HONOR 9X Review: HONOR 9X ಕಡಿಮೆ ಬೆಲೆಯ ಒಳ್ಳೆಯ ಪಾಪ್-ಅಪ್ ಫೋನ್ ಎಂಬುದು ನಿಜವಾ?

ತನ್ನ ಬೆಲೆಯ ರೇಂಜ್​ನಲ್ಲಿ Honor 9x ಒಂದು ಉತ್ತಮವಾದ ಆಯ್ಕೆಯಾಗಿದೆಯಾ? ಈ ಸ್ಮಾರ್ಟ್​ಫೋನ್​ನ ವೈಶಿಷ್ಟ್ಯತೆಗಳೇನು? ಈಗಿನ ಪೀಳಿಗೆಯ ಬಳಕೆದಾರರಿಗೆ ಇದು ಇಷ್ಟವಾಗುತ್ತದೆಯಾ? ಈ ಎಲ್ಲಾ ವಿವರಗಳು ನಮ್ಮ Reviewನಲ್ಲಿ ಇವೆ.

news18
Updated:January 16, 2020, 6:40 PM IST
HONOR 9X Review: HONOR 9X ಕಡಿಮೆ ಬೆಲೆಯ ಒಳ್ಳೆಯ ಪಾಪ್-ಅಪ್ ಫೋನ್ ಎಂಬುದು ನಿಜವಾ?
ಹಾನರ್ 9ಎಕ್ಸ್
  • News18
  • Last Updated: January 16, 2020, 6:40 PM IST
  • Share this:
HONOR ಮತ್ತೊಮ್ಮೆ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದ ಗುಣಮಟ್ಟವನ್ನು ಉನ್ನತೀಕರಿಸಿದೆ. 2020 ರಲ್ಲಿ ಭರ್ಜರಿ ಪಾದಾರ್ಪಣೆ ಮಾಡುತ್ತಿರುವ ಕಂಪನಿಯು ಈಗ ತನ್ನ ಜನಪ್ರಿಯ ಎಕ್ಸ್ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ HONOR 9X ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ನ ವಿಶೇಷವೆಂದರೆ ಅದರ ಟ್ರಿಪಲ್ ಕ್ಯಾಮೆರಾ. ಇದು 48MP ಮೇನ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ, ಈ ಫೋನ್‌ನ ವಿನ್ಯಾಸವೂ ಬಹಳ ಆಕರ್ಷಕವಾಗಿದೆ. ಫೋನ್‌ನ ಹಿಂದಿನ ಫಲಕದಲ್ಲಿ, ನೀವು ಕಾಣುವ  X ನ ಆಕಾರವು ಅದರ ಬಣ್ಣ ಮತ್ತು ಶೈಲಿಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಈ ಫೋನ್ ಅನ್ನು ನೀವು ಕೈನಲ್ಲಿ ಇರಿಸಿಕೊಂಡರೆ ಯಾವುದೇ ಸ್ಟೇಟಸ್ ಸಿಂಬಲ್‌ಗೆ ಕಡಿಮೆಯೆನಿಸಲಾರದು. ಈ ಫೋನ್‌ನ ವಿಶೇಷ ವೈಶಿಷ್ಟ್ಯಗಳು ಮತ್ತು ಸ್ಪೆಕ್ಸ್ ನಿಮಗೆ ವಿನ್ಯಾಸದಂತೆ ಆಕರ್ಷಕ ಮತ್ತು ಶಕ್ತಿಯುತವಾಗಿ ಕಾಣುವಂತೆ ಮಾಡುತ್ತದೆ. ಈ ಫೋನ್ ಬಗ್ಗೆ ಸ್ವಲ್ಪ ವಿವರವಾಗಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇವೆ.

ಡೈನಾಮಿಕ್ ಡಿಸೈನ್ ಮತ್ತು ಡಿಸ್​ಪ್ಲೇ:

HONOR 9X ಫುಲ್ ವ್ಯೂ ಡಿಸ್ಪ್ಲೇ ಮತ್ತು ಬಾಗಿದ ವಿನ್ಯಾಸವನ್ನು ಹೊಂದಿರುವ ಸುಂದರವಾದ ಸ್ಮಾರ್ಟ್‌ಫೋನ್ ಆಗಿದ್ದು, ಇದರ ಬ್ಯಾಕ್ ಪ್ಯಾನಲ್ ಗ್ಲ್ಯಾಸೀ ಫಿನಿಶ್ ಹೊಂದಿದೆ ಮತ್ತು ಇದೇ ಕಾರಣಕ್ಕಾಗಿ ಈ ಫೋನ್ ಹೆಚ್ಚಿನ ಪ್ರೀಮಿಯಂ ನೋಟವನ್ನು ನೀಡುತ್ತದೆ. ಫೋನ್‌ನ ಬ್ಯಾಕ್ ಪ್ಯಾನಲ್‌ನಲ್ಲಿ ನೀವು ಕಾಣುವ  X ಆಕಾರದ ವಿನ್ಯಾಸವು ವಿಭಿನ್ನವಗಿದೆ. ಹಾಗೆಯೇ ಆಕರ್ಷಕವೂ ಆಗಿದೆ. ಪೂರ್ಣ ಎಚ್‌ಡಿ ಡಿಸ್​ಪ್ಲೇಯನ್ನು ನೀಡಲಾಗಿದೆ. ಇದು ಫುಲ್ ವ್ಯೂ ಡಿಸ್ಪ್ಲೇ ಆಗಿದ್ದು ಬಾಗಿದ ವಿನ್ಯಾಸದೊಂದಿಗೆ ಬರುತ್ತದೆ. ಇದರರ್ಥ ನೀವು ಯಾವುದೇ ಅಡೆತಡೆಗಳು ಅಥವಾ ತೊಂದರೆಗಳಿಲ್ಲದೆ ಈ ಫೋನ್‌ನಲ್ಲಿ ಫುಲ್ ವ್ಯೂನಲ್ಲಿ ಆಟಗಳನ್ನು ಆಡುವ ಮತ್ತು  ವೀಡಿಯೊಗಳನ್ನು ನೋಡುವ ಉತ್ತಮ ಅನುಭವವನ್ನು ಆನಂದಿಸಬಹುದು. ಫೋನ್‌ನಲ್ಲಿ ಸೆಲ್ಫಿ ಕ್ಯಾಮೆರಾ ಇಲ್ಲವೇ ಎಂದು ನೀವು ಈಗ ಯೋಚಿಸುತ್ತಿರಬಹುದು? ಹಾಗೇನಿಲ್ಲ. ಈ ಫೋನ್‌ನಲ್ಲಿ ನಿಮಗೆ ಸೆಲ್ಫಿ ಕ್ಯಾಮೆರಾ ಕೂಡ ಸಿಗುತ್ತದೆ. ಆದರೆ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ತಂತ್ರಜ್ಞಾನದೊಂದಿಗೆ, ನಿಮ್ಮ ಮತ್ತು ಡಿಸ್ಪ್ಲೇ ನಡುವೆ ಮೂರನೆಯವರ ಪ್ರವೇಶವಿಲ್ಲ. AI ವೀಡಿಯೊ ವರ್ಧನೆಯನ್ನು ಹೊಂದಿರುವ HONOR 9X, ಇದು ಹೆಚ್ಚು ಪ್ರಕಾಶಮಾನವಾದ ಮತ್ತು ಕತ್ತಲೆಯ ಪ್ರದೇಶಗಳಲ್ಲಿ ಕಾಂಟ್ರಾಸ್ಟ್ ಅನ್ನು ಸರಿಹೊಂದಿಸುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇದರಲ್ಲಿ ಕಣ್ಣಿನ ರಕ್ಷಣೆಗಾಗಿ ಐ ಕಂಫರ್ಟ್ ಮೋಡ್ ಇದ್ದು ಇದು TUV Rheinland ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಇದು ಕಣ್ಣಿನ ಒತ್ತಡವನ್ನು ತಡೆಯಲು ಬ್ಲೂ ಲೈಟ್ ಅನ್ನು ಫಿಲ್ಟರ್ ಮಾಡುತ್ತದೆ.

ಪ್ರೊಸೆಸರ್ ಮತ್ತು ಸಾಫ್ಟ್‌ವೇರ್:

HONOR 9X ನಲ್ಲಿ ಕಿರಿನ್ 710 ಎಫ್ ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಬಳಸಲಾಗಿದ್ದು, ಇದು ಮಿಡ್-ಸೆಗ್ಮೆಂಟ್ ಚಿಪ್‌ಸೆಟ್ ಆಗಿದೆ. ಇದು ವೇಗ ಮತ್ತು ಮಲ್ಟಿಟಾಸ್ಕಿಂಗ್‌ನ ಉತ್ತಮ ಅನುಭವವನ್ನು ನೀಡುತ್ತದೆ. 4GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನೊಂದಿಗೆ, ನೀವು ದಿನನಿತ್ಯದ ಕಾರ್ಯಗಳ ನಿರ್ವಹಣೆ ಸುಲಭವಾಗುತ್ತದೆ. ಫೋನ್‌ನಲ್ಲಿ ನಿಮಗೆ GPU Turbo 3.0 ಬೆಂಬಲದ ಸೌಲಭ್ಯವನ್ನು ಸಹ ಪಡೆಯುತ್ತೀರಿ, ಈ ಬೆಲೆಯ ಸ್ಮಾರ್ಟ್‌ಫೋನ್‌ನಲ್ಲಿ ಇದು ಸಿಗುವುದು ವಿರಳವೇ ಸರಿ. ಇದರೊಂದಿಗೆ ನೀವು ಗ್ರಾಫಿಕ್ಸ್ ಆಟಗಳ ಉತ್ತಮ ಅನುಭವವನ್ನು ಪಡೆಯಬಹುದು. 6 GB RAM ಹೊಂದಿರುವ 128 GB ಇಂಟರ್ನಲ್ ಮೆಮೊರಿ ನಿಮ್ಮ ಫೋನ್ ವೇಗವನ್ನು ಕಡಿಮೆ ಮಾಡಲು ಬಿಡದೆ ಸುಗಮವಾಗಿರಿಸುತ್ತದೆ. HONOR 9X, EMUI 9.1.0 ನಲ್ಲಿ ಚಲಿಸುತ್ತದೆ, ಆದರೆ ಈ ಡಿವೈಸ್ ಅನ್ನು Android 10 ಗೆ ಅಪ್‌ಗ್ರೇಡ್ ಮಾಡಲಾಗುವುದು ಎಂದು ಕಂಪನಿ ಹೇಳಿದೆ, ಈ ಫೋನ್‌ಗೆ ಹೆಚ್ಚಿನ ಶಕ್ತಿಯನ್ನು ನೀಡುವುದು ಅದರ 4,000mAh ಬ್ಯಾಟರಿ,ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಮತ್ತು ಇದು ಇಡೀ ದಿನ ತೊಂದರೆಯಿಲ್ಲದೆ ನಡೆಯುತ್ತದೆ.

ಕ್ಯಾಮೆರಾ:

ಬಳಕೆದಾರರನ್ನು ಆಕರ್ಷಿಸಲು ಯಾವುದೇ ಫೋನ್‌ನ ಕ್ಯಾಮೆರಾ ಬಹಳ ಮುಖ್ಯ ಮತ್ತು HONOR 9X ಈ ಕೆಲಸವನ್ನು ಅತ್ಯುತ್ತಮವಾಗಿ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಈ ಫೋನ್ ಟ್ರಿಪಲ್ ರಿಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದರಲ್ಲಿ 48MP ಪ್ರೈಮರಿ ಕ್ಯಾಮೆರಾವನ್ನು ನೀಡಲಾಗಿದೆ, ಇದು ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದೆ. ಅದರ ಸಹಾಯದಿಂದ, ನೀವು ಉತ್ತಮ ವಿವರಗಳೊಂದಿಗೆ ಫೋಟೋಗಳನ್ನು ಸೆರೆಹಿಡಿಯಬಹುದು. ಎಕ್ಸ್‌ಟ್ರೀಮ್ ಜೂಮ್ ಮೂಲಕ ನೀವು ಉತ್ತಮ ಫೋಟೋಗಳನ್ನು ಸಹ ತೆಗೆಯಬಹುದು. ಅದೇ , HONOR 9X ನ 8MP ಸೂಪರ್ ವೈಡ್ ಆ್ಯಂಗಲ್ ಕ್ಯಾಮೆರಾ 120 ಡಿಗ್ರಿ ಫೀಲ್ಡ್ ಆಫ್ ವ್ಯೂನೊಂದಿಗೆ ನಿಮ್ಮ ಗ್ರೂಪ್ ಫೋಟೋವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ. ಇದರ 2MP ಡೆಪ್ತ್ ಸೆನ್ಸಾರ್ ಬೊಕೆ ಎಫೆಕ್ಟ್ ಉತ್ತಮ ಭಾವಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. 8MPಯ AI ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ HONOR 9X, ಸಾಕಷ್ಟು ನೈಸರ್ಗಿಕ ಮತ್ತು ನಿಖರವಾದ ವಿವರಗಳೊಂದಿಗೆ ಫೋಟೋಗಳನ್ನು ಸೆರೆಹಿಡಿಯುತ್ತದೆ. ಇದರ ಫೇಸ್ ಡಿಟೆಕ್ಶನ್ ಬಹಳ ವೇಗವಾಗಿ ಕಾರ್ಯನಿರ್ವಹಿಸುತ್ತದೆ. HONOR ನ ಈ ಫೋನ್ ಆ್ಯಂಟಿ ಡಸ್ಟ್ ಮತ್ತು ವಿಶೇಷ ಕಾರ್ಯವಿಧಾನವನ್ನು ಆಧರಿಸಿದೆ.ಈ ಫೋನ್ ನಿಮಗೆ ಉತ್ತಮ ಫೋಟೋಗ್ರಫಿ  ಅನುಭವವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ನಮಗಂತೂ ಇದರ ಫೋಟೋಗ್ರಫಿ ಬಹಳವೇ ಇಷ್ಟವಾಗಿದೆ.

ಬೆಲೆ:

HONOR 9X ನಿಮ್ಮ ಜೇಬಿಗೆ ಹೊರೆಯಾ ಅಥವಾ ಅಲ್ಲವಾ ಎಂದು ತಿಳಿಯೋಣ. ವಾಸ್ತವದಲ್ಲಿ ಈ ಫೋನ್ ನಿಮ್ಮ ಜೇಬಿಗೆ ಹೊರೆ ಎನಿಸುವುದಿಲ್ಲ. ಬದಲಾಗಿ, ಹೊರೆಯನ್ನು ತಗ್ಗಿಸುವಂತಿದೆ. ಅಂತಹ ಉತ್ತಮ ವೈಶಿಷ್ಟ್ಯಗಳು ಮತ್ತು ವಿನ್ಯಾಸದ ಹೊರತಾಗಿಯೂ, ಕಂಪನಿಯ ಈ ಸ್ಮಾರ್ಟ್‌ಫೋನ್ ಅತ್ಯಂತ ಒಳ್ಳೆ ಬೆಲೆಗೆ ಬರುತ್ತದೆ. ಈ ಫೋನ್‌ನ ಎರಡು ವೇರಿಯೆಂಟ್‌ಗಳಿವೆ. 4GB  RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ವೇರಿಯೆಂಟ್‌ನ ಬೆಲೆ ರೂ.13,999 ಇದೆ. ಆದರೆ ಮುಂಬರುವ ಸೇಲ್‌ನ ಮೊದಲ ದಿನ, ಈ ಫೋನ್ ರೂ.1,000 ರಿಯಾಯಿತಿಯೊಂದಿಗೆ ರೂ.12,999 ಗಳಿಗೆ ಲಭ್ಯವಿದೆ. ಇದರೊಂದಿಗೆ, ಜನವರಿ 19 ರಿಂದ ಜನವರಿ 22 ರವರೆಗೆ ನಡೆಯುವ ಈ ಆಫರ್ ಸಮಯದಲ್ಲಿ, ICICI Bank ಕ್ರೆಡಿಟ್ ಕಾರ್ಡ್ ಮತ್ತು Kotak Bank ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಈ ಮಾಡೆಲ್‌ನ ಖರೀದಿಯ ಮೇಲೆ 10% ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ನೀವು ಆಫರ್ ಸಮಯದಲ್ಲಿ ಖರೀದಿಸಿದರೆ, ರೂ. 2,200 ಗಳ ಜಿಯೋ ರೀಚಾರ್ಜ್ ವೋಚರ್ ಅನ್ನು ಸಹ ಪಡೆಯುತ್ತೀರಿ. ಇದನ್ನು ನೀವು ಪ್ರತೀ ರೂ.50 ರಂತೆ  44 ರೀಚಾರ್ಜ್​ಗಳಾಗಿ ಬಳಸಬಹುದು.

ತೀರ್ಪು:

ಈ ಫೋನ್ ಬಳಸಿದ ನಂತರ, ಫೋಟೋಗ್ರಫಿಯ ಬಗ್ಗೆ ಒಲವು ಹೊಂದಿರುವ ಬಳಕೆದಾರರಿಗೆ ಈ ಅನುಭವವು ಉತ್ತಮವಾಗಿರುತ್ತದೆ ಎಂದು ನಾವು ಹೇಳಬಹುದು. ಅಲ್ಲದೆ, ಇದು ಈ ಬೆಲೆಯಲ್ಲಿ ಲಭ್ಯವಿರುವ ಪ್ರಬಲ ಫೋನ್ ಎಂದು ಸಾಬೀತುಪಡಿಸುತ್ತದೆ. ಫೋನ್‌ನ ಡಿಸೈನ್ ಮತ್ತು ಲುಕ್ ಅನ್ನು ನಾವು ಇಷ್ಟಪಟ್ಟಿದ್ದೇವೆ. ಹೆಚ್ಚು ತೂಕವಿಲ್ಲದ ಕಾರಣ, ಈ ಫೋನ್ ಬಳಸಲು ಸಹ ಸುಲಭವಾಗುತ್ತದೆ.

ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಈಗ Xtraordinary#UpForExtra ಫೋನ್ #HONOR9X #HONORIndia ಅನ್ನು ನೀವು ಖರೀದಿಸಬಹುದು.
Published by: Vijayasarthy SN
First published: January 16, 2020, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading