• Home
  • »
  • News
  • »
  • tech
  • »
  • Smartwatch: ನಿಮ್ಮಲ್ಲಿರುವ ಸ್ಮಾರ್ಟ್​ವಾಚ್​​ ಎಷ್ಟು ವರ್ಷವಾದರೂ ಹಾಳಾಗಬಾರದೇ? ಹಾಗಿದ್ರೆ ಈ ಟ್ರಿಕ್ಸ್​ ಫಾಲೋ ಮಾಡಿ

Smartwatch: ನಿಮ್ಮಲ್ಲಿರುವ ಸ್ಮಾರ್ಟ್​ವಾಚ್​​ ಎಷ್ಟು ವರ್ಷವಾದರೂ ಹಾಳಾಗಬಾರದೇ? ಹಾಗಿದ್ರೆ ಈ ಟ್ರಿಕ್ಸ್​ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹಾಗೆಯೇ ಈ ಸ್ಮಾರ್ಟ್‌ವಾಚ್‌ಗಳಿಂದ ನಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗಿದ್ದ ಮೇಲೆ ನಮಗೆ ಇಷ್ಟೆಲ್ಲಾ ಸೇವೆ ಮಾಡುವ ಸ್ಮಾರ್ಟ್‌ವಾಚ್‌ಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಸಹ ನಮ್ಮ ಪ್ರಮುಖ ಕೆಲಸವಾಗಬೇಕಿದೆ. ಇದಕ್ಕೆ ನಾವು ಕೆಲವೊಂದು ಟ್ರಿಕ್ಸ್​ ನೀಡುತ್ತೇವೆ.

ಮುಂದೆ ಓದಿ ...
  • Share this:

    ಕೆಲವರ್ಷಗಳ ಹಿಂದೆ ತಂತ್ರಜ್ಞಾನ (Technology) ಯುಗದಲ್ಲಿ ಸ್ಮಾರ್ಟ್​ಫೋನ್​ ಕಂಪನಿಗಳು (Smartphone Company) ಬಹಳಷ್ಟು ಪ್ರಸಿದ್ಧಿಯಲ್ಲಿತ್ತು. ಆದರೆ ಈಗ ಕೆಲವೊಂದು ವಾಚ್​ಗಳು ಕೂಡ ಸ್ಮಾರ್ಟ್​ಫೋನ್​​ನಂತೆಯೇ ಫೀಚರ್ಸ್ (Features)​ ಅನ್ನು ಒಳಗೊಂಡಿದೆ. ಆದ್ದರಿಂದ ಈಗ ಸ್ಮಾರ್ಟ್​ವಾಚ್​ಗಳು (Smartwatch) ಕೂಡ ಬಹಳ ಬೇಡಿಕೆಯಲ್ಲಿರುವ ಸಾಧನವಾಗಿದೆ. ಸ್ಮಾರ್ಟ್​ವಾಚ್​​ ಬಳಕೆ ಮಅಡುವವರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಮಾರುಕಟ್ಟೆಯಲ್ಲಿ ಪೈಪೋಟಿಗಳು ಹೆಚ್ಚಾಗಿದೆ. ಸ್ಮಾರ್ಟ್‌ವಾಚ್‌ಗಳು ದಿನಕ್ಕೊಂದರಂತೆ ಭಿನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಗ್ರಾಹರನ್ನು ಸೆಳೆಯುತ್ತಿವೆ. ಆದ್ರಿಂದ ಈಗ ಎಲ್ಲಿ ನೋಡಿದರೂ ಸ್ಮಾರ್ಟ್​ವಾಚ್​​ಗಳೇ ಕಾಣುತ್ತವೆ. ಆದರೆ ಈ ಸ್ಮಾರ್ಟ್​ವಾಚ್​​ ಬಳಸುವಾಗ ಬಹಳ ಜಾಗೃತೆಯಿಂದಿರಬೇಕು ಎಂದು ತಂತ್ರಜ್ಞರು ಹೇಳುತ್ತಾರೆ.


    ಹಾಗೆಯೇ ಈ ಸ್ಮಾರ್ಟ್‌ವಾಚ್‌ಗಳಿಂದ ನಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗಿದ್ದ ಮೇಲೆ ನಮಗೆ ಇಷ್ಟೆಲ್ಲಾ ಸೇವೆ ಮಾಡುವ ಸ್ಮಾರ್ಟ್‌ವಾಚ್‌ಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಸಹ ನಮ್ಮ ಪ್ರಮುಖ ಕೆಲಸವಾಗಬೇಕಿದೆ. ಇದಕ್ಕೆ ನಾವು ಕೆಲವೊಂದು ಟ್ರಿಕ್ಸ್​ ನೀಡುತ್ತೇವೆ.


    ಸ್ಮಾರ್ಟ್​​ಫೋನ್​ನಂತೆಯೇ ಕಾರ್ಯನಿರ್ವಹಿಸುವ ಸ್ಮಾರ್ಟ್​​ವಾಚ್​​ಗಳು:


    ಹೌದು, ಸ್ಮಾರ್ಟ್‌ವಾಚ್‌ಗಳು ಸ್ಮಾರ್ಟ್‌ಫೋನ್‌ಗಳ ಹಾಗೆಯೇ ಕಾರ್ಯನಿರ್ವಹಿಸುತ್ತವೆ. ಇತ್ತೀಚಿನ ಸ್ಮಾರ್ಟ್​ವಾಚ್​ಗಳು ಈಗಿನ ಮೊಬೈಲ್​ಗಳು ಹೇಗೆ ಕಾರ್ಯನಿರ್ವಹಿಸುತ್ತದೋ ಅದೇ ರೀತಿಯಲ್ಲಿ ಈ ವಾಚ್​​ಗಳು ಕೂಡ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಈಗ ಹೆಚ್ಚು ಜನರು ಸ್ಮಾರ್ಟ್​ಫೋನ್​ಗಳ ಜೊತೆಗೆ ಸ್ಮಾರ್ಟ್​ವಾಚ್​ಗಳನ್ನು ಬಳಸುವವರ ಸಂಖ್ಯೆ ಹೆ್ಚ್ಚಾಗಿದೆ.


    ಇದನ್ನೂ ಓದಿ: ಟ್ವಿಟರ್​​ಗೆ ಪ್ರತಿಸ್ಪರ್ಧಿಯಾಗಿದೆ "ಕೂ" ಆ್ಯಪ್! ವಿಶ್ವದಾದ್ಯಂತ 50 ಮಿಲಿಯನ್ ಡೌನ್​​ಲೋಡ್​ಗಳು


    ಆದರೆ ಈ ಸ್ಮಾರ್ಟ್​​ವಾಚ್​​ಗಳನ್ನು ನೀವು ಮೊಬೈಲ್​ನಂತೆಯೇ ಜಾಗೃತೆಯಿಂದ ನೋಡಿಕೊಳ್ಳಬೇಕು ಇಲ್ಲವಾದರೆ ಹಾಳಾಗುತ್ತದೆ. ನಿಮ್ಮ ಸ್ಮಾರ್ಟ್​ವಾಚ್​​ಗಳು ಹೆ್ಚ್ಚು ಬಾಳಿಕೆ ಬರಬೇಕಾದರೆ ಈ ಕೆಳಗೆ ಟಿಪ್ಸ್ ನೀಡಲಾಗಿದೆ. ಅದನ್ನು ಪಾಲಿಸಿ.


    ಗಟ್ಟಿಯಾದ ವಸ್ತುಗಳಿಂದ ದೂರ ಇರಿಸಿ


    ಸ್ಮಾರ್ಟ್​ವಾಚ್​ಗಳ ಡಿಸ್​ಪ್ಲೇಗಳು ಮೊಬೈಲ್​ನಂತೆ ಗಟ್ಟಿಯಾಗಿರುವುದಿಲ್ಲ. ಆದ್ದರಿಂದ ನೆಲಕ್ಕೆ ಬೀಳದಂತೆ ನೋಡಿಕೊಳ್ಳಬೇಕು. ಇನ್ನು ಸ್ಮಾರ್ಟ್​ವಾಚ್​​ಗಳ ಸ್ಕ್ರೀನ್​ ಮೇಲೆ ಬೇಗನೆ ಗೀಟುಗಳು ಬೀಳುತ್ತದೆ ಆದ್ದರಿಂದ ಸ್ಮಾರ್ಟ್​ವಾಚ್​ಗಳನ್ನು ನೀವು ಧರಿಸದೇ ಇರುವಾಗ ಎಲ್ಲಾದರು ಸೇಫ್ ಸ್ಥಳದಲ್ಲಿ ಇಡಿ. ಇನ್ನು ಎಲ್ಲಾದರು ದೊಡ್ಡ ಗಾತ್ರದ ವಸ್ತುಗಳ ಅಡಿಯಲ್ಲಿ ಅಥವಾ ಮೇಲೆ ಇಡುವುದನ್ನು ನಿಲ್ಲಿಸಿ. ಕೆಲವೊಮ್ಮೆ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ.


    ಸಾಂಕೇತಿಕ ಚಿತ್ರ


    ಟೆಂಪರ್ಡ್ ಗ್ಲಾಸ್ ಹಾಕಿಸಿ
    ನಿಮಗೆ ಮೊದಲೇ ತಿಳಿಸಿದಂತೆ ಸ್ಮಾರ್ಟ್​ವಾಚ್​ಗಳು ಮೊಬೈಲ್​ಗಳಂತೆಯೇ ಕಾರ್ಯನಿರ್ವಹಿಸುತ್ತದೆ ಆದರೆ ಸ್ಮಾರ್ಟ್​​ಫೋನ್​ಗಳಷ್ಟು ಗಟ್ಟಿಯ ಡಿಸ್​​ಪ್ಲೇಯನ್ನು ಹೊಂದಿಲ್ಲ. ಆದ್ದರಿಂದ ಮೊಬೈಲ್​​ಗಳ ಸ್ಕ್ರೀನ್​ ಗ್ಲಾಸ್​​ನಂತೆಯೇ ಸ್ಮಾರ್ಟ್​​ವಾಚ್​​ಗಳ ಗ್ಲಾಸ್​​ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ಹಾಕುವುದರಿಂದ ಸ್ಮಾರ್ಟ್​​ವಾಚ್​ ಮೇಲೆ ಆಗುವಂತಹ ಹಾನಿಗಳಿಂದ ತಪ್ಪಿಸಬಹುದಾಗಿದೆ.


    ಬಳೆಗಳ ಜೊತೆ ಧರಿಸಬೇಡಿ
    ಯಾವುದೇ ಕಾರಣಕ್ಕೂ ಸ್ಮಾರ್ಟ್​​ವಾಚ್​​ಗಳನ್ನು ಬಳೆಗಳ ಮೇಲೆ ಧರಿಸಬೇಡಿ. ಪುರುಷರಾದರೆ ಕಡಗ ಧರಿಸುವಾಗ ಸ್ಮಾರ್ಟ್​ವಾಚ್​ ಅನ್ನು ಹಾಕಬೇಡಿ. ಈ ರೀತಿ ಹಾಕುವುದರಿಂದ ನಿಮ್ಮ ಸ್ಮಾರ್ಟ್​ವಾಚ್ ಮೇಲೆ ಗೀರುಗಳು ಬೀಳುತ್ತವೆ. ಕೆಲವೊಂದು ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ನೀವು ಇಕ್ಕಟ್ಟಿನ ಸಂದರ್ಭಗಳಲ್ಲಿ ಹೋಗುತ್ತಿರುವಾಗ ನಿಮ್ಮ ವಾಚ್​ನ ಬೆಲ್ಟ್​ ತುಂಡಾಗುವ ಸಾಧ್ಯತೆಗಳಿರುತ್ತವೆ.


    ಸ್ವಚ್ಛವಾಗಿಟ್ಟುಕೊಳ್ಳಿ
    ಸ್ಮಾರ್ಟ್‌ವಾಚ್ ನಲ್ಲಿ ನೀವು ಮೊದಲು ಮಾಡಬೇಕಾದ ಕೆಲಸ ಎಂದರೆ ಸ್ವಚ್ಛತೆ. ಅಂದರೆ ವಾಚ್‌ನಲ್ಲಿ ಕೊಳಕು, ಧೂಳು ಮತ್ತು ಇತರ ಕಣಗಳು ನಿಮ್ಮ ಡಿಸ್‌ಪ್ಲೇ ಸುತ್ತಲೂ ಇರುವ ಸಣ್ಣ ಜಾಗಗಳಲ್ಲಿ ಸಿಲುಕಿರುತ್ತವೆ. ಹಾಗೆಯೇ ಬೆಲ್ಟ್‌ ಸಹ ಬೆವರು ಹಾಗೂ ಇನ್ನಿತರೆ ಕಾರಣಕ್ಕೆ ಕೊಳೆಯಾಗುತ್ತದೆ. ಹೀಗಾಗಿ ನೀವು ಆಗಾಗ್ಗೆ ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಿ. ಇಲ್ಲದಿದ್ದರೆ ಕೆಲವು ಸೋಂಕುಗಳು ನಿಮ್ಮನ್ನು ಆವರಿಸುತ್ತವೆ.


    ಸ್ಮಾರ್ಟ್​ವಾಚ್​​ನ ಬ್ಯಾಟರಿ ಆಗಾಗ ಗಮನಿಸಿ


    ಸ್ಮಾರ್ಟ್​​​ವಾಚ್‌ನ ಬ್ಯಾಟರಿ ಕಡೆ ಹೆಚ್ಚು ಗಮನಹರಿಸಿ ಸ್ಮಾರ್ಟ್ ವಾಚ್ ಏಕಕಾಲದಲ್ಲಿ ಅನೇಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಾರಣಕ್ಕೆ ಯಾವಾಗಲೂ ಬ್ಯಾಟರಿ ಸಾಮರ್ಥ್ಯ ಎಷ್ಟಿದೆ ಎಂಬುದರ ಕಡೆ ಗಮನಹರಿಸಬೇಕಿದೆ. ನೀವೇನಾದರೂ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡದಿದ್ದರೆ, ಅದರ ಬಳಕೆಯ ಸಮಯ ಕಡಿಮೆಯಾಗುತ್ತದೆ. ಹೀಗಾಗಿ ಕೆಲವು ಡೇಟಾಗಳು ಮಿಸ್‌ ಆಗಬಹುದು. ಈ ರೀತಿಯ ಸಂದರ್ಭಗಳು ಪ್ರತೀ ದಿನ ಮುಂದುವರೆದರೆ ನಿಮ್ಮ ವಾಚ್​ನ ಬ್ಯಾಟರಿ ಡೆಡ್ ಆಗಬಹುದು.

    Published by:Prajwal B
    First published: