E PAN: ಲಾಕ್​ಡೌನ್​ ಸಮಯದಲ್ಲಿ ಇ-ಪಾನ್​​ ಕಾರ್ಡ್​ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

How to apply for E PAN Card: ಪಾನ್​ ಕಾರ್ಡ್​ ಪಡೆಯಲು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಮೂಲಕ ಪಾನ್ ​ಸಂಖ್ಯೆಯನ್ನು ಪಡೆಯಬಹುದು. ಅನೇಕ ವಹಿವಾಟುಗಳಿಗೆ ಪಾನ್​​​ ಅಗತ್ಯವಾಗಿರುವ ಕಾರಣ ಕೇವಲ 10 ನಿಮಿಷದಲ್ಲಿ ಇ-ಪಾನ್​​ ಕಾರ್ಡ್​ ಪಡೆಯಬಹುದಾಗಿದೆ.

news18-kannada
Updated:May 25, 2020, 8:57 PM IST
E PAN: ಲಾಕ್​ಡೌನ್​ ಸಮಯದಲ್ಲಿ ಇ-ಪಾನ್​​ ಕಾರ್ಡ್​ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
ಪಾನ್​​ ಕಾರ್ಡ್
  • Share this:
ಇತ್ತೀಚಿನ ದಿನಗಳಲ್ಲಿ ಪಾನ್​ ಕಾರ್ಡ್​ ಬಹು ಮುಖ್ಯವಾದ ದಾಖಲೆಯಾಗಿದೆ. ಹಲವು ವಹಿವಾಟುಗಳಿಗೆ ಪಾನ್​​​ ಕಾರ್ಡ್​ ಆಗತ್ಯವಾಗಿದೆ. ಸರ್ಕಾರ ಕೂಡ ಪಾನ್​ ಕಾರ್ಡ್​ ಕಡ್ಡಾಯಗೊಳಿಸಿದೆ. ವಾಹನ ಖರೀದಿ, ಬ್ಯಾಕ್​​ ವಹಿವಾಟು ಹೀಗೆ ಎಲ್ಲಾ ಕೆಲಸಗಳಿಗೂ ಪಾನ್​ ಕಾರ್ಡ್ ಇಂದು​ ಮುಖ್ಯವಾಗಿದೆ. ಹಾಗಾಗಿ ಇನ್ನೂ ಕೂಡ ಪಾನ್​ ಕಾರ್ಡ್​ ಮಾಡಿಸಿಲ್ಲದವರು ಅಥವಾ ಪಾನ್​ ಕಾರ್ಡ್​ ಮಾಡಿಸಬೇಕೆಂಬವವರು ಮನೆಯಲ್ಲಿಯೇ ಕುಳಿತು ಅಪ್ಪೈ ಮಾಡಬಹುದಾಗಿದೆ. ಕಡಿಮೆ ಅವಧಿಯಲ್ಲಿ ಇ-ಪಾನ್ ಕಾರ್ಡ್​ ​​ಪಡೆಯಬಹುದಾಗಿದೆ.

ಪಾನ್​ ಕಾರ್ಡ್​ ಪಡೆಯಲು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಮೂಲಕ ಪಾನ್ ​ಸಂಖ್ಯೆಯನ್ನು ಪಡೆಯಬಹುದು. ಅನೇಕ ವಹಿವಾಟುಗಳಿಗೆ ಪಾನ್​​​ ಅಗತ್ಯವಾಗಿರುವ ಕಾರಣ ಕೇವಲ 10 ನಿಮಿಷದಲ್ಲಿ ಇ-ಪಾನ್​​ ಕಾರ್ಡ್​ ಪಡೆಯಬಹುದಾಗಿದೆ.

ಇ- ಪಾನ್​ ಕಾರ್ಡ್​ಗೆ ಅಪ್ಲೈ ಮಾಡುವ ವಿಧಾನ:

-ಆದಾಯ ತೆರಿಗೆ ಇಲಾಖೆಯ ಅಧಿಕೃತ https://www.incometaxindiaefiling.gov.in/home ವೆಬ್​ಸೈಟ್​ಲ್ಲಿ ಭೇಟಿ ನೀಡಿ.

-ಅದರಲ್ಲಿ ಇ-ಫೈಲಿಂಗ್​​​ ವೆಬ್​ಸೈಟ್​ನಲ್ಲಿ ಕ್ವಿಕ್​​ ಲಿಂಕ್ಸ್​ ವಿಭಾಗವನ್ನು ಆಯ್ಕೆ ಮಾಡಬೇಕು.

-ಕ್ವಿಕ್​​ ಲಿಂಕ್ಸ್​ ವಿಭಾಗದಲ್ಲಿ ಪಾನ್​ ಮೂಲಕ ಆಧಾರ್​​ ಲಿಂಕ್​ ಕ್ಲಿಕ್​ ಮಾಡಬೇಕು

-ಇದಾದ ಬಳಿಕ ಎರಡು ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ ಹೊಸ ಪಾನ್​​ ಪಡೆಯಿರಿ ಎಂಬ ಆಯ್ಕೆ ಕ್ಲಿಕ್ಕಿಸಬೇಕು-ನಂತರ ಆಧಾರ್​ ಸಂಖ್ಯೆ, ಕ್ಯಾಪ್ಚಾ ಕೋಡ್​​ ಮತ್ತು ಒಟಿಟಿ ನಮೂದಿಸಬೇಕು

-ಒಟಿಟಿ ಭರ್ತಿ ಮಾಡಿದ ನಂತರ ಮಾಹಿತಿ ಸರಿಯಾಗಿದ್ದರೆ ಇ-ಪ್ಯಾನ್​ ಸಿಗುತ್ತದೆ.

ದೀಪಿಕಾ ಆಸೆಯೊಂದನ್ನು ರಣವೀರ್ ಸಿಂಗ್​ ಇನ್ನೂ ಈಡೇರಿಸಿಲ್ಲವಂತೆ ​!; ಏನದು?

Roposo: ಸದ್ದಿಲ್ಲದೆ ಜನಪ್ರಿಯಗೊಳ್ಳುತ್ತಿದೆ ಈ ವಿಡಿಯೋ ಶೇರಿಂಗ್​​​ ಆ್ಯಪ್​!

Wear Masks: ‘ಮಾಸ್ಕ್​​ ಧರಿಸಿ‘ ಎಂದು ಮನವಿ ಮಾಡುತ್ತಿದ್ದಾರೆ ಖ್ಯಾತ ಸೆಲೆಬ್ರಿಟಿಗಳು!
First published: May 25, 2020, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading