ಫಿಟ್ನೆಸ್‌ಫ್ರೀಕ್ ಮತ್ತು ಫ್ಯಾಷನ್ ಫಾಲೋವರ್‌ಗಳ ಅತ್ಯುತ್ತಮ ಆಯ್ಕೆ: HONOR Band 5i

ಫಿಟ್ನೆಸ್ ದಿನಚರಿಯನ್ನು ಫಾಲೋ ಮಾಡೂವಾಗ ಹಲವಾರು ಇನ್‌ಡೋರ್ ಮತ್ತು ಔಟ್‌ಡೋರ್ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಇಂತಹ ಎಲ್ಲಾ ಚಟುವಟಿಕೆಗಳಿಗಾಗಿ ಒಂದೇ ಕಡೆ ಪರಿಹಾರ ಸಿಗುವುದಿದ್ದರೆ ಬೇರೇನು ಬೇಕು. HONOR Band 5i ಸಹಾಯದಿಂದ ನೀವು ಹೃದಯ ಬಡಿತದ ಮಾಣಿಟರಿಂಗ್, ವರ್ಔಟ್ ಸಮಯ, ದೂರ, ಸ್ಟ್ರೈಡ್ ಫ್ರಿಕ್ವೆನ್ಸಿ, ಕ್ಯಾಲರಿ ಮತ್ತು ಏರೋಬಿಕ್ಸ್‌ನಂತವುಗಳ ಉನ್ನತ ಮಟ್ಟದ ಫಿಟ್ನೆಸ್ ಟ್ರ್ಯಾಕಿಂಗ್ ಮಾಡಬಹುದು.

news18
Updated:January 28, 2020, 2:02 PM IST
ಫಿಟ್ನೆಸ್‌ಫ್ರೀಕ್ ಮತ್ತು ಫ್ಯಾಷನ್ ಫಾಲೋವರ್‌ಗಳ ಅತ್ಯುತ್ತಮ ಆಯ್ಕೆ: HONOR Band 5i
HONOR Band 5i
  • News18
  • Last Updated: January 28, 2020, 2:02 PM IST
  • Share this:
ಹೊಸ ವರ್ಷದಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ದಿನಚರಿಯನ್ನು ಫಾಲೋ ಮಾಡುವ ಸಂಕಲ್ಪವನ್ನೇನೋ ಮಾಡುತ್ತಾರೆ ಆದರೆ ಒಳ್ಳೆಯ ಸಹಾಯದ ಹೊರತಾಗಿ ಇಂತಹ ಒಂದು ಕಷ್ಟದ ದಿನಚರಿಯನ್ನು ಫಾಲೋ ಮಾಡುವುದು ತುಂಬಾ ಕಷ್ಟವಾಗುತ್ತದೆ. ಹಾಗೆಯೇ ನೀವು ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಸುರಿಸಿ ಒಂದು ದಿನದಲ್ಲಿ ಎಷ್ಟು ಕ್ಯಾಲರಿ ಕರಗಿಸಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡಲು ಸಾಧ್ಯವಾದರೆ, ಬಹಳಷ್ಟು ಮಟ್ಟಿಗೆ ಮರುದಿನವೂ ಅದೇ ದಿನಚರಿಯನ್ನು ಫಾಲೋ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಫಿಟ್ನೆಸ್ ದಿನಚರಿಯನ್ನು ಟ್ರ್ಯಾಕ್ ಮಾಡುವ ಒಬ್ಬ ಗೆಳೆಯನನ್ನು ಹುಡುಕುತ್ತಿದ್ದರೆ, ಅದಕ್ಕೆ ಪರಿಹಾರ ನಮ್ಮಲ್ಲಿದೆ. ಇತ್ತೀಚೆಗೆ ಲಾಂಚ್ ಮಾಡಲಾದ HONOR Band 5i ಒಂದು ಸಂಪೂರ್ಣ ಫಿಟ್ನೆಸ್ ಟ್ರ್ಯಾಕರ್ ಆಗಿರುವುದರ ಜೊತೆಗೆ ನಿಮ್ಮ ಫ್ಯಾಷನ್ ಇಚ್ಛೆಯನ್ನೂ ಕೂಡ ಇದು ಪರಿಹರಿಸುತ್ತದೆ. ಅಷ್ಟೇ ಅಲ್ಲ, ತಂತ್ರಜ್ಞಾನದ ವಿಷಯದಲ್ಲೂ ಕೂಡ ಇದು ಇತರೆ ಬ್ಯಾಂಡ್‌ಗಳನ್ನು ಹಿಂದಿಕ್ಕುತ್ತದೆ. HONOR Band 5i ನ SpO2 ಅಪ್​ಡೇಟ್ ಫೆಬ್ರವರಿ ಮಾಸಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಸ್ಟೈಲ್ ಆದ ವಿನ್ಯಾಸ ಮತ್ತು ಕಲರ್ ಡಿಸ್‌ಪ್ಲೇ:

HONOR Band 5i, 2.4cm ಕಲರ್ ಫುಲ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಮತ್ತು 160 x 80 HD ರೆಸಲ್ಯೂಶನ್ ಅನ್ನು ಹೊಂದಿದೆ. ಇದು ಸಿಲಿಕಾನ್ ರಬ್ಬರ್ ಸ್ಟ್ರೆಪ್ ಅನ್ನು ಹೊಂದಿರುವುದರ ಜೊತೆಗೆ, ಇದರ ಚಾರ್ಜಿಂಗ್‌ಗಾಗಿ ಬಿಲ್ಟ್-ಇನ್ USB ಕನೆಕ್ಟರ್ ಇದೆ, ಇದರಿಂದಾಗಿ ನೀವು ಸುಲಭವಾಗಿ ಲ್ಯಾಪ್ಟಾಪ್‌ನಲ್ಲಿಯೂ ಕೂಡ ಇದನ್ನು ಚಾರ್ಜ್ ಮಾಡಬಹುದಾಗಿದೆ. ಮತ್ತೊಂದು ಸಂಗತಿಯೆಂದರೆ, ಒಮ್ಮೆ ಚಾರ್ಜ್ ಮಾಡಿದ ನಂತರ ಇದರ ಬ್ಯಾಟರಿ ಒಂದು ವಾರದವರೆಗೂ ಬರುತ್ತದೆ. ಆದ್ದರಿಂದ ಇದನ್ನು ಚಾರ್ಜ್ ಮಾಡುವ ಚಿಂತೆಯನ್ನು ಬಿಟ್ಟು ನೀವು ಸಂಪೂರ್ಣವಾಗಿ ನಿಮ್ಮ ಫಿಟ್ನೆಸ್‌ನತ್ತ ಗಮನ ಹರಿಸಬಹುದು. ಅಷ್ಟೇ ಅಲ್ಲ, HONOR ನ ಹೊಸ Watch Face Store ಮೂಲಕ, ಪ್ರತಿ ಸಂದರ್ಭಗಳಿಗೂ ಹೊಂದುವ, ನಿಮಗಿಷ್ಟವಾಗುವ ಯಾವುದೇ ಟ್ರೆಂಡಿಂಗ್ ವಾಚ್ ಫೇಸ್ ಆರಿಸಿಕೊಳ್ಳಲು ಸಾಧ್ಯವಿದೆ. ಇಂತಹ ಸ್ಟೈಲಿಷ್ ಫಿಟ್ನೆಸ್ ಬ್ಯಾಂಡ್ ಧರಿಸಿಕೊಂಡು ಸ್ಟೈಲ್ ಆಗಿ ಮಿಂಚುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

ನಿಮ್ಮ ಫಿಟ್ನೆಸ್ ಅನ್ನು ಸುಲಭವಾಗಿ ಟ್ರ್ಯಾಕ್ ಮಾಡಿ:

ಫಿಟ್ನೆಸ್ ದಿನಚರಿಯನ್ನು ಫಾಲೋ ಮಾಡಲು ನಿಖರವಾದ ಫಿಟ್ನೆಸ್ ಟ್ರ್ಯಾಕಿಂಗ್ ಬಹಳ ಮಹತ್ವಪೂರ್ಣವಾದುದು. HONOR Band 5i ನ TruSeen 3.0 ತಂತ್ರಜ್ಞಾನವು ದಿನವಿಡೀ ನಿಮ್ಮ ಹೃದಯ-ಬಡಿತವನ್ನು ಮಾಣಿಟರ್ ಮಾಡುತ್ತದೆ. ಇದರರ್ಥ ನಿಮ್ಮ ಹೃದಯ-ಬಡಿತವನ್ನು ನೋಡಿಕೊಂಡು ಅದರ ಪ್ರಕಾರ ನಿಮ್ಮ ವರ್ಕ್ಔಟ್ ಸಮಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೇ  TrueSleep2.0 ತಂತ್ರಜ್ಞಾನವು ನಿಮ್ಮ ನಿದ್ರೆಯನ್ನು ಲೆಕ್ಕ ಹಾಕಿ 6 ಸಾಮಾನ್ಯ ನಿದ್ರಾ ಸಮಸ್ಯೆಗಳನ್ನು ಕಂಡುಹಿಡಿಯುತ್ತದೆ. ಅಷ್ಟು ಮಾತ್ರವಲ್ಲದೇ, ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು 200 ಕ್ಕಿಂತಲೂ ಹೆಚ್ಚಿನ ಕಸ್ಟಮೈಸ್ ಸಲಹೆಗಳನ್ನು  ಕೂಡ ನೀಡುತ್ತದೆ. ಇದರ ಜೊತೆಗೆ, Honor Band 5i ನಲ್ಲಿ OTA ಅಪ್ಡೇಟ್ ಮೂಲಕ SpO2 ಮಾಣಿಟರ್ ಅನ್ನು ಕೂಡ ನಿಯಂತ್ರಿಸುತ್ತದೆ. ಇದು ನಿಮ್ಮ ಬ್ಲಡ್‌ಸ್ಟ್ರೀಮ್ ಆಕ್ಸಿಜನ್ ಸ್ಯಾಚರೇಶನ್ ಲೆವೆಲ್ ಅನ್ನು ಟ್ರ್ಯಾಕ್ ಮಾಡುತ್ತದೆ, ಇದರಿಂದ ವರ್ಕ್ಔಟ್ ಮಾಡುವಾಗ ಅಥವಾ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ಟ್ರಾವೆಲ್ ಮಾಡುವಾಗ ನಿಮ್ಮ ದೇಹವು ಹೇಗೆ ಆಯಾ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ನಿಮ್ಮದೇ ಸ್ವಂತ ಪರ್ಸನಲ್ ಟ್ರೈನರ್:

ಫಿಟ್ನೆಸ್ ದಿನಚರಿಯನ್ನು ಫಾಲೋ ಮಾಡೂವಾಗ ಹಲವಾರು ಇನ್‌ಡೋರ್ ಮತ್ತು ಔಟ್‌ಡೋರ್ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಇಂತಹ ಎಲ್ಲಾ ಚಟುವಟಿಕೆಗಳಿಗಾಗಿ ಒಂದೇ ಕಡೆ ಪರಿಹಾರ ಸಿಗುವುದಿದ್ದರೆ ಬೇರೇನು ಬೇಕು. HONOR Band 5i ಸಹಾಯದಿಂದ ನೀವು ಹೃದಯ ಬಡಿತದ ಮಾಣಿಟರಿಂಗ್, ವರ್ಔಟ್ ಸಮಯ, ದೂರ, ಸ್ಟ್ರೈಡ್ ಫ್ರಿಕ್ವೆನ್ಸಿ, ಕ್ಯಾಲರಿ ಮತ್ತು ಏರೋಬಿಕ್ಸ್‌ನಂತವುಗಳ ಉನ್ನತ ಮಟ್ಟದ ಫಿಟ್ನೆಸ್ ಟ್ರ್ಯಾಕಿಂಗ್ ಮಾಡಬಹುದು. ಈ ಬ್ಯಾಂಡ್ ಪ್ರಮುಖ ವಿಶೇಷತೆಯೆಂದರೆ 50 ಮೀಟರ್‌ವರೆಗೆ ವಾಟರ್ ರೆಸಿಸ್ಟೆಂಟ್ ಆಗಿರುವುದು, ಇದರ ಜೊತೆಗೆ ಇದರಲ್ಲಿ ಇನ್‌ಡೋರ್ ರನ್ನಿಂಗ್, ಔಟ್‌ಡೋರ್ ರನ್ನಿಂಗ್, ವಾಕಿಂಗ್ ಮತ್ತು ಸೈಕಲಿಂಗ್‌ನಂತಹ ಒಟ್ಟು 9 ಇನ್‌ಬಿಲ್ಟ್ ಫಿಟ್ನೆಸ್ ಮೋಡ್‌ಗಳನ್ನು ನೀಡಲಾಗಿದೆ. ಆದ್ದರಿಂದಲೇ ಇದು ಒಂದು ಪರ್ಸನಲ್ ಟ್ರೈನರ್ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.ಸ್ಮಾರ್ಟ್ ಫೀಚರ್:

HONOR Band 5i ನಲ್ಲಿ ಇನ್ನೂ ಅನೇಕ ಸ್ಮಾರ್ಟ್ ಫೀಚರ್‌ಗಳು ಒಳಗೊಂಡಿವೆ. ಈ ಬ್ಯಾಂಡ್ ರಿಮೋಟ್ ಕ್ಯಾಮರಾ ಫಂಕ್ಷನ್ ಅನ್ನು ಬೆಂಬಲಿಸುತ್ತದೆ ಅಂದರೆ ಈ ಬ್ಯಾಂಡ್ ಅನ್ನು ನಿಮ್ಮ ಸ್ಮಾರ್ಟ್ ಫೋನ್‌ನ ಬ್ಲೂಟೂಥ್‌ನೊಂದಿಗೆ ಕನೆಕ್ಟ್ ಮಾಡಿದರೆ ಇದು ಆಟೋಮ್ಯಾಟಿಕ್ ರಿಮೋಟ್ ಇಂಟರ್ಫೇಸ್ ಆಗುತ್ತದೆ. ಇದರ ಜೊತೆಗೆ ಈ ಬ್ಯಾಂಡ್ ಅನ್ನು ನಿಮ್ಮ ಸ್ಮಾರ್ಟ್ ಫೋನ್‌ನ ಬ್ಲೂಟೂಥ್‌ನೊಂದಿಗೆ ಕನೆಕ್ಟ್ ಮಾಡಿ ಮ್ಯೂಸಿಕ್ ಪ್ಲೇಲಿಸ್ಟ್ ಕೂಡ ನಿಯಂತ್ರಿಸಬಹುದು. ಅಷ್ಟೇ ಅಲ್ಲದೇ, ಕರೆ ಬಂದಾಗ ಅದು ಯಾರ ಫೋನ್ ಕರೆ ಎಂದು ನೋಡಲು ಜೇಬಿನಿಂದ ನಿಮ್ಮ ಫೋನ್ ಹೊರತೆಗೆಯಬೇಕಾದ ಅವಶ್ಯಕತೆಯಿಲ್ಲ. ಹೌದು, ಕಾಲರ್ ಯಾರೆಂದು ನೋಡಲು ಈಗ ನೀವು ನಿಮ್ಮ ಕೈ ನೋಡಿಕಂಡರೆ ಸಾಕು ಮತ್ತು ಯಾವುದೋ ಅಪರಿಚಿತ ನಂಬರ್‌ನಿಂದ ಕರೆ ಬಂದಿದ್ದು, ನಿಮಗೆ ಮಾತನಾಡಲು ಆ ಸಮಯದಲ್ಲಿ ಆಗದಿದ್ದರೆ ಆ ಕರೆಯನ್ನು ಬ್ಯಾಂಡ್‌ನಲ್ಲೇ ಕಟ್ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮ ಮೆಸೇಜ್ ಅನ್ನು ಈ ಬ್ಯಾಂಡ್‌ನಲ್ಲಿಯೇ ನೋಡಲು ಸಾಧ್ಯವಿದೆ. ಇನ್ನೂ ಒಂದು ವಿಶೇಷತೆಯೇನೆಂದರೆ, ನಿಮ್ಮ ಫೋನನ್ನು ನೀವು ಎಲ್ಲಿಯೋ ಇಟ್ಟು ಮರೆತು ಹೋದರೆ ಈ ಬ್ಯಾಂಡ್‌ನಲ್ಲಿರುವ ಫೋನ್ ಫೈಂಡರ್ ಫಂಕ್ಷನ್ ಬಳಸಿಕೊಂಡು ಅದನ್ನು ಕ್ಷಣಮಾತ್ರದಲ್ಲಿ ಹುಡುಕಬಹುದು.

ಬೆಲೆ:

HONOR Band 5i ಬ್ಲ್ಯಾಕ್ ಕಲರ್‌ನಲ್ಲಿ ಬರುತ್ತದೆ ಮತ್ತು ಇದರ ಬೆಲೆ 1,990/-. Amazon ಪ್ರೈಮ್ ಮೆಂಬರ್ ಈ ಬ್ಯಾಂಡ್ ಅನ್ನು ಜನವರಿ 18 ರಂದು 12:00 PM ಕ್ಕೆ ಮತ್ತು ಉಳಿದ ಗ್ರಾಹಕರು ಜನವರಿ 19 ರಂದು ಆರ್ಡರ್ ಮಾಡಬಹುದು. ಹಾಗದರೆ ಈಗಲೇ ನಿಮ್ಮ ಆರ್ಡರ್ ಅನ್ನು ಕಾರ್ಟಿಗೆ ಸೇರಿಸಿಟ್ಟುಕೊಳ್ಳಿ ಮತ್ತು ಫಿಟ್ನೆಸ್ ದಿನಚರಿಯನ್ನು ತಯಾರಿಸಿಕೊಳ್ಳಿ, ಇದರ ಮೂಲಕ ನಿಮ್ಮ ಹೊಸ ವರ್ಷದ ಫಿಟ್ನೆಸ್ ಗೋಲ್‌ಗಳನ್ನು ಪೂರ್ತಿ ಮಾಡಿಕೊಳ್ಳಿ.
First published: January 20, 2020, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading