ಫೇಸ್​ಬುಕ್​ ನಕಲಿ ಖಾತೆಗಳ ಸಂಖ್ಯೆ ಎಷ್ಟಿದೆ ಎಂದು ತಿಳಿದಿದೆಯಾ..?

ಕಂಪೆನಿ ನೀಡಿದ ವರದಿಯ ಪ್ರಕಾರ ಪ್ರಕಾರ ಲಾಗಿನ್​ ಖಾತೆಗಳ ರಿಂಟರ್​ರ್ನಲ್​ ರಿವ್ಯೂ ಆಧಾರದ ಮೇಲೆ ಮಾಹಿತಿಯನ್ನು ದೃಢಪಡಿಸಿದ್ದು, ಇದರಿಂದ ಫೇಸ್​ಬುಕ್​ ಜಾಲತಾಣದಲ್ಲಿ ಅಧಿಕ ನಕಲಿ ಖಾತೆಗಳು ಬೆಳಕಿಗೆ ಬಂದಿದೆ. ಎಂದು ಕಂಪೆನಿ ತಿಳಿಸಿದೆ.

news18
Updated:February 6, 2019, 9:22 AM IST
ಫೇಸ್​ಬುಕ್​ ನಕಲಿ ಖಾತೆಗಳ ಸಂಖ್ಯೆ ಎಷ್ಟಿದೆ ಎಂದು ತಿಳಿದಿದೆಯಾ..?
ಫೇಸ್​ಬುಕ್
news18
Updated: February 6, 2019, 9:22 AM IST
ವಿಶ್ವದಲ್ಲೇ ಹೆಚ್ಚು ಜನರು ಬಳಸುವ  ಫೇಸ್​ಬುಕ್​ ಜಾಲತಾಣದಲ್ಲಿ  ನಕಲಿ ಎಕೌಂಟ್​​ಗಳ ಸಂಖ್ಯೆ ​ ಹೆಚ್ಚಾಗಿದೆ ಎಂದು ಕಂಪೆನಿಯು ತಿಳಿಸಿದೆ. ಫೇಸ್​ಬುಕ್​ ಈ ಬಾರಿ ಮಾಸಿಕ ಬಳಕೆದಾರರ ಅಂಕಿ ಅಂಶವನ್ನು ತೆರೆದಿಟ್ಟಿದೆ. ಅಂಕಿ ಅಂಶದ ಮಾಹಿತಿ ಪ್ರಕಾರ 230 ಕೋಟಿ ಜನರು ಫೇಸ್​ಬುಕ್​ ಬಳಸುತ್ತಿದ್ದು, ಸುಮಾರು 20 ಕೋಟಿಗಳಿಗಿಂತ ಹೆಚ್ಚು ನಕಲಿ ಖಾತೆಗಳು ಇದೆ ಎಂದು ಹೇಳಿದೆ.

2015ರಲ್ಲಿ ಶೇ.5 ರಷ್ಟು ನಕಲಿ ಖಾತೆಗಳು ದೊರೆತಿದ್ದು, 2018 ರಲ್ಲಿ ಶೇ 11 ರಷ್ಟು ಏರಿಕೆಯಾಗಿದೆ. 2015ರ ಡಿಸೆಂಬರ್ ತಿಂಗಳಿನಲ್ಲಿ ಫೇಸ್​ಬುಕ್​ ಎಮ್​ಎಯು ಬಳಕೆದಾರರ ಸಂಖ್ಯೆ1.59 ಶತಕೋಟಿಯಷ್ಟಿದ್ದು, 2018ರ ವೇಳೆಗೆ 2.32 ಶತಕೋಟಿ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ: ಕಾಶ್ಮೀರ ಕಂಪನ: ದಿಲ್ಲಿ ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ, ಭಯಭೀತರಾದ ಜನರು!

ಕಂಪೆನಿ ನೀಡಿದ ವರದಿಯ ಪ್ರಕಾರ ಪ್ರಕಾರ ಲಾಗಿನ್​ ಖಾತೆಗಳ ರಿಂಟರ್​ರ್ನಲ್​ ರಿವ್ಯೂ ಆಧಾರದ ಮೇಲೆ ಮಾಹಿತಿಯನ್ನು ದೃಢಪಡಿಸಿದ್ದು, ಇದರಿಂದ ಫೇಸ್​ಬುಕ್​ ಜಾಲತಾಣದಲ್ಲಿ ಅಧಿಕ ನಕಲಿ ಖಾತೆಗಳು ಬೆಳಕಿಗೆ ಬಂದಿದೆ ಎಂದು ಕಂಪೆನಿ ತಿಳಿಸಿದೆ.

ಫೇಸ್​ಬುಕ್​ ಜಾಲತಾಣದಲ್ಲಿ ಎರಡಕ್ಕಿಂತ ಅಧಿಕ ಖಾತೆಗಳು ಸೇರಿದಂತೆ ಇನ್ನಿತರ ಕಾರಣಕ್ಕಾಗಿ ತೆರೆದ ಖಾತೆಗಳನ್ನು ಸೃಷ್ಠಿಸಲಾಗಿದೆ. ಇನ್ನೂ ಕೆಲವು ಖಾತೆಗಳು ಬಳಸದೆ ಇರುವ ಹಳೆಯ ಖಾತೆಗಳಾಗಿದೆ. ಕೆಲವು ಖಾತೆಗಳು  ಬ್ಯುಸಿನೆಸ್​​​ಗಾಗಿ ಸೃಷ್ಠಿಸಿದ ಖಾತೆಗಳು ಸೇರಿದಂತೆ ಇವುಗಳನ್ನು ಫೇಸ್​ಬುಕ್​ ನಕಲಿ ಖಾತೆಗಳ ಪಟ್ಟಿಯಲ್ಲಿ ಸೇರಿಸಿದೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...