Electric​ ಅವತಾರದಲ್ಲಿ Hero Splendor ಬೈಕ್​ ನೋಡಿದ್ದೀರಾ? 1 ಬಾರಿ ಚಾರ್ಜ್​ ಮಾಡಿದರೆ 180 Km ಓಡುತ್ತಂತೆ

Hero Splendor Bike: ಇದು ಡಿಜಿಟಲ್ ರೆಂಡರ್ ಆಗಿದ್ದು, ಇದರಲ್ಲಿ ಪೆಟ್ರೋಲ್ ಚಾಲಿತ ಸ್ಪ್ಲೆಂಡರ್‌ನಿಂದ ಹೆಚ್ಚಿನ ಭಾಗಗಳನ್ನು ವಿನಯ್ ತೆಗೆದುಕೊಂಡಿದ್ದಾರೆ ಮತ್ತು ಎಲೆಕ್ಟ್ರಿಕ್ ಅವತಾರ್‌ಗಾಗಿ ಕೆಲವೇ ಬದಲಾವಣೆಗಳನ್ನು ಮಾಡಿದ್ದಾರೆ.

ಹೀರೋ ಸ್ಪ್ಲೆಂಡರ್

ಹೀರೋ ಸ್ಪ್ಲೆಂಡರ್

  • Share this:
    ದಿನಗಳು ಕಳೆದಂತೆಯೇ ಎಲೆಕ್ಟ್ರಿಕ್ ವಾಹನಗಳ (Electric Vehicle) ಹವಾ ಜೋರಾಗುತ್ತಿದೆ. ರಸ್ತೆಯಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಸದ್ಯ ನಾನಾ ಕಂಪನಿಗಳು ಹೊಸ ಎಲೆಕ್ಟ್ರಿಕ್​ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ (Market) ಪರಿಚಯಿಸುತ್ತಿವೆ. ವಿಶೇಷವಾಗಿ ದ್ವಿಚಕ್ರದ (Two Wheeler) ಎಲೆಕ್ಟ್ರಿಕ್ ವಾಹನಗಳಿಗೆ ಕಾರುಗಳಿಗಿಂತ (Car) ವೇಗವಾಗಿ ಆದ್ಯತೆ ನೀಡಲಾಗುತ್ತಿದೆ. ಅದರಂತೆಯೇ ವಿನಯ್ ರಾಜ್ ಸೇಮಶೇಖರ್ ಇತ್ತೀಚೆಗೆ ಹೀರೋ ಸ್ಪ್ಲೆಂಡರ್‌ನ ಎಲೆಕ್ಟ್ರಿಕ್ (Hero Splender Electric) ಅವತಾರವನ್ನು ಆನ್‌ಲೈನ್‌ನಲ್ಲಿ ಪರಿಚಯಿಸಿದ್ದಾರೆ. ಇದು ಭಾರತೀಯರಿಗೆ ಹೊಸ ಉಡುಗೊರೆ ನೀಡಿದಂತಾಗಿದೆ. ಫೋಟೋದಲ್ಲಿ ಕಾಣುವ ಬೈಕ್ ಹೀರೋ ಮೊಟೊಕಾರ್ಪ್ (Hero MotoCorp) ನಿಂದಲೇ ವಿನ್ಯಾಸಗೊಂಡಿರುವಂತಿದೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ಸಮಯದಲ್ಲಿ ಹೀರೋ ನಿಜವಾಗಿಯೂ ಸ್ಪ್ಲೆಂಡರ್ ಅನ್ನು ಎಲೆಕ್ಟ್ರಿಕ್ ಮಾಡಿದರೆ, ವಾತಾವರಣವು ಬದಲಾಗಲಿದೆ.

    ವಿನಯ್ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ

    ಲಿಂಕ್ಡ್‌ಇನ್‌ನಲ್ಲಿ ಎಲೆಕ್ಟ್ರಿಕ್ ಹೀರೋ ಸ್ಪ್ಲೆಂಡರ್‌ನ ಫೋಟೋವನ್ನು ಹಂಚಿಕೊಂಡ ವಿನಯ್, "ಹೀರೋ ಸ್ಪ್ಲೆಂಡರ್ ಭಾರತೀಯ ಗ್ರಾಹಕರಿಗೆ ಅಗತ್ಯವಾಗಿದೆ. ಅದರ ಕಾರ್ಯಕ್ಷಮತೆ ಅದ್ಭುತವಾಗಿದೆ ಮತ್ತು ಇದಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ. ಅದರ ವಿನ್ಯಾಸದಲ್ಲಿಯೂ ಯಾವುದೇ ದೋಷವನ್ನು ಕಾಣುವುದಿಲ್ಲ. ಅದರ ಪ್ರತಿಯೊಂದು ಭಾಗವೂ ಅಗತ್ಯ ಮತ್ತು ಪರಿಣಾಮಕಾರಿ ಮತ್ತು ಈ ಬೈಕ್‌ನಲ್ಲಿ ನೀವು ಸಾಕಷ್ಟು ಸ್ಥಳಾವಕಾಶವನ್ನು ಪಡೆಯುತ್ತೀರಿ.

    ಹೆಚ್ಚಿನ ಭಾಗಗಳನ್ನು ಹಳೆಯ ಬೈಕುಗಳಿಂದ ತೆಗೆದುಕೊಳ್ಳಲಾಗಿದೆ

    ಇದು ಡಿಜಿಟಲ್ ರೆಂಡರ್ ಆಗಿದ್ದು, ಇದರಲ್ಲಿ ಪೆಟ್ರೋಲ್ ಚಾಲಿತ ಸ್ಪ್ಲೆಂಡರ್‌ನಿಂದ ಹೆಚ್ಚಿನ ಭಾಗಗಳನ್ನು ವಿನಯ್ ತೆಗೆದುಕೊಂಡಿದ್ದಾರೆ ಮತ್ತು ಎಲೆಕ್ಟ್ರಿಕ್ ಅವತಾರ್‌ಗಾಗಿ ಕೆಲವೇ ಬದಲಾವಣೆಗಳನ್ನು ಮಾಡಿದ್ದಾರೆ. ಬೈಕ್‌ನ ಎಂಜಿನ್ ಅನ್ನು ಕಪ್ಪು ಬಣ್ಣದ ಬ್ಯಾಟರಿ ಪ್ಯಾಕ್‌ನೊಂದಿಗೆ ಬದಲಾಯಿಸಲಾಗಿದೆ ಮತ್ತು ಅದರ ಎಂಜಿನ್‌ನ ಹೊರತಾಗಿ ಗೇರ್‌ಬಾಕ್ಸ್ ಅನ್ನು ತೆಗೆದುಹಾಕಲಾಗಿದೆ. ಎಲೆಕ್ಟ್ರಿಕ್ ಆಗಿ ಕಾಣುವಂತೆ ಮಾಡಲು, ಬೈಕ್‌ನ ಎಲ್ಲಾ ಸ್ಥಳಗಳಲ್ಲಿ ನೀಲಿ ಪಟ್ಟಿಯನ್ನು ನೀಡಲಾಗಿದ್ದು ಅದು ನೋಡಲು ತುಂಬಾ ಆಕರ್ಷಕವಾಗಿದೆ.



    ಇದನ್ನೂ ಓದಿ: Intel ಪರಿಚಯಿಸಿದೆ ಜಗತ್ತಿನ ಅತಿ ವೇಗದ ಡೆಸ್ಕ್‌ಟಾಪ್ ಪ್ರೊಸೆಸರ್: ಬೆಲೆ ಎಷ್ಟು ಗೊತ್ತೇ..?

    ಹೇಗಿದೆ ಬೈಕ್​?

    ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್  ರೆಂಡರ್ ಬೈಕ್‌ನ ಹಿಂದಿನ ಚಕ್ರವನ್ನು ಪವರ್ ಮಾಡುವ 9kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ಬೈಕ್‌ನೊಂದಿಗೆ, 2 kWh ಬ್ಯಾಟರಿಯನ್ನು ನೀಡಲಾಗಿದೆ. ಈ ಬೈಕ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಅನ್ನು ನೀಡಲಾಗಿದೆ. 6 kWh ಬ್ಯಾಟರಿಯೊಂದಿಗೆ ಬೈಕ್ 180 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಅದನ್ನು 4 kWh ಬ್ಯಾಟರಿಯೊಂದಿಗೆ 120 ಕಿಮೀಗೆ ಇಳಿಸಲಾಗಿದೆ.

    ಇದನ್ನೂ ಓದಿ: BSNL ಹಾಗೂ BBNL ವಿಲೀನ ಗ್ರಾಮೀಣ ಭಾರತಕ್ಕೆ ವರವಾಗಬಹುದೇ?

    ಸದ್ಯ ಮಾರುಕಟ್ಟೆಗೆ ವಿವಿಧ ಕಂಪನಿಗಳ ಎಲೆಕ್ಟ್ರಿಕ್  ಬೈಕ್​ಗಳು ಧಾವಿಸುತ್ತಿವೆ. ಒಂದೊಂದು ಕಂಪನಿಯು ಹೊಸ ವಿನ್ಯಾಸದಲ್ಲಿ ಮತ್ತು ಹಲವು ಫೀಚರ್ಸ್​ ಅನ್ನು ಒಳಗೊಂಡು ಪರಿಚಯಿಸುತ್ತಿದೆ. ಭಾರತದಲ್ಲಂತೂ ಹೊಸ ಎಲೆಕ್ಟ್ರಿಕ್  ಕಂಪನಿಗಳು ತಲೆ ಎತ್ತಿವೆ. ಈಗಾಗಲೇ ಕೆಲವು ಕಂಪನಿಗಳು ನೂತನ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಅದರಂತೆ ಇದೀಗ ಹೀರೋ ಕಂಪನಿ ಹೊಸ ಸ್ಪ್ಲೆಂಡರ್ ಎಲೆಕ್ಟ್ರಿಕ್​ ಬೈಕ್​ನ ಫೋಟೋ ವೈರಲ್​ ಆಗಿದೆ. ನೂತನ ಬೈಕ್ ಸದ್ಯದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಮಾರುಕಟ್ಟೆಗೆ ಬಂದರಂತೂ ಬೇಡಿಕೆ ಬೈಕ್​ ಆಗಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.
    Published by:Harshith AS
    First published: