HOME » NEWS » Tech » HOW TO BOOK LPG CYLINDER THROUGH PAYTM BY FOLLOWING THESE STEPS HG

Gas Cylinder Booking on PayTm: ಪೇಟಿಯಂ ಮೂಲಕ ಗ್ಯಾಸ್ ಬುಕ್ ಮಾಡೋದು ಹೇಗೆ?; ಇಲ್ಲಿದೆ ಮಾಹಿತಿ

PayTm: ಪೇಟಿಯಂ ಮೂಲಕ ಡೆಬಿಡ್​ ಕಾರ್ಟ್​, ಕ್ರೆಡಿಟ್​​ ಕಾರ್ಡ್​, ನೆಟ್​ ಬ್ಯಾಂಕಿಂಗ್​, ಪೇಟಿಯಂ ವಾಲೆಟ್​​ ಮತ್ತು ಯುಪಿಐ ಮೂಲಕ ಗ್ಯಾಸ್​ ಬುಕ್​ ಮಾಡಬಹುದು.

news18-kannada
Updated:November 20, 2020, 5:28 PM IST
Gas Cylinder Booking on PayTm: ಪೇಟಿಯಂ ಮೂಲಕ ಗ್ಯಾಸ್ ಬುಕ್ ಮಾಡೋದು ಹೇಗೆ?; ಇಲ್ಲಿದೆ ಮಾಹಿತಿ
ಪೇಟಿಯಂ
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​​ ಇತ್ತೀಚೆಗೆ ಗ್ಯಾಸ್​ ಬುಕ್ಕಿಂಗ್​ ಮಾಡುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿತ್ತು. ಆದರೀಗ ಪೇಟಿಯಂ ತನ್ನ ಬಳಕೆದಾರರಿಗಾಗಿ ಅಡಿಷನಲ್​ ಚಾರ್ಜ್​ ಇಲ್ಲದೆ ಗ್ಯಾಸ್​ ಬುಕ್​ ಮಾಡುವ ಅವಕಾಶವನ್ನು ನೀಡಿದೆ. ಆದರೆ ಇದು ಹೇಗೆ ಸಾಧ್ಯ? ಪೇಟಿಯಂನಲ್ಲಿ ಗ್ಯಾಸ್​ ಬುಕ್​ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

ಹಂತ-1:  ಪೇಟಿಯಂ ಆ್ಯಪ್​ ಡೌನ್​ಲೋಡ್​ ಮಾಡಿ ನಂತರ ಲಾಗಿನ್​ ಆಗಬೇಕು.

ಹಂತ-2: ನಂತರ ಪೇಟಿಯಂ ಆ್ಯಪ್​ನಲ್ಲಿ ಕಾಣಿಸುವ ಗ್ಯಾಸ್​ ಬುಕ್ಕಿಂಗ್​ ಪೇಜ್​ಗೆ ತೆರಳಬೇಕು.

ಹಂತ-3: ಅಲ್ಲಿ ಕಾಣಿಸುವ ಗ್ಯಾಸ್​ ಸಿಲಿಂಡರ್​ ಆಯ್ಕೆ ಮೇಲೆ ಕ್ಲಿಕ್​ ಮಾಡಬೇಕು ಮತ್ತು ಹೆಚ್​ಪಿ ಗ್ಯಾಸ್​​ ಆಯ್ಕೆ ಮಾಡಬೇಕು.

ಹಂತ-4: ನಂತರ ಕನ್ಸೂಮರ್​ ನಂಬರ್​/ ಮೊಬೈಲ್​ ನಂಬರ್​ ನಮೂದಿಸಬೇಕು.

ಹಂತ-5: ಗ್ಯಾಸ್​ ಏಜೆನ್ಸಿ ಮಾಹಿತಿ ನಮೂದಿಸಬೇಕು.

ಹಂತ-6: ಇಷ್ಟೆಲ್ಲಾ ಆದ ಬಳಿಕ ಗ್ಯಾಸ್​ ಬೆಲೆಯನ್ನು ನೀಡಬೇಕು.ಹಂತ-7: ಪ್ರೊಸೀಡ್​​ ಮಾಡಿದ ಬಳಿಕ ಗ್ಯಾಸ್​ ಬುಕ್​ ಆಗುತ್ತದೆ.

ಪೇಟಿಯಂ ಮೂಲಕ ಡೆಬಿಡ್​ ಕಾರ್ಟ್​, ಕ್ರೆಡಿಟ್​​ ಕಾರ್ಡ್​, ನೆಟ್​ ಬ್ಯಾಂಕಿಂಗ್​, ಪೇಟಿಯಂ ವಾಲೆಟ್​​ ಮತ್ತು ಯುಪಿಐ ಮೂಲಕ ಗ್ಯಾಸ್​ ಬುಕ್​ ಮಾಡಬಹುದು.
Youtube Video

ಅಷ್ಟು ಮಾತ್ರವಲ್ಲದೆ, ಪ್ರಿಪೇಯ್ಡ್​/ಪೋಸ್ಟ್​ಪೇಯ್ಡ್​ ರೀಚಾರ್ಜ್​, ಲ್ಯಾಂಡ್​ಲೈನ್​/ಬ್ರಾಂಡ್​ಬ್ಯಾಂಡ್​​ , ಮೆಟ್ರೊ ಕಾರ್ಡ್​, ಡಿಟಿಹೆಚ್​​​ ಕೇಬಲ್​, ಡೇಟಾ ಕಾರ್ಡ್​, ಇಲೆಕ್ಟ್ರಿಸಿಟಿ, ವಾಟರ್​ ಮತ್ತು ಗ್ಯಾಸ್​ ಬಿಲ್​ ಪಾವತಿ ಮಾಡಬಹುದು. ಅದರ ಜೊತೆಗೆ ಬಸ್​ ಟಿಕೆಟ್​​, ಟ್ರೇನ್​, ವಿಮಾನ​​, ಸಿನಿಮಾ, ಹೋಟೆಲ್​ ರೂಂ ಬುಕ್​ ಮಾಡಬಹುದಾಗಿದೆ.
Published by: Harshith AS
First published: November 20, 2020, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories