ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮುನ್ನ ಈ ಕೆಲಸವನ್ನು ತಪ್ಪದೇ ಮಾಡಿರಿ!

ಮೊದಲ ಬಾರಿಗೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿರುವ ಬಳಕೆದಾರರು ತಮ್ಮ ಖಾತೆಯ ಪಾಸ್​ವರ್ಡ್​ ನಮೂದಿಸುವ ಬಗೆಗೆ ಕೊಂಚ ಗಮನ ಹರಿಸುವುದು ಒಳಿತು. ಕೆಲವರು ಹೊಸ ಖಾತೆ ತೆರೆಯುವ ಧಾವಂತದಲ್ಲಿ ಸುಲಭವಾದ ಪಾಸ್​​ವರ್ಡ್​ ಮೊರೆ ಹೋಗುತ್ತಾರೆ. ಆದರೆ ನಿಮ್ಮ ಪ್ರತಿಯೊಂದು ಖಾತೆಗೂ ಕ್ಲಿಷ್ಟಕರ ಪಾಸ್​​​ವರ್ಡ್​ ನೀಡಲು ಮರೆಯದಿರಿ.

news18
Updated:May 17, 2019, 7:51 PM IST
ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮುನ್ನ ಈ ಕೆಲಸವನ್ನು ತಪ್ಪದೇ ಮಾಡಿರಿ!
ಸಾಮಾಜಿಕ ಜಾಲತಾಣ
news18
Updated: May 17, 2019, 7:51 PM IST
ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮುನ್ನ ತಮ್ಮ ಖಾಸಗಿ ಮಾಹಿತಿಗಳನ್ನು ಎಷ್ಟು ಗೌಪ್ಯವಾಗಿಡಬೇಕು ಎಂಬುದು ಮುಖ್ಯವಾಗಿದೆ.  ಫೇಸ್​​ಬುಕ್​​​, ವಾಟ್ಸ್​​ಆ್ಯಪ್​​​ ಸೇರಿದಂತೆ ಹತ್ತು ಹಲವು ಆ್ಯಪ್​ಗಳನ್ನು ಡೌನ್​ಲೋಡ್​​​ ಮಾಡುವವರು ಅವುಗಳ ಪೂರ್ವಪರ ಮಾಹಿತಿ ಇಲ್ಲದೇ ಖಾತೆ ತೆರೆದುಬಿಡುತ್ತಾರೆ.  ಆದರೆ ಖಾತೆ ತೆರೆಯುವ ಮುನ್ನ ನಿಮ್ಮ ಖಾಸಗಿ ಮಾಹಿತಿ ಹೇಗಿರ ಬೇಕು ಎಂಬುದು ತಿಳಿದುಕೊಳ್ಳುವುದು ಉತ್ತಮ.

ಹೊಸದಾಗಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯುವ ಬಳಕೆದಾರರು ತಮ್ಮ ಇ-ಮೇಲ್​, ಮನೆಯ ವಿಳಾಸ, ಮೊಬೈಲ್​​ ಸಂಖ್ಯೆ ಎಲ್ಲರಿಗೂ ತಿಳಿಸುವಂತೆ ಇಡುತ್ತಾರೆ. ಇದರಿಂದ ಆಗಬಹುದಾದ ಅನಾಹುತಗಳನ್ನು ಊಹಿಸಿರುವುದಿಲ್ಲ. ಹಾಗಾಗೀ, ಸಾಮಾಜಿಕ ಜಾಲತಾಣಗಳ ಒಳಹೊಕ್ಕುವ ಮುನ್ನ ಪ್ರೈವೆಸಿ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ಇತ್ತೀಚೆಗೆ ಸೈಬರ್​ ಪಾತಕಿಗಳ ಅತಿಕ್ರಮಣ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಿಂದ ಬಳಕೆದಾರನ ಖಾಸಗಿ ಮಾಹಿತಿಯನ್ನು ಖದಿಯುತ್ತಿದ್ದಾರೆ. ಅಲ್ಲದೇ, ಬಳಕೆದಾರನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಹಾಗಾಗೀ, ಬಳಕೆದಾರ ಖಾಸಗಿ ಮಾಹಿತಿಯನ್ನು ಒದಗಿಸುವ ಮುನ್ನ ಎಚ್ಚರಿಕೆಯಿಂದಿರುವುದು ಒಳಿತು.

ಇದನ್ನೂ ಓದಿ: ವಿದೇಶಿ ಲೀಗ್​ನತ್ತ ಭಾರತದ ಆಲ್​ರೌಂಡರ್: ಇತಿಹಾಸ ಬರೆಯಲಿದ್ದಾರಾ ಇರ್ಫಾನ್ ಪಠಾಣ್

ಫೇಸ್​​ಬುಕ್​

ಹೊಸದಾಗಿ ಫೇಸ್​​ಬುಕ್​ ಖಾತೆಯನ್ನು ತೆರೆಯವ ಬಳಕೆದಾರ ತಮ್ಮ ಮೊಬೈಲ್​​ ಸಂಖ್ಯೆ ನೀಡುವ ಮುನ್ನ ಜಾಗ್ರತವಹಿಸಬೇಕಾಗುತ್ತದೆ. ಒಂದು ವೇಳೆ ಮೊಬೈಲ್​ ಸಂಖ್ಯೆ ನೀಡಿದರೆ ನಂತರ ‘ಓನ್ಲಿ ಮೀ‘ ಆಯ್ಕೆಗೆ ಬದಲಾಯಿಸಿಕೊಳ್ಳಿ. ಇದರಿಂದ ಅಪರಿಚಿತರ ಕಿರಿಕಿರಿ ತಡೆಯಬಹುದಾಗಿದೆ. ಅಂತೆಯೇ, ನೂತನ ಖಾತೆಯಲ್ಲಿ ಪಬ್ಲಿಕ್​​​, ಫ್ರೆಂಡ್ಸ್​, ಫ್ರೆಂಡ್ಸ್​ ಆಫ್​ ಫ್ರೆಂಡ್ಸ್​, ಆಯ್ಕೆಯನ್ನು ಒದಗಿಸಿದೆ. ಬಳಕೆದಾರ ಫೇಸ್​ಬುಕ್​ನಲ್ಲಿರುವ​ ಸೆಟ್ಟಿಂಗ್ ಆಯ್ಕೆ​ ತೆರೆದು ತಮ್ಮಿಷ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು.ವಾಟ್ಸ್​ ಆ್ಯಪ್​​

ವಾಟ್ಸ್​ ಆ್ಯಪ್​ ಖಾತೆ ತೆರೆದಾಗ ನಿಮ್ಮ ಪ್ರೊಫೈಲ್​ ಫೋಟೊ ನಿಮ್ಮಲ್ಲಿರುವ ಮೊಬೈಲ್​ ಸಂಖ್ಯೆಗಳೀಗೆ ಮಾತ್ರ ಕಾಣಿಸುವಂತಹ ಆಯ್ಕೆಯನ್ನು ಮಾಡಬಹುದು. ಅಂತೆಯೇ, ನೀವು ಅಪ್​ಡೇಟ್​ ಮಾಡುವ ಸ್ಟೇಟಸ್​ ಯಾರಿಗೆ ಕಾಣಬೇಕು ಎಂಬ ಆಯ್ಕೆಯನ್ನು ಮಾಡಿಕೊಳ್ಳಬಹುದು. ಇದರಿಂದಾಗಿ, ನಿಮ್ಮ ಖಾತೆಯನ್ನು ಸೇಫ್​ ಆಗಿ ಇಡಬಹುದಾಗಿದೆ.

ಟ್ವಿಟ್ಟರ್​​
ಟ್ಟಿಟ್ಟರ್​ ಖಾತೆ ತೆರುವ ಮುನ್ನ ನಿಮ್ಮ ಖಾತೆಯನ್ನು ನಿಮಗೆ ಬೇಕಾದಂತೆ ಸೆಟ್ಟಿಂಗ್​ ಮಾಡಿಕೊಳ್ಳಿ. ನೀವು ಬಳಸುವ ಖಾತೆ ಪ್ಲಬಿಕ್​ ಆಗಿದ್ದರೆ ಫಾಲೋ ರಿಕ್ವೆಸ್ಟ್​​ ಕಳುಹಿಸಬಹುದು. ಆದರೆ ನಿಮ್ಮ ಅನುಮತಿ ಪಡೆದು ಫಾಲೋ ಮಾಡಬೇಕಾದರೆ ಸೆಟ್ಟಿಂಗ್​ ಆಂಡ್​ ಪ್ರೈವೆಸಿ ಕ್ಲಿಕ್​ ಮಾಡಿ. ನಂತರ ಪ್ರೈವೆಸಿ ಆಂಡ್​ ಸೇಫ್ಟಿಯಲ್ಲಿ ಪ್ರೊಟೆಕ್ಟ್​​ ಯುವರ್​ ಟ್ಟಿಟ್ಟರ್​​ನಲ್ಲಿ ಬದಲಾಯಿಸಿಕೊಳ್ಳಬಹುದು.

ಇನ್​​​ಸ್ಟಾಗ್ರಾಂ

ನೀವು ಬಳಸುವ ಇನ್​ಸ್ಟಾಗ್ರಾಂ ಖಾತೆಯ ಬಗ್ಗೆ ತುಸು ಎಚ್ಚರವಹಿಸುವುದು ಅಗತ್ಯ. ಫೇಸ್​ಬುಕ್​ ಖಾತೆಯಿಂದ ನೇರವಾದ ಲಾಗಿನ್​ ಆಗುವ ಆಯ್ಕೆಯನ್ನು ಇನ್​ಸ್ಟಾಗ್ರಂ ಹೊಂದಿದೆ. ಇನ್ನು ನಿಮ್ಮ ಖಾತೆ ಪಬ್ಲಿಕ್​ ಆಗಿದ್ದಲ್ಲಿ ಸೆಟ್ಟಿಂಗ್​​ ತೆರೆದು ಪ್ರೈವೆಸಿ ಆಂಡ್​ ಸೆಕ್ಯರಿಟಿ ಆಯ್ಕೆಯನ್ನು ತೆರೆದು ನಿಮ್ಮಿಷ್ಟದಂತೆ ಬದಲಾಯಿಸಿಕೊಳ್ಳಬಹುದು.

ಪಾಸ್​ವರ್ಡ್​

ಮೊದಲ ಬಾರಿಗೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿರುವ ಬಳಕೆದಾರರು ತಮ್ಮ ಖಾತೆಯ ಪಾಸ್​ವರ್ಡ್​ ನಮೂದಿಸುವ ಬಗೆಗೆ ಕೊಂಚ ಗಮನ ಹರಿಸುವುದು ಒಳಿತು. ಕೆಲವರು ಹೊಸ ಖಾತೆ ತೆರೆಯುವ ಧಾವಂತದಲ್ಲಿ ಸುಲಭವಾದ ಪಾಸ್​​ವರ್ಡ್​ ಮೊರೆ ಹೋಗುತ್ತಾರೆ. ಆದರೆ ನಿಮ್ಮ ಪ್ರತಿಯೊಂದು ಖಾತೆಗೂ ಕ್ಲಿಷ್ಟಕರ ಪಾಸ್​​​ವರ್ಡ್​ ನೀಡಲು ಮರೆಯದಿರಿ. ನೆನಪಿಟ್ಟುಕೊಳ್ಳಲು ಸುಲಭ ಎಂದು 12345 ರೀತಿಯ ಪಾಸ್​​ವರ್ಡ್​ ಬಳಸಬೇಡಿ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ