Mobile Recharge: ಮೊಬೈಲ್ ಅಂಗಡಿಯವರು ರೀಚಾರ್ಜ್ ಮೂಲಕ ಲಾಭ ಗಳಿಸೋದು ಹೇಗೆ ಗೊತ್ತಾ? ಇಲ್ಲಿದೆ ಸತ್ಯ!

Mobile Recharge: ಹಳ್ಳಿಗಾಡಿನಲ್ಲಿ ಮತ್ತು ಡಿಜಿಟಲ್​ ಪೇಮೆಂಟ್​ ಸೇವೆಯನ್ನು ಬಳಸದ ಅನೇಕರು ಮೊಬೈಲ್​ ಅಂಗಡಿಗೆ ತೆರಳಿ ರೀಚಾರ್ಜ್​ ಮಾಡಿಸಿಕೊಳ್ಳುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಮೊಬೈಲ್​ ಅಂಗಡಿಯವನು ನಾವು ನೀಡುವ ಹಣವನ್ನೇ ರೀಚಾರ್ಜ್ ಮಾಡುತ್ತಾನೆ. ಆದರೆ ಆತನಿಗೆ ಇದರಿಂದ ಲಾಭವೇನು? ಆತ ರೀಚಾರ್ಜ್​ ಮೂಲಕ ಹೇಗೆ ಲಾಭ ಗಳಿಸುತ್ತಾನೆ? ಎಂಬ ಪ್ರಶ್ನೆಗೆ ಬಹುತೇಕರಿಗೆ ಉತ್ತರ ಗೊತ್ತಿಲ್ಲ. ಹಾಗಾಗಿ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಏರ್​ಟೆಲ್​-ಜಿಯೋ-ವಿಐ

ಏರ್​ಟೆಲ್​-ಜಿಯೋ-ವಿಐ

  • Share this:
    ಪ್ರಸ್ತುತ ಡಿಜಿಟಲ್​ ಪೇಮೆಂಟ್​ ಆ್ಯಪ್​ಗಳು (Digital Payment Apps) ಬಂದಿರುವ ಕಾರಣ ಮೊಬೈಲ್​ ರೀಜಾರ್ಜ್ (Mobile Reacharge)​ ಕೇವಲ ನಿಮಿಕ್ಷಗಳೇ ಸಾಕು. ಅಷ್ಟು ಮಾತ್ರವಲ್ಲದೆ, ಎಲ್ಲಾ ಸೇವೆಗಳು ಡಿಜಿಟಲ್​ ಪೇಮೆಂಟ್ ಆ್ಯಪ್​ಗಳಲ್ಲಿ ಲಭ್ಯವಿದೆ. ಆದರೆ 3-4 ವರ್ಷಗಳ ಹಿಂದೆ ಗಮನಿಸಿದರೆ ಮೊಬೈಲ್​ ರೀಚಾರ್ಜ್​ ಮಾಡಲು ಅಂಗಡಿಗೆ ತೆರಳಬೇಕಿತ್ತು. ಅಲ್ಲಿ ಹೋಗಿ ಸೂಕ್ತವಾದ ಯೋಜನೆ ಆರಿಸಿ ರೀಚಾರ್ಜ್​ ಮಾಡಿಸಿಕೊಳ್ಳುತ್ತಿದ್ದೆವು. ಇಂದಿಗೂ ಕೂಡ ಹಳ್ಳಿಗಾಡಿನಲ್ಲಿ ಮತ್ತು ಡಿಜಿಟಲ್​ ಪೇಮೆಂಟ್​ ಸೇವೆಯನ್ನು ಬಳಸದ ಅನೇಕರು ಮೊಬೈಲ್​ ಅಂಗಡಿಗೆ ತೆರಳಿ ರೀಚಾರ್ಜ್​ ಮಾಡಿಸಿಕೊಳ್ಳುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಮೊಬೈಲ್​ ಅಂಗಡಿಯವನು ನಾವು ನೀಡುವ ಹಣವನ್ನೇ ರೀಚಾರ್ಜ್ ಮಾಡುತ್ತಾನೆ. ಆದರೆ ಆತನಿಗೆ ಇದರಿಂದ ಲಾಭವೇನು? ಆತ ರೀಚಾರ್ಜ್​ ಮೂಲಕ ಹೇಗೆ ಲಾಭ ಗಳಿಸುತ್ತಾನೆ? ಎಂಬ ಪ್ರಶ್ನೆಗೆ ಬಹುತೇಕರಿಗೆ ಉತ್ತರ ಗೊತ್ತಿಲ್ಲ. ಹಾಗಾಗಿ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

    ಮೊದಲೇ ಹೇಳಿದಂತೆ ಇದು ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳ ಸಹಾಯದಿಂದ ಆನ್‌ಲೈನ್‌ನಲ್ಲಿ ಅನೇಕ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಅಷ್ಟು ಮಾತ್ರವಲ್ಲದೆ ಡಿಜಿಟಲ್ ವಹಿವಾಟನ್ನು ನಡೆಸಬಹುದಾಗಿದೆ. ಮೊಬೈಲ್​ ಬಂದ ಮೇಲಂತೂ ಆನ್​ಲೈನ್​ ವ್ಯವಹಾರಗಳ ಪ್ರಮಾಣ ಹೆಚ್ಚಾಗಿದೆ. ಮತ್ತು ಆನ್‌ಲೈನ್ ವಹಿವಾಟುಗಳು ಸುಲಭ ಮತ್ತು ವೇಗವಾಗಿವೆ. ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್​ ಇದ್ದು, ಇಂಟರ್​ನೆಟ್​ ಸೇವೆಯನ್ನು ಒಳಗೊಂಡಿರುತ್ತಾರೆ. ಹಾಗಾಗಿ ಆನ್‌ಲೈನ್‌ನಲ್ಲಿ ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್, ನೀರು ಮತ್ತು ವಿದ್ಯುತ್ ಬಿಲ್ ಪಾವತಿ, ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡುತ್ತಾರೆ. ಇದರಿಂದಾಗಿ ಸಮಯವಕಾಶವನ್ನು ಇನ್ನುಳಿದ ಖರ್ಚು ಕಡಿಯಾಗೆಯಾಗುತ್ತದೆ.

    ಇಷ್ಟೆಲ್ಲಾ ಸೇವೆಗಳಿದ್ದರು. ಮೊಬೈಲ್​ ಅಂಗಡಿಯವರು ಇಂದಿಗೂ ರೀಚಾರ್ಜ್ ಸೇವೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇವು ಹೇಗೆ ಲಾಭ ಮತ್ತು ಹಣ ಗಳಿಸುತ್ತಿದ್ದಾರೆ ಗೊತ್ತಾ?

    ರೀಚಾರ್ಜ್ ಕೆಲಸ ಮಾಡುವ ಅಂಗಡಿಯವರು ಕಂಪನಿಯಿಂದ ವಾಣಿಜ್ಯ ಸಿಮ್ ಕಾರ್ಡ್ ಪಡೆಯುತ್ತಾರೆ. ರೀಚಾರ್ಜ್‌ಗೆ ಬಂದ ಗ್ರಾಹಕರ ಮೊಬೈಲ್‌ನಲ್ಲಿ ಆಯಾ ಕಂಪನಿಯ ಪರವಾಗಿ ರೀಚಾರ್ಜ್ ಮಾಡಿ. ಇದರಿಂದ ಕಂಪನಿಯಿಂದ ಕಮಿಷನ್ ಪಡೆಯುತ್ತಾರೆ. ಒಟ್ಟಿನಲ್ಲಿ ಅಂಗಡಿಯವನ  ಕಮಿಷನ್ ಕಡಿಮೆ ಮತ್ತು ಶೇಕಡಾ 3 ರವರೆಗೆ ಲಾಭ ಪಡೆಯುವ ಸಾಧ್ಯತೆಯಿರುತ್ತದೆ. ಉದಾಹರಣೆಗೆ: ಮೊಬೈಲ್‌ಗೆ100 ರೂಪಾಯಿ ರೀಚಾರ್ಜ್ ಮಾಡಿದಾಗ, ಅವರ ಖಾತೆಯಿಂದ 97 ರೂ. ಪಾವತಿಯಾಗುತ್ತದೆ. ಅಂದರೆ ಅವರಿಗೆ ಮೂರು ರೂಪಾಯಿ ಲಾಭ ಸಿಗುತ್ತದೆ.

    ಇನ್ನು ಓದಿ: PhonePe: ಹೆಲ್ತ್ ಇನ್ಶುರೆನ್ಸ್ ಪ್ಲಾನ್​ ಪರಿಚಯಿಸಿದ ಫೋನ್​ಪೇ! 999 ರೂ ಪಾವತಿಸಿದರೆ 1 ಲಕ್ಷದವರೆಗೆ ಪರಿಹಾರ!

    ಪ್ರತಿಯೊಂದು ಟೆಲಿಕಾಂ ಕಂಪನಿಯು ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಅನ್ನು ಹೊಂದಿದ್ದು, ಇದರ ಮೂಲಕ ರೀಚಾರ್ಜ್ ಮಾಡಬಹುದಾಗಿದೆ. ಆದರೆ ಇದಕ್ಕಾಗಿ, ಅಂಗಡಿಯವರು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಅಂಗಡಿಯವರಿಗೆ ರೀಚಾರ್ಜ್ ಮಾಡಲು ಅವಕಾಶ ನೀಡಲಾಗುತ್ತದೆ. ಅವರು ಪ್ರತಿ ರೀಚಾರ್ಜ್‌ನಲ್ಲಿ 2.5 ರಿಂದ 3 ಪ್ರತಿಶತದಷ್ಟು ಲಾಭವನ್ನು ಪಡೆಯುತ್ತಾರೆ.

    ಇತ್ತೀಚಿನ ದಿನಗಳಲ್ಲಿ ರೀಚಾರ್ಜ್‌ಗಾಗಿ ವಿಭಿನ್ನ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳು ಬಂದ ನಂತರ, ರೀಚಾರ್ಜ್ ಮಾಡುವ ಶಾಪರ್‌ಗಳ ಸಂಖ್ಯೆ ಕಡಿಮೆಯಾಗಿದೆ. ಅಂಗಡಿಗೆ ಹೋಗಿ ರೀಚಾರ್ಜ್ ಮಾಡಲು ಯಾರಿಗೂ ಸಮಯವಿಲ್ಲ.

    ಇನ್ನು ಓದಿ: Flipkart​ ಕಡೆಯಿಂದ ಭರ್ಜರಿ ಆಫರ್​! ಕೇವಲ 15 ರೂ.ಗೆ ಸಿಗುತ್ತೆ ಈ ಸ್ಮಾರ್ಟ್​ಫೋನ್​!

    ಕೆಲವು ವರ್ಷಗಳ ಹಿಂದೆ, ಮೊಬೈಲ್ ಕಂಪನಿಗಳು ರೀಚಾರ್ಜ್ ಕೂಪನ್‌ಗಳನ್ನು ಮಾರಾಟ ಮಾಡುತ್ತಿದ್ದವು. ರೀಚಾರ್ಜ್ ಕೂಪನ್‌ನಲ್ಲಿ ಕೋಡ್ ಇತ್ತು. ಕಾರ್ಡ್ ಸ್ಕ್ರ್ಯಾಚ್ ಮಾಡಿದಾಗ ಕೋಡ್ ಕಾಣಿಸುತ್ತಿತ್ತು. ಅದರ ಮೂಲಕ ಗ್ರಾಹಕರು ರೀಚಾರ್ಜ್ ಮಾಡಿಕೊಳ್ಳುತ್ತಿದ್ದರು. ಈ ಕೂಪನ್‌ಗಳನ್ನು ಕಂಪನಿಯು ಎಂಆರ್‌ಪಿಗಿಂತ ಕಡಿಮೆ ದರದಲ್ಲಿ ಅಂಗಡಿಯವರಿಗೆ ಮಾರಾಟ ಮಾಡುತ್ತಿತ್ತು. ಅಂಗಡಿಯವರು ಗ್ರಾಹಕರಿಗೆ ಎಂಆರ್ ಪಿ ಬೆಲೆ ಮಾರಾಟ ಮಾಡುತ್ತಿದ್ದರು. ಅಂಗಡಿಯವನು ಇದರಿಂದ ಲಾಭ ಪಡೆಯುತ್ತಿದ್ದರು.
    Published by:Harshith AS
    First published: