Facebookನಿಂದ ಸಾಲ ಪಡೆಯಿರಿ! ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಫೇಸ್‌ಬುಕ್‌ನಲ್ಲಿ ಸಣ್ಣ ವ್ಯಾಪಾರ ಮಾಡಿದರೆ, 50 ಲಕ್ಷದವರೆಗೆ ಸಾಲವನ್ನು ನೀಡುತ್ತದೆ. ಬಹುತೇಕರಿಗೆ ಈ ವಿಚಾರ ತಿಳಿಯದೇ ಇದ್ದರೂ ಫೇಸ್​ಬುಕ್​ ಮಾತ್ರ ಪ್ರಸ್ತುತ ಈ ಸಾಲವನ್ನು ದೇಶದ 300 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿರಿಸಿದೆ. ಈ ಸೌಲಭ್ಯದ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.

Facebook / ಫೇಸ್​ಬುಕ್​

Facebook / ಫೇಸ್​ಬುಕ್​

  • Share this:
    Facebook Loan: ಹಣದ ಸಮಸ್ಯೆ ಬಂದಾಗ ಸಾಲ ಮಾಡಲು ಮುಂದಾಗುತ್ತಾರೆ. ಕೆಲವರು ಪರಿಚಯಸ್ಥರ ಬಳಿಯೇ ಸಾಲ ಪಡೆದುಕೊಳ್ಳುತ್ತಾರೆ. ಇನ್ನು ಕೆಲವರು ಬ್ಯಾಂಕ್​ ಮೊರೆ ಹೋಗುತ್ತಾರೆ. ಕೆಲವು ಬ್ಯಾಂಕ್​ಗಳು ನಿರ್ದಿಷ್ಟ ದಾಖಲೆಗಳನ್ನು ತೆಗೆದುಕೊಳ್ಳುವ ಮೂಲಕ ವ್ಯಕ್ತಿಗೆ ಸಾಲ ನೀಡುತ್ತದೆ. ವ್ಯಾಪಾರ ಇನ್ನಿತರ ವಿಚಾರಗೆ ಸಾಲ ಮಾಡಲು ಬಯಸಿದಾಗ ಬ್ಯಾಂಕುಗಳು ಅಥವಾ NBFC ಗಳಂತಹ ಸಂಸ್ಥೆಗಳಿಂದ ಸಹಾಯವನ್ನು ಕೇಳುತ್ತೇವೆ. ಆದರೀಗ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ ಕೂಡ ಬ್ಯುಸಿನೆಸ್​ ಲೋನ್​ ನೀಡುತ್ತೆ ಎಂದರೆ ನಂಬುತ್ತೀರಾ? ಹೌದು,  ಫೇಸ್ ಬುಕ್ ಕೂಡ ಇದೀಗ ಕೆಲಸ ಆರಂಭಿಸಿದೆ.

    ಫೇಸ್‌ಬುಕ್‌ನಲ್ಲಿ ಸಣ್ಣ ವ್ಯಾಪಾರ ಮಾಡಿದರೆ, 50 ಲಕ್ಷದವರೆಗೆ ಸಾಲವನ್ನು ನೀಡುತ್ತದೆ. ಬಹುತೇಕರಿಗೆ ಈ ವಿಚಾರ ತಿಳಿಯದೇ ಇದ್ದರೂ ಫೇಸ್​ಬುಕ್​ ಮಾತ್ರ ಪ್ರಸ್ತುತ ಈ ಸಾಲವನ್ನು ದೇಶದ 300 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿರಿಸಿದೆ. ಈ ಸೌಲಭ್ಯದ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.

    ಸಾಲಕ್ಕಾಗಿ ಸಹಕರಿಸುತ್ತಿದೆ ಫೇಸ್​ಬುಕ್​

    ಬಹುತೇಕರಿಗೆ ಫೇಸ್‌ಬುಕ್  ಮೂಲಕ ಚಾಟ್​ ಮಾಡಬಹುದು, ಸ್ನೇಹಿತರನ್ನು ಮಾಡಬಹುದು, ರೀಲ್ಸ್​, ಲೈವ್​ ವಿಡಿಯೋ, ಸ್ಟೇಟರ್​ ಹಾಕಬಹುದು ಎಂಬುದು ಮಾತ್ರಗೊತ್ತಿದೆ. ಆದರೆ ಫೇಸ್​ಬುಕ್​ ಮೂಲಕ ಅನೇಕರು ಬ್ಯುಸಿನೆಸ್​ ಮಾಡುತ್ತಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ. ಹೌದು ಇದರ ಮೂಲಕ ಸಣ್ಣ ವ್ಯಾಪಾರ ಮಾಡುತ್ತಿದ್ದಾರೆ. ಅಷ್ಟೇ ಏಕೆ ಲಾಭವನ್ನು ಗಳಿಸುವವರು ಇದ್ದಾರೆ, ಪ್ರಸ್ತುತ ಫೇಸ್ ಬುಕ್ ಕೂಡ ವ್ಯಾಪಾರ ಮಾಡುವ ಮೂಲಕ ಉತ್ತಮ ಲಾಭ ಗಳಿಸಲು ವೇದಿಕೆಯಾಗುತ್ತಿದೆ. ಈ ಮೂಲಕ ಜನರು ಸಣ್ಣ ವ್ಯಾಪಾರವನ್ನು ಆರಂಭಿಸುತ್ತಿದ್ದಾರೆ ಮತ್ತು ಅದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಫೇಸ್‌ಬುಕ್ ಕೂಡ ಸಣ್ಣ ಉದ್ಯಮ ಸಾಲಗಳ ಉಪಕ್ರಮವನ್ನು ಪ್ರಾರಂಭಿಸಿದೆ.

    ಆದರೆ ಮತ್ತೊಂದು ಸಂಗತಿ ಏನೆಂದರೆ ಫೇಸ್‌ಬುಕ್‌ನ ಮಾಲೀಕ ಕಂಪನಿ Meta ಅಥವಾ Facebook ಸ್ವತಃ ಈ ಸಾಲವನ್ನು ನೀಡುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕಾಗಿ ಕಂಪನಿ Indifi ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

    ಇದನ್ನೂ ಓದಿ: WhatsApp: ಒಂದೇ ಸ್ಮಾರ್ಟ್​​ಫೋನ್​ನಲ್ಲಿ 2 ವಾಟ್ಸ್ಆ್ಯಪ್ ಖಾತೆಗಳನ್ನು ತೆರೆಯಬೇಕಾ? ಇಲ್ಲಿದೆ ಮಾಹಿತಿ

    ಫೇಸ್​ಬುಕ್​ ನೀಡುವ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾದರೆ Small Business loan ಇನಿಶಿಯೇಟಿವ್‌ಗೆ ಭೇಟಿ ನೀಡುವ ಮೂಲಕ ಸಾಲವನ್ನು ಪಡೆಯಬಹುದು. ಆದರೆ ಕನಿಷ್ಟ 6 ತಿಂಗಳ ಕಾಲ Meta ಅಥವಾ Facebook ನೊಂದಿಗೆ ಸಂಯೋಜಿತವಾಗಿರುವ ಯಾವುದೇ ಅಪ್ಲಿಕೇಶನ್‌ನಲ್ಲಿ ನಿಮ್ಮ ವ್ಯಾಪಾರದ ಕುರಿತಾಗಿ ಜಾಹೀರಾತುಗಳನ್ನು ಮಾಡುತ್ತಿರಬೇಕು. ಇದನ್ನು ಪೂರೈಸಿದ ನಂತರ ಫೇಸ್​ಬುಕ್​ ಬಳಕೆದಾರರನ್ನು ಪರಿಗಣಿಸಿ ನಂತರ ಸಾಲ ಒದಗಿಸುತ್ತದೆ.

    ಇದನ್ನೂ ಓದಿ: Two Platforms‌ನಲ್ಲಿ 15 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ಜಿಯೋ

    ಎಷ್ಟು ಸಾಲ ಸಿಗಬಹುದು?

    ಫೇಸ್‌ಬುಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ನೀವು 2 ಲಕ್ಷದಿಂದ 50 ಲಕ್ಷದವರೆಗೆ ಸಾಲ ಪಡೆಯಬಹುದು. ಸಾಲವನ್ನು ಅನುಮೋದಿಸಿದ ನಂತರ, ಹಣವನ್ನು 3 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

    ಬ್ಯಾಂಕ್​ಗಳಲ್ಲಿ ಸಾಲ ಒದಗಿಸಲು ಏನಾದರು ಅಡ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಫೇಸ್​ಬುಕ್​ನಲ್ಲಿ ಈ ರೀತಿಯ ಯಾವುದೇ ತೊಂದರೆಯಿಲ್ಲ. ಅಲ್ಲದೆ, ಸಾಲದ ಬಡ್ಡಿ ದರವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ವ್ಯಕ್ತಿಯು ಸಾಲ ಪಡೆದ ಮೊತ್ತಕ್ಕೆ ಶೇ.17 ರಿಂದ ಶೇ.20 ವಾರ್ಷಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

    ಇನ್ನು ಮಹಿಳಾ ಉದ್ಯಮಿಗಳಿಗೆ ಬಡ್ಡಿದರದಲ್ಲಿ ಶೇ.0.2 ರಷ್ಟು ರಿಯಾಯಿತಿ ಸಿಗುತ್ತದೆ. ಲೋನ್ ಅನುಮೋದಿಸಿದ ನಂತರ, ಕೇವಲ ಒಂದು ದಿನದಲ್ಲಿ ದೃಢೀಕರಣ ಸಿಗುತ್ತದೆ. ಇನ್ನುಳಿದ ದಾಖಲೆಗಳ ಕೆಲಸ ಕೇವಲ ಮೂರು ದಿನಗಳಲ್ಲಿ ಮುಗಿಯುತ್ತದೆ. ಸಣ್ಣ ಉದ್ಯಮ ಮಾಡುವವರಿಗೆ ಸಾಲ ಬೇಕೆನಿದಾಗ ಫೇಸ್​ಬುಕ್​ ಸಹಕಾರವನ್ನು ನೀಡುತ್ತದೆ. ಆದರೆ ಈ ಮಾರ್ಗವನ್ನು ಸರಿಯಾಗಿ ಬಳಸಿಕೊಂಡರೆ ವ್ಯಾಪಾರ ಮತ್ತು ವ್ಯವಹಾರದ ಉತ್ತುಂಗಕ್ಕೆ ಏರಲು ಸಹಕಾರಿಯಾಗಬಹುದು.
    Published by:Harshith AS
    First published: