ನಿಮ್ಮ ಸ್ಮಾರ್ಟ್​ಫೋನ್ ಹೊಸದರಂತೆ ಕಾಣಬೇಕೆ?; ಹಾಗಿದ್ದರೆ​ ಈ ರೀತಿ ಮಾಡಿ

ನಾವು ಬಳಸುವ ಸ್ಮಾರ್ಟ್​ ಫೋನ್​ ಅನ್ನು ಕ್ಲೀನ್​ ಆಗಿ ಇಡುವ ಜವಬ್ದಾರಿ ನಮ್ಮ ಕೈಯಲ್ಲಿದೆ. ಹೊಸ ಮೊಬೈಲ್​ನಂತೆ ಕಂಗೊಳಿಸಲು ಕೆಲವೊಂದು ಸರಳ ಸೂತ್ರವನ್ನು ಬಳಸಿದರೆ ನಿಮ್ಮ ಮೊಬೈಲ್​ ಅನ್ನು ಕ್ಲೀನ್​ ಆಗಿ ಇಡಬಹುದು

news18-kannada
Updated:March 25, 2020, 10:00 PM IST
ನಿಮ್ಮ ಸ್ಮಾರ್ಟ್​ಫೋನ್ ಹೊಸದರಂತೆ ಕಾಣಬೇಕೆ?; ಹಾಗಿದ್ದರೆ​ ಈ ರೀತಿ ಮಾಡಿ
ಸ್ಮಾರ್ಟ್​ಫೋನ್​
 • Share this:
ಅನೇಕರು ತಮ್ಮ ಸ್ಮಾರ್ಟ್​ಫೋನ್​ ಹೊಸತರಂತೆ ಕಾಣಲು ಸಾಕಷ್ಟು ಸರ್ಕಸ್​ ಮಾಡುತ್ತಾರೆ. ಏಷ್ಟೇ ಜೋಪಾನವಾಗಿ ಬಳಸಿದರೂ ಮೊಬೈಲ್​ ಅಂದವಾಗಿ ಕಾಣಬೇಕು ಎಂದು ಆಸೆಯನ್ನಿಟ್ಟುಕೊಂಡಿತ್ತಾರೆ. ಆದರೆ ಅವರ ಪ್ರಯತ್ನಗಳು ವಿಫಲವಾಗುವುದೇ ಹೆಚ್ಚು.

ನಾವು ಬಳಸುವ ಸ್ಮಾರ್ಟ್​ ಫೋನ್​ ಅನ್ನು ಕ್ಲೀನ್​ ಆಗಿ ಇಡುವ ಜವಬ್ದಾರಿ ನಮ್ಮ ಕೈಯಲ್ಲಿದೆ. ಹೊಸ ಮೊಬೈಲ್​ನಂತೆ ಕಂಗೊಳಿಸಲು ಕೆಲವೊಂದು ಸರಳ ಸೂತ್ರವನ್ನು ಬಳಸಿದರೆ ನಿಮ್ಮ ಮೊಬೈಲ್​ ಅನ್ನು ಕ್ಲೀನ್​ ಆಗಿ ಇಡಬಹುದು. ಹಾಗಿದ್ದರೆ, ನಾವು ಹೇಳುವ ಸರಳ ಸೂತ್ರವನ್ನು ಬಳಸಿ ನಿಮ್ಮ ಮೊಬೈಲ್​ ಅನ್ನು ಹೊಸತರಂತೆ  ಮಾಡುವ ಕೆಲವು ಅಂಶಗಳನ್ನು ತಿಳಿಸುತ್ತೇವೆ. ಇವುಗಳನ್ನು ಪಾಲಿಸಿ ನಿಮ್ಮ ಮೊಬೈಲ್​ ಫೋನ್​ ಅನ್ನು ಸ್ವಚ್ಚವಾಗಿಸಿರಿ.


 • ಮೊದಲಿಗೆ ನಿಮ್ಮ ಮೊಬೈಲ್​ಫೋನ್​ ಅನ್ನು ಸ್ವಿಚ್​ ಆಫ್​ ಮಾಡಿ ಆನಂತರ ಪ್ರೊಟೆಕ್ಟೀವ್​ ಕವರ್​ ಅನ್ನು ತೆಗೆಯಿರಿ.

 • ಸ್ವಚ್ಛಮಾಡುವ ಸಂದರ್ಭದಲ್ಲಿ ಮೊಬೈಲ್​ ಕೈಯಿಂದ ಬೀಳುವ ಸಾಧ್ಯತೆಗಳಿರುತ್ತವೆ. ಆ ಕಾರಣಕ್ಕಾಗಿ ಟೇಬಲ್​ ಮೇಲೆ ಇಟ್ಟು ಬ್ಯಾಟರಿ ರಿಮೂವ್​ ಮಾಡಿರಿ.

 • ಒಣಗಿದ ಕಾಟನ್​ ಬಟ್ಟೆಯಿಂದ ಮೊಬೈಲ್​ ಸ್ಕ್ರೀನ್​ ​ಅನ್ನು ನಿಧಾನವಾಗಿ ಸ್ವಚ್ಚಗೊಳಿಸಿ.

 • ಕ್ಲೀನಿಂಗ್​ ಲಿಕ್ವಿಡ್​ ಬಳಸಿದ ಬಟ್ಟೆಯನ್ನು ಬಳಸಿಕೊಂಡು ಮೊಬೈಲ್​ ಸ್ವಚ್ಛಗೊಳಿಸಬಹುದು.
 • ಫೋನಿನ ನಾಲ್ಕು ಬದಿಯನ್ನು ಬ್ರಶ್​ ಮೂಲಕ ಸ್ವಚ್ಛ ಮಾಡಿರಿ. ಈ ಭಾಗದಲ್ಲಿ ಹೆಚ್ಚಿನ ಧೂಳು ಅವಿತಿರುವುದರಿಂದ ಬ್ರಶ್​ ಬಳಸುವುದು ಉತ್ತಮ.

 • ಫೋನಿನ ಬ್ಯಾಕ್​ ಸೈಡ್​ ಸ್ವಚ್ಛಗೊಳಿಸುವಾಗ ಲಿಕ್ವಿಡ್​ ಬಟ್ಟೆಯನ್ನು ಬಳಸಿದರೆ ಉತ್ತಮ. ಯಾವುದೇ ಕಾರಣಕ್ಕೂ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಬಳಸದಿರಿ.

 • ಫೋನಿನ ಚಾರ್ಜಿಂಗ್​ ಪೋರ್ಟ್​, ಸ್ಪೀಕರ್​ ಮತ್ತು ಆಡಿಯೋ ಪೋರ್ಟ್​ ಸ್ವಚ್ಛಗೊಳಿಸಲು ಬ್ಲೋವರ್​​​ ಬಳಕೆಮಾಡಿ. ಇಲ್ಲವಾದರೆ ಬಾಯಿಯಿಂದ ಗಾಳಿ ಊದಿ ಸ್ವಚ್ಛಗೊಳಿಸಿ.

 • ಮೊಬೈಲ್​ ಫೋನಿನ ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ ಕ್ಲೀನಿಂಗ್​ ಲಿಕ್ವಿಡ್​​ ಬಳಸಿದ ಬಟ್ಟೆಯಿಂದ ಒರೆಸಿರಿ.

 • ಮೊಬೈಲ್​ ಪ್ರೊಟೆಕ್ವಿವ್​ ಕವರ್​ ಹೊಂದಿದ್ದರೆ ಕೊನೆಗೆ ಸ್ವಚ್ಚಗೊಳಿಸಿ. ಪ್ರೊಟೆಕ್ವಿವ್​ ಕವರ್​​ನ ನಾಲ್ಕು ಬದಿಯನ್ನು ಧೂಳು ಅವಿತಿರುವುದರಿಂದ ಆ ಭಾಗಗಳನ್ನು ಹೆಚ್ಚು ಸ್ವಚ್ಚಮಾಡಿರಿ.

 • ಸಂಪೂರ್ಣ ಸ್ವಚ್ಛಗೊಳಿಸಿದ ನಂತರ 5 ನಿಮಿಷ ತಡಮಾಡಿ ಸ್ವಿಚ್​​ ಆನ್​ ಮಾಡಿರಿ.


ಇದನ್ನೂ ಓದಿ: Coron Effect: ರಿಯಲ್​ಮಿ ನೋರ್ಜೊ ಸ್ಮಾರ್ಟ್​ಫೋನ್ ಬಿಡುಗಡೆ ದಿನಾಂಕ ಮುಂದೂಡಿಕೆ
First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading