Maestro Edge 125: ಬ್ಲೂಟೂತ್​, ನ್ಯಾವಿಗೇಷನ್​, ಕರೆ ಎಚ್ಚರಿಕೆಯ ಫೀಚರ್ಸ್​​; ಹೀರೋ ಮಾಸ್ಟ್ರೋ ಎಡ್ಜ್ 125 ಹೇಗಿದೆ ಗೊತ್ತಾ?

ಮಂಗಳವಾರ ಬಿಡುಗಡೆಯಾದ ಗ್ಲಾಮರ್ Xtecನ ಬೆನ್ನಲ್ಲೇ ಹೊಸ ಮಾಸ್ಟ್ರೋ ಎಡ್ಜ್ 125, ಯಶಸ್ವೀ ಮಾಸ್ಟ್ರೋ ಬ್ರ್ಯಾಂಡ್‍ನ ಸದಾ ಬೆಳೆಯುತ್ತಿರುವ ಅಪೀಲ್‍ಗೆ ಇನ್ನಷ್ಟು ಸೇರಿಸಿ ಸ್ಟೈಲ್ ಮತ್ತು ತಂತ್ರಜ್ಞಾನದ ಸೂಕ್ತ ಸಂಯೋಜನೆಯನ್ನು ಒದಗಿಸುತ್ತಿದೆ.

Maestro Edge 125

Maestro Edge 125

  • Share this:
    ಬೆಂಗಳೂರು, ಜುಲೈ 23, 2021: ಸ್ಕೂಟರ್ ವರ್ಗದಲ್ಲಿನ ತನ್ನ ಪ್ರಬಲ ಬೆಳವಣಿಗೆ ಯೋಜನೆಗೆ ಅನುಗುಣವಾಗಿ, ಮೋಟಾರುಸೈಕಲ್ ಹಾಗು ಸ್ಕೂಟರ್​​ಗಳ ವಿಶ್ವದ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಇಂದು ಅತ್ಯಾಧುನಿಕವಾದ ‘ಸಂಪರ್ಕಗೊಂಡ’ ಮತ್ತು ಅಂಶಗಳಿಂದ ಕೂಡಿದ ಹೊಸ ಮಾಸ್ಟ್ರೋ ಎಡ್ಜ್ 125ಅನ್ನು ಪರಿಚಯಿಸಿತು.

    ಮಂಗಳವಾರ ಬಿಡುಗಡೆಯಾದ ಗ್ಲಾಮರ್ Xtecನ ಬೆನ್ನಲ್ಲೇ ಹೊಸ ಮಾಸ್ಟ್ರೋ ಎಡ್ಜ್ 125, ಯಶಸ್ವೀ ಮಾಸ್ಟ್ರೋ ಬ್ರ್ಯಾಂಡ್‍ನ ಸದಾ ಬೆಳೆಯುತ್ತಿರುವ ಅಪೀಲ್‍ಗೆ ಇನ್ನಷ್ಟು ಸೇರಿಸಿ ಸ್ಟೈಲ್ ಮತ್ತು ತಂತ್ರಜ್ಞಾನದ ಸೂಕ್ತ ಸಂಯೋಜನೆಯನ್ನು ಒದಗಿಸುತ್ತಿದೆ. ತನ್ನ ವರ್ಧಿತ ಸೌಂದರ್ಯ, ಆಧುನಿಕ ತಂತ್ರಜ್ಞಾನ ಹಾಗು ಚುರುಕಾದ ವಿನ್ಯಾಸದೊಂದಿಗೆ ಈ ಹೊಸ ಸ್ಕೂಟರ್ ಸಂಪರ್ಕಗೊಂಡ ಹಾಗು ವಿಶಿಷ್ಟವಾದ ಅನುಭವವನ್ನು ಒದಗಿಸುತ್ತದೆ.

    ಒಂದು ಪ್ರಬಲವಾದ ನಿಲುವಿನ ಮೇಲೆ ವಿನ್ಯಾಸಗೊಂಡಿರುವ ಮಾಸ್ಟ್ರೋ ಎಡ್ಜ್ 125, ವರ್ಗದಲ್ಲೇ ಮೊಟ್ಟಮೊದಲನೆಯದಾದ ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್, ಸಂಪೂರ್ಣವಾಗಿ ಡಿಜಿಟೀಕರಾಣಗೊಂಡಿರುವ ಸ್ಪೀಡೋಮೀಟರ್, ಕರೆ ಎಚ್ಚರಿಕೆಗಳು ಹಾಗು ತಿರುವಿನಿಂದ ತಿರುವಿನ ಸಂಚಾರಕ್ಕಾಗಿ ಹೀರೋ ಕನೆಕ್ಟ್ ಎಂಬ ಬ್ಲೂಟೂತ್ ಸಂಪರ್ಕ ಮತ್ತು ಹೊಸ ಚುರುಕಾದ ವಿನ್ಯಾಸ ಅಂಶಗಳೊಂದಿಗೆ ಅಧಿಕ ಮೌಲ್ಯ ಹಾಗು ಪ್ರೀಮಿಯಮ್ ಅನುಭವ ಒದಗಿಸುತ್ತದೆ.

    ದೇಶಾದ್ಯಂತ ಇರುವ ಹೀರೋ ಮೋಟೋಕಾರ್ಪ್ ಗ್ರಾಹಕ ಟಚ್‍ಪಾಯಿಂಟ್‍ಗಳಲ್ಲಿ ಕೌತುಕಮಯವಾದ ಹೊಸ ವರ್ಣಗಳಲ್ಲಿ ಲಭ್ಯವಿರುವ ಮಾಸ್ಟ್ರೋ ಎಡ್ಜ್ 125, ರೂ.72,250 (ಡ್ರಮ್ ವೈವಿಧ್ಯ)* ಮತ್ತು ರೂ.76,500 (ಡಿಸ್ಕ್ ವೈವಿಧ್ಯ)* ಹಾಗು ರೂ.79,750 (ಸಂಪರ್ಕಗೊಂಡ ವೈವಿಧ್ಯ)*ದ ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ.

    ಮಾಸ್ಟ್ರೋ ಎಡ್ಜ್ 125, ತಾನು ಪರಿಚಯಗೊಂಡಾಗಿನಿಂದಲೂ ಇತ್ತೀಚಿನ ತಂತ್ರಜ್ಞಾನ ಹಾಗು ಟ್ರೆಂಡ್‍ಗಳನ್ನು ಬಯಸುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಉನ್ನತೀಕರಣದೊಂದಿಗೆ ಹೀರೋಮೋಟೋಕಾರ್ಪ್, ಯುವಜನತೆ ಹಾಗು ತಂತ್ರಜ್ಞಾನ ಪ್ರಿಯರೊಂದಿಗಿನ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳುತ್ತಿದೆ.

    ಹೀರೋ ಮೋಟೋಕಾರ್ಪ್‍ನ ಯೋಜನೆ ಮತ್ತು ಜಾಗತಿಕ ಉತ್ಪನ್ನ ಯೋಜನೆ(Strategy and Global Product Planning)ವಿಭಾಗದ ಮುಖ್ಯಸ್ಥ ಮಾಲೊ ಲೆ ಮ್ಯಾಸ್ಸನ್, “125ಸಿಸಿ ಸ್ಕೂಟರ್ ವರ್ಗದಲ್ಲಿ ಮಾಸ್ಟ್ರೋ ಎಡ್ಜ್ 125, ಪ್ರಮುಖ ಉತ್ಪನ್ನವಾಗಿದೆ. ಈ ಹೊಸ ಅವತಾರದಲ್ಲಿ ನಾವು, ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್, ಡಿಜಿಟೀಕರಾಣಗೊಂಡಿರುವ ಸ್ಪೀಡೋಮೀಟರ್, ತಿರುವಿನಿಂದ ತಿರುವಿನ ಸಂಚಾರ, ಹಾಗು ಬ್ಲೂಟೂತ್ ಸಂಪರ್ಕತೆಯೊಂದಿಗೆ ಅದರ ‘ಎಡ್ಜ್’ಅನ್ನು ಇನ್ನಷ್ಟು ಚುರುಕುಗೊಳಿಸಿದ್ದೇವೆ. ಈ ನವೀಕರಣಗಳು, ನಮ್ಮ ಗ್ರಾಹಕರಿಗೆ ಹೆಚ್ಚಿನ ತಂತ್ರಜ್ಞಾನ ಹಾಗು ಅಂಶಗಳನ್ನು ಒದಗಿಸುವುದಕ್ಕಾಗಿ ನಮ್ಮ ಒಟ್ಟಾರೆ ಪೋರ್ಟ್‍ಪೋಲಿಯೋ ವರ್ಧನೆಯ ಭಾಗವಾಗಿದೆ.”ಎಂದರು.

    ಹೀರೋ ಮೋಟೋಕಾರ್ಪ್‍ನ ಮಾರಾಟ ಹಾಗು ಮಾರಾಟಾನಂತರ ವಿಭಾಗದ ಮುಖ್ಯಸ್ಥ ನವೀನ್ ಚೌಹಾನ್, “ಇತ್ತೀಚೆಗೆ ನಾವು ನಮ್ಮ ಸ್ಕೂಟರ್‍ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿದ್ದು ಹೊಸ ಮಾಸ್ಟ್ರೋ ಎಡ್ಜ್ 125ದೊಂದಿಗೆ ಈ ಟ್ರೆಂಡ್ ಮುಂದುವರಿಯುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ತನ್ನ ವರ್ಗದಲ್ಲೇ ಮೊಟ್ಟಮೊದಲನೆಯದಾದ ಅಂಶಗಳು ಮತ್ತು ಹೊಸ ವಿನ್ಯಾಸದೊಂದಿಗೆ, ಈ ಸ್ಕೂಟರ್ ದೇಶಾದ್ಯಂತದ ಯುವಜನತೆಯೊಂದಿಗೆ ಖಂಡಿತವಾಗಿಯೂ ಪ್ರತಿಧ್ವನಿಸುತ್ತದೆ.” ಎಂದರು.

    ಮಾಸ್ಟ್ರೋ ಎಡ್ಜ್ 125

    ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್

    ಹೊಸ ತೆಳುವಾದ ಹೆಡ್‍ಲ್ಯಾಂಪ್ ಅಧಿಕ ಸಾಮರ್ಥ್ಯ, ದ್ವಿಗುಣ ಬೆಳಕಿನ ಪ್ರಖರತೆ, ಮತ್ತು ರಸ್ತೆಯ ಮೇಲೆ ವರ್ಧಿತ ಗೋಚರತೆಗಾಗಿ ವಿಶಾಲವಾದ ಮತ್ತು ದೂರದ ಬೆಳಕಿನ ಪ್ರಸರಣವನ್ನು ಹೊಂದಿದೆ.

    ವಿನ್ಯಾಸ

    ಹೊಸ ಮಾಸ್ಟ್ರೋ ಎಡ್ಜ್ 125, ಸಂಪೂರ್ಣವಾಗಿ ಹೊಸದಾದ ಚುರುಕಾದ ಹೆಡ್‍ಲ್ಯಾಂಪ್, ಚುರುಕಾದ ಮುಂಬದಿ ವಿನ್ಯಾಸ, ಹೊಸ ಸ್ಪೋರ್ಟಿಡ್ಯುಯಲ್ ಟೋನ್ ಸ್ಟ್ರೈಪ್ ವಿನ್ಯಾಸ, ಮಾಸ್ಕ್ಡ್ ವಿಂಕರ್ಸ್ ಹಾಗು ಹೊಸ ಹರಳುಹೊಳಪಿನ ವರ್ಣಗಳೂ ಒಳಗೊಂಡಂತೆ ಅನೇಕ ಹೊಸ ವಿನ್ಯಾಸ ಅಂಶಗಳನ್ನು ಹೊಂದಿದೆ.

    ಸಂಪರ್ಕಗೊಂಡ ಅಂಶಗಳು

    ಮಾಸ್ಟ್ರೋ ಎಡ್ಜ್ 125, ಪಾಸ್‍ಕೀಯೊಡನೆ ಪೇರ್ ಮಾಡುವುದು, ಅತ್ಯುತ್ಕೃಷ್ಟ ಡಿಸ್ಪ್ಲೇ ಇರುವ ತಿರುವಿನಿಂದ ತಿರುವಿಗೆ ಚಾಲನೆ, ಮಿಸ್ಡ್ ಕಾಲ್ ಎಚ್ಚರಿಕೆ, ಒಳಬರುತ್ತಿರುವ ಕರೆ ಎಚ್ಚರಿಕೆ, RTMI (ರಿಯಲ್ ಟೈಮ್ ಮೈಲೇಜ್ ಇಂಡಿಕೇಶನ್), ಇಸಿಒ ಇಂಡಿಕೇಟರ್, ಮತ್ತು ಕಡಿಮೆ ಫ್ಯುಯೆಲ್ ಇಂಡಿಕೇಟರ್ ಮುಂತಾದ ಅಂಶಗಳಿರುವ ಬ್ಲೂಟೂತ್ ಸಂಪರ್ಕತೆಯಿರುವ ಸಂಪೂರ್ಣವಾಗಿ ಡಿಜಿಟೀಕರಣಗೊಂಡ ಸ್ಪೀಡೋಮೀಟರ್‍ಅನ್ನು ಹೊಂದಿದೆ.

    ಹೆಚ್ಚುವರಿಯಾಗಿ, ‘ಹೀರೋ ಕನೆಕ್ಟ್’ ಅನ್ನು ಸಾಮಾನ್ಯ ಫಿಟ್‍ಮೆಂಟ್ ಆಗಿ ಹೊಂದಿರುವ ಮೂಲಕ ಮಾಸ್ಟ್ರೋ ಎಡ್ಜ್ 125, ಗ್ರಾಹಕರಿಗೆ ಹೆಚ್ಚಿನ ಮೌಲ್ಯ ಮತ್ತು ಮನಶ್ಶಾಂತಿಯನ್ನೂ ಒದಗಿಸುತ್ತದೆ. ಹೀರೋ ಕನೆಕ್ಟ್, ಟಾಪಲ್ ಅಲರ್ಟ್, ಥೆಫ್ಟ್ ಅಲರ್ಟ್, ಫೈಂಡ್ ಮೈ ಪಾರ್ಕಿಂಗ್, ಟ್ರ್ಯಾಕ್ ಮೈ ವೆಹಿಕಲ್, ಟ್ರಿಪ್ ಅನಾಲಿಸಿಸ್ ಮುಂತಾದ ಎಂಟಕ್ಕೂ ಹೆಚ್ಚಿನ ಮುಖ್ಯವಾದ ಅಂಶಗಳನ್ನು ಹೊಂದಿದೆ.

    ಹೊಸ ವರ್ಣಗಳು

    ಮಾಸ್ಟ್ರೋ ಎಡ್ಜ್ 125ದ ಸಂಪರ್ಕಗೊಂಡ ವೈವಿಧ್ಯಗಳು ಎರಡು ಹೊಸ ಪ್ರಿಸ್ಮಾಟಿಕ್(ಹರಳಿನಂತೆಹೊಳೆಯುವ) ವರ್ಣಗಳಲ್ಲಿ, ಅಂದರೆ, ಪ್ರಿಸ್ಮಾಟಿಕ್ ಯೆಲ್ಲೊ ಮತ್ತು ಪ್ರಿಸ್ಮಾಟಿಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ. ಡಿಸ್ಕ್ ವೈವಿಧ್ಯವು ಆರು ವರ್ಣಗಳಲ್ಲಿ ಲಭ್ಯವಿದೆ- ಕ್ಯಾಂಡಿ ಬ್ಲೇಜಿಂಗ್ ರೆಡ್, ಪ್ಯಾಂಥರ್ ಬ್ಲ್ಯಾಕ್, ಪರ್ಲ್ ಸಿಲ್ವರ್ ವೈಟ್, ಮ್ಯಾಟ್ಟ್ ಟೆಕ್ನೋ ಬ್ಲೂ, ಪ್ರಿಸ್ಮಾಟಿಕ್ ಯೆಲ್ಲೊ ಮತ್ತು ಪ್ರಿಸ್ಮಾಟಿಕ್ ಪರ್ಪಲ್. ಡ್ರಮ್ ವೈವಿಧ್ಯವು ನಾಲ್ಕು ವರ್ಣಗಳಲ್ಲಿ ಲಭ್ಯವಿದೆ- ಕ್ಯಾಂಡಿ ಬ್ಲೇಜಿಂಗ್ ರೆಡ್, ಪ್ಯಾಂಥರ್ ಬ್ಲ್ಯಾಕ್, ಪರ್ಲ್ ಸಿಲ್ವರ್ ವೈಟ್ ಮತ್ತು ಮ್ಯಾಟ್ಟ್ ಟೆಕ್ನೋ ಬ್ಲೂ.

    ಇಂಜಿನ್

    ಮಾಸ್ಟ್ರೋ ಎಡ್ಜ್ 125, ‘XSens ತಂತ್ರಜ್ಞಾನ’ವಿರುವ 124.6ಸಿಸಿBS-VI ಅನುಸರಣೆಯ ಪ್ರೊಗ್ರಾಮ್‍ಗೊಂಡ ಫ್ಯುಯೆಲ್ ಇಂಜೆಕ್ಷನ್ ಇಂಜಿನ್‍ನ ಶಕ್ತಿ ಹೊಂದಿದ್ದು, 9 BHP @ 7000 RPM ದಲ್ಲಿ ಶಕ್ತಿ ಔಟ್‍ಪುಟ್ ಹಾಗು 10.4 NM @ 5500 RPM ದಲ್ಲಿ ಟಾರ್ಕ್-ಆನ್-ಡಿಮ್ಯಾಂಡ್ ಒದಗಿಸುತ್ತದೆ.
    Published by:Harshith AS
    First published: