HOME » NEWS » Tech » HONDA GREAT OFFER ON HONDA ACTIVA 6G SCOOTER FIVE THOUSAND CASHBACK AND 1OO PERCENT FINANCE STG HG

ಹೋಂಡಾ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಆಫರ್: 5 ಸಾವಿರ ಕ್ಯಾಶ್‌ಬ್ಯಾಕ್, 100% ಹಣಕಾಸು ಸೌಲಭ್ಯ

ಈ ಆಫರ್ ನ ಪ್ರಕಾರ, ಕಂಪನಿಯು ಹೋಂಡಾ ಆ್ಯಕ್ಟಿವಾ 6G ಯ ಮೇಲೆ ಶೇ.100ರಷ್ಟು ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ. ಹೋಂಡಾ ಅನುಮೋದಿತ ಬ್ಯಾಂಕುಗಳಿಂದ ಸ್ಕೂಟರ್ ಖರೀದಿಸಿದಾಗ ಮಾತ್ರ ಈ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು.

news18-kannada
Updated:February 25, 2021, 4:19 PM IST
ಹೋಂಡಾ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಆಫರ್: 5 ಸಾವಿರ ಕ್ಯಾಶ್‌ಬ್ಯಾಕ್, 100% ಹಣಕಾಸು ಸೌಲಭ್ಯ
ಹೋಂಡಾ ಆ್ಯಕ್ಟೀವಾ ಸ್ಕೂಟರ್
  • Share this:
ಹೋಂಡಾ ಆ್ಯಕ್ಟಿವಾ ಭಾರತದ ರಸ್ತೆಗೆ ಹೊಂದಿಕೊಳ್ಳಬಲ್ಲ ಅತ್ಯಂತ ಬೇಡಿಕೆಯ ಸ್ಕೂಟರ್ ಆಗಿದೆ. ಇದು ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್. 2000ರಲ್ಲಿ ಪ್ರಾರಂಭವಾದಾಗಿನಿಂದ ಒಟ್ಟು 2.5 ಕೋಟಿಗೂ ಹೆಚ್ಚು ಸ್ಕೂಟರ್ ಗಳನ್ನು ಕಂಪನಿ ಮಾರಾಟ ಮಾಡಿದೆ. ಇದೀಗ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಉದ್ದೇಶದಿಂದ ಹೋಂಡಾ ಕಂಪನಿಯು ತನ್ನ ಹೊಸ ಹೋಂಡಾ ಆ್ಯಕ್ಟಿವಾ 6G ಸ್ಕೂಟರ್ ಮೇಲೆ ಭರ್ಜರಿ ಆಫರ್ ಘೋಷಿಸಿದೆ.

ಈ ಆಫರ್ ನ ಪ್ರಕಾರ, ಕಂಪನಿಯು ಹೋಂಡಾ ಆ್ಯಕ್ಟಿವಾ 6G ಯ ಮೇಲೆ ಶೇ.100ರಷ್ಟು ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ. ಹೋಂಡಾ ಅನುಮೋದಿತ ಬ್ಯಾಂಕುಗಳಿಂದ ಸ್ಕೂಟರ್ ಖರೀದಿಸಿದಾಗ ಮಾತ್ರ ಈ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು. ಇದಲ್ಲದೆ ಪ್ರತಿ ಸ್ಕೂಟರ್ ಖರೀದಿಯ ಮೇಲೆ 5 ಸಾವಿರ ರೂ. ಕ್ಯಾಶ್‌ಬ್ಯಾಕ್ ಸಹ ನೀಡುತ್ತಿದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ಮೋಡ್‌ನಲ್ಲಿ ಪಾವತಿ ಮಾಡುವ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.

ಹೋಂಡಾ ಆ್ಯಕ್ಟಿವಾ 6G ಸ್ಕೂಟರ್ STD ಮತ್ತು DLX ಎಂಬ ಎರಡು ರೂಪಾಂತರಗಳಲ್ಲಿ ಬರುತ್ತದೆ. ಹೋಂಡಾ ಆ್ಯಕ್ಟಿವಾ 6G STD ರೂಪಾಂತರವು 66,799 ರೂ.ಗಳಿಗೆ ಲಭ್ಯವಿದ್ದರೆ, ಅದರ DLX ರೂಪಾಂತರವು 68,544 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇವು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿವೆ. ಕಂಪನಿಯು ಗ್ರಾಹಕರಿಗೆ 2,499 ರೂ.ಗಳ ಕಡಿಮೆ ಡೌನ್ ಪೇಮೆಂಟ್ ಆಯ್ಕೆಯನ್ನು ಕೂಡ ನೀಡುತ್ತಿದೆ. ಇದರ ಬಡ್ಡಿದರವನ್ನು ಶೇ.6.5 ರಷ್ಟು ನಿಗದಿಗೊಳಿಸಲಾಗಿದೆ.

ಅದೇ ರೀತಿ ಹೋಂಡಾ ಶೈನ್‌ನಲ್ಲೂ ಇದೇ ರೀತಿಯ ಆಫರ್ ನೀಡಲಾಗುತ್ತಿದೆ. ಹೋಂಡಾ ಶೈನ್ 125 ಸಿಸಿ ಕಂಪನಿಯ ಅತಿಹೆಚ್ಚು ಮಾರಾಟವಾದ ಬೈಕ್ ಆಗಿದೆ. ಈ ಆಫರ್ ಪಡೆಯಲು ಕೊನೆಯ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ. ಹೋಂಡಾ ಶೈನ್ ಬೆಲೆ 70,478 ರೂ.ಗಳಿಂದ ಪ್ರಾರಂಭವಾಗುತ್ತದೆ.

ಹೋಂಡಾ ಆ್ಯಕ್ಟಿವಾ 6G ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ಇದರಲ್ಲಿ ನೀವು ಸಾಕಷ್ಟು ಹೊಸತನವನ್ನು ಕಾಣಬಹುದಾಗಿದೆ. ಈ ಸ್ಕೂಟರ್ 109.51 ಸಿಸಿ ಶಕ್ತಿಯೊಂದಿಗೆ ಬಿಎಸ್ 6 ಎಂಜಿನ್ ಹೊಂದಿದೆ. ಇದು 7.68 bhp ಶಕ್ತಿ ಮತ್ತು 8.79Nm ಟಾರ್ಕ್ ಉತ್ಪಾದಿಸುತ್ತದೆ. ಹೋಂಡಾ ಆ್ಯಕ್ಟಿವಾ 6G ತೂಕ 107 ಕೆಜಿ ಮತ್ತು 5.3 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ಇದು ಡ್ರಮ್ ಬ್ರೇಕ್‌ಗಳನ್ನು ನೀಡುತ್ತದೆ ಮತ್ತು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬರುತ್ತದೆ. ಸ್ವಯಂಚಾಲಿತದ ಹೊರತಾಗಿಯೂ ಸ್ಕೂಟರ್ ಎಲ್ಇಡಿ ಹೆಡ್ ಲ್ಯಾಂಪುಗಳು, ಎಸಿಜಿ ಸೈಲೆಂಟ್ ಸ್ಟಾರ್ಟರ್ ಮೋಟಾರ್, ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹೊಸ ಬಾಹ್ಯ ಇಂಧನ ಕ್ಯಾಪ್, ಹೊಸ ಇಎಸ್ಪಿ ತಂತ್ರಜ್ಞಾನ ಮತ್ತು ಡ್ಯುಯಲ್ ಫಂಕ್ಷನ್ ಸ್ವಿಚ್ ಹಾಗೂ ಸುರಕ್ಷತೆಗಾಗಿ ಸೈಡ್-ಸ್ಟ್ಯಾಂಡ್ ಸೂಚಕವನ್ನು ಹೊಂದಿದೆ. ಹೋಂಡಾ ಆ್ಯಕ್ಟಿವಾ 6G 2 ಒಟ್ಟು 8 ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
Published by: Harshith AS
First published: February 25, 2021, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories