ಸುರಕ್ಷಿತ ಬ್ಯಾಂಕಿಂಗ್​ ವ್ಯವಹಾರಕ್ಕೆ ಇಲ್ಲಿದೆ 8 ಸುಲಭ ಸೂತ್ರಗಳು..!


Updated:June 27, 2018, 5:12 PM IST
ಸುರಕ್ಷಿತ ಬ್ಯಾಂಕಿಂಗ್​ ವ್ಯವಹಾರಕ್ಕೆ ಇಲ್ಲಿದೆ 8 ಸುಲಭ ಸೂತ್ರಗಳು..!
Cyber crime representational pic.

Updated: June 27, 2018, 5:12 PM IST
-ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಬೆಂಗಳೂರು(ಜೂನ್​.27): ಪ್ರಪಂಚದಲ್ಲಿ ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ಅಂತರ್ಜಾಲ ಬಳಕೆ ಹೆಚ್ಚಾಗುತ್ತಿದೆ. ಎಲ್ಲದಕ್ಕೂ ಅಂತರ್ಜಾಲ ಎಷ್ಟು ಅವಶ್ಯಕವೋ ಅಷ್ಟೇ ಬ್ಯಾಂಕಿಂಗ್​ ಕ್ಷೇತ್ರಕ್ಕೂ ಅವಶ್ಯಕವಿದೆ. ಇಂಟರ್​ನೆಟ್​ ಇಲ್ಲದೇ ಬ್ಯಾಂಕಿಂಗ್ ಅಸಾಧ್ಯ ಎನ್ನುವಷ್ಟು ಇಂದು ಮುಖ್ಯವಾಗಿದೆ. ಅಂತರ್ಜಾಲ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಈ ವ್ಯವಹಾರಗಳು ಸರಳವಾಗಿದೆ.

ಬ್ಯಾಂಕಿಂಗ್​ ವ್ಯವಹಾರಕ್ಕಾಗಿ ಸ್ಮಾರ್ಟ್‌ಪೋನ್ ಬಳಕೆ ಸಾಮಾನ್ಯವಾಗಿದೆ. ಬ್ಯಾಂಕಿನ ಯಾವುದೇ ಬ್ರ್ಯಾಂಚ್​ಗೆ ಭೇಟಿ ನೀಡದೆ, ಕೂತಲ್ಲಿಯೇ ಬ್ಯಾಲೆನ್ಸ್ ಪರಿಶೀಲನೆ, ಹಣ ವರ್ಗಾವಣೆ, ನಾನಾ ರೀತಿಯ ಬಿಲ್‌ ಪಾವತಿ, ರೈಲ್ವೆ, ಸಿನಿಮಾ ಟಿಕೆಟ್‌ ಬುಕಿಂಗ್‌, ಮೊಬೈಲ್‌ ರೀಚಾರ್ಜ್​, ಡಿಜಿಟಲ್‌ ಟಿ.ವಿ ರೀಚಾರ್ಜ್ ಇತ್ಯಾದಿ ಸೇವೆಗಳನ್ನು ಪಡೆಯಬಹುದು. ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ಮೊಬೈಲ್‌ ಮೂಲಕ ಮಾಡಬಹುದು.

ಆದರೆ, ಇಂತಹ ಸುಲಭ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಉಪಯೋಗಕ್ಕಿಂತ ಅಪಾಯವೇ ಹೆಚ್ಚಿದೆ ಎನ್ನುತ್ತಿವೆ ಮೂಲಗಳು. ಆನ್‌ಲೈನ್ ಹ್ಯಾಕರ್‌ಗಳು ದಿನೇದಿನೇ ಹೆಚ್ಚಾಗುತ್ತಿದ್ದು, ವಿವಿಧ ರೂಪದಲ್ಲಿ ಜನರ ಹಣವನ್ನು ದೋಚುತ್ತಿದ್ದಾರೆ. ಈ ರೀತಿಯ ಸುದ್ದಿಗಳು ದಿನವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಬ್ಯಾಂಕ್ ಖಾತೆಗೆ ಕನ್ನಹಾಕಲು ಹ್ಯಾಕರ್‌ಗಳು ನಾನಾ ರೂಪದಲ್ಲಿ ಸಜ್ಜಾಗಿದ್ದಾರೆ.

 ಹಾಗಾಗಿ, ಆನ್‌ಲೈನ್ ಮೂಲಕ ಬ್ಯಾಂಕ್ ವ್ಯವಹಾರ ನಡೆಸುವವರು ತಿಳಿದಿರಲೇಬೇಕಾದ ಮುಖ್ಯ ವಿಷಯಗಳಿವೆ. ನಾವು ಕೆಳಗೆ ಪಟ್ಟಿ ಮಾಡಿರುವ 8 ವಿಷಯಗಳು ಖಂಡಿತವಾಗಿ ಹ್ಯಾಕರ್‌ಗಳಿಂದ ನಿಮ್ಮ ರಕ್ಷಣೆ ಸಾಧ್ಯವಾಗಿದೆ. ಹಾಗಾದರೆ, ಅವುಗಳು ಯಾವುವು ಎಂಬುದು ಇಲ್ಲಿದೆ ನೋಡಿ.


1. ತಿಂಗಳಿಗೊಮ್ಮೆ ನಿಮ್ಮ ಬ್ಯಾಂಕ್ ಖಾತೆಯ ಪಾಸ್‌ವರ್ಡ್‌ ಬದಲಿಸಿ
Loading...

2. ಅಪರಿಚಿತರು ಇಮೇಲ್‌ಗಳ ಮೂಲಕ ಒಡ್ಡುವ ಆಮಿಷಕ್ಕೆ ಬಲಿಯಾಗಬೇಡಿ

3. ಎಲ್ಲಿಯೂ ನಿಮ್ಮ ಪಾಸ್ವರ್ಡ್ ಮತ್ತು OTP ಅನ್ನು ಶೇರ್​ ಮಾಡಬೇಡಿ

4. ಯಾವುದೇ ವೆಬ್‌ಸೈಟ್​ನಲ್ಲು ಗೂಗಲ್ ಮತ್ತು ಫೇಸ್‌ಬುಕ್ ಅಕೌಂಟ್‌ಗಳನ್ನು ಬಳಸದಿರುವುದು ಒಳ್ಳೆಯದು

5. ಬ್ರೌಸರ್ ವಿಂಡೋ ಮುಚ್ಚುವ ಮುನ್ನ ನಿಮ್ಮ ಖಾತೆ ಲಾಗ್ ಔಟ್ ಮಾಡಿ.

6. ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುತ್ತಿರಿ

7. ಅತ್ಯುತ್ತಮ ಆ್ಯಂಟಿ ವೈರಸ್‌ಗಳನ್ನು ಬಳಸಿ

8. ಸಾರ್ವಜನಿಕ Wi-Fi ಸಂಪರ್ಕವನ್ನು ಬಳಸಬೇಡಿ
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ