ಎಚ್ಚರ! ನೀವು ಗೂಗಲ್​ ಪೇ ಬಳಸುತ್ತೀರಾ?: ಹಾಗಿದ್ರೆ ಈ ಸ್ಟೋರಿ ಓದಿ

‘ಗೂಗಲ್​ ಪೇ‘ ಆರ್​ಬಿಐನಿಂದ ಯಾವುದೇ ಮಾನ್ಯತೆ ಪಡೆದುಕೊಂಡಿಲ್ಲ

news18
Updated:April 13, 2019, 4:12 PM IST
ಎಚ್ಚರ! ನೀವು ಗೂಗಲ್​ ಪೇ ಬಳಸುತ್ತೀರಾ?: ಹಾಗಿದ್ರೆ ಈ ಸ್ಟೋರಿ ಓದಿ
‘ಗೂಗಲ್​ ಪೇ‘
  • News18
  • Last Updated: April 13, 2019, 4:12 PM IST
  • Share this:
ಹೊಸದಿಲ್ಲಿ(ಏ.13): ಗೂಗಲ್​​ ಒಡೆತನದ ಆನ್​ಲೈನ್​ ಮನಿಟ್ರಾನ್ಸ್​​ಪರ್​​​ ಆ್ಯಪ್​ ಎಂದೇ ಹೆಸರುವಾಸಿಯಾದ ‘ಗೂಗಲ್​ ಪೇ‘ ಭಾರತೀಯ ರಿಸರ್ವ್​ ಬ್ಯಾಂಕ್​ನಿಂದ ಮಾನ್ಯತೆ ಪಡೆಯದೆ ಸಾರ್ವಜನಿಕರಿಂದ ನಗದು ವರ್ಗವಣೆ ಹೇಗೆ ನಡೆಸುತ್ತಿದೆ ಎಂದು ದೆಹಲಿ ಹೈಕೋರ್ಟ್​ ಪ್ರಶ್ನೆ ಮಾಡಿದೆ. ಈ ವಿಚಾರವಾಗಿ ನಗದು ವರ್ಗಾವಣೆ ನಡೆಸುತ್ತಿರುವ ಗೂಗಲ್​ ಇಂಡಿಯಾಗೆ ದೆಹಲಿ ಹೈಕೋರ್ಟ್​ ಸೂಚನೆ ನೀಡಿದೆ

ಆರ್​ಬಿಐ ಮಾ.20ರಂದು ನಗದು ವರ್ಗಾವಣೆಯಲ್ಲಿ ಮಾನ್ಯತೆ ಪಡೆದ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಆರ್​ಬಿಐ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ‘ಗೂಗಲ್​ ಪೇ‘ ಹೆಸರಿಲ್ಲದಿದ್ದರೂ, ಯಾವ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಜಿತ್​​ ಮಿಶ್ರಾ ಎಂಬವರು ಕೋರ್ಟ್​ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಡಿಕೆಶಿ ಪದೇ ಪದೇ ಲಿಂಗಾಯತ ಧರ್ಮ ವಿಷಯ ಕೆದಕೋದರ ಹಿಂದೆ ರಾಜಕೀಯ ದುರುದ್ದೇಶ; ಹೊರಟ್ಟಿ ಅಸಮಾಧಾನ

ದೆಹಲಿ ಹೈಕೋರ್ಟ್​ ಈ ವಿಚಾರವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್​​ ಮತ್ತು ಎ.ಜೆ ಬಂಬಾನಿ ಒಳಗೊಂಡ ಸದಸ್ಯ ಪೀಠ ‘ಗೂಗಲ್​ ಪೇ‘ ಪಾವತಿ ಹಾಗೂ ಸೆಟಲ್ಮೆಂಟ್​ ಕಾಯ್ದೆಯ  ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ, ‘ಗೂಗಲ್​ ಪೇ‘ ಆರ್​ಬಿಐನಿಂದ ಯಾವುದೇ ಮಾನ್ಯತೆ ಪಡೆದುಕೊಂಡಿಲ್ಲ ಎಂದು ವಾದಿಸಿದ್ದಾರೆ.

First published:April 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ