HOME » NEWS » Tech » HOW TO ACTIVATE DND ON AIRTEL NUMBER

ಏರ್​ಟೆಲ್​ ಗ್ರಾಹಕರಿಗೆ ವಿಶೇಷ ಸೇವೆ: ಅನಗತ್ಯ ಕರೆಗಳ ಕಿರಿ ಕಿರಿ ತಪ್ಪಿಸಲು ಹೀಗೆ ಮಾಡಿ

ಡು ನಾಟ್ ಡಿಸ್ಟರ್ಬ್​ ಸೇವೆಗೆ ಮನವಿ ಸಲ್ಲಿಸಿದ ಬಳಿಕ ಇದು ಸಕ್ರೀಯಗೊಳ್ಳಲು ಒಂದು ವಾರದವರೆಗೆ ಸಮಯ ತೆಗೆದುಕೊಳ್ಳುತ್ತದೆ.

zahir | news18
Updated:June 29, 2020, 6:04 PM IST
ಏರ್​ಟೆಲ್​ ಗ್ರಾಹಕರಿಗೆ ವಿಶೇಷ ಸೇವೆ: ಅನಗತ್ಯ ಕರೆಗಳ ಕಿರಿ ಕಿರಿ ತಪ್ಪಿಸಲು ಹೀಗೆ ಮಾಡಿ
ಈ ಬಗ್ಗೆ ಮಾತನಾಡಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್, ಪ್ರಸ್ತುತ ಟೆಲಿಕಾಂ ಕಂಪೆನಿಗಳ ಸಾಲದ ಹೊರೆಯನ್ನು ನಿಯಂತ್ರಿಸಲು ಬೆಲೆ ಏರಿಕೆ ಅಲ್ಲದೆ ಬೇರೊಂದು ಆಯ್ಕೆ ಇಲ್ಲ ಎಂದಿದ್ದಾರೆ.
  • News18
  • Last Updated: June 29, 2020, 6:04 PM IST
  • Share this:
ನಿಮ್ಮ ಮೊಬೈಲ್​ಗೆ ಬಯಸದೇ ಬರುವ ಕರೆ, ಎಸ್​ಎಂಎಸ್​ಗಳಿಂದ ಸಾಕಷ್ಟು ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಾದರೆ ಅದನ್ನು ಸುಲಭವಾಗಿ ತಡೆಯಲು ಏರ್​ಟೆಲ್ ಡು ನಾಟ್ ಡಿಸ್ಟರ್ಬ್(DND)​ ಸೇವೆಯನ್ನು ಒದಗಿಸುತ್ತಿದೆ. ಈ ಹಿಂದೆಯೇ ಈ ಸೌಲಭ್ಯವನ್ನು ನೀಡಲಾಗಿದ್ದರೂ, ಇದೀಗ DND ಸೇವೆಯ ಆಕ್ಟೀವೇಟ್ ಅನ್ನು ಮತ್ತಷ್ಟು ಸರಳಗೊಳಿಸಲಾಗಿದೆ.

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್, ಬ್ಯಾಂಕು, ನಾನಾ ಟೆಲಿಕಾಂ ಕಂಪನಿಗಳು, ಕಂಪನಿಗಳು, ಟ್ರಾವೆಲ್ಸ್‌ ಇತ್ಯಾದಿಗಳಿಂದ ಜಾಹೀರಾತು ಮಾದರಿಯ ಕರೆಗಳು ಬರುತ್ತಿರುತ್ತದೆ. ಈ ಬಗ್ಗೆ ಅನೇಕ ಗ್ರಾಹಕರು ದೂರು ನೀಡುತ್ತಿರುವ ಹಿನ್ನೆಲೆಯಲ್ಲಿ ಡಿಎನ್​ಡಿ ಸೇವೆಯನ್ನು ಅಪ್​ಡೇಟ್​ ಮಾಡಲಾಗಿದೆ. ಈ ಸೇವೆಯನ್ನು ಇದನ್ನು ಆಕ್ಟೀವೇಟ್ ಮಾಡಿಕೊಳ್ಳುವ ಮೂಲಕ ಇಂತಹ ಕಿರಿ ಕಿರಿಯಿಂದ ಪಾರಾಗಬಹುದು.

ಆನ್​ಲೈನ್ ಮೂಲಕ DND ಸೇವೆ:

ಇದಕ್ಕಾಗಿ ನೀವು (https://www.airtel.in/airtel-dnd) ಈ ವೆಬ್ ಸೈಟ್​ಗೆ ಭೇಟಿ ನೀಡಬೇಕು. ಬಳಿಕ ಏರ್​ಟೆಲ್ ಮೊಬೈಲ್ ಸರ್ವೀಸ್ ಟೈಟಲ್ ಮೇಲೆ ಕ್ಲಿಕ್ ಮಾಡಿ ನಿಮ್ಮ ನಂಬರ್ ನಮೂದಿಸಿ.

ಈ ವೇಳೆ ನಿಮ್ಮ ಮೊಬೈಲ್​ಗೆ ಒನ್​ ಟೈಮ್ ಪಾಸ್​ವರ್ಡ್ (OTP)ಬರಲಿದ್ದು, ಇದನ್ನು ನಮೂದಿಸಿಬೇಕು. ಆ ಬಳಿಕ ಮುಂದಿನ ಸ್ಕ್ರೀನ್​ನಲ್ಲಿ Stop All ಎಂಬ ಬಟನ್​ ಕಾಣಲಿದ್ದು, ಅದನ್ನು ಕ್ಲಿಕ್ ಮಾಡಿಕೊಳ್ಳುವ ಮೂಲಕ ಡಿಎನ್​ಡಿ ಅನ್ನು ಸಕ್ರೀಯಗೊಳಿಸಿ ಅನಗತ್ಯ ಕರೆ ಮತ್ತು ಎಸ್​ಎಂಎಸ್​ಗಳಿಂದ ಮುಕ್ತಿ ಪಡೆಯಬಹುದು.

ಮೆಸೇಜ್ ಅಥವಾ ಕರೆ ಮಾಡಿ ಆಕ್ಟಿವೇಟ್ ಮಾಡಿಕೊಳ್ಳಿ:
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದೂರವಾಣಿ ಕರೆ ಅಥವಾ ಎಸ್ಎಂಎಸ್​ ಮೂಲಕ ಏರ್​ಟೆಲ್ ಡಿಎನ್​ಡಿ ಸಕ್ರೀಯಗೊಳಿಸುವುದನ್ನು ಸಹಕರಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...1- 1909 ಈ ನಂಬರ್​ಗೆ ಕರೆ ಮಾಡಿ IVR ನಲ್ಲಿ ನೀಡುವ ಸೂಚನೆಗಳನ್ನು ಅನುಸರಿಸಿ. ಹೀಗೆ ಮಾಡುವ ಮೂಲಕ ಡಿಎನ್​ಡಿ ಸುಲಭವಾಗಿ ಆಕ್ಟಿವೇಟ್ ಮಾಡಿಕೊಳ್ಳಬಹುದು.

2- 1909 ನಂಬರ್​ಗೆ 'START 0' ಎಂದು ಮೆಸೇಜ್ ಮಾಡುವ ಮೂಲಕ ಸಹ DND ಸಕ್ರೀಯಗೊಳಿಸಬಹುದು.

ಡು ನಾಟ್ ಡಿಸ್ಟರ್ಬ್​ ಸೇವೆಗೆ ಮನವಿ ಸಲ್ಲಿಸಿದ ಬಳಿಕ ಇದು ಸಕ್ರೀಯಗೊಳ್ಳಲು ಒಂದು ವಾರದವರೆಗೆ ಸಮಯ ತೆಗೆದುಕೊಳ್ಳುತ್ತದೆ. 7 ದಿನಗಳ ಒಳಗೆ ನಿಮ್ಮ ನಂಬರ್​ಗೆ ಡಿಎನ್​ಡಿ ಸಕ್ರೀಯವಾಗಿದೆ ಎಂಬ ಕರೆ ಅಥವಾ ಮೆಸೇಜ್​ ಅನ್ನು ಕಳುಹಿಸಲಾಗುತ್ತದೆ. ಆ ಬಳಿಕ ನಿಮಗೆ ಅನಾಮಿಕ ಕರೆ ಮತ್ತು ಮೆಸೇಜ್​ಗಳಿಂದ ಮುಕ್ತಿ ಸಿಗಲಿ
First published: April 26, 2019, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories