ಸಿಮ್​ ಸ್ವಾಪಿಂಗ್ ಎಂಬ ಹೊಸ ಫ್ರಾಡ್​ ಬಗ್ಗೆ ನಿಮಗೆ ಗೊತ್ತೇ?


Updated:July 16, 2018, 2:58 PM IST
ಸಿಮ್​ ಸ್ವಾಪಿಂಗ್ ಎಂಬ ಹೊಸ ಫ್ರಾಡ್​ ಬಗ್ಗೆ ನಿಮಗೆ ಗೊತ್ತೇ?

Updated: July 16, 2018, 2:58 PM IST
ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ನಕಲಿ ಕಸ್ಟಮರ್​ ಕೇರ್​ ಫ್ರಾಡ್​ನಂತಹ ಪ್ರಕರಣಗಳಲ್ಲಿ ಬೇಸತ್ತಿರುವ ಜನರಿಗೆ ಮತ್ತೊಂದು ಶಾಕ್​ ಎದುರಾಗಿದ್ದು, ಬುದ್ಧಿವಂತರೂ ಸೇರಿದಂತೆ ಹಲವಾರು ಮಂದಿ ಸಿಮ್​ ಸ್ವಾಪಿಂಗ್​ ಪ್ರಕರಣಗಳಲ್ಲಿ ಲಕ್ಷಾಂತರ ಹಣವನ್ನು ಕಳೆದುಕೊಂಡಿರುವುದಾಗಿ ವರದಿಯಾಗಿದೆ.

ಹೌದು ಕೆಲ ದಿನಗಳ ಹಿಂದೆ ನಕಲಿ ಕಸ್ಟಮರ್ ಕೇರ್​ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಬ್ಯಾಂಕ್​ ಕಾರ್ಡ್​ಗಳ ಸಂಖ್ಯೆಯನ್ನು ಪಡೆಯುತ್ತಿದ್ದ ಹ್ಯಾಕರ್ಸ್​ಗಳ ಸಮಸ್ಯೆಯೇ ಇನ್ನೂ ಹಚ್ಚಹಸಿರಿರುವಾಗಲೇ ಹ್ಯಾಕರ್​ಗಳು ಸಿಮ್​ ಸ್ವಾಪ್​ ಎಂಬ ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದು, ಇದರ ಮೂಲಕ ಕರ್ನಾಟಕ, ಕೊಲ್ಕತ್ತಾ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜನರು ಹಣ ಕಳೆದುಕೊಂಡಿದ್ದಾರೆ.

ಏನಿದು ಸಿಮ್​ ಸ್ವಾಪ್​?
ಹಲವಾರು ಸಂದರ್ಭದಲ್ಲಿ ನಾವು ಸಿಮ್​ಗಳನ್ನು ಸ್ವಾಪ್​ ಮಾಡಿಸುತ್ತೇವೆ. ಒಂದು ವೇಳೆ ನಿಮ್​ ಸಿಮ್​ ಕೆಟ್ಟು ಹೋಗಿದ್ದರೆ ಅಥವಾ ಹಳೇ ಸಿಮ್​ ತೆಗೆದು ಹೊಸ ಸಿಮ್​ ಪಡೆಯ ಬೇಕಿದ್ದ ಸಂದರ್ಭದಲ್ಲಿ ಸಿಮ್​ ಸ್ವಾಪ್​ ಮಾಡುತ್ತಾರೆ. ಅಸ್ತಿತ್ವದಲ್ಲಿರುವ ಫೋನ್‌ ನಂಬರ್‌ಗೆ ಹೊಸ ಸಿಮ್‌ ಅನ್ನು ಖರೀದಿಸುವುದನ್ನು ಸ್ವಾಪಿಂಗ್​ ಎನ್ನಬಹುದು.

ಹ್ಯಾಕ್​ ಹೇಗೆ ನಡೆಯುತ್ತದೆ?
ನಾವು ಅತ್ಯಂತ ಸುಲಭದಲ್ಲಿ ಈ ವಂಚನೆಗೆ ಒಳಗಾಗುವುದಕ್ಕೆ ಮೂಲ ಕಾರಣವೆಂದರೆ ನಮ್ಮಲ್ಲಿರುವ ನೆಟ್​ವರ್ಕ್​ ಸಮಸ್ಯೆ. ಹೆಚ್ಚಿನ ಸಂದರ್ಭದಲ್ಲಿ ಒಂದು ನಿರ್ಧಿಷ್ಟ ಮೊಬೈಲ್​ ಸಂಸ್ಥೆಯ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡುವ ವಂಚಕರು, ನೆಟ್​ವರ್ಕ್​ ಸಮಸ್ಯೆಯನ್ನು ಸರಿ ಪಡಿಸುತ್ತೇವೆ ಎಂದು ಹೇಳಿಕೊಂಡು ಮೋಸ ಮಾಡುತ್ತಾರೆ..

ಅತ್ಯಮೂಲ್ಯ ಆ 20 ಡಿಜಿಟ್​ ನಂಬರ್​ !
Loading...

ಹ್ಯಾಕರ್ಸ್​ ನಿಮಗೆ ಕರೆ ಮಾಡಿದ ಕೆಲವೇ ನಿಮಿಷದಲ್ಲಿ ನಿಮ್ಮ ಸಿಮ್​ ಹಿಂದೆ ಇರುವ 20 ಡಿಜಿಟ್​ ನಂಬರ್​ ಕೇಳುತ್ತಾರೆ.  ಇದಾದ ಬಳಿಕ ನಿಮ್ಮ ಬಳಿ 1 ನಂಬರ್​ನ್ನು ಪ್ರೆಸ್​ ಮಾಡುವಂತೆ ಕೇಳಿಕೊಳ್ಳುತ್ತಾರೆ. ಹ್ಯಾಕರ್​​ಗಳು ಅಭಿವೃದ್ಧಿ ಪಡಿಸಿದ ಅಪ್ಲಿಕೇಶ್​ನ ಮೂಲಕ ನಿಮ್ಮ ನಂಬರ್​ನ್ನು ಅಧಿಕೃತ ಸಂಸ್ಥೆಗೆ ಕಳುಹಿಸುತ್ತಾರೆ. ಉದಾ: ನಿಮ್ಮ ಸಂಸ್ಥೆ ಏರ್​ಟೆಲ್​ ಆಗಿದ್ದರೆ 20 ಡಿಜಿಟ್​ ನಂಬರ್​ನ್ನು ಪಡೆದುಕೊಂಡು ಅಧಿಕೃತವಾಗಿ ಎಸ್​ಎಂಎಸ್​ವೊಂದನ್ನು ಕಳುಹಿಸಿಕೊಡುತ್ತಾನೆ. ಬಳಿಕ ನಿಮಗೆ 1 ನಂಬರ್​ನ್ನು ಪ್ರೆಸ್​ ಮಾಡಲು ಹೇಳುತ್ತಾನೆ. ಈ ಮೂಲಕ ಏರ್​ಟೆಲ್​ ನೀವು ಅಧಿಕೃತವಾಗಿಯೇ ಸ್ವಾಪ್​ ಮಾಡುವಂತೆ ಮನವಿ ಸಲ್ಲಿರಬಹುದು ಎಂದು ಭಾವಿಸುತ್ತದೆ.

ನಿಮ್ಮದೇ ನಂಬರ್​ ಆದರೆ ಹೊಸ ಸಿಮ್​!
ಒಮ್ಮೆ ಈ ಪ್ರಕ್ರಿಯೆ ಪೂರ್ತಿಗೊಂಡ ಬಳಿಕ ನಿಮ್ಮ ಬಳಿಯಿರುವ ಸಿಮ್‌ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ. ಬಳಿಕ ನಿಮಗೆ ಯಾವುದೇ ಸಿಗ್ನಲ್​ ದೊರಕುವುದಿಲ್ಲ. ಆದರೆ ನಿಮಗೆ ಕರೆ ಮಾಡಿರುವ ವ್ಯಕ್ತಿ ಮಾತ್ರಾ ಅದೇ ಸಿಮ್​ ನಂಬರ್​ನಲ್ಲಿ ಹೊಸ ಸಿಮ್​ ಪಡೆಯುತ್ತಾನೆ.

ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್​ನಿಂದ ಹಣ ಮಾಯ !
ಒಂದು ಬಾರಿ ನಿಮ್ಮ ನಂಬರ್​ ಅವರ ಕೈ ಸೇರಿದರೆ ಮುಗಿಯಿತು, ಆ ನಂಬರ್​ ಯಾವುದೇ ಬ್ಯಾಂಕ್​ಗೆ ಲಿಂಕ್​ ಆಗಿದ್ದರೂ ಆ ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ವಂಚಕರು ಲೂಟಿ ಮಾಡುತ್ತಾರೆ. ನಿಮ್ಮ  ಬ್ಯಾಂಕ್​ ಮಾಹಿತಿಯನ್ನು ಮೊದಲೇ ಅವರು ನಿಮ್ಮ ಜತೆ ನಡೆಸುವ ಮಾತುಕತೆಯಲ್ಲೇ ಪಡೆದಿರುವ ಸಾಧ್ಯತೆಗಳಿವೆ. ಹೆಚ್ಚಿನ ಸಂದರ್ಭದಲ್ಲಿ ಯೂಸರ್​ ಐಡಿಯನ್ನು ಪಡೆದಿರುತ್ತಾರೆ. ಬಳಿಕ ಅವರ ಬಳಿಯಿರುವ ನಿಮ್ಮ ಸಿಮ್​ನಿಂದ ಒಟಿಪಿ ಪಡೆಯುತ್ತಾರೆ. ಅಲ್ಲಿಂದ ಹಣವನ್ನು ಕೊಳ್ಳೆಹೊಡೆಯುತ್ತಾರೆ.

ಇದರಿಂದ ಪಾರಾಗುವುದು ಹೇಗೆ?
ಮೊದಲನೇಯದಾಗಿ ನಿಮಗೆ ಈ ರೀತಿಯ ಕರೆ ಬಂದರೆ ಯಾವುದೇ ಕಾರಣಕ್ಕೂ ಅವರ ಸೂಕ್ತ ದಾಖಲೆಗಳನ್ನು ಪಡೆಯದೇ ಯಾವುದೇ ಮಾಹಿತಯನ್ನು ಹಂಚಿಕೊಳ್ಳಬೇಡಿ. ಅಪರಿಚೊತರ ಕರೆಯನ್ನು ಸ್ವೀಕರಿಸದಿರುವುದೇ ಉತ್ತಮ ಎಂದರೂ ತಪ್ಪಿಲ್ಲ.

ಆಧಾರ್​/ಪಾನ್​ ನಂಬರ್​ ನೀಡಬೇಡಿ
ವಂಚಕರು ಮಾತಿನ ಮಧ್ಯೆ ನಿಮ್ಮ ದಾಖಲೆಗಳನ್ನು ಖಚಿತಪಡಿಸುವಂತೆ ಕೇಳಿಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಆಧಾರ್​ ಅಥವಾ ಪಾನ್​ ಕಾರ್ಡ್​ ಮಾಹಿತಿಯನ್ನು ಕೇಳುತ್ತಾರೆ. ಇದ್ಯಾವುದನ್ನೂ ಕೊಡಬೇಡಿ. ಯಾವುದೇ ಮೊಬೈಲ್​ ಕಂಪನಿ ನಿಮ್ಮ ದಾಖಲೆಗಳನ್ನು ಫೋನ್​ನಲ್ಲೇ ನೀಡುವಂತೆ ಕೇಳುವುದಿಲ್ಲ.

ಫೋನ್​ ಸ್ವಿಚ್​ ಆಫ್​ ಮಾಡಬೇಡಿಸಿಮ್ ಸ್ವಾಪ್​ ಪ್ರತಿಕ್ರಿಯೆಯಲ್ಲಿ ನಿಮ್ಮ ಮೊಬೈಲ್​ ಸ್ವಿಚ್​ ಆಫ್​ ಮಾಡಲೇ ಬೇಕು. ಹೊಸ ಸಿಮ್​ ಪಡೆದರೂ ನೀವು ನೆಟ್​ವರ್ಕ್​ ಬರಬೇಕಾದರೆ ಮೊಬೈಲ್​ನ್ನು ಸ್ವಿಚ್​ ಆಫ್​ ಮಾಡಬೇಕು. ಆದರೆ ಈ ರೀತಿ ಮಾಡಿದರೆ ವಂಚಕರಇಗೆ ಇನ್ನೂ ಸುಲಭವಾಗುತ್ತದೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ