ಸ್ಮಾರ್ಟ್ಫೋನ್ ಕಂಪನಿಗಳಲ್ಲಿ (Smartphone Company) ಹಲವಾರು ಹೆಸರುವಾಸಿ ಕಂಪನಿಗಳಿವೆ. ಅದ್ರಲ್ಲಿ ಹಾನರ್ ಕಂಪನಿ (Honor Company) ಕೂಡ ಒಂದು. ಈ ಕಂಪನಿ ವಿಶೇಷ ವಿನ್ಯಾಸ ಹೊಂದಿದ, ಸ್ಟೈಲಿಶ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಒಂದು ಮಾರುಕಟ್ಟೆಯನ್ನು ಕ್ರಿಯೇಟ್ ಮಾಡಿದೆ. ಇದೀಗ ಮಾರುಕಟ್ಟೆಗೆ ಸದ್ದಿಲ್ಲದೆ ಹಾನರ್ ಕಂಪನಿಯ ಹೊಸ ಸ್ಮಾರ್ಟ್ಫೋನ್ (New Smartphone) ಬಿಡುಗಡೆಯಾಗ್ತಿದೆ. ಇದೀಗ ಈ ಸ್ಮಾರ್ಟ್ಫೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಸದ್ಯ ಕೆಲವೊಂದು ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಹಾನರ್ ಮೊಬೈಲ್ ಕಂಪನಿ ಲಾಂಚ್ ಮಾಡಿರುವಂತಹ ಹೊಸ ಸ್ಮಾರ್ಟ್ಫೋನ್ ಹಾನರ್ ಎಕ್ಸ್5 ಎಂಬುದಾಗಿದೆ.
ಮೊಬೈಲ್ ಮಾರುಕಟ್ಟೆಗೆ ಸದ್ದಿಲ್ಲದೆ ಬರುತ್ತಿರುವ ಸ್ಮಾರ್ಟ್ಫೋನ್ ಹಾನರ್ ಎಕ್ಸ್5 ಎಂಬುದಾಗಿದೆ. ಇದು 5000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್ ಅನ್ನು ಇದು ಒಳಗೊಂಡಿದೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಹಾನರ್ ಎಕ್ಸ್5 ಸ್ಮಾರ್ಟ್ಫೋನ್ ಫೀಚರ್ಸ್
ಹಾನರ್ ಎಕ್ಸ್5 ಸ್ಮಾರ್ಟ್ಫೋನ್ 6.5 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ಪ್ಲೇ ವಾಟರ್ ಡ್ರಾಪ್ ನಾಚ್ ಫೀಚರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ವಿಡಿಯೋ ಕಾಲ್ ಮತ್ತು ವಿಡಿಯೋ ನೋಡಲು ಉತ್ತಮ ಗುಣಮಟ್ಟದ ಡಿಸ್ಪ್ಲೇ ರಚನೆಯನ್ನು ಹೊಂದಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಬಿಗ್ ಹಾಲಿಡೇ ಸೇಲ್ ಆರಂಭ; ಕಂಪನಿಯ ಟಾಪ್ 5 ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ
ಕ್ಯಾಮೆರಾ ಫೀಚರ್ಸ್
ಹಾನರ್ ಎಕ್ಸ್5 ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ, ಇದು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಎಲ್ಇಡಿ ಫ್ಲಾಷ್ ಅನ್ನು ಹೊಂದಿದೆ. ಇದು 1080 ಪಿಕ್ಸೆಲ್ನಷ್ಟು ವಿಡಿಯೋ ಶೂಟಿಂಗ್ ಮಾಡುವಂತಹ ಅವಕಾಶವನ್ನು ನೀಡುತ್ತದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಹಾನರ್ ಎಕ್ಸ್5 ಸ್ಮಾರ್ಟ್ಫೋನ್ ಮುಖ್ಯವಾಗಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಡಿದೆ. ಇದರ ವೇಗದ ಚಾರ್ಜಿಂಗ್ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಮಾತಾನಾಡುವುದಾದರೆ ಇದು ಮೈಕ್ರೋ ಯುಎಸ್ಬಿ ಪೋರ್ಟ್, 3.5mm ಜ್ಯಾಕ್, VoLTE, ವೈಫೈ, ಬ್ಲೂಟೂತ್ ಮತ್ತು ಡ್ಯುಯಲ್ ಸಿಮ್ ಅನ್ನು ಅಳವಡಿಸಬಹುದಾಗಿದೆ.
ಇತರ ಫೀಚರ್ಸ್
ಹಾನರ್ ಎಕ್ಸ್5 ಸ್ಮಾರ್ಟ್ಫೋನ್ ಮೀಡಿಯಾಟೆಕ್ ಹಿಲಿಯೋ G25SoC ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಗೋ ವರ್ಷನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಇದು 2ಜಿಬಿ ರ್ಯಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಜಾಸ್ತಿ ಮಾಡುವ ಅವಕಾಶವನ್ನು ಸಹ ಪಡೆದಿದೆ.
ಬೆಲೆ ಮತ್ತು ಲಭ್ಯತೆ
ಹಾನರ್ ಕಂಪನಿಯಿಂದ ಲಾಂಚ್ ಮಾಡಲಾದ ಹಾನರ್ ಎಕ್ಸ್5 ಸ್ಮಾರ್ಟ್ಫೋನ್ ಸದ್ಯ ಕೆಲವು ಮೊಬೈಲ್ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಈ ಸ್ಮಾರ್ಟ್ಫೋನ್ ಬೆಲೆ ಅಂದಾಜು 99 ಯುರೋಗಳಿಗೆ ಅಂದರೆ ಭಾರತದಲ್ಲಿ ಸುಮಾರು 8,694 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ಸನ್ರೈಸ್ ಆರೆಂಜ್, ಒಶಿಯನ್ ಬ್ಲೂ, ಮಿಡ್ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.
ಹಾನರ್ನಿಂದ ಇತ್ತೀಚೆಗೆ ಹಾನರ್ ಎಕ್ಸ್40 ಜಿಟಿ ಸ್ಮಾರ್ಟ್ಫೋನ್ ಬಿಡುಗಡೆಯಾಗಿತ್ತು. ಇನ್ನು ಈ ಸ್ಮಾರ್ಟ್ಫೋನ್ 6.81 ಇಂಚಿನ ಫುಲ್ ಹೆಚ್ಡಿ ಪ್ಲಸ್ IPS LCD ಡಿಸ್ಪ್ಲೇ ಒಳಗೊಂಡಿದೆ. ಈ ಡಿಸ್ಪ್ಲೇ 144Hz ರಿಪ್ರೆಶ್ ರೇಟ್ ಬೆಂಬಲಿಸಲಿದೆ. ಇದು 4,800mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿದ್ದು, 66W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ