HOME » NEWS » Tech » HONDA MOTORCYCLE AND SCOOTER INDIA DRIVES LAUNCHES CB500X ADVENTURE BIKE HG

ಹೋಂಡಾ ಪರಿಚಯಿಸಿದೆ CB500X​ ಅಡ್ವೆಂಚರ್​ ಬೈಕ್​; ಬೆಲೆ ಎಷ್ಟು ಗೊತ್ತಾ?

Honda CB500X: ಹೋಂಡಾ CB500X ಬೈಕ್​  471ಸಿಸಿ ಇದ್ದು,  ಸಂಪೂರ್ಣ ಎಲ್​​ಇಡಿ ಲೈಟ್​ ಅಳವಡಿಸಲಾಗಿದೆ. 181 ಎಂಎಂ ಗ್ರೌಂಡ್​ ಕ್ಲೀಯರೆನ್ಸ್​ ನೀಡಲಾಗಿದೆ.

news18-kannada
Updated:March 16, 2021, 10:27 AM IST
ಹೋಂಡಾ ಪರಿಚಯಿಸಿದೆ CB500X​ ಅಡ್ವೆಂಚರ್​ ಬೈಕ್​; ಬೆಲೆ ಎಷ್ಟು ಗೊತ್ತಾ?
Honda CB500X
  • Share this:
ಹೋಂಡಾ ಸಂಸ್ಥೆ CB500X​ ಹೆಸರಿನ ಅಡ್ವೆಂಚರ್​ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್​ ಫೀಚರ್​ಗೆ ತಕ್ಕಂತೆ ಬೆಲೆಯನ್ನು ಹೊಂದಿದೆ. ಗ್ರಾಹಕರಿಗಾಗಿ ಎರಡು ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸಿದೆ.

ಹೋಂಡಾ ಎಲ್ಲಾ ತರಹದ ಬೈಕ್​ಗಳನ್ನು ಉತ್ಪಾದಿಸುತ್ತಾ ಬಂದಿದೆ. ಅದರ ಜೊತೆಗೆ ಅಡ್ವೆಂಚರ್​ ಬೈಕ್​ಗಳನ್ನು ತಯಾರಿಸುತ್ತಿದೆ. ನೂತನ CB500X ಬೈಕ್​ ಅಫ್​ ರೋಡ್​ಗೆ ಹೇಳಿ ಮಾಡಿಸಿದಂತಿದ್ದು, ಸೂಪರ್​​ ಲುಕ್​ನಲ್ಲಿ ಪರಿಚಯಿಸಿದೆ.

ಹೋಂಡಾ CB500X ಬೈಕ್​  471ಸಿಸಿ ಇದ್ದು,  ಸಂಪೂರ್ಣ ಎಲ್​​ಇಡಿ ಲೈಟ್​ ಅಳವಡಿಸಲಾಗಿದೆ. 181 ಎಂಎಂ ಗ್ರೌಂಡ್​ ಕ್ಲೀಯರೆನ್ಸ್​ ನೀಡಲಾಗಿದೆ. ಜೊತೆಗೆ ಎಬಿಎಸ್​ ಬ್ರೇಕಿಂಗ್​ ಸಿಸ್ಟಂ ನೀಡಲಾಗಿದೆ. ಲಾಂಗ್​ ರೈಡ್​ಗೆ ಹೇಳಿಮಾಡಿಸಿದಂತಿರುವ ಈ ಬೈಕ್​ ಡಾಂಬರ್​ ರಸ್ತೆ ಮತ್ತು ಎತ್ತರದ ಗುಡ್ಡಗಾಡಿನಲ್ಲಿ ಚಲಿಸಲು ಯೋಗ್ಯವಾಗುವಂತೆ ಸಿದ್ಧಪಡಿಸಲಾಗಿದೆ. ಅದಕ್ಕಾಗಿ ಗ್ರೌಂಡ್​ ಕ್ಲೀಯರೆನ್ಸ್​ ಹೆಚ್ಚಿಸಲಾಗಿದೆ.

ಹೋಂಡಾ CB500X ಬೈಕಿನ ಬೆಲೆ 6.87 ಲಕ್ಷ ರೂ ಆಗಿದೆ. ಆನ್​ರೋಡ್​ಗೆ ಬೆಲೆ 8 ಲಕ್ಷ ರೂ ತಲುಪಲಿದೆ. ಬೈಕ್ ಪ್ರಿಯರಿಗೆ ​ CB500X ಬೈಕ್​ ಇಷ್ಟವಾಗಿದೆ. ಆದರೆ ಬೆಲೆ ವಿಚಾರದಲ್ಲಿ ಕೊಂಚ ಅಸಮಾಧಾನ ಹೊರಹಾಕಿದ್ದಾರೆ.
Youtube Video

CB500X ಬೈಕಿನ ಬೆಲೆಗೆ ಬೆನೆಲ್ಲಿ ಟಿಆರ್​ಕೆ 502 ಕೊಂಡುಕೊಳ್ಳಬಹುದು ಎಂದು ಮಾತನಾಡುತ್ತಿದ್ದಾರೆ. ಇನ್ನು ಕೆಲವರು 7 ಸಾವಿರ ರೂ ಹೆಚ್ಚು ನೀಡಿದರೆ ಕವಾಸಕಿ versys 650 ಖರೀದಿಸಬಹುದಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೋಂಡಾದ CB500X ಬೈಕ್​ ಮಾರುಕಟ್ಟೆ ಪ್ರವೇಶಿಸಿದೆ. ಮೇಲ್ನೋಟಕ್ಕೆ ಹೋಂಡಾ ಕಂಪೆನಿ ಸರ್ವಿಸ್ ಮತ್ತು​​ ಸೇವೆಗಳನ್ನು ಗಮನಿಸಿದಾಗ ಉಳಿದೆಲ್ಲ ಬೈಕ್​ಗಳಿಂತ ಕಡಿಮೆ ಇರಲಿದೆ. ಆ ನಿಟ್ಟಿನಲ್ಲಿ ಬೈಕ್​ ಖರೀದಿಸಲು ಯೋಗ್ಯವಾಗಿದೆ.
Published by: Harshith AS
First published: March 16, 2021, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories