ಇತ್ತೀಚೆಗೆ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಇಂಟರ್ನೆಟ್ ಬೆಲೆ ಕೂಡ ಕಡಿಮೆ ಆಗಿದ್ದು, ಬಳಕೆ ದಾರರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇಂಟರ್ನೆಟ್ ಬಳಕೆ ದಾರರು ಹೆಚ್ಚಿದಂತೆ ನಾವು ಓಪನ್ ಮಾಡುವ ಪೇಜ್ಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ನೀವು ಯಾವುದಾದರೂ ಸುದ್ದಿ ಓದುವಾಗ ಅಲ್ಲಿ ಸುದ್ದಿಗಿಂತ ಹೆಚ್ಚಾಗಿ ಜಾಹೀರಾತೇ ಕಾಣಿಸಿಕೊಳ್ಳುತ್ತದೆ. ಹಾಗಾದರೆ, ಜಾಹೀರಾತದಿಂದ ಮುಕ್ತಿ ಹೊಂದೋದು ಹೇಗೆ? ಅದಕ್ಕೆ ಇಲ್ಲಿದೆ ಪರಿಹಾರ.
ಜಾಹೀರಾತುಗಳನ್ನು ಬ್ಲಾಕ್ ಮಾಡುವುದಕ್ಕಾಗಿಯೇ ಕೆಲವೊಂದಷ್ಟು ಸಾಫ್ಟ್ವೇರ್ ಗಳು ಹಾಗೂ ಆ್ಯಪ್ಗಳನ್ನು ಸಿದ್ಧಪಡಿಸಲಾಗಿದೆ. ಅವುಗಳ ಮೂಲಕ ಜಾಹೀರಾತುಗಳನ್ನು ಸುಲಭವಾಗಿ ಬ್ಲಾಕ್ ಮಾಡಬಹುದಾಗಿದೆ. ಅವು ಯಾವವು ಎಂಬುದಕ್ಕೆ ಇಲ್ಲಿದೆ ಉತ್ತರ.
ಇದನ್ನೂ ಓದಿ: ಈ ವರ್ಷ ಬದಲು 2021ಕ್ಕೆ ಚಂದ್ರನತ್ತ ಹಾರಲಿರುವ 3ನೇ ಚಂದ್ರಯಾನ ನೌಕೆ
ಕಂಪ್ಯೂಟರ್ನಲ್ಲಿ ಈ ಸಾಫ್ಟ್ವೇರ್ ಹಾಗೂ ಮೊಬೈಲ್ನಲ್ಲಿ ಈ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಈ ಆ್ಯಪ್ಗಳಲ್ಲಿ ಕೆಲ ಆ್ಯಪ್ಗಳು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಹಾಗೂ RAM ತಿಂದರೆ, ಇನ್ನೂ ಕೆಲವು ಕಡಿಮೆ ಬ್ಯಾಟರಿ ಹಾಗೂ RAM ಬಳಕೆ ಮಾಡಿಕೊಳ್ಳುತ್ತವೆ.
ಬ್ಯಾಟರಿ ಹಾಗೂ RAM ಬಳಕೆ ಅಧಿಕವಾಗಿ ಮಾಡಿಕೊಳ್ಳುವುದರ ಜೊತೆಗೆ ಕೆಲ ಸುದ್ದಿಗಳು ಹಾಗೂ ಪೇಜ್ಗಳಲ್ಲಿರುವ ಕೆಲ ಚಿತ್ರಗಳನ್ನು ಇದು ಬ್ಲಾಕ್ ಮಾಡಿ ಬಿಡುತ್ತದೆ. ಇದರಿಂದ ನಿಮಗೆ ಸಮಸ್ಯೆ ಕೂಡ ಆದೀತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ