ಎಚ್ಚರ..! ಸಣ್ಣಪುಟ್ಟ ತಪ್ಪುಗಳಿಂದ ನೀವು ಹಣ ಕಳೆದುಕೊಳ್ಳುತ್ತೀರಿ

ಡಿಜಿಟಲ್​ ವ್ಯವಸ್ಥೆ ಪ್ರಾರಂಭವಾಗಿನಿಂದ ಸೈಬರ್​ ಪ್ರಕರಣ, ಹ್ಯಾಕಿಂಗ್​ ಪ್ರಕರಣ ಹೆಚ್ಚಾಗುತ್ತಿದೆ. ಒಂದೇ ಒಂದು ಮೇಸೆಜ್​ನಿಂದ ನಿಮ್ಮ ಬ್ಯಾಂಕ್​ನಲ್ಲಿರುವ ಹಣವನ್ನು ಲಪಟಾಯಿಸುತ್ತಿದ್ದಾರೆ. ಕೆಲವೊಮ್ಮೆ ಡಿಜಿಟಲ್​ ಪಕ್ರಿಯೆ ವೇಳೆ ನೀವು ಮಾಡುವ ಸಣ್ಣ ತಪ್ಪಿನಿಂದಾಗಿ ನಿಮ್ಮ ಖಾತೆಯ ಹಣ ಯಾರದ್ದೋ ಕೈ ಸೇರುತ್ತವೆ.

Harshith AS | news18-kannada
Updated:November 4, 2019, 3:51 PM IST
ಎಚ್ಚರ..! ಸಣ್ಣಪುಟ್ಟ ತಪ್ಪುಗಳಿಂದ ನೀವು ಹಣ ಕಳೆದುಕೊಳ್ಳುತ್ತೀರಿ
ಮೊಬೈಲ್​ ಬ್ಯಾಕಿಂಗ್​
  • Share this:
ಡಿಜಿಟಲ್​ ಯುಗ ಬೆಳೆದಂತೆಲ್ಲಾ ಹಣದ ವ್ಯವಹಾರವು ಡಿಜಿಟಲ್​ ಆಗಿ ಬಿಟ್ಟಿದೆ. ಈ ಹಿಂದೆ ಬ್ಯಾಕಿಂಗ್​ ವ್ಯವಸ್ಥೆಗಳಲ್ಲಿನ ಡಿಡಿ, ಚೆಕ್​ ವ್ಯವಸ್ಥೆ ಹೋಗಿ ಮೊಬೈಲ್​ ಬ್ಯಾಕಿಂಗ್​, ಯುಪಿಐ ಪೇಮೆಂಟ್​, ಇಂಟರ್​ನೆಟ್​ ಬ್ಯಾಂಕಿಂಗ್​ ವ್ಯವಸ್ಥೆ ಬಂದಿದೆ. ಆದರೆ, ಭಾರತವು ಡಿಜಿಟಲ್​ ಮತ್ತು ಕ್ಯಾಶ್​ಲೆಸ್​ ಆಗುತ್ತಿರುವ ಹಿನ್ನಲೆಯಲ್ಲಿ ಸೈಬರ್​ ಕ್ರೈಂ ನಂತಹ ಪ್ರಕರಣಗಳು ತಲೆ ಎತ್ತುತ್ತಿವೆ. ಡಿಜಿಟಲ್​ ವ್ಯವಹಾರದ ಕೆಲ ತಪ್ಪಿನಿಂದಾಗಿ ಅದೆಷ್ಟೋ ಜನರು ಹಣ ಕಳೆದುಕೊಂಡ ಪ್ರಸಂಗಗಳು ಬೆಳಕಿಗೆ ಬರುತ್ತಿವೆ.

ಡಿಜಿಟಲ್​ ವ್ಯವಸ್ಥೆ ಪ್ರಾರಂಭವಾಗಿನಿಂದ ಸೈಬರ್​ ಪ್ರಕರಣ, ಹ್ಯಾಕಿಂಗ್​ ಪ್ರಕರಣ ಹೆಚ್ಚಾಗುತ್ತಿದೆ. ಒಂದೇ ಒಂದು ಮೇಸೆಜ್​ನಿಂದ ನಿಮ್ಮ ಬ್ಯಾಂಕ್​ನಲ್ಲಿರುವ ಹಣವನ್ನು ಲಪಟಾಯಿಸುತ್ತಿದ್ದಾರೆ. ಕೆಲವೊಮ್ಮೆ ಡಿಜಿಟಲ್​ ಪಕ್ರಿಯೆ ವೇಳೆ ನೀವು ಮಾಡುವ ಸಣ್ಣ ತಪ್ಪಿನಿಂದಾಗಿ ನಿಮ್ಮ ಖಾತೆಯ ಹಣ ಯಾರದ್ದೋ ಕೈ ಸೇರುತ್ತವೆ. ಹಾಗಿದ್ದಾಗ, ಬ್ಯಾಕಿಂಗ್​ ವ್ಯವಹಾರ ನಡೆಸುವಾಗ ಎಚ್ಚರದಿಂದಿರಬೇಕಿದೆ. ನಾವು ನೀಡುವ ಕೆಲ ಸಲಹೆಗಳನ್ನು ಅನುಸರಿಸಿ ಸೇಫ್​ ಬ್ಯಾಕಿಂಗ್​ ಮಾಡಿ.

ಇಮೇಲ್​ ಲಿಂಕ್​ನಿಂದ ಬ್ಯಾಂಕಿಂಗ್​ ವ್ಯವಹಾರ ನಡೆಸದಿರಿ

ಕೆಲವೊಮ್ಮೆ ಬ್ಯಾಕಿಂಗ್​ ಲಿಂಕ್​ಗಳು ನೇರವಾಗಿ ನಿಮ್ಮ ಇಮೇಲ್​ ಮೂಲಕ ಗೋಚರಪಡಿಸುತ್ತದೆ. ಇಮೇಲ್​ ಕಳುಹಿಸಿದ ಬ್ಯಾಂಕಿಂಗ್​ ಲಿಂಕ್​ ಬಳಸುವುದರಿಂದ ನಿಮ್ಮ ಮಾಹಿತಿ ಹ್ಯಾಕರ್​ಗಳ ಕೈಗೆ ಸಿಗುವ ಸಂದರ್ಭಗಳೇ ಜಾಸ್ತಿ. ಶೇ.90 ರಷ್ಟು ಇಮೇಲ್​ಗಳು ಸ್ಪ್ಯಾಮ್​ ಆಗಿದ್ದು ಹ್ಯಾಕರ್​ಗಳು ಈ ಸುಸಂದರ್ಭ ನೋಡಿ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ

ಪಬ್ಲಿಕ್​ ವೈ-ಫೈನಲ್ಲಿ ವ್ಯವಹಾರ ನಡೆಸದಿರಿ

ಪಬ್ಲಿಕ್​ ವೈ-ಫೈನಲ್ಲಿ ಬ್ಯಾಕಿಂಗ್​ ವ್ಯವಹಾರ ಅಸುರಕ್ಷಿತವಾಗಿದೆ. ಸ್ಮಾರ್ಟ್​ಫೋನ್​ನಲ್ಲಿ ವೈ-ಫೈ ಸಂಪರ್ಕ ಪಡೆದುಕೊಂಡು ನಿಮ್ಮ ಕ್ರೆಡಿಟ್​ ಅಥವಾ ಡೆಬಿಟ್​ ಕಾರ್ಡಿನ ಮಾಹಿತಿಯನ್ನು ನಮೂದಿಸಿದ್ದೀರಿ ಎಂದರೆ ಹ್ಯಾಕರ್​ಗಳ ಕೈಯಲ್ಲಿ ಸಿಲುಕಿದಂತೆ.

ಪಾಸ್​ವರ್ಡ್​ ಬದಲಿಸುತ್ತಿರಿನೀವು ಇಂಟರ್​ನೆಟ್​ ಬ್ಯಾಕಿಂಗ್​ ವ್ಯವಹಾರ ನಡೆಸುದಾದರೆ ತಿಂಗಳಿಗೆ ಒಮ್ಮೆಯಾದರೂ ಯುಪಿಐ ಪಾಸ್​ವರ್ಡ್​, ಪಿನ್​ ನಂಬರ್​ ಅನ್ನು ಬದಲಾಯಿಸುತ್ತಿರಿ. ಪಾರ್ಸ್​ವರ್ಡ್​ ರಚಿಸುವಾಗ ಅಕ್ಷರ ಮತ್ತು ಸಂಖ್ಯೆಯನ್ನು ಬಳಸಿ ಪಾಸ್​ವರ್ಡ್​ ರಚಿಸಿರಿ.

ಇದನ್ನೂ ಓದಿ: ‘ನಿಮ್ಮ ರೈತೋದ್ಧಾರದ ಸಲಹೆ ಕೇಳಲು ಕಾತರರಾಗಿದ್ದೇವೆ’ – ಸುಮಲತಾ ಬಗ್ಗೆ ವ್ಯಂಗ್ಯ ಮಾಡಿದ ಕುಮಾರಸ್ವಾಮಿ

ಲಾಗ್​ ಔಟ್​ ಮಾಡಿ

ಬ್ಯಾಕಿಂಗ್​ ವ್ಯವಹಾರ ನಡೆಸಿದ ನಂತರ ನಿಮ್ಮ ಖಾತೆಯನ್ನು ಲಾಗ್​ ಔಟ್​ ಮಾಡಲು ಮರೆಯದಿರಿ. ನೀವು ಮಾಡುವ ಈ ಸಣ್ಣ ತಪ್ಪಿನಿಂದ ಖಾತೆ ಖಾಲಿಯಾಗುವ ಪ್ರಸಂಗಳು ಬರಬಹುದು.

ಬ್ಯಾಂಕ್​ನ ಅಧಿಕೃತ ಆ್ಯಪ್​ ಬಳಸಿ

ಪ್ಲೇಸ್ಟೋರ್​ನಲ್ಲಿರುವ ಸೆಕ್ಯೂರ್​ ಆ್ಯಪ್​ಗಳ ಸಹಾಯದಿಂದ ನಿಮ್ಮ ಬ್ಯಾಂಕ್​ನ  ಅಧಿಕೃತ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿ. ಈ ಮೂಲಕ ನಿಮ್ಮ ಬ್ಯಾಂಕಿಗ್​ ವ್ಯವಹಾರವನ್ನು ಪ್ರಾರಂಭಿಸಿ.

First published:November 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading