ನಿಮ್ಮನ್ನು Whatsappನಲ್ಲಿ ಯಾರಾದರೂ ಬ್ಲಾಕ್ ಮಾಡಿದ್ದರೆ ಈ ರೀತಿ ಪತ್ತೆ ಹಚ್ಚಬಹುದು

ಯಾರನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು ನೀವು ತೃತೀಯ ಅಪ್ಲಿಕೇಶನ್‌ಗಳ ಮೂಲಕ ಬ್ಲಾಕ್‌ ಮಾಡಿರುವವರನ್ನು ಕಂಡುಕೊಳ್ಳಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ನಮಗೆ ಎಲ್ಲಾರಿಗೂ ತಿಳಿದಿರುವಂತೆ ವಾಟ್ಸ್ಆ್ಯಪ್ ಭಾರತದಲ್ಲಿ ಅತ್ಯಂತ ಜನಪ್ರಿಯ ಸಂದೇಶ ಅಪ್ಲಿಕೇಶನ್‌. ಇದು ಬಳಸಲು ಸುಲಭ ಹಾಗೂ ಸಮಾನ್ಯವಾಗಿ ಪ್ರತಿಯೊಬ್ಬರ ಫೋನ್‌ನಲ್ಲಿ ಕೂಡ ಈ ಅಪ್ಲಿಕೇಶನ್‌ ಇರುತ್ತದೆ. ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಮಾತ್ರವಲ್ಲದೆ KaiOS ಹೊಂದಿದ ಫೀಚರ್ ಫೋನ್ ಗಳಲ್ಲಿಯೂ ಬಳಸಬಹುದು. ಹಲವು ವರ್ಷಗಳಿಂದ ಈ ಅಪ್ಲಿಕೇಶನ್‌ ಪ್ಲಾಟ್‌ಫಾರ್ಮ್  ಭವಿಷ್ಯದಲ್ಲಿ ನೀವು ಯಾರನ್ನಾದರೂ ಸಂಪರ್ಕಿಸಲು ಬಯಸದಿದ್ದಾಗ ಆ ಸಂಪರ್ಕಗಳನ್ನು ಬ್ಲಾಕ್‌ ಮಾಡಲು ಬಳಕೆದಾರರಿಗೆ ಈ ಅಪ್ಲಿಕೇಶನ್ ಒಂದು ಫೀಚರ್‌ ಅನ್ನು ಪರಿಚಯಿಸಿದೆ.


  ನೀವು ಆ ಫೀಚರ್‌ ಮೂಲಕ ನಿಮಗೆ ಸಂಪರ್ಕ ಹೊಂದಲು ಬಯಸದ ವ್ಯಕ್ತಿಯನ್ನು ಬ್ಲಾಕ್‌ ಮಾಡಬಹುದು. ಗಮನಿಸಬೇಕಾದ ಸಂಗತಿಯೆಂದರೆ, ಬಹುತೇಕ ಎಲ್ಲಾ ಮೆಸೇಜಿಂಗ್ ಆ್ಯಪ್‌ಗಳಂತೆಯೇ ವಾಟ್ಸ್ಆ್ಯಪ್ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ತಿಳಿಯದೆಯೇ ಇನ್ನೊಬ್ಬ ವ್ಯಕ್ತಿಯನ್ನು ಬ್ಲಾಕ್‌ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ಬ್ಲಾಕ್‌ ಮಾಡಿದ ಬಳಕೆದಾರರು ಈ ಕುರಿತು ಯಾವುದೇ ಅಧಿಸೂಚನೆಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಬಳಕೆದಾರರನ್ನು ಬ್ಲಾಕ್‌ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ನೇರವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ವಾಟ್ಸ್ಆ್ಯಪ್ ಸ್ಪಷ್ಟಪಡಿಸಿದೆ. ಆದರೆ ಇದನ್ನು ಪರಿಶೀಲಿಸಲು ಕೆಲವು ವಿಧಾನಗಳಿವೆ ಬನ್ನಿ ಈ ಕುರಿತು ಇನ್ನಷ್ಟು ತಿಳಿಯೋಣ


  ಬ್ಲಾಗ್ ಪೋಸ್ಟ್‌ನಲ್ಲಿ, ನೀವು ಸಂಪರ್ಕವನ್ನು ಹೊಂದಲು ಬಯಸುವ ಬಳಕೆದಾರರ ಲಾಸ್ಟ್‌ ಸೀನ್‌(ಕೋನೆಯ ವಿಕ್ಷಣೆ) ಅಥವಾ ಚಾಟ್ ವಿಂಡೋದಲ್ಲಿ "ಆನ್‌ಲೈನ್" ಎಂಬುವುದು ಕಾಣಿಸಲಿಲ್ಲ ಎಂದರೆ ಅವರು ನಿಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ನೀವು ತಿಳಿದಿಕೊಳ್ಳಬಹುದು ಎಂದು ವಾಟ್ಸ್ಆ್ಯಪ್ ತಿಳಿಸಿದೆ. ಆದರೆ, ಗೌಪ್ಯತೆ ಕಾರಣಗಳಿಗಾಗಿ ಇತರರು ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿರಬಹುದು ಎಂಬುದನ್ನು ಬಳಕೆದಾರರು ನೆನಪಿನಲ್ಲಿಟ್ಟುಕೊಳ್ಳಬೇಕು.


  ಇದನ್ನೂ ಓದಿ: Ola Electric scooter: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಓಲಾ ಇ ಸ್ಕೂಟರ್: ಬೆಲೆ ಎಷ್ಟು ಗೊತ್ತಾ?

  ಅಂತೆಯೇ, ನಿರ್ಬಂಧಿತ ಬಳಕೆದಾರರಿಗೆ ಸಂಪರ್ಕದ ಪ್ರೊಫೈಲ್ ಫೋಟೋವನ್ನು ನೋಡಲು ಸಾಧ್ಯವಾಗುವುದಿಲ್ಲ. ಇದರರ್ಥ ಬಳಕೆದಾರರು ಇನ್ನೂ ಚಿತ್ರವನ್ನು ಅಪ್‌ಲೋಡ್ ಮಾಡಿಲ್ಲ ಎಂದು ಕೂಡ ತಿಳಿದುಕೊಳ್ಳಬಹುದು. ಮುಖ್ಯ ವಿಷಯವೆಂದರೆ ಸಂದೇಶವನ್ನು ಕಳಿಸಿದಾಗ, ಚಾಟ್ ವಿಂಡೋದಲ್ಲಿ ಪಠ್ಯದ ಪಕ್ಕದಲ್ಲಿ ಒಂದು ಚೆಕ್ ಮಾರ್ಕ್ ಅನ್ನು ಮಾತ್ರ ನೀವು ನೋಡುತ್ತೀರಿ. ಇಂಟರ್ನೆಟ್ ಸಂಪರ್ಕದ ಅಡಚಣೆಯಿಂದಾಗಿ ಕೂಡ ಒಂದು ಮಾರ್ಕ್‌ ಬಂದಿರಬಹುದೆಂದು ಬಳಕೆದಾರರು ನೆನಪಿನಲ್ಲಿಡಬೇಕು. ಅಂತಿಮವಾಗಿ, ನೀವು ಸಂಪರ್ಕ ಹೊಂದುವ ಬಳಕೆದಾರರಿಗೆ ಕರೆ ಮಾಡಲು ಪ್ರಯತ್ನಿಸುತ್ತೀರಿ ಆ ಸಮಯದಲ್ಲಿ ಕರೆ ಹೋಗದಿದ್ದರೆ ನೀವು ಸಂಪರ್ಕ ಹೊಂದಲು ಬಯಸುವ ವ್ಯಕ್ತಿ ನಿಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕು.


  ಮೇಲೆ ತಿಳಿಸಿದ ಸಂಪರ್ಕಗಳ ಎಲ್ಲಾ ಸನ್ನಿವೇಶಗಳನ್ನು ನೀವು ಗಮನಿಸಿದರೆ,ನೀವು ಸಂಪರ್ಕವನ್ನು ಹೊಂದಲು ಬಯಸುವ ವ್ಯಕ್ತಿಯು ನಿಮ್ಮನ್ನು ಬ್ಲಾಕ್‌ ಮಾಡಿರಬಹುದು ಎಂದು ಅರ್ಥೈಸಬಹುದು ಎಂದು ವಾಟ್ಸ್ಆ್ಯಪ್ ಸೂಚಿಸಿದೆ. ಜೊತೆಗೆ ಇತರೆ ಕಾರಣಗಳಿಂದಾಗಿಯೂ ನೀವು ಅವರ ಲಾಸ್ಟ್‌ ಸೀನ್‌,ಆನ್‌ಲೈನ್‌ ಹಾಗೂ ಫೋಟೋವನ್ನು ನೋಡಲು ಸಾಧ್ಯವಾಗದಿರಬಹುದು ಆದ್ದರಿಂದ, ನಿಮ್ಮನ್ನು ಬೇರೆಯವರು ಬ್ಲಾಕ್‌ ಮಾಡಿರುವರೇ ಎಂದು ನಾವು ನಿಮಗೆ ಹೇಳಲು ಸಾಧ್ಯವಿಲ್ಲ" ಎಂದು ಈ ಫೇಸ್‌ಬುಕ್ ಕಂಪನಿಯು ಒಂದು ಪೋಸ್ಟ್ ಮೂಲಕ ತಿಳಿಸಿದೆ. ಯಾರನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು ನೀವು ತೃತೀಯ ಅಪ್ಲಿಕೇಶನ್‌ಗಳ ಮೂಲಕ ಬ್ಲಾಕ್‌ ಮಾಡಿರುವವರನ್ನು ಕಂಡುಕೊಳ್ಳಬಹುದು. ಆದರೆ, ಗೌಪ್ಯತೆ ಕಾರಣಗಳಿಗಾಗಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಉತ್ತಮವಲ್ಲ ಅವುಗಳು ನಿಮ್ಮ ಫೋನ್‌ಗೆ ಹಾನಿ ಉಂಟುಮಾಡುತ್ತವೆ.

  First published: