಂದ Android ಫೋನ್‌ನಲ್ಲಿ TeamViewer ಅನ್ನು ಹುಡುಕಿ. ನಂತರ ಆ್ಯಪ್​ ಅನ್ನು ಇನ್​​​ಸ್ಟಾಲ್​ ಮಾಡಿ.

  ಹಂತ 2. ಇನ್​​ಸ್ಟಾಲ್​ ಮಾಡಿದ ಬಳಿಕ ಆನ್-ಸ್ಕ್ರೀನ್ ನೋಟಿಫಿಕೇಶ್​​ಗಳನ್ನು ಸರಿಯಾಗಿ ಓದಿ ಅದರ ಮೇಲೆ ಕ್ಲಿಕ್​ ಮಾಡಿ

  ಹಂತ 3. ಈಗ, ನಿಮ್ಮ ಕಂಪ್ಯೂಟರ್​​ ನಲ್ಲಿ TeamViewer.exe ಇನ್​ಸ್ಟಾಲ್​ ಆಗುತ್ತದೆ. ಅಪ್ಲಿಕೇಶನ್ ನಿಮ್ಮ ಸಾಧನಕ್ಕಾಗಿ ಬಳಕೆದಾರ ID ಅನ್ನು ರಚಿಸುತ್ತದೆ.

  ಹಂತ 4. ನಿಮ್ಮ ಮೊಬೈಲ್‌ನಲ್ಲಿ 'ಪಾಲುದಾರ ID' ಅಡಿಯಲ್ಲಿ ರಚಿಸಿದ ID ಅನ್ನು ನಮೂದಿಸಿ.

  ಹಂತ 5. ಬಳಿಕ ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಡೆಸ್ಕ್​ಟಾಪ್​ ಅನ್ನು ನಿರ್ವಹಿಸಬಹುದು.

  ಇದನ್ನೂ ಓದಿ: Snapchat: ಸ್ನಾಪ್​ಚಾಟ್​ಗೆ ಬಂದಿದೆ ಡ್ಯುಯೆಲ್ ಕ್ಯಾಮೆರಾ ಫೀಚರ್​! ಇದನ್ನು ಬಳಸೋದು ಹೇಗೆ ಗೊತ್ತಾ?

  2.ಯುನಿಫೈಡ್​ ರಿಮೋಟ್

  Android ಸಾಧನದಿಂದ ನಿಮ್ಮ PC ಅನ್ನು ನಿಯಂತ್ರಿಸಲು ಬಯಸುವಿರಾದರೆ ಯುನಿಫೈಡ್ ರಿಮೋಟ್ ಗೋ-ಟು ಅಪ್ಲಿಕೇಶನ್‌ಗಳಲ್ಲಿ ಈ ಆಯ್ಕೆಯಲ್ಲಿ ಕಾಣಿಸುತ್ತದೆ. ಅಪ್ಲಿಕೇಶನ್ ನಿಮ್ಮ ಡೆಸ್ಕ್‌ಟಾಪ್ ಅನ್ನು ರಿಮೋಟ್‌ನಿಂದ ನಿಯಂತ್ರಿಸಲು ಬ್ಲೂಟೂತ್ ಅಥವಾ ವೈಫೈ ಅನ್ನು ಬಳಸುತ್ತದೆ. 90 ಕ್ಕೂ ಹೆಚ್ಚು ಪ್ರಿ-ಲೋಡ್ ಮಾಡಲಾದ ಪ್ರೋಗ್ರಾಂಗಳೊಂದಿಗೆ ಬರುತ್ತದೆ. ಇದರ ಮೂಲಕ ಸರ್ವರ್-ಸೈಡ್ ಡೆಸ್ಕ್‌ಟಾಪ್ ಪ್ರೋಗ್ರಾಂ ಅನ್ನು ಡೌನ್‌ಲೋಡ್ ಮಾಡಬಹುದು. ಜೊತೆಗೆ ಲಿನಕ್ಸ್ ಅನ್ನು ಸಹ ಬೆಂಬಲಿಸುತ್ತದೆ.

  ಬಳಕೆ:

  ಹಂತ 1: ನಿಮ್ಮ ಕಂಪ್ಯೂಟರ್‌ನಲ್ಲಿ ಯುನಿಫೈಡ್​ ರಿಮೋಟ್ ಸರ್ವರ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್​ಸ್ಟಾಲ್​ ಮಾಡಿ.

  ಹಂತ 2: ನಿಮ್ಮ ಕಂಪ್ಯೂಟರ್‌ನಂತೆ ಅದೇ ವೈ-ಫೈ ನೆಟ್‌ವರ್ಕ್‌ಗೆ ನಿಮ್ಮ Android ಫೋನ್ ಅನ್ನು ಸಂಪರ್ಕಿಸಿ. ಕಂಪ್ಯೂಟರ್ ಬ್ಲೂಟೂತ್ ಆನ್​ ಇದ್ದರೆ, ಅದನ್ನು ನಿಮ್ಮ ಫೋನ್‌ಗೆ ಕನೆಕ್ಟ್​​ ಮಾಡಿ.

  ಹಂತ 3: ಹೊಸ ಸರ್ವರ್ ಅನ್ನು ಕನೆಕ್ಟ್​​ ಮಾಡುವಾಗ, 'ಆಟೋಮ್ಯಾಟಿಕ್​' ಆಯ್ಕೆಮಾಡಿ ಮತ್ತು ಅಪ್ಲಿಕೇಶನ್ ನಿಮ್ಮ ಕಂಪ್ಯೂಟರ್ ಅನ್ನು ಸರ್ಚ್​ ಮಾಡುತ್ತದೆ. ಸಂಪರ್ಕಿಸಲು ನಿಮ್ಮ ಕಂಪ್ಯೂಟರ್ ಹೆಸರನ್ನು ಟ್ಯಾಪ್ ಮಾಡಿ.

  ಈಗ ನಿಮ್ಮ ಫೋನ್‌ನಿಂದ ನಿಮ್ಮ ಕಂಪ್ಯೂಟರ್ ಅನ್ನು ಕಂಟ್ರೋಲ್​​ ಮಾಡಬಹುದಾಗಿದೆ.

  ಇದನ್ನೂ ಓದಿ: Viral Video: ಬರೋಬ್ಬರಿ 14 ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ಆನೆ! ಸಾವು ಗೆದ್ದ ಗಜರಾಜನ ವಿಡಿಯೋ ಇಲ್ಲಿದೆ ನೋಡಿ

  ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್

  ಇದು ಗೂಗಲ್​ನಿಂದ ರಚಿಸಲ್ಪಟ್ಟ ಅಪ್ಲಿಕೇಶನ್​ ಆಗಿದೆ. ಕ್ರೋಮ್​ ರಿಮೋಟ್ ಡೆಸ್ಕ್‌ಟಾಪ್ ನಿಮ್ಮ ಕಂಪ್ಯೂಟರ್ ಅನ್ನು ವೀಕ್ಷಿಸಲು ಸಹಾಯ ಮಾಡುತ್ತದೆ. ಫೋನ್​​ನಲ್ಲಿ ಈ ಆ್ಯಪ್​ ಇದ್ದರೆ ಸಾಕು, ಕಂಪ್ಯೂಟರ್ ಅನ್ನು ಎಲ್ಲಿಂದಲಾದರೂ ನಿಯಂತ್ರಿಸಬಹುದಾಗಿದೆ. ಆದರೆ, ರಿಮೋಟ್ ವೈಶಿಷ್ಟ್ಯಗಳನ್ನು ಬಳಸಲು ನೀವು Google ID ಅನ್ನು ಹೊಂದಿರಬೇಕು.

  ಹಂತ 1. ನಿಮ್ಮ ಆ್ಯಂಡ್ರಾಯ್ಡ್​​ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಕ್ರೋಮ್​ ರಿಮೋಟ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ತೆರೆಯಿರಿ. ಇಲ್ಲದಿದ್ದರೆ ಗೂಗಲ್​ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಿ.

  ಹಂತ 2. ಆ ಬಳಿಕ ನಿಮ್ಮ ಕಂಪ್ಯೂಟರ್ ಅನ್ನು ಸರ್ಚ್​ ಮಾಡಿ, ಕನೆಕ್ಟ್​​ ಮಾಡಿ

  ಹಂತ 3. ನೀವು ಕಂಪ್ಯೂಟರ್ ಅನ್ನು ಎರಡು ವಿಭಿನ್ನ ವಿಧಾನಗಳಲ್ಲಿ ನಿಯಂತ್ರಿಸಬಹುದು.
  Published by:Harshith AS
  First published: