ಒಂದೇ ದಿನದಲ್ಲಿ ಫೇಸ್​ಬುಕ್​ಗೆ 8 ಲಕ್ಷ ಕೋಟಿ ರೂ ನಷ್ಟವಾಗಲು ಏನು ಕಾರಣ?


Updated:July 27, 2018, 2:44 PM IST
ಒಂದೇ ದಿನದಲ್ಲಿ ಫೇಸ್​ಬುಕ್​ಗೆ 8 ಲಕ್ಷ ಕೋಟಿ ರೂ ನಷ್ಟವಾಗಲು ಏನು ಕಾರಣ?
ಮಾರ್ಕ್ ಜುಕರ್ಬರ್ಗ್

Updated: July 27, 2018, 2:44 PM IST
- ವಿಶಾಲ್ ಮಾಥುರ್, ನ್ಯೂಸ್18

ನವದೆಹಲಿ(ಜು. 27): ಇತ್ತೀಚಿನ ವರ್ಷಗಳಿಂದ ಒಂದಿಲ್ಲೊಂದು ವಿವಾದಗಳಿಗೆ ಒಳಗಾಗಿದ್ದ ಫೇಸ್ಬುಕ್ ಮೊನ್ನೆ ಬೇಡದ ದಾಖಲೆ ನಿರ್ಮಿಸಿತು. ಬುಧವಾರದಂದು ಫೇಸ್ಬುಕ್ ಒಂದೇ ದಿನದಲ್ಲಿ ಷೇರುಮಾರುಕಟ್ಟೆಯಲ್ಲಿ 100 ಬಿಲಿಯನ್ ಡಾಲರ್​ಗೂ ಹೆಚ್ಚು ಹಣ ನಷ್ಟ ಮಾಡಿಕೊಂಡಿತು. ಫೇಸ್ಬುಕ್ ಅಂದು ಕಳೆದುಕೊಂಡಿದ್ದು ನಿಖರವಾಗಿ 119 ಬಿಲಿಯನ್ ಡಾಲರ್ ಹಣ. ಭಾರತೀಯ ರುಪಾಯಿಗೆ ಪರಿವರ್ತಿಸಿದರೆ ಇದು ಸರಿಸುಮಾರು 8 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ವಿಶ್ವ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಮೌಲ್ಯ ಕಳೆದುಕೊಂಡ ಕಂಪನಿ ಎಂಬ ದಾಖಲೆಯನ್ನು ಫೇಸ್ಬುಕ್ ನಿರ್ಮಿಸಿತು. ಅಂದು ನಷ್ಟವಾದ ದಿನದಂದು ಫೇಸ್ಬುಕ್​ನ ಮಾರುಕಟ್ಟೆ ಬಂಡವಾಳದ ಮೊತ್ತವು 510 ಬಿಲಿಯನ್ ಡಾಲರ್​ಗೆ ಕುಸಿಯಿತು.

ಯಾವ ಸಂಸ್ಥೆಯು ಒಂದೇ ದಿನದಲ್ಲಿ ಇಷ್ಟು ಹಣದ ನಷ್ಟ ಮಾಡಿಕೊಂಡಿರಲಿಲ್ಲ. ವಿಶ್ವದ ಅತ್ಯಂತ ಪ್ರಭಾವೀ ಮತ್ತು ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಫೇಸ್ಬುಕ್ ಈ ಪರಿ ಜಂಪ್ ಆಗಿ ಬೀಳಲು ಕಾರಣವೇನು? ಕೆಲ ತಜ್ಞರು ಇದಕ್ಕೆ ಉತ್ತರ ಹುಡುಕುವ ಯತ್ನ ಮಾಡಿದ್ದಾರೆ. ಫೇಸ್ಬುಕ್ ನಷ್ಟಕ್ಕೆ ಕೆಲ ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ….

* ವಿಶ್ವಾದ್ಯಂತ 223 ಕೋಟಿ ಸದಸ್ಯರನ್ನು ಹೊಂದಿರುವ ಫೇಸ್ಬುಕ್ ಹೆಚ್ಚೂಕಡಿಮೆ ಸ್ಯಾಚುರೇಷನ್ ಪಾಯಿಂಟ್ ಮುಟ್ಟಿದೆ. ಫೇಸ್ಬುಕ್​ನ ಹೊಸ ಸದಸ್ಯರ ಏರಿಕೆ ಪ್ರಮಾಣ ದಿನೇ ದಿನೇ ಗಣನೀಯವಾಗಿ ಕುಸಿಯುತ್ತಿದೆ.

* ಎರಡನೇ ತ್ರೈಮಾಸಿಕ ಅವಧಿಯಲ್ಲಿ ಫೇಸ್ಬುಕ್ ಗಳಿಸಿದ ಲಾಭದ ಪ್ರಮಾಣ ಹಿಂದಿನದಕ್ಕಿಂತ ಕಡಿಮೆಯಾಗಿತ್ತು

* ಕೇಂಬ್ರಿಡ್ಜ್ ಅನಾಲಿಟಿಕಾ ವಿವಾದದ ತಲೆನೋವು; ತನ್ನ ಬಳಕೆದಾರರ ಗೌಪ್ಯ ಮಾಹಿತಿಯನ್ನು ಕೇಂಬ್ರಿಡ್ಜ್ ಅನಾಲಿಟಿಕಾಗೆ ಕೊಟ್ಟ ಸಂಗತಿ ಬಹಿರಂಗಗೊಂಡಿದ್ದು ಫೇಸ್ಬುಕ್​ಗೆ ಈಗ ನುಂಗಲಾರದ ತುತ್ತಾಗಿದೆ.

* ಕೇಂಬ್ರಿಡ್ಜ್ ಅನಾಲಿಟಿಕಾ ವಿವಾದದ ಹಿನ್ನೆಲೆಯಲ್ಲೇ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರನ್ನು ಅಮೆರಿಕದ ಸಂಸತ್ತಿಗೆ ಕರೆಸಿ ವಿಚಾರಣೆ ನಡೆಸಿ ಚೆನ್ನಾಗಿ ಛೀಮಾರಿ ಹಾಕಲಾಯಿತು. ಆ ಘಟನೆ ಆದ ನಂತರ ಫೇಸ್ಬುಕ್​ಗೆ ನೆಗಟಿವ್ ಪ್ರಚಾರ ಶುರುವಾಯಿತು.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ