ಲ್ಯಾಪ್ಟಾಪ್ಗಳು (Laptops) ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಈ ಮಧ್ಯೆ ಹೊಸ ಹೊಸ ಟೆಕ್ ಕಂಪೆನಿಗಳು ಕೂಡ ಆರಂಭವಾಗುತ್ತಿದೆ. ಇದೀಗ ಹಿಂದಿನಿಂದ ಲ್ಯಾಪ್ಟಾಪ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ ಕಂಪೆನಿಯ ಸಾಲಿನಲ್ಲಿ ಹಾನರ್ (Honor Company) ಕೂಡ ಒಂದು. ಇದೀಗ ಈ ಕಂಪೆನಿ ಮಾರುಕಟ್ಟೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ಮತ್ತೊಂದು ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹಾನರ್ ಕಂಪೆನಿಯ ಮ್ಯಾಜಿಕ್ಬುಕ್ ಲ್ಯಾಪ್ಟಾಪ್ಗಳಿಗೆ (Honor MagicBook Laptops) ಭಾರತದ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಈ ಕಂಪೆನಿಯ ಲ್ಯಾಪ್ಟಾಪ್ಗಳು ವಿಶೇಷ ವಿನ್ಯಾಸ ಮತ್ತು ಫೀಚರ್ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದೆ.
ಹಾನರ್ ಕಂಪೆನಿ ಇದೀಗ ಹಾನರ್ ಮ್ಯಾಜಿಕ್ಬುಕ್ ಎಕ್ಸ್14 ಎಂಬ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಲ್ಯಾಪ್ಟಾಪ್ ವಿಶೇಷ ಫೀಚರ್ಸ್ಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ಬರಲಿದೆ ಎಂದು ಕಂಪೆನಿ ತಿಳಿಸಿದೆ.
ಹಾನರ್ ಮ್ಯಾಜಿಕ್ಬುಕ್ ಎಕ್ಸ್14 ಫೀಚರ್ಸ್
ಹಾನರ್ ಮ್ಯಾಜಿಕ್ಬುಕ್ ಎಕ್ಸ್14 ಲ್ಯಾಪ್ಟಾಪ್ 14 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ ಮೂರು ಬದಿಗಳಲ್ಲಿ 4.8mm ಅಲ್ಟ್ರಾ-ಸ್ಲಿಮ್ ಬೆಜೆಲ್ಗಳನ್ನು ಹೊಂದಿದ್ದು, 84% ಸ್ಕ್ರೀನ್-ಟು-ಬಾಡಿ ಸೈಜ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ 11 ನೇ ತಲೆಮಾರಿನ ಇಂಟೆಲ್ ಕೋರ್ i5-1135G7 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಗರಿಷ್ಠ 4.2GHz ಟರ್ಬೊ ಫ್ರಿಕ್ವೆನ್ಸಿಯೊಂದಿಗೆ ಅಪ್ಡೇಟೆಡ್ ಪ್ರೊಸೆಸರ್ ಅನ್ನು ನೀಡುತ್ತದೆ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯನ್ನು ಹೊಂದಿರುವ ಸ್ಮಾರ್ಟ್ಫೋನ್ಗಳಿವು!
ಪ್ರೊಸೆಸರ್ ಸಾಮರ್ಥ್ಯ
ಹಾನರ್ ಮ್ಯಾಜಿಕ್ಬುಕ್ ಎಕ್ಸ್14 ಲ್ಯಾಪ್ಟಾಪ್ 8ಜಿಬಿ ಡ್ಯುಯಲ್-ಚಾನೆಲ್ ರ್ಯಾಮ್ ಮತ್ತು PCIe NVMe SSD ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದು ಇಂಟೆಲ್ ಐರಿಸ್ಎಕ್ಸ್ಇ ಗ್ರಾಫಿಕ್ಸ್ ಅನ್ನುಹೊಂದಿದೆ. ಇದಲ್ಲದೆ ಬಳಕೆದಾರರು ಮಲ್ಟಿಮೀಡಿಯಾ ಫೈಲ್ಗಳನ್ನು ಪ್ರಕ್ರಿಯೆಗೊಳಿಸುವಾಗ ಹೆಚ್ಚಿನ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದು ಸೂಪರ್ಸೈಸ್ಡ್ ಕೂಲಿಂಗ್ ಫ್ಯಾನ್ ಅನ್ನು ಹೊಂದಿದ್ದು, ಲ್ಯಾಪ್ಟಾಪ್ ಬಿಸಿಯಾಗದಂತೆ ಇದು ನೋಡಿಕೊಳ್ಳುತ್ತದೆ.
ಬ್ಯಾಟರಿ ಫೀಚರ್ಸ್
ಈ ಲ್ಯಾಪ್ಟಾಪ್ 56Wh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಬ್ಯಾಟರಿಯು 65W ಫಾಸ್ಟ್ ಚಾರ್ಜರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರಿಂದ ಈ ಲ್ಯಾಪ್ಟಾಪ್ ಅನ್ನು ಕೇವಲ 60 ನಿಮಿಷಗಳಲ್ಲಿ 68% ವರೆಗೆ ಚಾರ್ಜ್ ಮಾಡುವ ಅವಕಾಶವನ್ನು ಕಂಪೆನಿ ನೀಡಿದೆ. ಜೊತೆಗೆ, ಈ ಲ್ಯಾಪ್ಟಾಪ್ 9.9 ಗಂಟೆಗಳ ಲೋಕಲ್ 1080p ವೀಡಿಯೊ ಪ್ಲೇಬ್ಯಾಕ್ ಅನ್ನು ಸಹ ನೀಡಲಿದೆ.
ಬೆಲೆ ಮತ್ತು ಲಭ್ಯತೆ
ಇದೀಗ ಹಾನರ್ ಕಂಪೆನಿ ಬಿಡುಗಡೆ ಮಾಡುತ್ತಿರುವ ಹಾನರ್ ಮ್ಯಾಜಿಕ್ಬುಕ್ ಎಕ್ಸ್14 ಲ್ಯಾಪ್ಟಾಪ್ 46,990 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿ. ಈ ಲ್ಯಾಪ್ಟಾಪ್ನ ಲಾಂಚ್ ಆಫರ್ನಲ್ಲಿ ವಿಶೇಷ ರಿಯಾಯಿತಿ ಕೂಡ ದೊರೆಯಲಿದ್ದು, ಇದು ಅಮೆಜಾನ್ನಲ್ಲಿ ಜನವರಿ 20, 2023 ರವರೆಗೆ ಮಾತ್ರ ಸೀಮಿತವಾಗಿರಲಿದೆ.
ಹಾನರ್ ಪ್ಲೇ 30ಎಮ್ ಸ್ಮಾರ್ಟ್ಫೋನ್ ಬಿಡುಗಡೆ
ಹಾನರ್ ಕಂಪೆನಿ ಇತ್ತೀಚಿಗೆ ಹಾನರ್ ಪ್ಲೇ 30ಎಮ್ ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್ಫೋನ್ 6.5 ಇಂಚಿನ ಎಲ್ಸಿಡಿ ಹೆಚ್ಡಿ+ ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480G ಪ್ಲಸ್ ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಹಾನರ್ ಪ್ಲೇ 30ಎಮ್ ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಕ್ಯಾಮೆರಾ ಫೀಚರ್ಸ್
ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ ಸೆನ್ಸರ್ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಹಾಗೆಯೇ ಎಲ್ಇಡಿ ಫ್ಲ್ಯಾಶ್, ಹೆಚ್ಡಿಆರ್, ಪನೋರಮಾ ಫೀಚರ್ಸ್ ನೀಡಲಾಗಿದೆ. ಜೊತೆಗೆ 10W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ