ಪಾಸ್​ಪೋರ್ಟ್​ ಸೇವೆ ನೀಡುತ್ತೇವೆ ಎಂಬ ಈ ನಕಲಿ ಆ್ಯಪ್​ಗಳ ಕುರಿತು ನಿಮಗೆಷ್ಟು ಗೊತ್ತು? ​

news18
Updated:June 27, 2018, 4:57 PM IST
ಪಾಸ್​ಪೋರ್ಟ್​ ಸೇವೆ ನೀಡುತ್ತೇವೆ ಎಂಬ ಈ ನಕಲಿ ಆ್ಯಪ್​ಗಳ ಕುರಿತು ನಿಮಗೆಷ್ಟು ಗೊತ್ತು? ​
news18
Updated: June 27, 2018, 4:57 PM IST
ಪಾಸ್ ಪೋರ್ಟ್​ ಸೇವಾ ದಿವಸ್ 6ನೇ ವರ್ಷಾಚರಣೆ ಅಂಗವಾಗಿ ದೇಶದ ಯಾವುದೇ ಭಾಗದಿಂದಾದರೂ ಮೊಬೈಲ್ ಆಫ್ ಮೂಲಕ ಪಾಸ್ ಪೋರ್ಟ್​ಗೆ ಅರ್ಜಿ ಹಾಕಬಲ್ಲ ಯೋಜನೆ ಒಳಗೊಂಡ mPassportSeva Mobile Appಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚಾಲನೆ ನೀಡಿದ್ದಾರೆ.

ಆದರೆ ಗೂಗಲ್​ ಪ್ಲೇ ಸ್ಟೋರ್​ಗೆ ನೀವು ಭೇಟಿ ಕೊಟ್ಟರೆ ಈ ರೀತಿ ಸೇವೆಯನ್ನು ನೀಡಬಲ್ಲ ಹಲವಾರು ಆ್ಯಪ್​ಗಳು ನಮ್ಮ ಬಳಿ ಸಾಕಷ್ಟು ಲಭ್ಯವಿದ್ದು, ಹೆಚ್ಚಿನ ಆ್ಯಪ್​ಗಳು ತಮ್ಮ ಬೇಳೆ ಬೇಯಿಸಿಕೊಳ್ಳಲೆಂದೇ ಪಾಸ್​ಪೋರ್ಟ್​ ಹೆಸರಿನಲ್ಲಿ ಅಸಂಪೂರ್ಣ ಸೇವೆಗಳನ್ನು ನೀಡುತ್ತಿವೆ. ಅಧಿಕೃತ ಆ್ಯಪ್​ ಈಗಾಗಲೇ ಒಂದು ಮಿಲಿಯನ್​ಗೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಇಂದು ನಾವು ಇಂತಹ ಆ್ಯಪ್​ಗಳ ಕುರಿತು ಮಾಹಿತಿ ನೀಡಿದ್ದೇವೆ.

Online Passport Services and Sevaಇದು ಪಾಸ್​ಪೋರ್ಟ್​ ರೆಜಿಸ್ಟ್ರೇಶನ್​, ಅರ್ಜಿಯ ಪ್ರಸಕ್ತ ಸ್ಥಿತಿಗತಿ ಸೇರಿದಂತೆ ಪಾಸ್​ಪೋರ್ಟ್​ ಕುರಿತಾದ ಮಾಹಿತಿಯನ್ನು ಒಂದೇ ಆ್ಯಪ್​ನಲ್ಲಿ ಬಳಕೆ ಮಾಡಿ ಎಂದು ಈ ಆ್ಯಪ್​ ಹೇಳಿಕೊಳ್ಳುತ್ತದೆ. ಆದರೆ ಇದು ಅಧಿಕೃತವಾಗಿ ಸರಕಾರದೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ. ಅಲ್ಲದೇ ಕೆಟಗರಿಯಲ್ಲಿ ಅಧಿಕೃತ ಆ್ಯಪ್​ ಅಲ್ಲ ಎಂದೇ ಹೇಳಿಕೊಂಡಿದೆ. ಹೀಗಾಗಿ ನೀವು ಈ ಆ್ಯಪ್​ನ್ನು ಬಳಸದಿರುವುದೇ ಲೇಸು.


 

Aadhar Pan PNR Passport Seva
Loading...


ಈ ಆ್ಯಪ್​ ಆಧಾರ್​ನಿಂದ ಹಿಡಿದು ಎಮ್​ಸಿಆರ್​ ಅಲ್ಲದೇ ಎಲ್ಲಾ ವಿಧಧ ಸರಕಾರಿ ಸೇವೆಗಳನ್ನು ನೀಡುವುದಾಗಿ ಭರವಸೆ ನೀಡಿದೆ, ಆದರೆ ಇದ್ಯಾವುದು ಅಧಿಕೃತವಲ್ಲ, ನೀವು ಅಧಿಕೃತವಲ್ಲದ ಸೇವೆಯನ್ನು ಬಯಸಿದರೆ ಮುಂದೆ ಬರಬಹುದಾದ ಅಪಾಯವನ್ನೂ ಎದುರಿಸಲು ಶಕ್ತರಾಗಿರಬೇಕು.


Passport Seva Online

ಈ ಆ್ಯಪ್​ನ್ನು ನೀವು ಗಮನಿಸಿದರೆ ಮೂಲ ಆ್ಯಪ್​ನಂತೇಯೇ ಕಂಡು ಬರುತ್ತದೆ, ಈ ಸಂದರ್ಭದಲ್ಲಿ ನೀವು ಆ್ಯಪ್​ನನ್ನು ಎಷ್ಟು ಮಂದಿ ಡೌನ್​ಲೋಡ್​ ಮಾಡಿದ್ದಾರೆ, ಯಾವ ಸಂಸ್ಥೆಗೆ ಸೇರಿರುವ ಆ್ಯಪ್​ ಎಂಬಿತ್ಯಾದಿ ಅಂಶಗಳನ್ನು ಪರಿಶೀಲನೆ ನಡೆಸಬೇಕು.


Passport Services E - Seva

ಇದೂ ಸಹ ಮೂಲ ಆ್ಯಪ್​ ಮಾದರಿಯಲ್ಲೇ ಸೇವೆಯನ್ನು ನೀಡುವುದಾಗಿ ಭರವಸೆ ನೀಡುತ್ತದೆ, ಆದರೆ ಅಧಿಕೃತವಲ್ಲ, ಪ್ರಮುಖವಾಗಿ ಈ ಆ್ಯಪ್​ ಒಂದು ಹಂತದ ರಿಜಿಸ್ಟ್ರೇಶನ್​ ಪ್ರೊಸೆಸ್​ ಮುಗಿದ ಬಳಿಕ ಮೂಲ ಪಾಸ್​ಪೋರ್ಟ್​ ವೆಬ್​ಗೆ ಲಿಂಕ್​ ಮಾಡುತ್ತದೆ. ಹೀಗಾಗಿ ಇದೊಂದು ವ್ಯರ್ಥ ಪ್ರಯತ್ನವಷ್ಟೆ.


Passport Status Check


ಈ ಆ್ಯಪ್​ ನಿಮ್ಮ ಪಾಸ್​ಪೋರ್ಟ್​ ಅರ್ಜಿ ಕುರಿತು ಮಾಹಿತಿಯನ್ನು ನೀಡುವುದಾಗಿ ಹೇಳಿಕೊಂಡಿದೆ, ಆದರೆ ಇದು ಪೂರ್ಣ ಪ್ರಮಾಣದ ಮಾಹಿತಿಯನ್ನು ಒದಗಿಸಲು ಶಕ್ತವಾಗಿಲ್ಲ. ಇದಕ್ಕಿಂತಲೂ ಪ್ರಮುಖವಾಗಿ ಅರ್ಜಿಯ ಪ್ರಸಕ್ತ ಸ್ಥಿತಿಗತಿ ಕುರಿತು ನೀಡಲು ಕೇವಲ ಪಾಸ್​ಪೋರ್ಟ್​ ಅಧಿಕೃತ ಆ್ಯಪ್​ಗಷ್ಟೇ ಸಾಮರ್ಥ್ಯವಿರುತ್ತದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...