HONOR ಟೆಕ್ ಚಿಕ್ (TechChic) ತಂತ್ರಜ್ಞಾನ: ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸ ಕ್ರಾಂತಿ

ಗ್ರಾಹಕರಿಗೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ತಂತ್ರಜ್ಞಾನದ ವಿಷಯದಲ್ಲಿ HONOR ಭಾರಿ ಪ್ರಗತಿ ಸಾಧಿಸುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಮೊಬೈಲ್ ತಯಾರಕ ಕಂಪೆನಿಗಳ ಎದುರಿಗೆ ಸ್ಪರ್ಧೆಯನ್ನು ಒಡ್ಡುತ್ತಿದೆ.

news18-kannada
Updated:December 27, 2019, 6:45 PM IST
HONOR ಟೆಕ್ ಚಿಕ್ (TechChic) ತಂತ್ರಜ್ಞಾನ: ಸ್ಮಾರ್ಟ್‌ಫೋನ್ ಲೋಕದಲ್ಲಿ ಹೊಸ ಕ್ರಾಂತಿ
honor
  • Share this:
ದೊಡ್ಡ ದೊಡ್ಡ ಮೊಬೈಲ್ ಕಂಪನಿಗಳು ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸಲು ತಂತ್ರಜ್ಞಾನದಲ್ಲಿ ಭಾರಿ ಸುಧಾರಣೆಯನ್ನು ಮಾಡುತ್ತಿದೆ. ಇಂತಹ ತಂತ್ರಜ್ಞಾನದಿಂದಾಗಿ ಅವರ ಮಾರಾಟ ಕೂಡ ಹೆಚ್ಚಾಗುತ್ತದೆ. ತಂತ್ರಜ್ಞಾನ ಮಾರುಕಟ್ಟೆಯಲ್ಲಿ ತಮ್ಮ ಬ್ರಾಂಡ್ ಹೆಸರನ್ನು ಚಿರಪರಿಚಿತವಾಗಿಸಲು ಗ್ರಾಹಕರಿಗೆ ಹಲವಾರು ವಿಶೇಷತೆಗಳನ್ನು ಒದಗಿಸಲಾಗುತ್ತಿದೆ. ಈ ರೀತಿಯ ತೀವ್ರವಾದ ಸ್ಪರ್ಧೆಯಿಂದ ಮೊಬೈಲ್ ಕಂಪನಿಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಲು ಕಾರಣವಾಗುತ್ತಿದೆ. ಇದರಿಂದಾಗಿ ತಮ್ಮ ಉತ್ಪನ್ನಗಳ ಹೆಚ್ಚು ಹೆಚ್ಚು ಮಾರಾಟವನ್ನು ದಾಖಲಿಸಲು ಸಾಧ್ಯವಾಗುತ್ತದೆ. ಇನ್ನು ಹೊಸತನದಿಂದ ಕೂಡಿದ ತಂತ್ರಜ್ಞಾನದ ಬಗ್ಗೆ ಮಾತನಾಡುವುದಾದರೆ, HONOR ಕಂಪೆನಿ ನಮ್ಮ ಕಣ್ಮುಂದೆ ಬರುತ್ತದೆ. ಏಕೆಂದರೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹಲವು ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಈ ಕಂಪೆನಿ ಈಗಾಗಲೇ ಬಿಡುಗಡೆ ಮಾಡಿದೆ.

ಇದೀಗ ಹೊಸ ತಲೆಮಾರಿನ ಯುವ ಪೀಳಿಗಾಗಿ HONOR ಮೊಟ್ಟಮೊದಲ ಬಾರಿಗೆ ಚಿಕ್ ಟೆಕ್ ಚಿಕ್ (TechChic) ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಅತ್ಯಾಧುನಿಕ ಜೀವನಶೈಲಿಗೆ ಅನುಕೂಲವಾಗುವಂತೆ ನೂತನ ತಂತ್ರಜ್ಞಾನವನ್ನು ಹೋನರ್ ಕಂಪೆನಿ ಬಿಡುಗಡೆ ಮಾಡುತ್ತಿದೆ. ಟೆಕ್ ಚಿಕ್ ಎಂಬ ಹೊಸ ಪದದ ಬಳಕೆಯು HONOR ಅನ್ನು ಸ್ಟೈಲಿಶ್ ಆಗಿರುವ ಮತ್ತು ಹೈಟೆಕ್ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಬ್ರಾಂಡ್ ಎಂಬ ಸ್ಥಾನಕ್ಕೇರಿಸಿದೆ. ಅಗ್ರಸ್ಥಾನದ ಬ್ರಾಂಡ್‌ ಎಂದೇ ಗುರುತಿಸಿಕೊಂಡಿರುವ ಹೋನರ್ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಫೋನ್‌ಗಳನ್ನು ಪರಿಚಯಿಸುವಲ್ಲಿ ಜನಪ್ರಿಯವಾಗಿದ್ದು, Techchic ಎಂಬ ಪದವನ್ನು ಪ್ರಸ್ತಾಪಿಸುವುದರೊಂದಿಗೆ, ಇದು ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್​ ಉದ್ಯಮದಲ್ಲಿ ಕ್ರಾಂತಿಯುಂಟು ಮಾಡುವ ಗುರಿಯನ್ನು ಹೊಂದಿದೆ.

HONOR


2017 ಕ್ಕಿಂತ ಮೊದಲು, HONOR 9 ಲಾಂಚ್ ಮಾಡಿದ ಸಂದರ್ಭದಲ್ಲಿ ಒಂದು ಆಕರ್ಷಕ ಮತ್ತು ನವೀನ ವಿನ್ಯಾಸದ ಮಿಶ್ರಣವು ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಸಿರುವುದನ್ನು ನಾವು ನೋಡಿದ್ದೇವೆ. ಸ್ಮಾರ್ಟ್‌ಫೋನ್‌ಗೆ ಆಕರ್ಷಕ ನೋಟವನ್ನು ನೀಡುವ 15-ಲೇಯರ್ ಪ್ರಕ್ರಿಯೆಯ 3D ಕರ್ವ್ಡ್ ಅರೋರಲ್ ಗ್ಲಾಸ್ ಅನ್ನು ಹೊಂದಿರುವುದರಿಂದ ಇದೊಂದು ಅದ್ಭುತ ವಿನ್ಯಾಸ ಎನ್ನುವುದರಲ್ಲಿ ಎರಡು ಮಾತಿಲ್ಲ. ನಂತರ, ತಂತ್ರಜ್ಞಾನದ ಪ್ರಗತಿಯ ಮತ್ತೊಂದು ಅಭಿವೃದ್ಧಿಯ ರೂಪದಲ್ಲಿ HONOR 10 ನಲ್ಲಿ ಬಣ್ಣಬಣ್ಣದ ಧ್ರುವೀಯ ಬೆಳಕಿನ ಲೇಪನದ ತಂತ್ರಜ್ಞಾನವನ್ನು HONOR ಪರಿಚಯಿಸಿತು. ವಿನ್ಯಾಸದ ಆವಿಷ್ಕಾರಕ್ಕಾಗಿ ಈ ಡಿವೈಸನ್ನು ಶ್ಲಾಘಿಸಲಾಯಿತು. ಇದರ ಕುರಿತು ಎಲ್ಲೆಡೆ ಚರ್ಚೆ ಶುರುವಾಯಿತು ಮತ್ತು 2018-2019 ನೇ ವರ್ಷದ EISA (ಯುರೋಪಿಯನ್ ಇಮೇಜಿಂಗ್ ಮತ್ತು ಸೌಂಡ್ ಅಸೋಸಿಯೇಷನ್) ಲೈಫ್‌ಸ್ಟೈಲ್ ಸ್ಮಾರ್ಟ್‌ಫೋನ್ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿತು.

HONOR


HONOR ತನ್ನ ಪ್ರತಿಯೊಂದು ಹೊಸ ಬಿಡುಗಡೆಗಳ ಸಂದರ್ಭದಲ್ಲಿಯೂ ಕೂಡ ಹೊಸ ಸುಧಾರಿತ ತಂತ್ರಜ್ಞಾನವನ್ನು ಪ್ರಸ್ತಾಪಿಸಿ, ತನ್ನ ಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟು ಮುನ್ನಡೆ ಸಾಧಿಸುತ್ತಿದೆ. ಈ ಮೊಬೈಲ್ ದೈತ್ಯ ಕಂಪನಿಯು HONOR Magic 2 ನಲ್ಲಿ ಬಟರ್‌ಫ್ಲೈ ಸ್ಕ್ರೀನ್ ಸ್ಟ್ರಕ್ಚರ್ ಮತ್ತು 3D ಕರ್ವ್ ಆಪ್ಟಿಕಲ್ ನ್ಯಾನೊಮೀಟರ್ ವ್ಯಾಕ್ಯೂಮ್ ಕೋಟಿಂಗ್ ತಂತ್ರಜ್ಞಾನವನ್ನು ಅನಾವರಣಗೊಳಿಸುವ ಮೂಲಕ ಪ್ರತಿಯೊಬ್ಬರೂ ನಿಬ್ಬೆರಗಾಗುವಂತೆ ಮಾಡಿದೆ. HONOR ತನ್ನ ಪ್ರತಿಯೊಂದು ಹೊಸ ಬಿಡುಗಡೆಗಳ ಸಂದರ್ಭದಲ್ಲಿಯೂ, ಗಮನಾರ್ಹವಾದ ಮಟ್ಟದಲ್ಲಿ ತಂತ್ರಜ್ಞಾನದ ಪ್ರಗತಿಯನ್ನು ಸಾಧಿಸಿದೆ. ಅದಕ್ಕಾಗಿ ಅದು ದೊಡ್ಡ ಪ್ರಶಂಸೆಯನ್ನು ಪಡಯುವುದಷ್ಟೇ ಅಲ್ಲದೇ, ಮಾರುಕಟ್ಟೆಯಲ್ಲಿ ಪಾಲನ್ನು ಪಡೆದುಕೊಳ್ಳುತ್ತಿದೆ.

HONOR
ಹೋನರ್ ಸ್ಮಾರ್ಟ್​ಫೋನ್​ಗಳಲ್ಲಿ ವಿಭಿನ್ನ ವಿನ್ಯಾಸವನ್ನು ಬಳಸಲಾಗಿದೆ. ಇದು ಬೆರಗುಗೊಳಿಸುವ ಪಂಚ್-ಹೋಲ್ ಡಿಸ್​ಪ್ಲೇಯನ್ನು ಹೊಂದಿದ್ದು, ಇದರಲ್ಲಿರುವ ವೇಗದ Kirin 980 ಚಿಪ್‌ಸೆಟ್ ಇದನ್ನು ಒಂದು ಆಲ್-ರೌಂಡ್ ಡಿವೈಸ್ ಆಗಿ ಮಾಡಿದೆ. ತನ್ನ ಆಕರ್ಷಕ ನೋಟ ಮತ್ತು ಕ್ಷಿಪ್ರಗತಿಯ ತಂತ್ರಜ್ಞಾನದೊಂದಿಗೆ, ಇತರೆ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ನಡುವೆ HONOR ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದೆ.

HONOR


Techchic ಎಂಬ ಪದವನ್ನು ಪ್ರಸ್ತಾಪಿಸುವುದರೊಂದಿಗೆ, ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಾಂತ್ರಿಕವಾಗಿ ಸುಧಾರಿತ ಮತ್ತು ಈ ಹೊಸ ಸಹಸ್ರಮಾನದ ಚಿಕ್ ಜೀವನಶೈಲಿಯೊಂದಿಗೆ ಬೆರೆಯುವ - ಎರಡನ್ನೂ ವಿಶೇಷತೆಗಳನ್ನು ಹೊಂದಿರುವ ಪ್ರಾಡಕ್ಟ್‌ಗಳನ್ನು HONOR ಬಿಡುಗಡೆ ಮಾಡುತ್ತಿದೆ. ಪ್ರತಿಯೊಬ್ಬ ಯುವಜನತೆಯು ನವೀನ ಶೈಲಿ ಮತ್ತು ತಂತ್ರಜ್ಞಾನದ ಆಕರ್ಷಣೆಗೆ ಒಳಗಾಗುವುದರಿಂದ ಈ ಫ್ಲ್ಯಾಗ್‌ಶಿಪ್ ತನ್ನತ್ತ ಹೆಚ್ಚಿನ ಆಸಕ್ತಿಯನ್ನು ಪಡೆಯುತ್ತಿದೆ.

ಬಣ್ಣ ಮತ್ತು ಗ್ರೇಡಿಯೆಂಟ್ ವಿಷಯದಲ್ಲಿ, HONOR ಮೊದಲಿನಿಂದಲೂ ಪ್ರಾಡಕ್ಟ್‌ಗಳ ನೋಟವನ್ನು ಹೆಚ್ಚಿಸುತ್ತಿದೆ ಮತ್ತು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದೆ. ಇದೇ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತಾ, ಹೊಸ ಡೈನಾಮಿಕ್ ಹೊಲೊಗ್ರಾಫಿಕ್ ಬ್ಯಾಕ್ ವಿನ್ಯಾಸವನ್ನು ಹೊಂದಿರುವ HONOR 20 Pro ಮತ್ತು HONOR 20 ಅನ್ನು HONOR ಬ್ರಾಂಡ್ ಬಿಡುಗಡೆ ಮಾಡಿದೆ. ಸಣ್ಣ ವಿವರಗಳತ್ತಲೂ ಕೂಡ ಗಮನ ಹರಿಸುತ್ತ, ಬ್ರಾಂಡ್ ಉತ್ತಮ ಮನ್ನಣೆಯನ್ನು ಪಡೆದುಕೊಂಡಿದ್ದು, ಈಗ ಅದು ಹಿಂತಿರುಗಿ ನೋಡುವುದಿಲ್ಲ. ಅದೆಲ್ಲದರ ಜೊತೆಗೆ, ಹೈಟೆಕ್, ಅಲ್ಟ್ರಾ-ಮಾಡರ್ನ್ ವಿನ್ಯಾಸ ಮತ್ತು ಟ್ರೆಂಡಿ ಬಣ್ಣಗಳ ಮಿಶ್ರಣವಾಗಿರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವಲ್ಲಿ ಪ್ರಸಿದ್ಧವಾಗಿರುವ ಪ್ರಮುಖ ಬ್ರಾಂಡ್ HONOR, ಈಗ Techchic ಎಂಬ ಪದವನ್ನು ಸೃಷ್ಟಿಸಿದೆ.

HONOR


ಗ್ರಾಹಕರಿಗೆ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ತಂತ್ರಜ್ಞಾನದ ವಿಷಯದಲ್ಲಿ HONOR ಭಾರಿ ಪ್ರಗತಿ ಸಾಧಿಸುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಮೊಬೈಲ್ ತಯಾರಕ ಕಂಪೆನಿಗಳ ಎದುರಿಗೆ ಸ್ಪರ್ಧೆಯನ್ನು ಒಡ್ಡುತ್ತಿದೆ. ಪ್ರತಿ ಸ್ಮಾರ್ಟ್‌ಫೋನ್ ಮಾಡೆಲ್ ಬಿಡುಗಡೆಯ ಜೊತೆಗೆ HONOR ಗಮನಾರ್ಹ ಆವಿಷ್ಕಾರಗಳನ್ನು ಮಾಡುತ್ತಿದೆ ಎಂದು ತಿಳಿದುಬಂದಿದೆ. ಶೈಲಿಯ ಸಾಕಾರಕ್ಕೆ ಹೆಸರುವಾಸಿಯಾದ HONOR ಸ್ಮಾರ್ಟ್‌ಫೋನ್‌ಗಳು, ಸಾಕಷ್ಟು ಜನರ ದೃಷ್ಟಿಯನ್ನು ತನ್ನತ್ತ ಪಡೆದುಕೊಂಡಿವೆ. ಸೃಜನಶೀಲ ಮಾರ್ಕೆಟಿಂಗ್ ಕೌಶಲ್ಯ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟ HONOR ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ ಮತ್ತು ಒಂದು ಗೌರವಾನ್ವಿತ ಬ್ರಾಂಡ್ ಆಗಿ ಹೆಸರು ಪಡೆದಿದೆ. 2020 ಕ್ಕೆ ಸ್ಮಾರ್ಟ್‌ಫೋನ್‌ಗಳು, TV ಮತ್ತು ಧರಿಸಬಹುದಾದಂತಹ ಪ್ರಾಡಕ್ಟ್‌ಗಳ ಅತ್ಯಾಕರ್ಷಕ ಶ್ರೇಣಿಯನ್ನು ಬಿಡುಗಡೆ ಮಾಡಲು HONOR ಇಂಡಿಯಾ ಸಿದ್ಧವಾಗಿದೆ. ಇದರೊಂದಿಗೆ TechChic ಬ್ರಾಂಡ್ ಬಳಕೆದಾರರಿಗೆ ಏನನ್ನು ನೀಡಲಿದೆ ಎಂಬುದನ್ನು ನಾವೆಲ್ಲರೂ ಕಾದು ನೋಡಬೇಕಾಗಿದೆ.
Published by: zahir
First published: December 27, 2019, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading