ಹಾನರ್ ಮಧ್ಯಮ ಶ್ರೇಣಿಯ ಪ್ಲೇ5 5G ಹೆಸರಿನ ಸ್ಮಾರ್ಟ್ಫೋನನ್ನು ಸಿದ್ಧಪಡಿಸಿದ್ದು, ಇದೇ ಮೇ.18 ರಂದು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಇತ್ತೀಚೆಗೆಯ ಬೆಳವಣಿಗೆಯಂತೆ ಟೀಸರ್ನಲ್ಲಿ ಈ ಹಾನರ್ ಪ್ಲೇ5 5G ಸ್ಮಾರ್ಟ್ಫೋನ್ 64 ಮೆಗಾಫಿಕ್ಸೆಲ್ ಕ್ವಾಡ್ ಕ್ಯಾಮೆರಾ ಸಿಸ್ಟಂ ಹೊಂದಿದೆ ಎನ್ನಲಾಗುತ್ತಿದೆ.
ಹಾನರ್ ಪ್ಲೇ5 5G ಸ್ಮಾರ್ಟ್ಫೋನ್ ವಾಟರ್ಡ್ರಾಪ್ ನಾಚ್ ಡಿಸೈನ್ ಜೊತೆಗೆ ಸ್ಲಿಮ್ ಬೆಝೆಲ್, ಫ್ಲಾಟ್ ಮೆಟಲ್ ಎಡ್ಜ್, ಫಿಂಗರ್ಪ್ರಿಂಟ್ ಸೆನ್ಸಾರ್ ನೀಡಲಾಗಿದೆ. ಹಿಂಭಾಗದಲ್ಲಿ ಸಮಭುಜ ಆಕೃತಿಯ ಕ್ವಾಡ್ ಕ್ಯಾಮೆರಾ ನೀಡಲಾಗಿದೆ.
ನೂತನ ಸ್ಮಾರ್ಟ್ಫೋನ್ 6.53 ಇಂಚಿನ ಫುಲ್ ಹೆಚ್ಡಿ+ ಒಎಲ್ಇಡಿ ಸ್ಕ್ರೀನ್ ನೀಡಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟು 800U ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್ 11 ಬೆಂಬಲವನ್ನು ಪಡೆದಿದೆ. ಇನ್ನು 8ಜಿಬಿ ರ್ಯಾಮ್ ಮತ್ತು 256GB ಸ್ಟೊರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ.
ಕ್ಯಾಮೆರಾ:
ಹಾನರ್ ಪ್ಲೇ5 5ಜಿ ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ಸೆಟ್ಅಪ್ ಜೊತೆಗೆ 64 ಮೆಗಾಫಿಕ್ಸೆಲ್ ಮೈನ್ ಸೆನ್ಸಾರ್ ನೀಡಲಾಗಿದೆ. ಜೊತೆಗೆ 8 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್, 2 ಮೆಗಾಫಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಮತ್ತು 2 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಇನ್ನು ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಈ ಸ್ಮಾರ್ಟ್ಫೋನ್ ಧೀರ್ಘ ಕಾಲದ ಬ್ಯಾಟರಿ ಬಾಳಿಕೆಗಾಗಿ 3,800mAh ಬ್ಯಾಟರಿ ಅಳವಡಿಸಿದೆ. ಜೊತೆಗೆ 66 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಡ್ ಹೊಂದಿದೆ. ಅಷ್ಟು ಮಾತ್ರವಲ್ಲದೆ ವೈ-ಫೈ, ಬ್ಲೂಟೂ 5.1, ಜಿಪಿಎಸ್, ಹೆಡ್ಫೋನ್ ಜಾಕ್, 5ಜಿ ಮತ್ತು ಟೈಪ್ ಸಿ ಪೋರ್ಟ್ ನೀಡಲಾಗಿದೆ.
ಬೆಲೆ:
ಹಾನರ್ ಪ್ಲೇ5 5G ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ ಬೆಲೆ 20 ಸಾವಿರ ರೂ ಆಗಿದ್ದು, ಮೇ18 ರಂದು ಬಿಡುಗಡೆಯಾಗುತ್ತಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ