ಫೇಸ್​ಬುಕ್​ನಲ್ಲಿ ಎಷ್ಟು ಸಮಯ ಕಳೆದಿದ್ದೀರಿ?


Updated:August 3, 2018, 12:36 PM IST
ಫೇಸ್​ಬುಕ್​ನಲ್ಲಿ ಎಷ್ಟು ಸಮಯ ಕಳೆದಿದ್ದೀರಿ?

Updated: August 3, 2018, 12:36 PM IST
ಫೇಸ್​ಬುಕ್​ ಮತ್ತು ಇನ್ಸ್ಟಾಗ್ರಾಂನಲ್ಲಿ ನಮ್ಮ ದಿನದ ಅರ್ಧಕ್ಕೂ ಅಧಿಕ ಸಮಯವನ್ನು ಕಳೆಯುತ್ತೇವೆ, ಆದರೆ ನಿಖರವಾಗಿ ಸಮಾಜಿಕ ಜಾಲತಾಣದಲ್ಲಿ ನೀವು ಎಷ್ಟು ಸಮಯ ವ್ಯರ್ಥಮಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ನೂತನ ಅಪ್​ಡೇಟ್​ ಬರಲಿದೆ. ಹೀಗಾಗಿ ನೀವು ಕಳೆದ ಸಮಯ ತಿಳಿಯಲು ಈ ರೀತಿ ಮಾಡಿ.

 • ಫೇಸ್​ಬುಕ್​ನಲ್ಲಿ ನೀವು ವ್ಯಯಿಸಿದ ಸಮಯವನ್ನು ತಿಳಿದುಕೊಳ್ಳಲು ಮೊದಲು ನಿಮ್ಮ ಮೊಬೈಲ್​ನಲ್ಲಿ ಫೇಸ್​ಬುಕ್​ ಖಾತೆಯನ್ನು ಓಪನ್​ ಮಾಡಿ

 • ಬಳಿಕ ಸೆಟ್ಟಿಂಗ್​ನಲ್ಲಿ ಯುವರ್​ ಟೈಮ್​ ಎಂಬ ಐಕಾನ್​ ಕಾಣಿಸಿಕೊಳ್ಳುತ್ತದೆ.


 • ಇದಾದ ಬಳಿಕ ನಿಮಗೆ ಗ್ರಾಫ್​ ಕಾಣಿಸಿಕೊಳ್ಳುತ್ತದೆ

 • ಒಂದು ದಿನ ವ್ಯಯಿಸಿದ ಸಂಪೂರ್ಣ ಮಾಹಿತಿ ತಿಳಿಯಲು ಅಲ್ಲಿ ದಿನವೊಂದನ್ನು ಆಯ್ಕೆ ಮಾಡಿ

 • ಒಂದು ವೇಳೆ ನಿಮಗೆ ಬೇಕಾದರೆ ಫೇಸ್​ಬುಕ್​ನಲ್ಲಿ ಕಳೆಯುವ ಸಮಯವನ್ನು ಮಿತಿಯಲ್ಲಿ ಇಡಲು ಅವಕಾಶ ಕಲ್ಪಿಸಲಾಗಿದೆ.

 • Loading...


ಇನ್ನು ಇನ್ಸ್ಟಾಗ್ರಾಂನಲ್ಲಿ ವ್ಯಯಿಸಿದ ಸಮಯ ತಿಳಿಯಲು

 • ಇನ್ಸ್ಟಾ ಆ್ಯಪ್​ನಲ್ಲಿ ಸೆಟ್ಟಿಂಗ್​ ವಿಭಾಗವನ್ನು ತೆರೆಯಿರಿ

 • ಯುವರ್​ ಆ್ಯಕ್ಟಿವಿಟಿ

 • ಇಲ್ಲೂ ಕೂಡಾ ಫೇಸ್​ಬುಕ್​ನಂತೆ ನಿಮಗೆ ಗ್ರಾಫ್​ ಕಾಣಿಸಿಕೊಳ್ಳುತ್ತದೆ

 • ಒಂದು ದಿನ ವ್ಯಯಿಸಿದ ಸಂಪೂರ್ಣ ಮಾಹಿತಿ ತಿಳಿಯಲು ಅಲ್ಲಿ ದಿನವೊಂದನ್ನು ಆಯ್ಕೆ ಮಾಡಿ

 • ಒಂದು ವೇಳೆ ನಿಮಗೆ ಬೇಕಾದರೆ ಫೇಸ್​ಬುಕ್​ನಲ್ಲಿ ಕಳೆಯುವ ಸಮಯವನ್ನು ಮಿತಿಯಲ್ಲಿ ಇಡಲು ಅವಕಾಶ ಕಲ್ಪಿಸಲಾಗಿದೆ.


ಇದರೊಂದಿಗೆ “Mute Push Notifications” ಎಂಬ ಆಯ್ಕಯೂ ನಿಮಗೆ ಕಾಣಿಸುತ್ತದೆ, ಇದರಿಂದ ನಿಮಗೆ ಫೇಸ್​ಬುಕ್​ ಮತ್ತು ಇನ್ಸ್ಟಾದಲ್ಲಿ ನೀವು ಬಳಸುವ ಸಮಯವನ್ನು ಮಿತಿಯಲ್ಲಿ ಇಡಬಹುದು.

 
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...