ಹಾನರ್​ ಡೇಸ್​ ಸೇಲ್: 10 ಸಾವಿರದ ಸ್ಮಾರ್ಟ್​ಫೋನ್​ಗೆ​ ಕೇವಲ 283 ರೂ!

ಕಡಿಮೆ ಬೆಲೆಗೆ ಉತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ ಖರೀದಿಸಲು ಯೋಚಿಸುತ್ತಿದ್ದರೆ ಹಾನರ್​ 10 ಮೊಬೈಲ್​ ಅತ್ಯುತ್ತಮ ಆಯ್ಕೆ.

zahir | news18
Updated:January 31, 2019, 3:05 PM IST
ಹಾನರ್​ ಡೇಸ್​ ಸೇಲ್: 10 ಸಾವಿರದ ಸ್ಮಾರ್ಟ್​ಫೋನ್​ಗೆ​ ಕೇವಲ 283 ರೂ!
ಹಾನರ್ 7x
zahir | news18
Updated: January 31, 2019, 3:05 PM IST
ಇ-ಕಾಮರ್ಸ್​ ಕಂಪೆನಿ ಫ್ಲಿಪ್​ಕಾರ್ಟ್​ ಕೆಲ ದಿನಗಳಿಂದ ಗ್ರಾಹಕರಿಗೆ ಭರ್ಜರಿ ಆಫರ್​ ಅನ್ನು ಒದಗಿಸುತ್ತಿದೆ. ಇತ್ತೀಚೆಗೆ ರಿಪಬ್ಲಿಕ್​ ಸೇಲ್​ ಮೂಲಕ ಕೊಡುಗೆಗಳನ್ನು ನೀಡಿದ್ದ ಫ್ಲಿಪ್​ಕಾರ್ಟ್​ ಇದೀಗ ಹಾನರ್​ ಮೊಬೈಲ್​ಗಳ ಮೇಲೆ ಭಾರೀ ರಿಯಾಯಿತಿ ನೀಡಿದೆ. ಜನವರಿ 31 ರಿಂದ ಫೆಬ್ರವರಿ 3 ರವರೆಗೆ ಹಾನರ್​ ಡೇಸ್​ ಸೇಲ್​ ಅನ್ನು ಫ್ಲಿಪ್​ಕಾರ್ಟ್​ ಪ್ರಸ್ತುತಪಡಿಸುತ್ತಿದ್ದು, ಇಲ್ಲಿ ಗ್ರಾಹಕರು ಸ್ಮಾರ್ಟ್​ಫೋನ್​ ಮೇಲೆ ಸಾಕಷ್ಟು ಕೊಡುಗೆಗಳನ್ನು ಪಡೆಯಬಹುದು. ಇಲ್ಲಿ ಗ್ರಾಹಕರು ಯಾವ ರೀತಿಯ ಆಫರ್​ಗಳನ್ನು ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ.

Honor 9 Lite: ಹಾನರ್ ಡೇಸ್​ ಸೇಲ್​ ಆಫರ್​ನಲ್ಲಿ ಹಾನರ್​ 9 ಲೈಟ್​ ಸ್ಮಾರ್ಟ್​ಫೋನ್​ ಅನ್ನು 8,499 ರೂ.ನಲ್ಲಿ ಖರೀದಿಸಬಹುದು. ಈ ಮೊಬೈಲ್ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಅದೇ ರೀತಿ 10,999 ರೂ.ನಲ್ಲಿ 4GB RAM ಮತ್ತು 64GB ಸ್ಟೊರೇಜ್​ ಹೊಂದಿರುವ ಮತ್ತೊಂದು ವರ್ಷನ್​ ಕೂಡ ಹಾನರ್​ ನೀಡಿದೆ. ಈ ಮೊಬೈಲ್​ಗಳನ್ನು ಇಎಂಐ ಆಫರ್​ ಮೂಲಕ ಕೂಡ ಖರೀದಿಸಬಹುದಾಗಿದ್ದು, ತಿಂಗಳಿಗೆ ಕೇವಲ 283 ರೂ. ಪಾವತಿಸಿ ಹೊಸ ಮೊಬೈಲ್​ ಅನ್ನು ತಮ್ಮದಾಗಿಸಿಕೊಳ್ಳಬಹುದು. ಇದೇ ಫೋನ್ ಮೇಲೆ ಎಕ್ಸ್​ಚೇಂಜ್ ಆಫರ್​ ಅನ್ನು ಕೂಡ ನೀಡಿದ್ದು, ನಿಮ್ಮ ಹಳೆಯ ಮೊಬೈಲ್​ಗೆ 8 ಸಾವಿರದವರೆಗೆ ವಿನಿಮಯ ದರ ಸಿಗಲಿದೆ.

Honor 9N: 3GB RAM ಮತ್ತು 32GB ಶೇಖರಣಾ ಸಾಮರ್ಥ್ಯವಿರುವ ಹಾನರ್​ 9ಎನ್ ಸ್ಮಾರ್ಟ್​ಫೋನ್​ ಅನ್ನು ಗ್ರಾಹಕರು ಕೇವಲ 8,499 ರೂ.ನಲ್ಲಿ ಖರೀದಿಸಬಹುದಾಗಿದೆ. ಇನ್ನು ಹೆಚ್ಚಿನ ಸ್ಟೊರೇಜ್ ಸಾಮರ್ಥ್ಯ ಬೇಕಿದ್ದರೆ 4GB RAM ಮತ್ತು 64GB ಹಾನರ್​ 9ಎನ್​ ಆಯ್ಕೆಯಿದ್ದು, ಇದರ ಬೆಲೆ 10,499 ರೂ. ಈ ಸ್ಮಾರ್ಟ್​ಫೋನ್​ನ ಮೇಲೂ ಕೂಡ ಇಎಂಐ ಮತ್ತು ವಿನಿಮಯ ಆಫರ್​ಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಮಾನವೀಯತೆ ಮೆರೆದ ನವೀನ್ ಸಜ್ಜು: ಯುವ ಗಾಯಕ ಎಲ್ಲೂ ಕಾಣಿಸದಿರಲು ಇಲ್ಲಿದೆ ಕಾರಣ!

Honor 10: ಕಡಿಮೆ ಬೆಲೆಗೆ ಉತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ ಖರೀದಿಸಲು ಯೋಚಿಸುತ್ತಿದ್ದರೆ ಹಾನರ್​ 10 ಮೊಬೈಲ್​ ಅತ್ಯುತ್ತಮ ಆಯ್ಕೆ. 35,999 ರೂ. ಬೆಲೆಯ ಈ ಮೊಬೈಲ್​ ಅನ್ನು 32,999 ರೂ.ನಲ್ಲಿ ಈ ಆಫರ್ ಮೂಲಕ ಕೊಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ಇದಕ್ಕೂಇಎಂಐ ಪಾವತಿ ಮತ್ತು ಎಕ್ಸ್​ಚೇಂಜ್ ಆಫರ್​ಗಳನ್ನು ಹಾನರ್​ ಡೇಸ್​ ಸೇಲ್​ನಲ್ಲಿ ನೀಡಲಾಗಿದೆ.
First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...