Hero Splendor Bike: ಹೀರೋ ಸ್ಪ್ಲೆಂಡರ್ ಬೈಕ್​​​ನ ಈಗ ಪೆಟ್ರೋಲ್ ಇಲ್ಲದೆಯೇ ಚಲಾಯಿಸಿಬಹುದು.. ಹೇಗೆ ಗೊತ್ತಾ?

Hero Splendor can now run on battery : ಕಂಪನಿಯು ತನ್ನ ಕಿಟ್‌ ಗೆ 3 ವರ್ಷಗಳ ಗ್ಯಾರೆಂಟಿಯನ್ನು ನೀಡುತ್ತಿದೆ.  GoGoA1 ಇ ಒಂದು ಬಾರಿ ಚಾರ್ಜ್ ಮಾಡಿದರೆ 151 ಕಿಮೀ ವರೆಗೆ ಚಲಿಸಬಲ್ಲದು.

ಹೀರೋ ಸ್ಪ್ಲೆಂಡರ್ ಬೈಕ್

ಹೀರೋ ಸ್ಪ್ಲೆಂಡರ್ ಬೈಕ್

  • Share this:
ಕೊರೊನಾ-ಲಾಕ್​ಡೌನ್​ನಿಂದ ಹೈರಾಣಾಗಿದ್ದ ಜನಕ್ಕೆ ಪೆಟ್ರೋಲ್​-ಡಿಸೇಲ್​ ಬೆಲೆ ಏರಿಕೆ (petrol diesel price hike ) ನಿಜಕ್ಕೂ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. 1 ಲೀಟರ್​​ ಪೆಟ್ರೋಲ್​ ಬೆಲೆ 100 ರೂಪಾಯಿ ದಾಟಿರುವುದು ಮಧ್ಯಮ ವರ್ಗ ಜನಕ್ಕೆ ನುಂಗಲಾರದ ತುತ್ತಾಗಿದೆ. ತೈಲ ಬೆಲೆ ಏರಿಕೆ ವಾಹನ ಸವಾರರ ಜೇಬನ್ನು ಸುಡುತ್ತಿದೆ. ಇಂಥ ಸಂಕಷ್ಟ ಕಾಲದಲ್ಲಿ ಅಧಿಕ ಮೈಲೇಜ್​ ನೀಡುವ ವಾಹನಗಳತ್ತ ಜನ ಮುಖ ಮಾಡಿದ್ದಾರೆ. ಭಾರತದ ಅತ್ಯಧಿಕ ಮೈಲೇಜ್ ಬೈಕ್‌ಗಳ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಹೀರೋ ಸ್ಪ್ಲೆಂಡರ್ ಬೈಕ್​​ ಹೆಸರನ್ನು ಉಲ್ಲೇಖಿಸದೆ ಇರಲಾಗದು. ಈ ಬೈಕಿನ ಬೆಲೆ ಮತ್ತು ನಿರ್ವಹಣಾ ವೆಚ್ಚವು ತುಂಬಾ ಕಡಿಮೆಯಾಗಿದ್ದು,  ಜನಸಾಮಾನ್ಯನ ಬಜೆಟ್‌ನಲ್ಲಿ ಆರಾಮವಾಗಿ ಹೊಂದಿಕೊಳ್ಳುತ್ತದೆ. ಆದರೆ ಕಳೆದ ಕೆಲವು ವಾರಗಳಿಂದ ಪೆಟ್ರೋಲ್ ಬೆಲೆಯು ತುಂಬಾ ಹೆಚ್ಚಾಗಿದೆ. ಇಂಥಾ ಸಮಯದಲ್ಲಿ ಬೈಕನ್ನು ಹೊರತೆಗೆಯುವ ಮೊದಲು ಸಾಮಾನ್ಯ ಜನ ಹಲವಾರು ಬಾರಿ ಯೋಚಿಸಬೇಕು. ಅಂತವರಿಗಾಗಿಯೇ ಗುಡ್​​ ನ್ಯೂಸ್​​ವೊಂದು ಇಲ್ಲಿದೆ.  

 ಎಲೆಕ್ಟ್ರಿಕ್ ಕಿಟ್ ಬಿಡುಗಡೆ

ಹೀರೋ ಸ್ಪ್ಲೆಂಡರ್ ಬೈಕಿನ ಇವಿ ಕನ್ವರ್ಷನ್ ಕಿಟ್ (EV Conversion Kit )ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೀರೋ ಸ್ಪ್ಲೆಂಡರ್ ಖರೀದಿಸಲು ಮತ್ತು ಪೆಟ್ರೋಲ್ ನಲ್ಲಿ ಉಳಿಸಲು ಬಯಸುವವರಿಗೆ ಈಗ ತಮ್ಮ ನೆಚ್ಚಿನ ಬೈಕ್ ನಲ್ಲಿ ಎಲೆಕ್ಟ್ರಿಕ್ ಕಿಟ್ ಅಳವಡಿಸಿ ಹಣ ಉಳಿಸಬಹುದು. ಈ ವಿದ್ಯುತ್ ಕಿಟ್‌ನ ಬಳಕೆಯನ್ನು ಆರ್‌ಟಿಒ ಅನುಮೋದಿಸಿದೆ. ಮಹಾರಾಷ್ಟ್ರದ ಥಾಣೆ ಮೂಲದ ಇವಿ ಸ್ಟಾರ್ಟಪ್ ಕಂಪನಿ ಗೊಗೊಎ 1 ಇದನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದರ ಬೆಲೆ 35,000 ರೂಪಾಯಿ.

ಕೊಂಚ ದುಬಾರಿ..!

ಆದಾಗ್ಯೂ, ಅಸಲು ಮೊತ್ತದ ಜೊತೆಗೆ ನೀವು 6,300 ರೂ. ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಜೊತೆಗೆ ನೀವು ಬ್ಯಾಟರಿ ವೆಚ್ಚವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಒಟ್ಟಾರೆಯಾಗಿ ಇವಿ ಪರಿವರ್ತನೆ ಕಿಟ್ ಮತ್ತು ಬ್ಯಾಟರಿಯ ಬೆಲೆ 95,000 ರೂ. ಹೀರೋ ಸ್ಪ್ಲೆಂಡರ್ ಖರೀದಿಸಲು ನೀವು ಖರ್ಚು ಮಾಡುವ ಹಣಕ್ಕೆ ಇದು ಸೇರ್ಪಡೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ಹೀರೋ ಸ್ಪ್ಲೆಂಡರ್ ನಿಮಗೆ ಸಾಕಷ್ಟು ವೆಚ್ಚ ತಗಲುತ್ತದೆ. ಆದಾಗ್ಯೂ, ಇದು ಒಂದು ಬಾರಿ ಹೂಡಿಕೆಯಾಗಿರುತ್ತದೆ.

ಒಮ್ಮೆ ಚಾರ್ಜ್​​ ಮಾಡಿದ್ರೆ 151 ಕಿಮೀ ಚಲಿಸಬಹುದು

ಕಂಪನಿಯು ತನ್ನ ಕಿಟ್‌ ಗೆ 3 ವರ್ಷಗಳ ಗ್ಯಾರೆಂಟಿಯನ್ನು ನೀಡುತ್ತಿದೆ.  GoGoA1 ಇ ಒಂದು ಬಾರಿ ಚಾರ್ಜ್ ಮಾಡಿದರೆ 151 ಕಿಮೀ ವರೆಗೆ ಚಲಿಸಬಲ್ಲದು ಎಂದು ಹೇಳಿಕೊಂಡಿದೆ.  ಪ್ರಸ್ತುತ, ಭಾರತದ ಜನಪ್ರಿಯ ಕಂಪನಿಗಳು ಅಂತಹ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿಲ್ಲ. ಇದರ ಇಂಧನ ರೂಪಾಂತರಗಳು ಹೆಚ್ಚು ಮಾರಾಟವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈಗ GoGoA1 ಕಂಪನಿಯು ಜನರ ಮುಂದೆ ಒಂದು ಆಯ್ಕೆಯನ್ನು ಇಟ್ಟಿದೆ, ಆದರೆ ಇದು ತುಂಬಾ ದುಬಾರಿಯಾಗಿರುವುದು ಜನಕ್ಕೆ ಹೊರೆ ಎನಿಸಬಹುದು. ಮುಂಬರುವ ದಿನಗಳಲ್ಲಿ, ಹೀರೋ, ಬಜಾಜ್, ಯಮಹಾ, ಹೋಂಡಾ ಸೇರಿದಂತೆ ಅನೇಕ ದ್ವಿಚಕ್ರ ವಾಹನ ಕಂಪನಿಗಳು ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿವೆ.

ಇದನ್ನೂ ಓದಿ: Ola Electric Scooter: ಓಲಾ ಸ್ಕೂಟರ್ ಖರೀದಿಗೆ ಬ್ಯಾಂಕ್​​ಗಳಲ್ಲಿ ಸಾಲ ಲಭ್ಯ; EMI ಸಂಪೂರ್ಣ ಮಾಹಿತಿ ಇಲ್ಲಿದೆ

ಓಲಾ ಎಲೆಕ್ಟ್ರಿಕ್​ ಬೈಕ್​​​ ಗೆ  ಸಾಲ ಲಭ್ಯ

ಇನ್ನು ಇಂದು ಆನ್‌ಲೈನ್ ಮೂಲಕ Ola S1 ಮತ್ತು Ola S1 Pro ಸ್ಕೂಟರ್​​​​​ ಮಾರಾಟವನ್ನು ಆರಂಭಿಸುವುದಾಗಿ ಓಲಾ ಎಲೆಕ್ಟ್ರಿಕ್ ಘೋಷಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಎರಡು ಆವೃತ್ತಿಗಳನ್ನು ಆಗಸ್ಟ್ 15 ರಂದು ಕ್ರಮವಾಗಿ 99,999 ರೂ ಮತ್ತು 1,29,999 ರೂ. (ಎಕ್ಸ್ ಶೋರೂಂ, ಎಫ್‌ಎಎಂಇ- II ಸಬ್ಸಿಡಿ ಸೇರಿದಂತೆ) ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಓಲಾ ಎಸ್ 1 ಮತ್ತು ಎಸ್ 1 ಪ್ರೊ ಎರಡೂ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯವಾಗಿದೆ. ಖರೀದಿದಾರರು ಸಂಪೂರ್ಣ ಪಾವತಿ ಮಾಡಲು ಅಥವಾ ಕ್ಯುರೇಟೆಡ್ ಫೈನಾನ್ಸ್ ಆಯ್ಕೆಯನ್ನು ಆರಿಸಿಕೊಳ್ಳಬಹುದು.
Published by:Kavya V
First published: