Hero MotoCorp; ಇನ್ಮುಂದೆ ಬುಕ್​ ಮಾಡಿದರೆ ಮನೆ ಬಾಗಿಲಿಗೆ ಬೈಕ್​ ಡೆಲಿವರಿ

ಹೀರೋ ಕಂಪೆನಿ ತನ್ನ ಗ್ರಾಹಕರಿಗಾಗಿ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಆನ್​ಲೈನ್​ ಮೂಲಕ ಹೀರೋ ಬೈಕ್​ಗಳನ್ನು ಖರೀದಿಸಿದರೆ ನಿಗದಿತ ಅವಧಿಯೊಳಗೆ ಮನೆ ಬಾಗಿಲಿಗೆ ಬಂದು ಡೆಲಿವರಿ ನೀಡಲಿದೆ. ಈ ಹೋಂ ಡೆಲಿವರಿಗೆ 349 ರೂ. ಚಾರ್ಜ್​ ಮಾಡಲಿದೆ.

Harshith AS | news18
Updated:August 7, 2019, 9:27 AM IST
Hero MotoCorp; ಇನ್ಮುಂದೆ ಬುಕ್​ ಮಾಡಿದರೆ ಮನೆ ಬಾಗಿಲಿಗೆ ಬೈಕ್​ ಡೆಲಿವರಿ
ಹೀರೋ ಮೋಟೊಕಾರ್ಪ್
  • News18
  • Last Updated: August 7, 2019, 9:27 AM IST
  • Share this:
ಆನ್​ಲೈನ್​ನಲ್ಲಿ ಆರ್ಡರ್​ ಮಾಡುವ ​ಮೂಲಕ ನಿಮ್ಮ ಮನೆ ಬಾಗಿಲಿಗೆ ಆಹಾರ, ಗೃಹ ಉಪಯೋಗಿ ವಸ್ತುಗಳು ತರಿಸಿಕೊಳ್ಳಬಹುದು. ಇಂತಹದೇ ವ್ಯವಸ್ಥೆಗೆ ಹೀರೋ ಮೋಟೊಕಾರ್ಪ್ ​ಸಂಸ್ಥೆ ಮುಂದಾಗಿದ್ದು, ಆನ್​ಲೈನ್​ನಲ್ಲಿ​ ಬೈಕ್​ ಬುಕ್​ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಬಂದು ಡೆಲಿವರಿ ಮಾಡಲು ಮುಂದಾಗಿದೆ.

ಹೀರೋ ಕಂಪೆನಿ ತನ್ನ ಗ್ರಾಹಕರಿಗಾಗಿ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಆನ್​ಲೈನ್​ ಮೂಲಕ ಹೀರೋ ಬೈಕ್​ಗಳನ್ನು ಖರೀದಿಸಿದರೆ ನಿಗದಿತ ಅವಧಿಯೊಳಗೆ ಮನೆ ಬಾಗಿಲಿಗೆ ಬಂದು ಡೆಲಿವರಿ ನೀಡಲಿದೆ. ಈ ಹೋಂ ಡೆಲಿವರಿಗೆ 349 ರೂ. ಚಾರ್ಜ್​ ಮಾಡಲಿದೆ.

ಬೆಂಗಳೂರು, ಮುಂಬೈ, ಮತ್ತು ನೊಯ್ಡಾದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಕಂಪೆನಿ ತಿಳಿಸಿದೆ. ಮುಂದಿನ ದಿನಗಳಲ್ಲಿ 25 ನಗರದಲ್ಲಿ ಈ ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಈಗಾಗಲೆ ಆನ್​​ಲೈನ್​​​ನಲ್ಲಿ 4000ಕ್ಕೂ ಅಧಿಕ ಮುಂಗಡ ಬುಕ್ಕಿಂಗ್​ಗಳನ್ನು ಸ್ವೀಕರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಅರೆಸ್ಟ್? ಸಾಮಾಜಿಕ ತಾಣದಲ್ಲಿ ವಿಡಿಯೋ ವೈರಲ್​​

ಈ ಕುರಿತಂತೆ ಮಾತನಾಡಿದ ಹೀರೋ ಮೋಟೊಕಾರ್ಪ್​ ಮಾರಾಟದ ವಿಭಾಗದ ಮುಖ್ಯಸ್ಥ ಸಂಜಯ್​ ಬಾನ್​  ‘ ನಾವು ಮೊದಲ ಬಾರಿಗೆ ಆನ್​ಲೈನ್​ ಮೂಲಕ ಹೋಂ ಡೆಲಿವರಿ ಮಾಡುತ್ತಿದ್ದೇವೆ. ಜೊತೆಗೆ ಈ ಸೇವೆಯಿಂದ ಟ್ರೆಂಡ್​ ಸೃಷ್ಠಿಸಲಿದ್ದೇವೆ‘ ಎಂದರು.
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...