ನಿಮ್ಮ ಹಳೇಯ ಸ್ಮಾರ್ಟ್​ಫೋನ್​ ಮಾರುವ ಮುನ್ನ ಈ ಕೆಲಸ ತಪ್ಪದೇ ಮಾಡಿ!

ಸಾಕಷ್ಟು ಗ್ರಾಹಕರು ಕಂಪನಿಗಳು ನೀಡುವ ಏಕ್ಸ್​ಚೇಂಜ್​ ಆಫರ್​ಗೆ ಮರುಳಾಗಿ ಹೊಸ ಫೋನ್​ ಕೊಂಡುಕೊಳ್ಳಲು ಮುಂದಾಗುತ್ತಾರೆ. ಆದರೆ ಹಳೆಯ ಸ್ಮಾರ್ಟ್​ಫೋನ್​​ ಮಾರಾಟ ಮಾಡುವ ಮುನ್ನ ಅದರಲ್ಲಿರುವ ಡೇಟಾಗಳು ಡಿಲೀಟ್​ ಆಗಿದೆಯಾ ಎನ್ನುವುದು ಖಚಿತ ಪಡಿಸಿಕೊಂಡು ಮಾರಾಟ ಮಾಡುವುದು ಒಳಿತು.

news18
Updated:May 28, 2019, 8:36 PM IST
ನಿಮ್ಮ ಹಳೇಯ ಸ್ಮಾರ್ಟ್​ಫೋನ್​ ಮಾರುವ ಮುನ್ನ ಈ ಕೆಲಸ ತಪ್ಪದೇ ಮಾಡಿ!
ಪ್ರಾತಿನಿಧಿಕ ಚಿತ್ರ
  • News18
  • Last Updated: May 28, 2019, 8:36 PM IST
  • Share this:
ಪ್ರತಿ ದಿನ ಹೊಸ ಸ್ಮಾರ್ಟ್​ಪೋನ್​ಗಳು ಮಾರುಕಟ್ಟೆಗೆ ಬರುತ್ತಿವೆ. ಹಾಗಾಗೀ ಗ್ರಾಹಕರು ತಮ್ಮ ಹಳೇಯ ಸ್ಮಾರ್ಟ್​ಫೋನ್​ ಮಾರಾಟ ಮಾಡಿ  ಹೊಸ ಫೋನ್​​ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಆನ್​ಲೈನ್​ ಮಾರುಕಟ್ಟೆಯಲ್ಲಿ ​ ತಮ್ಮ ಹಳೆಯ ಫೋನ್ ಅನ್ನು ಏಕ್ಸ್​​ಚೇಂಚ್​ ಮಾಡಿ ಹೊಸ ಫೋನ್​ ಖರೀದಿಸುತ್ತಿದ್ದಾರೆ. ಆದರೆ ನಿಮ್ಮ  ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಕೆಲ ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಡುವುದು ಒಳಿತು​.

ಸಾಕಷ್ಟು ಗ್ರಾಹಕರು ಕಂಪನಿಗಳು ನೀಡುವ ಏಕ್ಸ್​ಚೇಂಜ್​ ಆಫರ್​ಗೆ ಮರುಳಾಗಿ ಹೊಸ ಫೋನ್​ ಕೊಂಡುಕೊಳ್ಳಲು ಮುಂದಾಗುತ್ತಾರೆ. ಆದರೆ ಹಳೆಯ ಸ್ಮಾರ್ಟ್​ಫೋನ್​​ ಮಾರಾಟ ಮಾಡುವ ಮುನ್ನ ಅದರಲ್ಲಿರುವ ಡೇಟಾಗಳು ಡಿಲೀಟ್​ ಆಗಿದೆಯಾ ಎನ್ನುವುದು ಖಚಿತ ಪಡಿಸಿಕೊಂಡು ಮಾರಾಟ ಮಾಡುವುದು ಒಳಿತು.

ಇದನ್ನೂ ಓದಿ: ಮೋದಿ ಅಲೆ ಮತ್ತು ರಾಹುಲ್ ಗಾಂಧಿ ಬಗ್ಗೆ ರಜಿನೀಕಾಂತ್ ಹೇಳೋದೇನು?

ನಿಮ್ಮ ಹಳೇಯ ಸ್ಮಾರ್ಟ್​ಫೋನ್​ನಲ್ಲಿ ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್​, ಫೈಲ್ಸ್​​, ಫೋಟೋಗಳನೆಲ್ಲಾ ಬ್ಯಾಕಪ್​ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್​ನಲ್ಲಿ ದೊರೆಯುವ ಒನ್​​ಡ್ರೈವ್​​ ಬಳಕೆ ಮಾಡಬಹುದಾಗಿದೆ. ಅಂತೆಯೇ, ಟ್ವಿಟ್ಟರ್​, ಫೇಸ್ಬುಕ್​​, ಇನ್​ಸ್ಟಾಗ್ರಾಂ, ಫೋನ್​ ಪೇ, ಗೂಗಲ್​ ಪೇ, ಪೇಟಿಎಂ ಅಕೌಂಟ್​​ನಿಂದ​​​ ಲಾಗ್​​ ಜೌಟ್​​ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ.

ಡೇಟಾ ಡಿಲೀಟ್​ ಮಾಡುವುದು ಹೇಗೆ ?

-ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಗ್ರಾಹಕರು​​ ಸೆಟ್ಟಿಂಗ್ಸ್​​​- ಸೆಕ್ಯೂರಿಟಿ-ಲಾಕ್​ಸ್ಕ್ರೀನ್​ ಓಪನ್​ ಮಾಡಿ. ನಂತರ ಫ್ಯಾಕ್ಟರಿ ರಿಸೆಟ್​​ ಮಾಡುವ ಮೂಲಕ ಎಲ್ಲಾ ಡೇಟಾವನ್ನು ಅಳಿಸಿಹಾಕಬಹುದು.

-ಐಫೋನ್ ಬಳಕೆದಾರರು ಡೇಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಯೂಸರ್ ಪ್ರೊಫೈಲ್-ಐಕ್ಲೌಡ್-ಫೈಂಡ್ ಮೈ ಐಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ. ಟರ್ನ್ ಆನ್ ಮಾಡಿದ ನಂತರ ಆ್ಯಪ್​​​ಗಳನ್ನೆಲ್ಲ ಲಾಗೌಟ್ ಮಾಡಬಹುದು. ರಿಸೆಟ್ ಮಾಡುವ ಮುನ್ನ ನಿಮ್ಮ ಐಕ್ಲೌಡ್ ಅಕೌಂಟ್ ರಿಮೂವ್ ಮಾಡಲು ಸೆಟ್ಟಿಂಗ್ಸ್-ಐಕ್ಲೌಡ್-ಸೈನ್ ಔಟ್ ಕ್ಲಿಕ್ ಮಾಡಿ. ನಂತರ ಸೆಟ್ಟಿಂಗ್ಸ್-ಜನರಲ್-ರಿಸೆಟ್-ಎರೇಸ್​​​​ನಲ್ಲಿರುವ ಆಲ್ ಕಂಟೆಂಟ್ ಮತ್ತು ಸೆಟ್ಟಿಂಗ್ಸ್ ಕ್ಲಿಕ್ ಮಾಡಿದರೆ ಡೇಟಾ ಡಿಲೀಟ್ ಆಗುತ್ತದೆ.-ವಿಂಡೋಸ್ ಫೋನ್ ಬಳಸುತ್ತಿರುವವರು ಡೇಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಅಬೌಟ್-ರಿಸೆಟ್ ಯುವರ್ ಫೋನ್ ಆಪ್ಷನ್ ಅನ್ನು ಕ್ಲಿಕ್ ಮಾಡಿ. ರಿಸೆಟ್ ಕನ್ಫರ್ಮ್ ಮಾಡಲು ನಿಮ್ಮ ಪಾಸ್​​​​ವರ್ಡ್​ ರಿ ಎಂಟರ್ ಮಾಡುವಂತೆ ಸೂಚಿಸುತ್ತದೆ.

First published:May 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading