HOME » NEWS » Tech » HONDA OFFERING DISCOUNTS OF UPTO RS 33000 ON SELECT MODELS TILL JUNE 30 IN INDIA HG

ಕಾರು ಖರೀದಿಸುವ ಆಲೋಚನೆ ಇದೆಯಾ? ಹೋಂಡಾ ವಿವಿಧ ಕಾರಿನ ಮೇಲೆ 33 ಸಾವಿರದಷ್ಟು ಡಿಸ್ಕೌಂಟ್​!

Honda Car: ಜೂನ್​ 30ರವರೆಗೆ ಈ ಆಫರ್​ ಅನ್ನು ನೀಡಿದ್ದು, ಹೋಂಡಾ ಅಮೇಜ್​, ಹೋಂಡಾ ಡಬ್ಲ್ಯು-ವಿ, ಹೋಂಡಾ ಜಾಝ್​ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

news18-kannada
Updated:June 5, 2021, 9:09 AM IST
ಕಾರು ಖರೀದಿಸುವ ಆಲೋಚನೆ ಇದೆಯಾ? ಹೋಂಡಾ ವಿವಿಧ ಕಾರಿನ ಮೇಲೆ 33 ಸಾವಿರದಷ್ಟು ಡಿಸ್ಕೌಂಟ್​!
Honda Jazz
  • Share this:
ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಹೋಂಡಾ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್​ ಅನ್ನು ಪರಿಚಯಿಸಿದೆ. ಕಡಿಮೆ ಬೆಲೆಗೆ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಅಂದಹಾಗೆಯೇ ಜೂನ್​ 30ರವರೆಗೆ ಈ ಆಫರ್​ ಅನ್ನು ನೀಡಿದ್ದು, ಹೋಂಡಾ ಅಮೇಜ್​, ಹೋಂಡಾ ಡಬ್ಲ್ಯು-ವಿ, ಹೋಂಡಾ ಜಾಝ್​ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೋಂಡಾ ಅಮೇಜ್​

ಜಪಾನ್​ ಮೂಲದ ಸಂಸ್ಥೆಯಾದ ಹೋಂಡಾ ಕಾಂಪ್ಯಾಕ್ಟ್​​ ಸೆಡಾನ್​​ ಕಾರಿನ ಮೇಲೆ ಆಫರ್​ ನೀಡಿದೆ. ಗ್ರಾಹಕರಿಗಾಗಿ 33,496 ರೂಗಳ ಬೆನಿಫಿಟ್ ನೀಡುತ್ತಿದೆ. ಹೋಂಡಾ ವಿ ಮತ್ತು ವಿಎಕ್ಸ್​​ ಮ್ಯಾನುಯೆಲ್​ ಪೆಟ್ರೊಲ್​​ ಕಾರಿನ ಮೇಲೆ ಕ್ಯಾಶ್​ ಡಿಸ್ಕೌಂಟ್​ ನೀಡುತ್ತಿದ್ದು, 5 ಸಾವಿರ ರೂ.ಗಳ ಬೆನಿಫಿಟ್​ ನೀಡುತ್ತಿದೆ. ಅದರ ಜೊತೆಗೆ ಕಾರು ಖರೀದಿದಾರರಿಗಾಗಿ 10 ಸಾವಿರ ರೂ.ಗಳ ಎಕ್ಸ್​ಚೇಂಜ್​ ಆಫರ್​ ನೀಡಿದೆ.  ಮ್ಯಾನಿಯೆಲ್​ ಪೆಟ್ರೋಲ್​ ವೇರಿಯಂಟ್​ ಅಮೇಜ್​ ಎಸ್​ ಕ್ಯಾಶ್​ ಮತ್ತು ಎಕ್ಸ್​ಚೇಂಜ್​ ಎರಡು ಆಯ್ಕೆಯಲ್ಲಿ ಸಿಗುತ್ತಿದ್ದು, 15 ಸಾವಿರದ ಬೆನಿಫಿಟ್ಸ್​​ ನೀಡುತ್ತುದೆ.

ಹೋಂಡಾ ಡಬ್ಲ್ಯುಆರ್​-ವಿ

ಈ ಕಾರಿನ ಮೇಲೆ 22,158 ರೂ.ಗಳ ಬೆನಿಫಿಟ್​ ನೀಡುತ್ತಿದೆ. ಈದು ಪೆಟ್ರೋಲ್ ಮತ್ತು ಡಿಸೇಲ್​ ವೇರಿಯಂಟ್​ ಕಾರಾಗಿದೆ. ಹೋಂಡಾ ಡಬ್ಲ್ಯುಆರ್​-ವಿ 10 ಸಾವಿರ ರೂ.ಗಳ ಕ್ಯಾಶ್​ ಡಿಸ್ಕೌಂಟ್​ ರೂಪದಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತಿದೆ. ಜೊತೆಗೆ ಅದೇ ಬೆಲೆಗೆ ಎಕ್ಸ್​ಚೇಂಜ್​ ಆಯ್ಕೆಯನ್ನು ನೀಡಿದೆ.

ಹೋಂಡಾ ಜಾಝ್

ಎಲ್ಲಾ ವೇರಿಯಂಟ್​ ಕಾರುಗಳ ಮೇಲೆ 21,908 ರೂ.ಗಳವರೆಗೆ ಬೆನಿಫಿಟ್​ ನೀಡುತ್ತಿದೆ. ಜೊತೆಗೆ ಕ್ಯಾಶಗ್ ಡಿಸ್ಕೌಂಟ್​​ ಮತ್ತು 10 ಸಾವಿರದವರೆಗೆ ಎಕ್ಸ್​ಚೇಂಜ್​ ಡಿಸ್ಕೌಂಟ್​ ನೀಡಿದೆ.ಹೋಂಡಾ ಸದ್ಯ ಎಲೆಕ್ಟ್ರಿಕ್​ ದ್ವೀಚಕ್ರ ವಾಹನದ ಮೇಲೂ ಕೆಲಸ ಮಾಡುತ್ತಿದೆ. 2024ರ ವೇಳೆಗೆ ಮಾಋಉಕಟ್ಟೆಗೆ ಪರಿಚಯಿಸುವ ಚಿಂತನೆ ಮಾಡಿದೆ. ಈ ಬಗ್ಗೆ ಕಂಪನಿ ಕೂಡ ಹೇಲಿಕೆ ನೀಡಿದ್ದು, ಎರಡು ಎಲೆಕ್ಟ್ರಿಕ್ ಸ್ಕೂಟರ್​​ ಮತ್ತು ಒಂದು ಮೊಠಾರ್​ಸೈಕಲ್​ ಉತ್ಪಾದಿಸಲಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಈಗಾಗಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಉತ್ತಮ ಕಾರ್ಯಕ್ಷಮತೆಯ ವಾಹನವಾಗಿರಲಿದೆ ಎಂದು ಹೇಳಲಾಗುತ್ತಿದೆ.
Published by: Harshith AS
First published: June 5, 2021, 9:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories