ಉತ್ಕೃಷ್ಟವಾದ ಫೋನ್ Honor 9X ಗಾಗಿ ಶಕ್ತಿಯುತ ಪ್ರೊಸೆಸರ್ Kirin 710

ಪ್ರಮುಖ ಅನುಭವಗಳನ್ನು ಕಡಿಮೆ ಬೆಲೆಗೆ ನೀಡಲು HONOR X ಸರಣಿಯು ಹೆಸರುವಾಸಿಯಾಗಿದೆ. ಬಳಕೆದಾರರ ಬೇಡಿಕೆ ಮತ್ತು ಅಗತ್ಯವನ್ನು ಪರಿಗಣಿಸಿ ಪ್ರತಿಯೊಂದು ವೈಶಿಷ್ಟ್ಯ ಮತ್ತು ವಿವರಣೆಯನ್ನು  ಕಂಪನಿಯು ಈ HONOR 9X ಸ್ಮಾರ್ಟ್‌ಫೋನ್‌ನಲ್ಲಿ ನೀಡಿದೆ. ಆದರೆ ಈ ಎಲ್ಲ ಕೆಲಸಗಳಿಗೆ ಕೆಲಸ ಮಾಡಲು ಶಕ್ತಿಯ ಅಗತ್ಯವಿರುತ್ತದೆ, Kirin 710 ಚಿಪ್‌ಸೆಟ್ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡಿದೆ.

Honor

Honor

 • Share this:
  ಸ್ಮಾರ್ಟ್‌ಫೋನ್‌ಗಳು ಎಂದಿಗಿಂತಲೂ ಸ್ಮಾರ್ಟ್ ಆಗಿವೆ. ಸುಗಮವಾಗಿರುವ ಅನುಭವ ಪಡೆಯಲು ಈಗ ಫೋನ್‌ನ ಕಾರ್ಯಕ್ಷಮತೆ ಅದರ ಕ್ಯಾಮೆರಾ ಅಥವಾ ಬ್ಯಾಟರಿ ಅಥವಾ ಅದರ ಸ್ಟೋರೇಜ್ ಸಾಮರ್ಥ್ಯಕ್ಕೆ ಮಾತ್ರ ಸೀಮಿತವಾಗಿಲ್ಲದೆ ಅದು ಉತ್ತಮ ಪ್ರೊಸೆಸರ್ ಹೊಂದಿರುವುದು ಸಹಾ ಅವಶ್ಯಕವಾಗಿದೆ. ಪ್ರೊಸೆಸರ್ ಬಗ್ಗೆ ಹೇಳಬೇಕೆಂದರೆ, Kirin ಪ್ರೊಸೆಸರ್‌‌ಗಳು ಅವುಗಳ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಇದು ಸ್ವತಃ Huawei ಅವರ ಉತ್ಪಾದನೆಯಾಗಿದ್ದು, ಈ ಪ್ರೊಸೆಸರ್ ಅವರ ಉಪ-ಬ್ರ್ಯಾಂಡ್ ಆದ Honor ಫೋನ್‌ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಈ ಪ್ರೊಸೆಸರ್‌ಗಳಲ್ಲಿ ಒಂದು Kirin 710F ಆಗಿದೆ, ಇದು HONOR ನ ಇತ್ತೀಚಿನ ಫೋನ್ HONOR 9X ನಲ್ಲಿ ಬಳಸಲಾಗಿದೆ ಮತ್ತು  ಕಂಪನಿಯು ನೀಡುವ ಅತ್ಯುತ್ತಮ ಮತ್ತು ಶಕ್ತಿಯುತ ಚಿಪ್‌ಸೆಟ್‌ಗಳಲ್ಲಿ ಈ ಚಿಪ್‌ಸೆಟ್ ಒಂದಾಗಿದೆ.

  ಇತ್ತೀಚೆಗೆ, Honorರ ತನ್ನ X ಸರಣಿಯ ಈ ಹೊಸ ಮಾಡೆಲ್ Honor 9X ಅನ್ನು ಬಿಡುಗಡೆ ಮಾಡಿದೆ. Kirin 710F ಅಲ್ಲದೆ, ನೀವು 16MP AI ಪಾಪ್ಅಪ್ ಸೆಲ್ಫಿ ಕ್ಯಾಮೆರಾ ಮತ್ತು 48MP + 8MP + 2MP AI ನ ರಿಯರ್ ಕ್ಯಾಮೆರಾವನ್ನು ಪಡೆಯುತ್ತೀರಿ. ಇದರೊಂದಿಗೆ, FHD + ಫುಲ್ ವ್ಯೂ ಡಿಸ್ಪ್ಲೇ, 44GB / 6GB RAM, 128GB ROM (512GB ವರೆಗೆ ವಿಸ್ತರಿಸಬಹುದಾಗಿದೆ) ಜೊತೆಗೆ 4,000Ah ಬ್ಯಾಟರಿ ಮತ್ತು ಅನೇಕ ಉತ್ತಮ ವೈಶಿಷ್ಟ್ಯಗಳು ಈ ಫೋನ್‌ನಲ್ಲಿ ಲಭ್ಯವಿದೆ. ಈ ಪ್ರೊಸೆಸರ್ HONOR 9X ಅನ್ನು ಹೇಗೆ ಇನ್ನಷ್ಟು ಶಕ್ತಿಯುತವಾಗಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

  Kirin 710 ವೈಶಿಷ್ಟ್ಯಗಳು

  Kirin 710 ಪ್ರೊಸೆಸರ್ 12nm ತಂತ್ರಜ್ಞಾನವನ್ನು ಬಳಸುತ್ತದೆ, ಮತ್ತು ಚಿಪ್‌ಸೆಟ್ ಚಿಕ್ಕದಾಗಿರುವುದರಿಂದ, ಕಂಪನಿಯು ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಬಹುದು. ಕಂಪನಿಯು Honor 9X ನಲ್ಲಿ ಇದನ್ನು ಅಳವಡಿಸಿಕೊಂಡಿದೆ, ಇದು ಪಾಪ್ ಅಪ್ ಕ್ಯಾಮೆರಾ ಮಾತ್ರವಲ್ಲ, ಶಕ್ತಿಯುತ ಬ್ಯಾಟರಿ, 48MP ಪ್ರೈಮರಿ ಸೆನ್ಸಾರ್, 8MP ಸೂಪರ್ ವೈಡ್ ಲೆನ್ಸ್ ಮತ್ತು ಟ್ರಿಪಲ್ ಕ್ಯಾಮೆರಾದೊಂದಿಗೆ 2MP ಡೆಪ್ತ್ ಸೆನ್ಸಾರ್ ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

  ಸ್ಮಾರ್ಟ್‌ಫೋನ್‌ಗೆ ಹೆಚ್ಚುವರಿ ಶಕ್ತಿ

  ಈ ಪ್ರೊಸೆಸರ್ ನಾಲ್ಕು ಸಣ್ಣ ARM ಕಾರ್ಟೆಕ್ಸ್-ಎ 53 ಕೋರ್‌ಗಳನ್ನು ಮತ್ತು ನಾಲ್ಕು ದೊಡ್ಡ ARM ಕಾರ್ಟೆಕ್ಸ್-A733 ಕೋರ್‌ಗಳನ್ನು ಹೊಂದಿದೆ. ಈ ಆಕ್ಟಾ-ಕೋರ್ CPU ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಶಕ್ತಿಯನ್ನು ನೀಡುವ ಮೂಲಕ ಅದರ ಸಮರ್ಥ ಕಾರ್ಯಕ್ಷಮತೆಗೆ ಪೂರಕವಾಗುತ್ತದೆ. ಈಗ ನೀವು ಫೋನ್‌ನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸಾಕಷ್ಟು ಮಲ್ಟಿ-ಟಾಸ್ಕಿಂಗ್ ಮಾಡಬಹುದು. ಇದು HONOR 9X ಟ್ರಿಪಲ್ ಕ್ಯಾಮೆರಾದೊಂದಿಗೆ ಫೋಟೋಗ್ರಫಿಯೇ ಆಗಲಿ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಮನರಂಜನೆ ಪಡೆಯುವುದೇ ಆಗಲಿ, ಬಳಕೆದಾರರಿಗೆ ಸುಗಮ ಅನುಭವ ಸಿಗುತ್ತದೆ.ಸರಳವಾಗಿ ಹೇಳುವುದಾದರೆ, Kirin 710 ಚಿಪ್‌ಸೆಟ್‌ನ ಕಾರಣದಿಂದಾಗಿ, Honor ನ Kirin 659 ಪ್ರೊಸೆಸರ್‌ಗೆ ಹೋಲಿಸಿದರೆ ನೀವು Honor 9X ನಲ್ಲಿ ಸಿಂಗಲ್-ಕೋರ್ ಕಾರ್ಯಕ್ಷಮತೆಯಲ್ಲಿ 75% ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 68% ಹೆಚ್ಚಳವನ್ನು ಪಡೆಯುತ್ತೀರಿ.

  ಈಗ ಗೇಮಿಂಗ್‌ನಿಂದ ಪಡೆಯಿರಿ ಇನ್ನೂ ಹೆಚ್ಚಿನ ಖುಷಿ

  ಈ ಚಿಪ್‌ಸೆಟ್‌ನಲ್ಲಿ ARM ಮಾಲಿ-G51 MP4 GPU ಸಹ ಇದೆ. ಕಿರಿನ್ 710 ಪ್ರೊಸೆಸರ್ AI  ಫೋಟೋ ವೈಶಿಷ್ಟ್ಯಗಳನ್ನು ಮತ್ತು ಸ್ವತಂತ್ರ ISP ಮತ್ತು DSP ಮೂಲಕ ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.ಇದರರ್ಥ HONOR 9X ಸ್ಮಾರ್ಟ್‌ಫೋನ್‌ನಲ್ಲಿ, ನೀವು ಕೇವಲ ಅದರ 48MP AI ಟ್ರಿಪಲ್ ಕ್ಯಾಮೆರಾವನ್ನು ಆನಂದಿಸಲು ಸಾಧ್ಯವಾಗುವುದೇ ಅಲ್ಲದೆ, ಯಾವುದೇ ವಿಳಂಬವಿಲ್ಲದೆ PUBG ಅಥವಾ Fortnite ನಂತಹ ಭಾರೀ ಗ್ರಾಫಿಕ್ ಗೇಮ್‍ಗಳನ್ನು ಆಡುವುದರ ಆನಂದವನ್ನು ಪಡೆಯಬಹುದು. HONOR 9X, GPU Turbo 3.0 ತಂತ್ರಜ್ಞಾನವನ್ನು ಹೊಂದಿದ್ದು, ಇದು ಸಂಪರ್ಕದಲ್ಲಿರುವ ಸುಪ್ತತೆಯನ್ನು 36% ರಷ್ಟು ಕಡಿಮೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಪರದೆಯ ಸ್ಪರ್ಶ ಪ್ರತಿಕ್ರಿಯೆಯಲ್ಲಿ ನೀವು ಯಾವುದೇ ವಿಳಂಬವನ್ನು ಅನುಭವಿಸುವುದಿಲ್ಲ.

  ಬಜೆಟ್ ಸ್ಮಾರ್ಟ್‌ಫೋನ್‌ನಲ್ಲಿ ಹೈ ಎಂಡ್ ಚಿಪ್‌ಸೆಟ್‌ನ ಸಾಮರ್ಥ್ಯ

  ಪ್ರಮುಖ ಅನುಭವಗಳನ್ನು ಕಡಿಮೆ ಬೆಲೆಗೆ ನೀಡಲು HONOR X ಸರಣಿಯು ಹೆಸರುವಾಸಿಯಾಗಿದೆ. ಬಳಕೆದಾರರ ಬೇಡಿಕೆ ಮತ್ತು ಅಗತ್ಯವನ್ನು ಪರಿಗಣಿಸಿ ಪ್ರತಿಯೊಂದು ವೈಶಿಷ್ಟ್ಯ ಮತ್ತು ವಿವರಣೆಯನ್ನು  ಕಂಪನಿಯು ಈ HONOR 9X ಸ್ಮಾರ್ಟ್‌ಫೋನ್‌ನಲ್ಲಿ ನೀಡಿದೆ. ಆದರೆ ಈ ಎಲ್ಲ ಕೆಲಸಗಳಿಗೆ ಕೆಲಸ ಮಾಡಲು ಶಕ್ತಿಯ ಅಗತ್ಯವಿರುತ್ತದೆ, Kirin 710 ಚಿಪ್‌ಸೆಟ್ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡಿದೆ. ಈ ವೈಶಿಷ್ಟ್ಯಗಳಿಂದಾಗಿ ಬಜೆಟ್ ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ನೀವು ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ನಂತಹ ಅನುಭವವನ್ನು ಪಡೆಯಬಹುದಾಗಿದೆ.  AI ಸಾಮರ್ಥ್ಯಗಳು

  Kirin 710F ಕಾರಣ, ನಿಮ್ಮ Honor 9X ನಲ್ಲಿ ಹ್ಯಾಂಡ್‌ಹೆಲ್ಡ್ ಡಿಟೆಕ್ಷನ್, ಲೈಟ್ ಡಿಟೆಕ್ಷನ್, ಅತ್ಯುತ್ತಮ ಸ್ಪಷ್ಟತೆಗಾಗಿ ಪ್ರಕ್ರಿಯೆ ಮತ್ತು ವೀಡಿಯೊ ಸ್ಥಿರೀಕರಣದಂತಹ ಅನೇಕ AI ವೈಶಿಷ್ಟ್ಯಗಳು ಲಭ್ಯವಿದೆ. ಇದರ AI ಸ್ಕ್ರೀನ್ ರೆಕಗ್ನಿಶನ್ 22 ವಿಭಾಗಗಳಲ್ಲಿ 500 ಕ್ಕೂ ಹೆಚ್ಚು ದೃಶ್ಯಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ ಅಂದರೆ ಈ ಫೋನ್‌ನ ಕ್ಯಾಮೆರಾ ಅಲ್ಟ್ರಾ-ಕ್ಲಿಯರ್ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುವ ಅನೇಕ ವಿಷಯಗಳನ್ನು ಗುರುತಿಸಬಹುದು ಮತ್ತು ನಿಮಗೆ ಉತ್ತಮ ಫೋಟೋಗ್ರಫೀ ಅನುಭವವನ್ನು ನೀಡುತ್ತದೆ. ಒಟ್ಟಾರೆ ಹೇಳಬೇಕೆಂದರೆ, ಈ ಎಲ್ಲಾ ವೈಶಿಷ್ಟ್ಯಗಳು ನಿಮ್ಮ oಫೋಟೋಗ್ರಫೀಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ.

  ಸಂಪರ್ಕ

  2 ಸಿಮ್ ಕಾರ್ಡ್‌ಗಳು ಕಾರ್ಯನಿರ್ವಹಿಸಬಲ್ಲ ಅನೇಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ  ಲಭ್ಯವಿದೆ, ಆದರೆ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಎರಡೂ ಸಿಮ್ ಸ್ಲಾಟ್‌ಗಳಲ್ಲಿ ನಿಮಗೆ 4G ಬೆಂಬಲ ಸಿಗುತ್ತದೆ. ಅಂದರೆ, ನೀವು ಸಿಮ್ 1 ರಿಂದ ಪ್ರಾಥಮಿಕ ಕರೆ ಮತ್ತು ಮೆಸೇಜ್  ಕಳುಹಿಸಿದರೆ ಮತ್ತು ಸಿಮ್ 2 ರಿಂದ ಇಂಟರ್ನೆಟ್ ಅನ್ನು ಬಳಸಿದರೆ, ನೀವು ಇನ್ನೊಂದು ಸಿಮ್‌ನಲ್ಲಿ 4G ವೇಗವನ್ನು ಪಡೆಯುವುದಿಲ್ಲ. Kirin 710 ಡ್ಯುಯಲ್ -4G VoLTE ಬೆಂಬಲಿಸುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರವಾಗಿದೆ. ಅಂದರೆ, Honor 9X ನಲ್ಲಿ ಎರಡೂ ಸಿಮ್ ಕಾರ್ಡ್‌ಗಳನ್ನು ಬಳಸುವಾಗ, ಇನ್ನೊಂದು ಸಿಮ್‌ನ ನೆಟ್‌ವರ್ಕ್ 3G ಅಥವಾ 2G ಗೆ ಇಳಿಯುವುದಿಲ್ಲ ಆದ್ದರಿಂದ ನೀವು ಇಂಟರ್ನೆಟ್ ಅನ್ನು ಸುಲಭವಾಗಿ ಬಳಸಬಹುದು.ಈ ಚಿಪ್‌ಸೆಟ್ ನಿಮಗೆ 600Mbps ಗರಿಷ್ಠ ಡೌನ್‌ಲೋಡ್ ವೇಗವನ್ನು ನೀಡುತ್ತದೆ ಇದರಿಂದ ನೀವು ಗೇಮ್‌ಗಳು, ಅಪ್ಲಿಕೇಶನ್‌ಗಳು, ಹಾಡುಗಳು ಮತ್ತು ವೀಡಿಯೊಗಳನ್ನು ಬಹಳ ಕಡಿಮೆ ಸಮಯದಲ್ಲಿ ಡೌನ್‌ಲೋಡ್ ಮಾಡಬಹುದು. ಇದರಲ್ಲಿ, ನೀವು 150Mbps ವೇಗವನ್ನು ಅಪ್‌ಲೋಡ್ ಮಾಡುವಿರಿ, ಅಂದರೆ, ಫೋಟೋಗಳನ್ನು ಅಪ್‌ಲೋಡ್ ಮಾಡುವುದು, ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ವೀಡಿಯೊಗಳು ಅಥವಾ ಭಾರೀ ಫೈಲ್‌ಗಳನ್ನು ಇಮೇಲ್‌ನಲ್ಲಿ ಅಪ್‌ಲೋಡ್ ಮಾಡುವಂತಹದ್ದನ್ನು ಅಲ್ಪಾವಧಿಯಲ್ಲಿಯೇ ಸುಲಭವಾಗಿ ಮಾಡಬಹುದು.

  Honor 9X ನ ಬೆಲೆ
  Flipkart ನಿಂದ ಈ ಫೋನ್‌ನ ಎರಡು ವೇರಿಯೆಂಟ್‌ಗಳನ್ನು ನೀವು ಖರೀದಿಸಬಹುದು. 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವೇರಿಯೆಂಟ್‌ ಬೆಲೆ ರೂ.13,999 , 66GB RAM ಹೊಂದಿರುವ 128GB ಇಂಟರ್ನಲ್ ಸ್ಟೋರೇಜ್ ವೇರಿಯೆಂಟ್‌ ಬೆಲೆ ರೂ.16,999. ಆದಾಗ್ಯೂ, ಜನವರಿ 19 ರಿಂದ ಜನವರಿ 22 ರವರೆಗೆ ನಡೆಯುವ ಆಫರ್‌ನ ಮೊದಲ ದಿನ, ಅಂದರೆ ಜನವರಿ 19 ರಂದು ಈ ಫೋನ್ ಖರೀದಿಸುವಾಗ ನಿಮಗೆ 1,000 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಹೆಚ್ಚುವರಿಯಾಗಿ, ICICI Bank ಕ್ರೆಡಿಟ್ ಕಾರ್ಡ್ ಮತ್ತು Kotak Bank ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಈ ಮಾಡೆಲ್‌ನ ಖರೀದಿಯ ಮೇಲೆ 10% ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ನೀವು ಆಫರ್ ಸಮಯದಲ್ಲಿ ಖರೀದಿಸಿದರೆ, ರೂ. 2,200 ಗಳ ಜಿಯೋ ರೀಚಾರ್ಜ್ ವೋಚರ್ ಅನ್ನು ಸಹ ಪಡೆಯುತ್ತೀರಿ, ಇದನ್ನು ನೀವು ಪ್ರತೀ ರೂ.50 ರಂತೆ  44 ರಿಚಾರ್ಜ್‌ಗಳಾಗಿ ಬಳಸಬಹುದು. ಅಷ್ಟೇ ಅಲ್ಲ, ನೀವು 125 GB ಹೆಚ್ಚುವರಿ ಇಂಟರ್ನೆಟ್ ಡೇಟಾವನ್ನು ಸಹ ಪಡೆಯುತ್ತೀರಿ, ಅದನ್ನು ನೀವು ಪ್ರತೀ ರಿಚಾರ್ಜ್‌ಗೆ 5GB ಯಂತೆ 25 ರೀಚಾರ್ಜ್ ಪಡೆದುಕೊಳ್ಳಬಹುದು.

  ತೀರ್ಪು
  ಅಂತಹ ಉತ್ತಮ ವೈಶಿಷ್ಟ್ಯಗಳು, ಡಿಸೈನ್ ಮತ್ತು ಕಿರಿನ್ 710 ಪ್ರೊಸೆಸರ್ ಹೊರತಾಗಿಯೂ, ಕಂಪನಿಯ ಈ ಸ್ಮಾರ್ಟ್‌ಫೋನ್‌ ಕೈಗೆಟುಕುವ ಬೆಲೆಗೆ ಲಭ್ಯವಿದೆ. ಶಕ್ತಿಯುತ Kirin 710 ಕಾರಣ, ಅದರ ಕಾರ್ಯಕ್ಷಮತೆಯ ಬಗ್ಗೆ ನಿಮಗೆ ಯಾವುದೇ ದೂರುಗಳಿರುವುದಿಲ್ಲ. ಅಂತಿಮವಾಗಿ, ಪ್ರತಿಯೊಬ್ಬ ಬಳಕೆದಾರನು ತನ್ನ ಕೈಯಲ್ಲಿ ಸ್ಮಾರ್ಟ್‌ಫೋನ್ ಹೊಂದಲು ಅವಕಾಶವನ್ನು ಪಡೆಯುತ್ತಾನೆ, ಅದು ಗೇಮಿಂಗ್, ಬಿಂಜ್ ವೀಕ್ಷಣೆ ಮತ್ತು ಪಾಪ್-ಅಪ್ ಕ್ಯಾಮೆರಾದಂತಹ ಎಲ್ಲಾ ಅವಶ್ಯಕತೆಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರೈಸುತ್ತದೆ.

  ಇದನ್ನೂ ಓದಿ: HONOR MagicWatch 2 ಸ್ಮಾರ್ಟ್‌ವಾಚ್ ಏಕೆ ಎಲ್ಲರ ಆಯ್ಕೆಯಾಗುತ್ತಿದೆ ಎಂದು ತಿಳಿಯಿರಿ

  ಇದನ್ನೂ ಓದಿ: ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ, ಸಂಪುಟ ವಿಸ್ತರಣೆಯಿಂದ ಯಾವ ಪ್ರಳಯವೂ ಆಗಲ್ಲ; ಕಾರಜೋಳ ತಿರುಗೇಟು
  First published: