Honor 9X Pro: ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಹಾನರ್ 9ಎಕ್ಸ್ ಪ್ರೊ ಸ್ಮಾರ್ಟ್​ಫೋನ್​​; ಮೇ12ಕ್ಕೆ ಭಾರತದಲ್ಲಿ ಬಿಡುಗಡೆ

Honor 9X Pro: ನೂತನ ಹಾನರ್​ 9ಎಕ್ಸ್​ ಪ್ರೊ ಸ್ಮಾರ್ಟ್​ಫೋನ್​ 6.59 ಇಂಚಿನ ಫುಲ್​ ಹೆಚ್​​ಡಿ+ ಡಿಸ್​ಪ್ಲೇ ಹೊಂದಿದ್ದು​ ಆ್ಯಂಡ್ರಾಯ್ಡ್​ 9 ಪ್ರೊಸೆಸರ್​ನಲ್ಲಿ ಕಾರ್ಯ ನಿರ್ವಹಿಸಲಿದೆ. ಇನ್ನು ಸ್ಮಾರ್ಟ್​ಫೋನ್​ 6GB RAM​​ ಮತ್ತು 256GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಸ್ಟೊರೇಜ್​ ಆಯ್ಕೆಯನ್ನು 512GB ತನಕ ವೃದ್ಧಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಹಾನರ್​ 9ಎಕ್ಸ್​ ಪ್ರೊ ಸ್ಮಾರ್ಟ್​ಫೋನ್

ಹಾನರ್​ 9ಎಕ್ಸ್​ ಪ್ರೊ ಸ್ಮಾರ್ಟ್​ಫೋನ್

  • Share this:
    ಭಾರತದಲ್ಲಿ ಹಾನರ್​ 9ಎಕ್ಸ್ ಪ್ರೊ​ ಸ್ಮಾರ್ಟ್​ಫೋನ್​  ಮೇ. 12ಕ್ಕೆ ಬಿಡುಗಡೆಯಾಗಲಿದೆ. ಆನ್​ಲೈನ್​ ಮಾರಾಟ ಮಳಿಯಾದ ಫ್ಲಿಪ್​ಕಾರ್ಟ್​ ಮೂಲಕ ಗ್ರಾಹಕರಿಗೆ ಸಿಗಲಿದೆ.

    ನೂತನ ಹಾನರ್​ 9ಎಕ್ಸ್​ ಪ್ರೊ ಸ್ಮಾರ್ಟ್​ಫೋನ್​ 6.59 ಇಂಚಿನ ಫುಲ್​ ಹೆಚ್​​ಡಿ+ ಡಿಸ್​ಪ್ಲೇ ಹೊಂದಿದ್ದು. ಕಿರಿನ್​ ಎಸ್​ಒಸಿ ​ಪ್ರೊಸೆಸರ್​ನಲ್ಲಿ ಕಾರ್ಯ ನಿರ್ವಹಿಸಲಿದೆ.  ಆ್ಯಂಡ್ರಾಯ್ಡ್​ 9 ಬೆಂಬಲವನ್ನು ಪಡೆದಿದೆ. ಇನ್ನು ಸ್ಮಾರ್ಟ್​ಫೋನ್​ 6GB RAM​​ ಮತ್ತು 256GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಸ್ಟೊರೇಜ್​ ಆಯ್ಕೆಯನ್ನು 512GB ತನಕ ವೃದ್ಧಿಸಬಹುದು ಎಂದು ಸಂಸ್ಥೆ ತಿಳಿಸಿದೆ.

    ಕ್ಯಾಮೆರಾ:

    ಹಾನರ್​ 9ಎಕ್ಸ್​ ಪ್ರೊ ಸ್ಮಾಟ್​ಫೋನ್​ 48 ಮೆಗಾಫಿಕ್ಸೆಲ್​ ಹೊಂದಿರುವ ಪ್ರೈಮರಿ ಕ್ಯಾಮೆರಾ, 8 ಮೆಗಫಿಕ್ಸೆಲ್​​​​​​ ವೈಡ್​ ಆ್ಯಂಡಲ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಡೆಪ್ತ್​​ ಸೆನ್ಸಾರ್​ ಕ್ಯಾಮೆರಾವನ್ಉ ಹೊಂದಿದೆ. ಮುಂಭಾಗದಲ್ಲಿ 16 ಮೆಗಾಫಿಕ್ಸೆಲ್​​​​ ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

    ಬ್ಯಾಟರಿ:

    ಇನ್ನು ಧೀರ್ಘಕಾಲದ ಬಳಕೆಗಾಗಿ 4000mAh​ ಬ್ಯಾಟರಿಯನ್ನು ನೀಡಲಾಗಿದೆ.

    ಬೆಲೆ:

    ಹಾನರ್​ ಬಾರತದಲ್ಲಿ ಬಿಡುಗಡೆ ಮಾಡುತ್ತಿರುವ 9ಎಕ್ಸ್​ ಪ್ರೊ ಸ್ಮಾರ್ಟ್​ಫೋನ್​ ಬೆಲೆ 15 ಸಾವಿರದಿಂದ 20 ಸಾವಿರದ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.

    Video: ಮಹೇಶ್​ ಬಾಬು ಸಿನಿಮಾದ ಡೈಲಾಗ್​​ ಹೇಳಿದ ಡೇವಿಡ್​ ವಾರ್ನರ್​; ಟಿಕ್​ ಟಾಕ್​ ವಿಡಿಯೋ ವೈರಲ್​
    First published: