19,999 ರೂ.ಗೆ ಬಿಡುಗಡೆಗೊಂಡ ಹಾನರ್​ನ ಮೊಬೈಲ್​ ಯಾವುದು?


Updated:August 6, 2018, 6:14 PM IST
19,999 ರೂ.ಗೆ ಬಿಡುಗಡೆಗೊಂಡ ಹಾನರ್​ನ ಮೊಬೈಲ್​ ಯಾವುದು?

Updated: August 6, 2018, 6:14 PM IST
ಮಧ್ಯಮ ಕ್ರಮಾಂಕದ ಮೊಬೈಲ್​ಗಳಿಗೆ ಹೆಚ್ಚು ಬೇಡಿಕೆಯಿರುವುದನ್ನು ಗಮನಿಸಿರುವ ಹುವಾವೇ ಸಂಸ್ಥೆ ಜೂನ್​ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ ಹಾನರ್​ ಪ್ಲೇ ಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಅಮೆಜಾನ್​ನಲ್ಲಿ ಮಾತ್ರಾ ಲಭ್ಯವಿರುವ ಹಾನರ್​ ಪ್ಲೇ ಇಂದು ಸೋಮವಾರ (ಆ.06)ರಿಂಬ ಲಭ್ಯವಿರಲಿದೆ. 19.5 ರೇಷಿಯೋ ಡಿಸ್​ಪ್ಲೇ ಹೊಂದಿರುವ ಹಾನರ್​ ಪ್ಲೇ 19,999ಕ್ಕೆ ಮಾರಾಟಗೊಳ್ಳಲಿದೆ ಎಂದು ಸಂಸ್ಥೆ ಘೋಷಿಸಿದೆ.

4GB RAM ಮತ್ತು 6GB RAM ಶ್ರೇಣಿಯಲ್ಲಿ ಲಭ್ಯವಿರುವ ಈ ಮೊಬೈಲ್​ಗಳು 64 ಜಿಬಿ ಆಂತರಿಕ ಮೆಮೊರಿ ಹೊಂದಿದೆ. 4GB RAMನ ಮೊಬೈಲ್​ಗೆ 19,999ರೂ. ಬೆಲೆಯಿದ್ದು 6GB RAM ಹೊಂದಿರುವ ಮೊಬೈಲ್​ಗೆ 23,999 ಬೆಲೆ ನಿಗದಿ ಪಡಿಸಲಾಗಿದೆ. ವೊಡಾಫೋನ್​ ಗ್ರಾಹಕರಿಗೆ ಉಚಿತ 10 ಜಿಬಿ ಇಂಟರ್​ನೆಟ್​ ಸೌಲಭ್ಯವನ್ನು ಲಾಂಚ್​ ಆಫರ್​ ಆಗಿ ನೀಡಲಾಗುತ್ತದೆ.

ಹಾನರ್​ ಪ್ಲೇ ವಿಶೇಷತೆಗಳು

ಡಿಸ್​ಪ್ಲೇ : 6.3 ಫುಲ್​ ಹೆಚ್​ಡಿ ಪ್ಲಸ್​ (2340x1080 ಪಿಕ್ಸೆಲ್​)
ಪ್ರೊಸೆಸರ್​: ಹಿಲಿಸಿಲಿಕಾನ್​ ಕಿರಿನ್​ 970
ಆಪರೇಟಿಂಗ್​ ಸಿಸ್ಟಂ: Android 8.1 Oreo
Loading...

ಕ್ಯಾಮೆರಾ: 16+2 ಎಂಪಿ, ಎಲ್​ಇಡಿ ಫ್ಲಾಶ್​, 3ಡಿ ತಂತ್ರಜ್ಞಾನದಿಂದ ಮುಖ ಗುರುತುವಿಸುವಿಕೆ,
ಸೆಲ್ಫಿ: 16 ಎಂಪಿ ಸೆಲ್ಫಿ ಶೂಟರ್​
ಇತರೇ ಸೌಲಭ್ಯ
ಎರಡು ಸಿಮ್​ ಸೌಲಭ್ಯ, 4G VoLTE, ವೈಫೈ, ಟೈಪ್​ ಸಿ ಚಾರ್ಜಿಂಗ್ ಸೌಲಭ್ಯ, 3750 mAh ಬ್ಯಾಟರಿ
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...