• Home
 • »
 • News
 • »
 • tech
 • »
 • Gadgets Cleaning Tips: ಸ್ಪೀಕರ್‌ ಕ್ಲೀನ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಖತ್ ಮಾಹಿತಿ

Gadgets Cleaning Tips: ಸ್ಪೀಕರ್‌ ಕ್ಲೀನ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಖತ್ ಮಾಹಿತಿ

ಸೌಂಡ್ ಬಾಕ್ಸ್

ಸೌಂಡ್ ಬಾಕ್ಸ್

ಸಂಗಿತ ಪ್ರಿಯರು ಸಂಗೀತವನ್ನು ಕೇಳಲು ಮೊಬೈಲ್ ಬಳಸುತ್ತಾರೆ. ಅದರೆ ಸಂಗೀತದ ಶಬ್ದ ಜೊರಾಗಿ ಕೇಳಲು ನಾವು ಸೌಂಡ್ ಬಾಕ್ಸ್ ಬಳಸುತ್ತೇವೆ. ಬಳಸಲು ನಮಗೆ ಗೊತ್ತು, ಅದರೆ ಅದನ್ನು ಕ್ಲಿನ್ ಮಾಡುವುದು ಹೇಗೆ ಅನ್ನುವುದನ್ನು ತಿಳಿಯಬೇಕಾ? ಹಾಗದರೆ ಇಲ್ಲಿದೆ ನೋಡಿ ಮಾಹಿತಿ.

 • Share this:

  ಸಂಗಿತ ಪ್ರಿಯರು (Song Lovers) ಸಂಗೀತವನ್ನು ಕೇಳಲು ಮೊಬೈಲ್ (Mobile) ಬಳಸುತ್ತಾರೆ. ಅದರೆ ಸಂಗೀತದ ಶಬ್ದ ಜೊರಾಗಿ ಕೇಳಲು ನಾವು ಸೌಂಡ್ ಬಾಕ್ಸ್ (Sound Box) ಬಳಸುತ್ತೇವೆ. ಅದರೆ ಅದನ್ನು ಸ್ವಚ್ಚಗೊಳಿಸುವುದು ಹೇಗೆ ಅನ್ನುವುದನ್ನ ನಾವು ತಿಳಿದುಕೊಂಡಿರುವುದು ಕಡಿಮೆ. ಹಾಗದರೆ ನೀವು ಯಾವ ರೀತಿ ಸೌಂಡ್ ಬಾಕ್ಸ್ ಅನ್ನು ಕ್ಲಿನ್ ಮಾಡಬೇಕು ಅನ್ನುವುದನ್ನ ತಿಳಿಯಿರಿ.  ಫಿಲಿಪ್ಸ್‌, (Philips) ಬೋಟ್ (Boat), ಜೆಬಿಎಲ್‌ (JBL) ಸೇರಿದಂತೆ ಹಲವು ಕಂಪೆನಿಗಳು ವಿವಿಧ ಫೀಚರ್ಸ್‌ (Feature) ಇರುವ ಸ್ಪೀಕರ್‌ಗಳನ್ನು ಪರಿಚಯಿಸಿವೆ. ಆದರೆ, ಸ್ಪೀಕರ್‌ಗಳನ್ನು ಕೊಂಡುಕೊಳ್ಳುವುದರ ಜೊತೆಗೆ ಅವುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಜವಬ್ದಾರಿಯನ್ನೂ ಸಹ ನಾವು ವಹಿಸಬೇಕು. ಇಲ್ಲಿದೆ ನೋಡಿ ಟಿಪ್ಸ್.


  ಹೌದು, ಯಾವುದೇ ಗ್ಯಾಜೆಟ್‌ ಆದರೂ ಸಹ ತನ್ನದೇ ಆದ ಮೌಲ್ಯವನ್ನು ಹೊಂದಿರುತ್ತದೆ. ಅದರಲ್ಲೂ ಮನೆಯಲ್ಲಿ ಒಂದು ಅದ್ಭುತ ಸ್ಪೀಕರ್‌ ಇರಿಸಿದರೆ ಅದು ಮನೆಗೆ ಇನ್ನಷ್ಟು ಅಂದ ನೀಡುವ ಡಿವೈಸ್‌ ಆಗಿರಬೇಕು. ಆ ರೀತಿ ಇರಬೇಕು ಅಂದರೆ ನೀವು ಅದನ್ನು ಕಾಲಕಾಲಕ್ಕೆ ಸ್ವಚ್ಛ ಮಾಡುವುದು ಅನಿವಾರ್ಯ. ಹಾಗಿದ್ರೆ ಅದನ್ನು ಹೇಗೆ ಸ್ವಚ್ಛ ಮಾಡುವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಈ ಟಿಪ್ಸ್ ನ ಫೋಲೊ ಮಾಡಿ.


  ಯಾವ ರೀತಿಯಲ್ಲಿ ಸ್ಪೀಕರ್‌ಗಳನ್ನು ಸ್ವಚ್ಛಗೊಳಿಸಬೇಕು ಎಂಬ ಬಗ್ಗೆ ನಾವು ಇಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ. ಇದಕ್ಕಾಗಿ ನಿಮಗೆ ಕೆಲವು ಮೈಕ್ರೋಫೈಬರ್ ಬಟ್ಟೆಗಳು ಮತ್ತು ಮೃದುವಾದ ಬ್ರಷ್‌ನ ಅಗತ್ಯವಿರುತ್ತದೆ. ಈ ಮೂಲಕ ಸ್ಪೀಕರ್ ಕ್ಯಾಬಿನೆಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಮಾಡಬಹುದಾಗಿದೆ. ಮತ್ತು ಯಾವುದೇ ತೊಂದರೆ ಇಲ್ಲದೆ ಈ ಟಿಪ್ಸ್ ಅನ್ನ ಫೋಲೊ ಮಾಡಬಹುದು.


  ಸ್ಪೀಕರ್ ಕ್ಯಾಬಿನೆಟ್‌ ಕ್ಲೀನ್ ಮಾಡುವುದೇಗೆ ಗೊತ್ತಾ?


  ನಿಮ್ಮ ಸ್ಪೀಕರ್ ಕ್ಯಾಬಿನೆಟ್‌ ಕ್ಲೀನ್‌ ಮಾಡಲು ಮೊದಲು ನೀವು ಎರಡು ಮೈಕ್ರೊಫೈಬರ್ ಬಟ್ಟೆಗಳನ್ನು ಬಳಕೆ ಮಾಡಬಹುದು. ಒಂದನ್ನು ಉಗುರುಬೆಚ್ಚಗಿನ ನೀರಿನಲ್ಲಿ ತೇವಗೊಳಿಸಿ ಕ್ಯಾಬಿನೆಟ್‌ಗಳಿಂದ ಧೂಳನ್ನು ಒರೆಸಿ ಅದರಲ್ಲೂ ಕ್ಯಾಬಿನೆಟ್ ಮರದಿಂದ ನಿರ್ಮಾಣ ಮಾಡಿದ್ದರೆ ಏಕಮುಖವಾಗಿ ಒರೆಸಿ. ನಂತರ ಒಣ ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಂಡು ಇದೇ ರೀತಿಯಲ್ಲಿ ಮತ್ತೆ ಒರೆಸಿ. ಸರಿಯಾಗಿ ಒಣಗಿದ ನಂತರ ಯಾವುದೇ ನೀರಿನ ಹನಿ ಉಳಿಯದಂತೆ ನೋಡಿಕೊಳ್ಳಬೇಕು.


  How to clean speakers Here is the information
  ಸೌಂಡ್ ಬಾಕ್ಸ್


  ಸ್ಪೀಕರ್ ಗ್ರಿಲ್‌ಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ


  ಸ್ಪೀಕರ್ ಗ್ರಿಲ್ಸ್ ಸ್ವಚ್ಛಗೊಳಿಸಲು ಜಿಗುಟಾದ ಲಿಂಟ್ ಬ್ರಷ್ ಅನ್ನು ಬಳಕೆ ಮಾಡಬಹುದು. ಈ ವೇಳೆ ಎಚ್ಚರಿಕೆಯಿಂದ ಅದನ್ನು ಸ್ವಚ್ಛಗೊಳಿಸಬೇಕು ಇಲ್ಲವಾದರೆ ಸ್ಪೀಕರ್‌ಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಕೇವಲ ಮೇಲ್ಮೈಯನ್ನು ಕ್ಲೀನ್ ಮಾಡಬೇಕೆಂದರೆ ಏನು ಸಮಸ್ಯೆ ಇರುವುದಿಲ್ಲ. ಅದರೆ  ಒಳಗಿನ ಭಾಗವನ್ನೂ ಕ್ಲೀನ್‌ ಮಾಡಬೇಕು ಎಂದುಕೊಂಡರೆ ಕಂಪೆನಿ ನಿಮಗೆ ನೀಡಲಾದ ಕೈಪಿಡಿಯನ್ನು ಅಂದರೆ ಮಾನ್ಯುವಲ್ ಗೈಡ್ ಅನ್ನು ಓದಿಕೊಂಡು ಗ್ರಿಲ್‌ ಅನ್ನು ಓಪನ್‌ ಮಾಡಿ ನಂತರ ಕ್ಲೀನ್‌ ಮಾಡಬಹುದಾಗಿದೆ. ಆತುರದಿಂದ ಗ್ರಿಲ್ ಅನ್ನು ಕ್ಲಿನ್  ಮಾಡಲು ಮುಂದಾದರೆ ಕಂಡಿತವಾಗಿಯು ಸ್ಪೀಕರ್ ಗೆ ತೊಂದರೆ ಆಗುತ್ತದೆ.


  ಗ್ರಿಲ್‌ಗಳನ್ನು ರಿಮೂವ್‌ ಮಾಡಿದ ನಂತರ ಡಿಟರ್ಜಂಟ್‌ ಯುಕ್ತ ನೀರಿನಲ್ಲಿ ಒದ್ದೆ ಮಾಡಿದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಒರೆಸಬಹುದು. ಇದಾದ ನಂತರ ಮತ್ತೊಂದು ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಂಡು ಶುದ್ಧ ನೀರಿನಲ್ಲಿ ನೆನೆಸಿ ನಂತರ ಅದರಿಂದ ನೀರನ್ನು ಹಿಂಡಿ ಡಿಟರ್ಜೆಂಟ್ ನೀರಿನ ಹನಿಗಳನ್ನು ಒರೆಸಿ ಕ್ಲೀನ್ ಮಾಡಿ ಇದರಿಂದ ಯಾವುದೆ ತೊಂದರೆ ಇರುವುದಿಲ್ಲ ಅದಂತು ಪಕ್ಕಾ.


  ಇದನ್ನೂ ಓದಿ: Smart Phone: ನೀವು ವನ್‌ಪ್ಲಸ್‌, ಒಪ್ಪೋ ಗ್ರಾಹಕರೇ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು


  ವೂಫರ್‌ಗಳ ಸ್ವಚ್ಛತೆ ಹೇಗೆ ಮಾಡುವುದು ಗೊತ್ತಾ?


  ವೂಫರ್‌ಗಳನ್ನು ಮರ, ಸಿಲಿಕೋನ್, ಪೇಪರ್, ಪಾಲಿಮರ್ ಮುಂತಾದ ವಿವಿಧ ವಸ್ತುಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಕಾಗದದಂತಹ ಸೂಕ್ಷ್ಮವಾದ ವೂಫರ್‌ಗಳಿಗಾಗಿ ಮೃದುವಾದ ಬ್ರಷ್ ಅಥವಾ ಕಂಪ್ರೆಸ್ಸ್ಡ್ ಏರ್ ಕ್ಯಾನ್ ಸಹಾಯ ಪಡೆಯಬಹುದು. ಹಾಗೆಯೇ ಗಟ್ಟಿಯಾದ ವೂಫರ್‌ಗಳಿಗಾಗಿ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬಹುದು. ಆದರೆ, ವೂಫರ್‌ನ ಮಧ್ಯಭಾಗದ ಸುತ್ತಲೂ ಜಾಗರೂಕತೆ ವಹಿಸಿ ಕ್ಲೀನ್‌ ಮಾಡಬೇಕು ಇಲ್ಲವಾದರೆ ಅದು ಡ್ಯಾಮೇಜ್ ಆಗುವ ಸಂಭವ ಇರುತ್ತದೆ. ಈ ಸಮಯದಲ್ಲಿಯು ನೀವು ಮೆನ್ವಲ್ ಗೈಡ್ ಬಳಸುವುದು ಉತ್ತಮ.


  ಇದನ್ನೂ ಓದಿ: Twitter: ಎಲಾನ್ ಮಸ್ಕ್​ ಮತ್ತೊಂದು ನಿರ್ಧಾರ! ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್


  ಟ್ವೀಟರ್‌ಗಳನ್ನು ಸ್ವಚ್ಛಗೊಳಿಸುವುದು  ತಪ್ಪು ಮಾಡಬೇಡಿ


  ಟ್ವೀಟರ್‌ಗಳನ್ನು ಯಾವುದೇ ಕಾರಣಕ್ಕೂ ಬಟ್ಟೆ ಅಥವಾ ಬ್ರಷ್ ಬಳಸಿ ಸ್ವಚ್ಛಗೊಳಿಸಬಾರದು. ಇವು ಹೆಚ್ಚು ಸೂಕ್ಷ್ಮತೆ ಹೊಂದಿದ್ದು, ಕಂಪ್ರೆಸ್ಸ್ಡ್ ಏರ್ ಕ್ಯಾನ್ ಅನ್ನು ಕೆಲವು ಇಂಚು ದೂರ ಹಿಡಿದುಕೊಂಡೇ ಕ್ಲೀನ್‌ ಮಾಡಬೇಕಿದೆ. ಆದರೂ ಕೆಲವು ಸಮಯ ಡ್ಯಾಮೇಜ್‌ ಆಗಬಹುದು. ಪರಿಣಾಮ ಎಚ್ಚರಿಕೆ ವಹಿಸಿ ಕ್ಲೀನ್‌ ಮಾಡಿ ಸಾಧ್ಯವಾಗದಿದ್ದರೆ ಸಮೀಪದಲ್ಲಿ ಸಿಗುವ ಸ್ಟೋರ್‌ಗಳಲ್ಲಿ ಕ್ಲೀನ್‌ ಮಾಡಿಸಿ. ಇಲ್ಲದಿದಲ್ಲಿ ಡ್ಯಾಮೇಜ್ ಆಗಬಹುದು ಎಚ್ಚರವಾಗಿರಿ.

  Published by:Harshith AS
  First published: