Honda Shine Celebration: ಹೋಂಡಾ ಶೈನ್​ ಸೆಲೆಬ್ರೇಷನ್​ ಎಡಿಷನ್​ ಬಿಡುಗಡೆ! ಇದು ಗಣೇಶ ಹಬ್ಬದ ಉಡುಗೊರೆ

ಬೈಕ್ ಹೊಸ ಸ್ಯಾಡಲ್ ಬ್ರೌನ್ ಸೀಟ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮಫ್ಲರ್ ಕವರ್, ಸೈಡ್ ಕವರ್‌ಗಳಲ್ಲಿ ಗೋಲ್ಡನ್ ಟಚ್‌ಗಳು ಮತ್ತು ಮುಂಭಾಗದಲ್ಲಿ ಗೋಲ್ಡನ್ ಗಾರ್ನಿಶ್ ಅನ್ನು ಸಹ ಹೊಂದಿದೆ. ಖರೀದಿಸುವ ಗ್ರಾಹಕರಿಗಾಗಿ 2 ಬಣ್ಣಗಳಲ್ಲಿ ಪರಿಚಯಿಸಿದೆ.

ಹೋಂಡಾ ಶೈನ್​ ಸೆಲೆಬ್ರೇಷನ್

ಹೋಂಡಾ ಶೈನ್​ ಸೆಲೆಬ್ರೇಷನ್

  • Share this:
    ಹೋಂಡಾ ಶೈನ್ ಬೈಕ್ (Honda Shine Bike)​​ ಪ್ರಾರಂಭದಿಂದಲೇ ಗ್ರಾಹಕರ ಮನ ಗೆದ್ದಿದೆ. ಈ ಬೈಕಿನ ವಿನ್ಯಾಸ ಮತ್ತು ಕಾರ್ಯಕ್ಷಮತೆಗೆ ಗ್ರಾಹಕರು ಫಿದಾ ಆಗಿದ್ದರು. ಕೊಟ್ಟ ಹಣಕ್ಕೆ ಮೋಸ ಇಲ್ಲ ಎಂಬಂತೆ ಗ್ರಾಹಕರು ಶೈನ್​ ಬೈಕ್​ ಅನ್ನು ಇಷ್ಟಪಟ್ಟಿದ್ದರು. ಆದರೀಗ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾವು  (Scooter India) ಶೈನ್ ಸೆಲೆಬ್ರೇಷನ್ ಆವೃತ್ತಿಯನ್ನು (Edition) ಬಿಡುಗಡೆ ಮಾಡಿದೆ. ಹೊಸ ಅವತಾರದಲ್ಲಿ ಬೈಕ್​ (Bike) ಮಾರುಕಟ್ಟೆಗೆ ಬಂದಿದೆ. ಇದರ ಬೆಲೆ ರೂ. 78,878 (ಎಕ್ಸ್ ಶೋ ರೂಂ, ನವದೆಹಲಿ)ಎಂದು ಹೇಳಲಾಗುತ್ತಿದೆ.

    ಮೊದಲೇ ಹೇಳಿದಂತೆ ಶೈನ್​ ಬೈಕ್​ ಅನ್ನು ಇಷ್ಟಪಡುವ ವರ್ಗವೊಂದಿದೆ. ಮೈಲೇಜ್​, ಕಾರ್ಯಕ್ಷಮತೆಯನ್ನು ಕಂಡು ಶೈನ್​ ಬೈಕ್​ ಅನ್ನು ಖರೀದಿಸಿದವರು ಅದೆಷ್ಟೋ ಮಂದಿ ಇದ್ದಾರೆ. ಇದೀಗ ಹೊಸ ಶೈನ್​ ಸೆಲೆಬ್ರೇಶನ್ ಎಡಿಷನ್ ತನ್ನ ಗೋಲ್ಡನ್ ಥೀಮ್‌ನೊಂದಿಗೆ ಹೊಸ ನೋಟವನ್ನು ತಂದಿದೆ. ಅದು ಗೋಲ್ಡನ್ ಸ್ಟ್ರೈಪ್ಸ್, ಗೋಲ್ಡನ್ ವಿಂಗ್ ಮಾರ್ಕ್ ಲೋಗೋ, ಟ್ಯಾಂಕ್ ಟಾಪ್‌ನಲ್ಲಿ ಸೆಲೆಬ್ರೇಶನ್ ಎಡಿಷನ್ ಲೋಗೋ ಇತ್ಯಾದಿಗಳನ್ನು ಒಳಗೊಂಡಿದೆ.

    ಬೈಕ್ ಹೊಸ ಸ್ಯಾಡಲ್ ಬ್ರೌನ್ ಸೀಟ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮಫ್ಲರ್ ಕವರ್, ಸೈಡ್ ಕವರ್‌ಗಳಲ್ಲಿ ಗೋಲ್ಡನ್ ಟಚ್‌ಗಳು ಮತ್ತು ಮುಂಭಾಗದಲ್ಲಿ ಗೋಲ್ಡನ್ ಗಾರ್ನಿಶ್ ಅನ್ನು ಸಹ ಹೊಂದಿದೆ. ಖರೀದಿಸುವ ಗ್ರಾಹಕರಿಗಾಗಿ 2 ಬಣ್ಣಗಳಲ್ಲಿ ಪರಿಚಯಿಸಿದೆ. ಮ್ಯಾಟ್ ಸ್ಯಾಂಗ್ರಿಯಾ ರೆಡ್ ಮೆಟಾಲಿಕ್ ಮತ್ತು ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಬಣ್ಣದಲ್ಲಿ ಸಿಗುತ್ತದೆ. ಹೊಸ ಬೈಕ್​ನ ಮುಂಭಾಗದ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ರೂಪಾಂತರಗಳಲ್ಲಿ ಲಭ್ಯವಿದೆ.



    ಹೋಂಡಾ ಶೈನ್ ಪ್ರಸ್ತುತ ದೇಶದ ಮೂರನೇ ಅತಿದೊಡ್ಡ ಮಾರಾಟದ 2-ಚಕ್ರ ವಾಹನವಾಗಿದ್ದು, ಪ್ರತಿ ತಿಂಗಳು ಒಂದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಬೈಕ್​ಗೂ ಬೇಡಿಕೆ ಹೆಚ್ಚಾಗಲಿದೆ.

    ಇದನ್ನೂ ಓದಿ: Google Play Store: ಸಾಲ ನೀಡುವ ಆ್ಯಪ್​ಗಳಿಗೆ ಕೋಳ ಹಾಕಿದ ಗೂಗಲ್​! ಪ್ಲೇ ಸ್ಟೋರ್​ನಿಂದ 2 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್​ಗಳು ಡಿಲೀಟ್​

    ಜೂನ್, 2022 ರಲ್ಲಿ, ಹೋಂಡಾ ಶೈನ್ ಮತ್ತು SP125 ನ ಬೃಹತ್ 1,25,947 ಯುನಿಟ್‌ಗಳನ್ನು ಮಾರಾಟ ಮಾಡಿತು ಮತ್ತು ವರ್ಷದಿಂದ ವರ್ಷಕ್ಕೆ 75 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ.

    ಹೋಂಡಾ ಶೈನ್​ ಸೆಲೆಬ್ರೇಷನ್ ಬೈಕ್​ನ ವಿಶೇಷತೆ ಬಗ್ಗೆ ಗಮನ ಹರಿಸಿದರೆ, ಇದರ ಶಕ್ತಿಯು 123.94 cc ಎಂಜಿನ್‌ನಿಂದ ಬರುತ್ತದೆ, ಅದು 7500 RPM ನಲ್ಲಿ 10.59 HP ಮತ್ತು 6000 RPM ನಲ್ಲಿ 11 Nm ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸುತ್ತದೆ. ಬೋರ್ ಮತ್ತು ಸ್ಟ್ರೋಕ್ ಕ್ರಮವಾಗಿ 50 ಎಂಎಂ ಮತ್ತು 63.1 ಎಂಎಂ ಅಳತೆ, ಕೇವಲ ಲಾಂಚ್ ಮಾಡಿದ ಬಜಾಜ್ CT125X ನಂತಹ ಲಾಂಗ್ ಸ್ಟ್ರೋಕ್ ಕಾನ್ಫಿಗರೇಶನ್ ಹೊಂದಿದೆ.



    ಇದನ್ನೂ ಓದಿ: BoAt ಪರಿಚಯಿಸಿದೆ Xtend Talk ಸ್ಮಾರ್ಟ್​​ವಾಚ್; ಇದರ ವಿಶೇಷತೆ ಏನು ಗೊತ್ತಾ?

    ಟೆಲಿಸ್ಕೋಪಿಕ್ ಶಾಕ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಹೈಡ್ರಾಲಿಕ್ ಘಟಕಗಳೊಂದಿಗೆ ಡೈಮಂಡ್ ಫ್ರೇಮ್‌ನಲ್ಲಿ ಎಂಜಿನ್ ಒತ್ತಡದ ಬಾರದಂತೆ ನೋಡಿಕೊಳ್ಳುತ್ತದೆ.

    ಇನ್ನು  ವೀಲ್‌ಬೇಸ್ 1285 ಎಂಎಂ ಮತ್ತು ಸೀಟ್ ಎತ್ತರ 791 ಎಂಎಂ. ಗ್ರೌಂಡ್ ಕ್ಲಿಯರೆನ್ಸ್ 162 ಎಂಎಂ ಮತ್ತು ಕರ್ಬ್ ತೂಕ 114 ಕೆಜಿ ಇದ್ದು, ಟೈರ್ ಗಾತ್ರ 80/100-18 ಇರಲಿದೆ.
    Published by:Harshith AS
    First published: