Ration card: ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲವಾದಲ್ಲಿ ಚಿಂತೆ ಬಿಡಿ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ..

ನಿಮ್ಮ ಬಳಿ ಪಡಿತರ ಚೀಟಿ ಇಲ್ಲವಾದಲ್ಲಿ ಮತ್ತು ನಿಮಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಇಚ್ಚೆ ಇದ್ದಲ್ಲಿ, ನೀವು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಬಡ ಮತ್ತು ಕೆಳ ಮಧ್ಯಮ ವರ್ಗದವರ ಪಾಲಿಗೆ ಪಡಿತರ ಚೀಟಿ (Ration card) ಒಂದು ಅನುಕೂಲಕಾರಿ ವ್ಯವಸ್ಥೆಯಾಗಿದೆ ಎಂದರೂ ತಪ್ಪಾಗಲಾರದು. ಪಡಿತರ ಚೀಟಿ ಎಂದರೆ, ಬಡ ಮತ್ತು ಕೆಳ ಮಧ್ಯಮ ವರ್ಗದವರಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸಬ್ಸಿಡಿಯಲ್ಲಿ ಆಹಾರ ಧಾನ್ಯವನ್ನು ಒದಗಿಸಲು ರಾಜ್ಯ ಸರಕಾರವು (State government) ನೀಡುವ ಒಂದು ಅಧಿಕೃತ ದಾಖಲೆ. ಅದನ್ನು ವಸತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ (Birth certificate), ಮತದಾರರ ಗುರುತಿನ ಚೀಟಿ (Voter ID) ಸೇರಿದಂತೆ ಅನೇಕ ಪ್ರಮಾಣ ಪತ್ರಗಳನ್ನು ಮಾಡಿಸಲು ಬಳಸಬಹುದು. ನಿಮ್ಮ ಬಳಿ ಪಡಿತರ ಚೀಟಿ ಇಲ್ಲವಾದಲ್ಲಿ ಮತ್ತು ನಿಮಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಇಚ್ಚೆ ಇದ್ದಲ್ಲಿ, ನೀವು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ನೀಡಬೇಕಾದ ದಾಖಲೆಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಭಾರತ ದೇಶದಲ್ಲಿ ಯಾರೆಲ್ಲಾ ಪಡಿತರ ಚೀಟಿಗೆ ಅರ್ಜಿ ಹಾಕಲು ಅರ್ಹರು:

ನಮ್ಮ ದೇಶದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಆ ಅರ್ಹತೆಗಳು ಈ ಕೆಳಗಿನಂತಿವೆ.

1. ಭಾರತೀಯ ಪ್ರಜೆಯಾದವನು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
2. ಒಂದು ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಬೇರೆ ಯಾವ ರಾಜ್ಯದಲ್ಲೂ ಪಡಿತರ ಚೀಟಿಯನ್ನು ಹೊಂದಿರಬಾರದು.
3. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಕಡ್ಡಾಯವಾಗಿ 18 ವರ್ಷಕ್ಕಿಂತ ಮೇಲಿನ ವಯಸ್ಸಿನವರಾಗಿರಬೇಕು.
4. ಅಪ್ರಾಪ್ತ ವಯಸ್ಕರು ಅಥವಾ 18 ವರ್ಷಕ್ಕಿಂತ ಕೆಳಗಿನವರ ಹೆಸರು ಅವರ ಹೆತ್ತವರ ಪಡಿತರ ಚೀಟಿಯಲ್ಲಿ ಸೇರಿಸಲ್ಪಡುತ್ತದೆ.

ಭಾರತ ದೇಶದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳು ಲಭ್ಯ ಇವೆ?:

ಭಾರತ ಸರಕಾರವು ಎರಡು ರೀತಿಯ ಪಡಿತರ ಚೀಟಿಗಳನ್ನು ವಿತರಿಸುತ್ತದೆ – ಮೊದಲನೆಯದ್ದು ಬಡತನದ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ನೀಡುವ ಪಡಿತರ ಚೀಟಿ ಮತ್ತು ಎರಡನೆಯದ್ದು, ಬಿಪಿಎಲ್ ರಹಿತ ಪಡಿತರ ಚೀಟಿಗಳು. ಅಂದರೆ (ಎಪಿಎಲ್) ಕಾರ್ಡುದಾರರು.

ಇದನ್ನೂ ಓದಿ: Corona :ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ಸಿಗಲ್ಲ ರೇಷನ್; ಸಾವಿನ ಮನೆಯಾಗಿದ್ದ ಗ್ರಾಮವೀಗ ಕೊರೋನಾ ಮುಕ್ತ

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?:

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕೇವಲ ಮೇಲೆ ತಿಳಿಸಿದ ಅರ್ಹತೆಗಳು ಇದ್ದರೆ ಸಾಲದು, ಆ ಅರ್ಹತೆಗಳನ್ನು ಸಾಬೀತು ಪಡಿಸುವ ದಾಖಲೆಗಳನ್ನು ಕೂಡ ನೀಡಬೇಕಾಗುತ್ತದೆ. ಪಡಿತರ ಚೀಟಿಯನ್ನು ಪಡೆಯಲು ನೀಡಬೇಕಾಗಿರುವ ಆ ದಾಖಲೆಗಳು ಈ ಕೆಳಗಿನಂತಿವೆ:

1. ಯಾವುದೇ ಗುರುತಿನ ಚೀಟಿ ( ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪಾಸ್‍ಪೋರ್ಟ್, ಸರಕಾರ ನೀಡಿರುವ ಗುರುತಿನ ಚೀಟಿ).
2. ಒಂದು ವಿಳಾಸದ ಗುರುತಿನ ಚೀಟಿ ( ವಿದ್ಯುತ್ ಶಕ್ತಿ, ಫೋನ್ ಬಿಲ್, ಎಲ್‍ಪಿಜಿ ರಸೀದಿ, ಬ್ಯಾಂಕ್ ಪಾಸ್ ಬುಕ್, ಬಾಡಿಗೆ ಕರಾರು ಪತ್ರ).
3. ಕುಟುಂಬ ಸದಸ್ಯರ ಭಾವಚಿತ್ರ
4. ಅರ್ಜಿದಾರನ ವಾರ್ಷಿಕ ಆದಾಯ ದಾಖಲೆ ಪತ್ರ
5. ಯಾವುದೇ ರದ್ದು ಮಾಡಿದ/ ಹಿಂದಿರುಗಿಸಲ್ಪಟ್ಟ ಪಡಿತರ ಚೀಟಿ

ಆನ್‍ಲೈನ್‍ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?:

1. ಮೊದಲಿಗೆ, https://nfsa.gov.in/ ಮೂಲಕ ನಿಮ್ಮ ರಾಜ್ಯದ / ಯುಟಿ ಫುಡ್ ಪೋರ್ಟಲ್‍ಗೆ ಲಾಗಿನ್ ಆಗಬೇಕು.
2. ನಂತರ , ಪರದೆಯ ಎಡ ಭಾಗದಲ್ಲಿ ಕಾಣುವ ಅಪ್ಲೈ ಫಾರ್ ದ ಸರ್ವಿಸ್ ಮೇಲೆ ಕ್ಲಿಕ್ ಮಾಡಿ.
3. ಹಾಗೆ ಮಾಡಿದ ಮೇಲೆ, “ಇಶುಯೆನ್ಸ್ ಆಫ್ ನ್ಯೂ ರೇಶನ್ ಕಾರ್ಡ್” ಆಯ್ಕೆ ಕಾಣ ಸಿಗುತ್ತದೆ.
4. ಬಳಿಕ, ಅರ್ಜಿ ಸಲ್ಲಿಸುವ ಫಾರಂನಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
5. ಸ್ಕ್ಯಾನ್ ಮಾಡಿದ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಮತ್ತು ಅರ್ಜಿ ಸಲ್ಲಿಸಿ.
6. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ, ಆ ವೆಬ್‍ಸೈಟ್ ನಿಮ್ಮ ಪಡಿತರ ಚೀಟಿ ಅರ್ಜಿಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Ration to Doorsteps: ಇನ್ಮುಂದೆ ರಾಜ್ಯಾದ್ಯಂತ ಮನೆ ಬಾಗಿಲಿಗೆ ಪಡಿತರ ಧಾನ್ಯ: ಸಿಎಂ ಬೊಮ್ಮಾಯಿ ಸಂಕಲ್ಪ

ಆನ್‍ಲೈನ್‍ನಲ್ಲಿ ಪಡಿತರ ಚೀಟಿ ಅರ್ಜಿಯ ಸ್ಟೇಟಸ್ ಅನ್ನು ಪರೀಕ್ಷಿಸುವುದು ಹೇಗೆ?:

1. ರಾಜ್ಯ/ ಯುಟಿ ಫುಡ್ ಪೋರ್ಟಲ್‍ನ ಇ-ಸರ್ವಿಸಸ್ ವಿಭಾಗದ ಮೇಲೆ ಕ್ಲಿಕ್ ಮಾಡಿ.
2. ಬಳಿಕ ನಿಮ್ಮ ಪಡಿತರ ಚೀಟಿ ಅರ್ಜಿಯ ಸ್ಟೇಟಸ್ ತಿಳಿಯಲು, ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಲಾಗಿನ್ ಐಟಿ ಮತ್ತು ಪಾಸ್‍ವರ್ಡ್ ನಮೂದಿಸಿ, ಲಾಗಿನ್ ಆಗಿ.
4. ಅದು ಮುಗಿದ ಮೇಲೆ, ನಿಮ್ಮ ಪಡಿತರ ಚೀಟಿಯ ಅರ್ಜಿಯ ಸ್ಟೇಟಸ್ ಪರದೆಯ ಮೇಲೆ ಕಾಣಸಿಗುತ್ತದೆ.
Published by:shrikrishna bhat
First published: