5G Smart Phone: ನಿಮ್ಮ ಸ್ಮಾರ್ಟ್​ಫೋನ್​ 5G ನೆಟ್​ವರ್ಕ್​ ಅನ್ನು ಬೆಂಬಲಿಸುತ್ತಿದೆಯೇ? ಹೀಗೆ ಪರಿಶೀಲಿಸಿ

5G ಸಪೋರ್ಟ್​ ಸ್ಮಾರ್ಟ್​ಫೋನ್​​ ಇದ್ದಾಗ ಮಾತ್ರ 5G ವೇಗದ ಬಗ್ಗೆ ತಿಳಿಯುತ್ತದೆ. ಆದರೆ ಈಗ ಬಳಸುತ್ತಿರುವ ಸ್ಮಾರ್ಟ್​ಫೋನ್​ ಅನ್ನು ಪರಿಶೀಲಿಸಿ ನೋಡಿ. ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ 5G ಅನ್ನು ಬೆಂಬಲಿಸುತ್ತಿದ್ದರೆ ಮತ್ಯಾಕೆ ಹೊಸ ಸ್ಮಾರ್ಟ್​ಫೋನ್​ ಖರೀದಿಸುತ್ತೀರಿ?

5G/ 5ಜಿ

5G/ 5ಜಿ

  • Share this:
    ಭಾರತವು 5G ಸೇವೆಯತ್ತ ಚಿತ್ತ ನೆಟ್ಟಿದೆ. ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi ಶೀಘ್ರದಲ್ಲೇ ಭಾರತದಲ್ಲಿ ತಮ್ಮ 5G ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿವೆ. ಈಗಾಗಲೇ 5G ಸೇವೆಯ ಕುರಿತು ಕುತೂಹಲ ಮನೆಮಾಡಿದ್ದು, ಬಹುತೇಕರಿಗೆ ಇದರ ಸ್ಪೀಡ್​ (Speed) ಎಷ್ಟಿರಲಿದೆ ಎಂಬುದನ್ನು ಪರೀಕ್ಷಿಸಲು ಕಾತುರಾಗಿದ್ದಾರೆ. ಅಂದಹಾಗೆಯೇ ಟೆಲಿಕಾಂ ಕಂಪನಿಗಳಾದ (Telecom Companny) ಜಿಯೋ (Jio) ಮತ್ತು ಏರ್‌ಟೆಲ್ಈ (Airtel) ತಿಂಗಳ ಆರಂಭದಲ್ಲಿ ತಮ್ಮ 5G ಸೇವೆಗಳನ್ನು ಪ್ರಾರಂಭಿಸಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ. ಇನ್ನು ಕೆಲವು ವರದಿಗಳು ಮುಂದಿನ ವರ್ಷ ಪ್ರಾರಂಭದಲ್ಲಿ 5G ಸೇವೆ ಬರಲಿದೆ ಎಂದು ಸೂಚಿಸಿವೆ. ಒಟ್ಟಿನಲ್ಲಿ ದೇಶದ ಬಹುಸಂಖ್ಯಾತ ಜನರು ನೂತನ ಸೇವೆಗಾಗಿ ಕಾಯುತ್ತಿರುವುದಂತೂ ನಿಜ.

    ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ 5G ನಿರೀಕ್ಷೆಗಿಂತ ಬೇಗ ಬರಲಿದೆ  ಮತ್ತು 4G ಸೇವೆಗಳಿಗೆ ಹೋಲಿಸಿದರೆ ವೇಗವು 10X ಆಗಿರುತ್ತದೆ ಎಂದು ಹೇಳಿದ್ದರು. ಹಾಗಾಗಿ 4G ಬಳಕೆದಾರರಿಗೆ 5Gಯ ಸ್ಪೀಡ್​ ನೋಡಲು ಕಾತುರಾಗಿದ್ದಾರೆ. ಮಾತ್ರವಲ್ಲದೆ ಕೆಲವರಂತೂ ತಮ್ಮ 4G ಸ್ಮಾರ್ಟ್​ಫೋನ್​ ಅನ್ನು ಮಾರಿ ಹೊಸ 5G ಸ್ಮಾರ್ಟ್​ಫೋನ್​ ಖರೀದಿಸುತ್ತಿದ್ದಾರೆ.

    5G ಸಪೋರ್ಟ್​​ ಸ್ಮಾರ್ಟ್​ಫೋನ್​​ ಇದ್ದಾಗ ಮಾತ್ರ 5G ವೇಗದ ಬಗ್ಗೆ ತಿಳಿಯುತ್ತದೆ. ಆದರೆ ಈಗ ಬಳಸುತ್ತಿರುವ ಸ್ಮಾರ್ಟ್​ಫೋನ್​ ಅನ್ನು ಪರಿಶೀಲಿಸಿ ನೋಡಿ. ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ 5G ಅನ್ನು ಬೆಂಬಲಿಸುತ್ತಿದ್ದರೆ ಮತ್ಯಾಕೆ ಹೊಸ ಸ್ಮಾರ್ಟ್​ಫೋನ್​ ಖರೀದಿಸುತ್ತೀರಿ?. ಅಂದಹಾಗೆಯೇ, ನಿಮ್ಮ ಕೈಯಲ್ಲಿರುವ ಫೋನ್​ 5G ಅನ್ನು ಸಪೋರ್ಟ್​ ಮಾಡುತ್ತಿದೆಯಾ ಎಂದು ಹೀಗೆ ಪರಿಶೀಲಿಸಿ.

    ಇದನ್ನೂ ಓದಿ: AC Cooling Bedsheet: ಮಾರುಕಟ್ಟೆಯಲ್ಲಿದೆ ಏಸಿ ಬೆಡ್​ಶೀಟ್​​! ಇದು ನಿಮ್ಮನ್ನು ತಂಪು ತಂಪು ಕೂಲ್​ ಕೂಲ್​ ಮಾಡುತ್ತೆ

    ನಿಮ್ಮ ಸ್ಮಾರ್ಟ್​ಫೋನ್ 5G ನೆಟ್‌ವರ್ಕ್ ಅನ್ನು ಸಪೋರ್ಟ್​ ಮಾಡುತ್ತದೆಯೇ ಎಂದು ಪರಿಶೀಲಿಸುವುದು ಹೇಗೆ?

    ಹಂತ 1: ನಿಮ್ಮ Android ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ

    ಹಂತ 2: 'Wi-Fi & Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

    ಹಂತ 3: ಈಗ 'SIM & Network' ಆಯ್ಕೆಯನ್ನು ಕ್ಲಿಕ್ ಮಾಡಿ

    ಹಂತ 4: ಈಗ ನೀವು 'ಆದ್ಯತೆಯ ನೆಟ್‌ವರ್ಕ್ ಪ್ರಕಾರ' ಆಯ್ಕೆಯ ಅಡಿಯಲ್ಲಿ ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ

    ಹಂತ 5: ನಿಮ್ಮ ಫೋನ್ 5G ಅನ್ನು ಸಪೋರ್ಟ್​ ಮಾಡಿದರೆ, ಅದನ್ನು 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.

    ನಿಮ್ಮ ಫೋನ್ 5G ನೆಟ್‌ವರ್ಕ್ ಅನ್ನು ಬೆಂಬಲಿಸದಿದ್ದರೆ, ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಅನುಭವಿಸಲು ನೀವು 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಾಗಿ ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ ನಿಮ್ಮ ಕೈಯಲ್ಲಿರುವ ಸ್ಮಾರ್ಟ್​ಫೋನಿಗೆ 5ಜಿ ಬೆಂಬಲವಿದೆ ಇದೆ ಎಂದರೆ ಹೊಸ ಫೋನ್​ ಖರೀದಿಸುವ ಅಗತ್ಯವಿಲ್ಲ.

    ಇದನ್ನೂ ಓದಿ: Vivo ಪರಿಚಯಿಸುತ್ತಿದೆ ಡ್ರೋನ್​ ಕ್ಯಾಮೆರಾ ಫೋನ್​! ಇನ್ಮೇಲೆ ಆಕಾಶದಿಂದಲೂ ವಿಡಿಯೋ ಚಿತ್ರೀಕರಿಸಬಹುದು

    ಅಂದಹಾಗೆಯೇ, ಮಾರುಕಟ್ಟೆಯಲ್ಲಿಯಲ್ಲಿ  Realme, Xiaomi ನಂತಹ ಹಲವಾರು ಫೋನ್ ಕಂಪನಿಗಳು ಈಗಾಗಲೇ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿವೆ. ಕೆಲವರಂತೂ ಈಗಲೇ 5ಜಿ ಸೇವೆಯನ್ನು ಬಳಸಲು ತುದಿಗಾಲಿನಲ್ಲಿ ತಯಾರಾಗಿ ನಿಂತಿದ್ದಾರೆ.

    ವಾಸ್ತವವಾಗಿ, ಬ್ಯುಸಿನೆಸ್ ಸ್ಟ್ಯಾಂಡರ್ಡ್‌ನ ವರದಿಯ ಪ್ರಕಾರ, ಭವಿಷ್ಯದಲ್ಲಿ 10,000 ರೂ.ಗಿಂತ ಕಡಿಮೆ 5G ಫೋನ್‌ಗಳು ಇರುತ್ತವೆ ಎಂದು Qualcomm ಇತ್ತೀಚೆಗೆ ಹೇಳಿದೆ. ಆದರೆ ಹೊಸ 5ಜಿ ಫೋನ್​ಗೆ ಹಣ ಖರ್ಚು ಮಾಡುವ ಮೊದಲು ನಿಮ್ಮ ಬಳಿ ಇರುವ ಫೋನನ್ 5ಜಿ ಬೆಂಬಲವಿದೆಯಾ ಎಂದು ಒಂದು ಬಾರಿ ಪರಿಶೀಲಿಸಿ. ಮತ್ತೊಂದು ವಿಚಾರ ಏನೆಂದರೆ, ನೀವು Vi ನೆಟ್‌ವರ್ಕ್‌ನಲ್ಲಿದ್ದರೆ, Vi ಅಧಿಕೃತವಾಗಿ 5G ಸೇವೆಗಳನ್ನು ಭಾರತದಲ್ಲಿ ಪ್ರಾರಂಭಿಸಿದ ನಂತರವೇ 5G ಫೋನ್ ಪಡೆಯಿರಿ.
    Published by:Harshith AS
    First published: