ಪರಿಷ್ಕೃತ ಆವೃತ್ತಿಯ ಮೂಲಕ ಮತ್ತೆ ಮಾರುಕಟ್ಟೆಗೆ ಬಂದ ಹಾನರ್ 9i (2018)


Updated:June 8, 2018, 1:33 PM IST
ಪರಿಷ್ಕೃತ ಆವೃತ್ತಿಯ ಮೂಲಕ ಮತ್ತೆ ಮಾರುಕಟ್ಟೆಗೆ ಬಂದ ಹಾನರ್ 9i (2018)

Updated: June 8, 2018, 1:33 PM IST
ನವದೆಹಲಿ: ಹುವಾವೆ ಒಡೆತನದ ಹಾನರ್​ ಮೊಬೈಲ್​ ತನ್ನ ನೂತನ 2018ರ Honor 9i ಮೊಬೈಲ್​ನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಗೊಂಡ Honor 9 ಮೊಬೈಲ್​ ಸುಧಾರಿತ ಆವೃತ್ತಿ ಇದಾಗಿದ್ದು, ನಾಳೆಯಿಂದ(ಜೂ.9) ಚೀನಾದಲ್ಲಿ ಮಾರಾಟವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಎರಡು ಸಿಮ್​ ಸೌಲಭ್ಯದ Honor 9iನಲ್ಲಿ 5.84-inch FHD+ ನಾಟ್ಚ್​ ಡಿಸ್​ಪ್ಲೇ ವ್ಯವಸ್ಥೆಯಿದೆ. ಹುವಾವೆಯ EMUI 8.0ಯೊಂದಿಗೆ ಆ್ಯಂಡ್ರಾಯ್ಡ್​ ಓರಿಯೋ 8.1 ಆಪರೇಟಿಂಗ್​ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಿಸುವ ಈ ಮೊಬೈಲ್​ಗೆ ಒಕ್ಟಾಕೋರ್​ HiSilicon Kirin 659 SoC ಪ್ರೊಸೆಸರ್​ ಮತ್ತು Mali T830-MP2 GPU ಸಪೋರ್ಟ್​ ಹೊಂದಿದೆ.

ಫಿಂಗರ್​ಪ್ರಿಂಟ್​ ವ್ಯವಸ್ಥೆ, 2.0 ಪಿಕ್ಸೆಲ್​ ವ್ಯವಸ್ಥೆಯೊಂದಿಗೆ 16MP ಸೆಲ್ಫಿ ಕ್ಯಾಮೆರಾವಿದ್ದು, ಕಡಿಮೆ ಬೆಳಕಿನ ಸಂದರ್ಭದಲ್ಲೂ ಉತ್ತಮ ಗುಣಮಟ್ಟದ ಚಿತ್ರವನ್ನು ತೆಗೆಯುವಲ್ಲಿ ಈ ಕ್ಯಾಮೆರಾ ಶಕ್ತವಾಗಿದೆ. ಹಿಂಬದಿ 13MP + 2MP ಸೆನ್ಸಾರ್​ ನೊಂದಿಗೆ LED flash ಲೈಟ್​ ವ್ಯವಸ್ಥೆಯಿದೆ.

ಇನ್ನು ಸ್ಟೋರೇಜ್ ವಿಚಾರಕ್ಕೆ ಬಂದರೆ ಹಾನರ್ 9i (2018) ನಲ್ಲಿ 64ಜಿಬಿ ಮತ್ತು 128ಜಿಬಿ ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆಯಿದೆ. ಅದನ್ನು ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 256 ಜಿಬಿ ವರೆಗೆ ವಿಸ್ತರಿಸಿಕೊಳ್ಳಬಹುದು.

ಅಂತಿಮವಾಗಿ ಬೆಲೆ ವಿಚಾರಕ್ಕೆ ಬಂದರೆ ಹಾನರ್ 9i (2018) ಚೀನಾ ಮಾರುಕಟ್ಟೆಯಲ್ಲಿ 64ಜಿಬಿ ಸ್ಟೋರೇಜ್ CNY 1,399( ಭಾರತೀಯ ಮಾರುಕಟ್ಟೆಯ ಅಂದಾಜು ಬೆಲೆ Rs. 14,000) ಮತ್ತು 128 ಜಿಬಿ ಮೊಬೈಲ್ ನ ಬೆಲೆ CNY 1,699 ( ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು ಬೆಲೆ Rs. 18,000)ಯಲ್ಲಿ ದೊರಕಬಹುದು ಎಂದು ಹೇಳಲಾಗಿದೆ.

 
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...