ಹೋಂಡಾ ಸಿಟಿ ಹ್ಯಾಚ್ಬ್ಯಾಕ್ ಕಾರನ್ನು ಉತ್ಪಾದಿಸಿ ಮಾರುಕಟ್ಟೆಗೆ ತರುವುದಾಗಿ ಹೇಳಿತ್ತು. ಆದರೆ ನೂತನ ಕಾರು ಯಾವಾಗ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂಬ ಕುತೂಹಲತೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೀಗ ಕಾರು ಪ್ರಿಯರ ಕುತೂಹಲತೆಗೆ ತಕ್ಕಂತೆ ನೂತನ ಕಾರು ಥೈಲ್ಯಾಂಡ್ನಲ್ಲಿ ಮಾರುಟಕಟ್ಟೆ ಪ್ರವೇಶಿಸಿದೆ.
ಹೋಂಡಾ ಸಿಟಿ ಹ್ಯಾಚ್ಬ್ಯಾಕ್ ಕಾರನ್ನು ಮೂರು ವೇರಿಯಂಟ್ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಎಸ್+, ಎಸ್ವಿ ಮತ್ತು ಆರ್ಎಸ್ ಹೆಸರಿನಲ್ಲಿ ಗ್ರಾಹಕರ ಮುಂದಿರಿಸಿದೆ. ನೂತನ ಕಾರು ಹಲವಾರು ಫೀಚರ್ಗಳನ್ನ ಒಳಗೊಂಡಿದ್ದು, ಸದ್ಯದಲ್ಲೇ ಭಾರತದ ಮಾರುಕಟ್ಟೆಗೂ ಬರಲಿದೆ.
ಮೇಲ್ನೋಟಕ್ಕೆ ಹೋಂಡಾ ಸಿಟಿ ಹ್ಯಾಚ್ಬ್ಯಾಕ್ ಕಾರು ಹೋಂಡಾ ಸಿಟಿ ಸೆಡಾನ್ ಕಾರಿನ ಹೋಲಿಕೆ ಕಂಡರು. ಸ್ಪೋರ್ಟಿ ರಿಯರ್ ಬಂಪರ್, ಟೈಲ್ ಲ್ಯಾಂಪ್ ಹೊಂದಿದೆ. ಕಾರಿನ ಒಳಭಾಗದಲ್ಲಿ 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆ್ಯಂಡ್ರಾಯ್ಡ್ ಅಟೋ ಮತ್ತು ಆ್ಯಪಲ್ ಕಾರ್ಪ್ಲೇ ಸಪೋರ್ಟ್ ನೀಡಲಾಗಿದೆ.
ಸುರಕ್ಷತೆಗಾಗಿ 6 ಏರ್ಬ್ಯಾಗ್ ನೀಡಲಾಗಿದೆ. ಅಟೋ ಡೋರ್ಲಾಕ್, ತುರ್ತು ಸಿಗ್ನಲ್ ಸಿಸ್ಟಂ, ಬ್ಯಾಲನ್ಸ್ಕಂಟ್ರೋಲ್ ಸಿಸ್ಟಂ ಅಳವಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ