SIM Card: ನಿಮ್ಮ ಹೆಸರಿನಲ್ಲಿ ಯಾರಾದರು ಸಿಮ್ ಕಾರ್ಡ್ ಖರೀದಿಸಿದ್ದಾರಾ? ಅನುಮಾನವಿದ್ದರೆ ಹೀಗೆ ಪರೀಕ್ಷಿಸಿ

Aadhaar card: ದೂರಸಂಪರ್ಕ (DOP) ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್‌ ಫಾರ್‌ ಫ್ರಾಡ್‌ ಮ್ಯಾನೇಜ್‌ಮೆಂಟ್‌ ಮತ್ತು ಗ್ರಾಹಕ ರಕ್ಷಣೆ ಅಥವಾ TAFCOP ಎಂದು ಕರೆಯಲಾಗುವ ಹೊಸ ಪೋರ್ಟಲ್‌ ಅನ್ನು ಪರಿಚಯಿಸಿದೆ, ಬಳಕೆದಾರರು ತಮ್ಮ ಆಧಾರ್‌ ಸಂಖ್ಯೆಗೆ ಲಿಂಕ್ ಮಾಡಿರುವ ಎಲ್ಲಾ ಫೋನ್‌ಗಳನ್ನು ಪರಿಶೀಲಿಸಲು ಇದರಿಂದ ಸಾಧ್ಯವಾಗುತ್ತದೆ.

SIM Card

SIM Card

 • Share this:
  ಒಂದು ಕಾಲದಲ್ಲಿ, ನೀಮ್ಮ ಬಳಿ ಮತಚೀಟಿ (Voter Id card) ಅಥವಾ ರೇಷನ್​ ಕಾರ್ಡ್ (Ration card)​​ ಜೆರಾಕ್ಸ್ ಪ್ರತಿ (Xerox) ಇದ್ದರೆ ಸಿಮ್​ ಕಾರ್ಡ್​(SIM Card)  ಖರೀದಿಸಬಹುದಾಗಿತ್ತು. ಅದರಲ್ಲೂ ಸುಲಭವಾಗಿ ಸಿಮ್​ ಕಾರ್ಡ್​ ಸಿಗುತ್ತಿದ್ದು, ಬೇಕಾದಷ್ಟು ನಂಬರ್​ ಬಳಸಬಹುದಾಗಿತ್ತು. ಅಷ್ಟೇ ಏಕೆ ಯಾರೋದ್ದೋ ಹೆಸರಿನಲ್ಲಿ ಯಾರಿಗೋ ಸಿಮ್​ ಕಾರ್ಡ್​ ಸಿಗುತ್ತಿತ್ತು. ಇದನ್ನರಿದ ಸರ್ಕಾರ ನಿಯಮಾವಳಿಗಳನ್ನು ಬಿಗಿಗೊಳಿಸಿದ ನಂತರ ಇಂತಹ ಹಗರಣಗಳು ಅಂದರೆ ಸಿಮ್ ವಂಚನೆಗಳು ಕಡಿಮೆಯಾಗುತ್ತಾ ಬಂದಿದೆ. ಸದ್ಯ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೂ ನಿಮ್ಮ ಮನಸ್ಸಿನ ಮೂಲೆಯಲ್ಲಿ ಯಾರಾದರೂ ನಿಮ್ಮ  ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡಿರಬಹುದೇ? ಎಂಬ ಅನುಮಾನ ಕಾಡುತ್ತಿದ್ದರೆ. ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ವಾಸ್ತವವಾಗಿ ಎಷ್ಟು ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ತಿಳಿಯಲು ಬಯಸುವಿರಾದರೆ. ತುಂಬಾ ಸರಳವಾಗಿ ಕಂಡುಹಿಡಿಯಬಹುದಾಗಿದೆ. ಅದಕ್ಕೆಂದೆ ದೂರಸಂಪರ್ಕ ಇಲಾಖೆ (ಡಿಒಟಿ) ಹೊಸ ವೆಬ್ ಪೋರ್ಟಲ್ ಅನ್ನು ಆರಂಭಿಸಿದೆ.

  ದೂರಸಂಪರ್ಕ (DOP) ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್‌ ಫಾರ್‌ ಫ್ರಾಡ್‌ ಮ್ಯಾನೇಜ್‌ಮೆಂಟ್‌ ಮತ್ತು ಗ್ರಾಹಕ ರಕ್ಷಣೆ ಅಥವಾ TAFCOP ಎಂದು ಕರೆಯಲಾಗುವ ಹೊಸ ಪೋರ್ಟಲ್‌ ಅನ್ನು ಪರಿಚಯಿಸಿದೆ, ಬಳಕೆದಾರರು ತಮ್ಮ ಆಧಾರ್‌ ಸಂಖ್ಯೆಗೆ ಲಿಂಕ್ ಮಾಡಿರುವ ಎಲ್ಲಾ ಫೋನ್‌ಗಳನ್ನು ಪರಿಶೀಲಿಸಲು ಇದರಿಂದ ಸಾಧ್ಯವಾಗುತ್ತದೆ.

  ಆಧಾರ್ ಕಾರ್ಡ್‌ನಲ್ಲಿ (Aadharcard) ನೋಂದಾಯಿಸಲಾದ ಎಲ್ಲಾ ಸಿಮ್ ಕಾರ್ಡ್‌ಗಳನ್ನು ಹೀಗೆ ಪರಿಶೀಲಿಸಿರಿ:

  ವಂಚನೆ ನಿರ್ವಹಣೆ ಮತ್ತು ಗ್ರಾಹಕ ಸಂರಕ್ಷಣೆಗಾಗಿ ಟೆಲಿಕಾಂ ಅನಾಲಿಟಿಕ್ಸ್ (TAFCOP) ಹೊಸ ವೆಬ್‌ಸೈಟ್ ಅನ್ನು ಪರಿಚಯಿಸಿದೆ. ಇದರ ಮೂಲಕ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೀವು ಪರಿಶೀಲಿಸಬಹುದು.

  ವೆಬ್‌ಸೈಟ್ ಪ್ರಕಾರ, ಈ ಸೇವೆ ಪ್ರಸ್ತುತ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ವಾಸಿಸುವ ಜನರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಈ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

  1.Tafcop.dgtelecom.gov.in ವೆಬ್‌ಸೈಟ್‌ಗೆ ಹೋಗಿ.(ಕ್ಲಿಕ್​ ಮಾಡಿ)

  2.ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಮೇಲೆ ಕ್ಲಿಕ್ ಮಾಡಿ.

  3.OTP ನಮೂದಿಸಿ ಮತ್ತು Submit ಮೇಲೆ ಕ್ಲಿಕ್ ಮಾಡಿ.

  4.ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಎಲ್ಲಾ ಸಂಖ್ಯೆಗಳನ್ನು ನೋಡಲು ಸಾಧ್ಯವಾಗುತ್ತದೆ.

   Read Also ⇒ ಪ್ರತಿದಿನ 3GB ಡೇಟಾ, 1 ವರ್ಷದ ವ್ಯಾಲಿಡಿಟಿ; BSNL​ ಕಡಿಮೆ ಬೆಲೆಯ ಬೆಸ್ಟ್​ ಪ್ರಿಪೇಯ್ಡ್​ ಪ್ಲಾನ್​ಗಳು ಇಲ್ಲಿವೆ

  ನಿಮ್ಮ ನಂಬರ್​ ಕಾರ್ಯಮಿತಿಯಲ್ಲಿ ಇಲ್ಲವಾದರೆ ರಿಪೋರ್ಟ್​ ಮಾಡುವುದು ಹೇಗೆ?

  ಪರಿಶೀಲನೆಯ ನಂತರ ನಿಮ್ಮ ಆಧಾರ್​ಗ್​ ಲಿಂಕ್​ ಆಗಿರುವ ನಂಬರ್​ ಕಾರ್ಯನಿರ್ವಹಿಸದೇ ಇದ್ದರು, TAFCOP ನೀಡಿದ ಮಾಹಿತಿಯಲ್ಲಿ ಕಾಣಿಸಿದರೆ ನಿಮಗೆ ರಿಪೋರ್ಟ್​ ಮಾಡುವ ಅವಕಾಶವಿದೆ.

  1.TAFCOP ವೆಬ್‌ಸೈಟ್‌ಗೆ ಭೇಟಿ ನೀಡಿ.(ಕ್ಲಿಕ್​ ಮಾಡಿ)

  2.ಮೊಬೈಲ್ ಸಂಖ್ಯೆಯನ್ನು ನಮೂದಿಸಿ, OTP ಮೇಲೆ ಕ್ಲಿಕ್​ ಮಾಡಿ. ನಿಮಿಷಾರ್ಧದಲ್ಲಿ OTP ಬರುತ್ತದೆ. ಅದನ್ನು ನಮೂದಿಸಿ.

  3. ಲಾಗಿನ್ ಆದ ನಂತರ, ನಿಮ್ಮ ಆಧಾರ್​ ಸಂಖ್ಯೆಗೆ ಲಿಂಕ್​ ಆಗಿರುವ ಪ್ರತಿ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಿಸುತ್ತದೆ. ಅದರಲ್ಲಿ ಸದ್ಯ ಕಾರ್ಯನಿರ್ವಹಿಸದ ಅಥವಾ ಬಳಸದ ಅಥವಾ ಬೇಡವಾದ ಸಂಖ್ಯೆಯ  ಕೆಳಗೆ 'ಇದು ನನ್ನ ಸಂಖ್ಯೆ ಅಲ್ಲ', 'ಅಗತ್ಯವಿಲ್ಲ' ಮತ್ತು 'ಅಗತ್ಯವಿದೆ' ಆಯ್ಕೆ ನೀಡಲಾಗಿದೆ. ಅದರಲ್ಲಿ ಯಾವುದಾದದರು ಅಗತ್ಯವಿಲ್ಲ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು.
  Published by:Harshith AS
  First published: