HOME » NEWS » Tech » HERO MOTOCORP INTRODUCES NEW BS6 VERSION OF XPULSE 200T HG

ಗ್ರಾಹಕರನ್ನು ಮೋಡಿ ಮಾಡುತ್ತಿರುವ ಹೀರೋ BS​6 ಎಕ್ಸ್​ಪಲ್ಸ್​ 200T; ನೂತನ ಬೈಕ್​ ಬೆಲೆ ಎಷ್ಟು?

Hero MotoCorp BS6 Xpulse 200T: ಹೀರೋ BS6 ಎಕ್ಸ್​ಪಲ್ಸ್​ 200ಟಿ ಬೈಕ್​ ಸೆಲ್ಫ್​​​​ ಹಾಗೂ ಕಿಕ್​ ಸ್ಟಾರ್ಟಿಂಗ್​ ಹೊಂದಿದೆ. 5 ಸ್ಪೀಡ್​​ ಕಾಂಸ್ಟಂಟ್​​ ಮೆಶ್​ ಗಿಯರ್​ ಬಾಕ್ಸ್​​ ಇದರಲ್ಲಿದೆ.

news18-kannada
Updated:March 15, 2021, 4:36 PM IST
ಗ್ರಾಹಕರನ್ನು ಮೋಡಿ ಮಾಡುತ್ತಿರುವ ಹೀರೋ BS​6 ಎಕ್ಸ್​ಪಲ್ಸ್​ 200T; ನೂತನ ಬೈಕ್​ ಬೆಲೆ ಎಷ್ಟು?
BS6 Xpulse 200T
  • Share this:
ಹೀರೋ ಬಿಎಸ್​6 ಎಂಜಿನ್​ ಅಳವಡಿಸಿರುವ ಎಕ್ಸ್​ಪಲ್ಸ್​​ 200ಟಿ ಅನ್ನು ಮಾರ್ಚ್​ 13ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ನೂತನ ಬೈಕ್​ 17.8 ಹೆಚ್​ಪಿ ಪವರ್​ ಮತ್ತು 16.15 ಎನ್​ಎಂ ಟಾರ್ಕ್​ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 8500 ಆರ್​ಪಿಎಂ​ ಮೇಲೆ 13.3ಕೆಡಬ್ಲ್ಯು/18.1ಪಿಎಸ್​ ಗರಿಷ್ಟ ಪವರ್​ ಉತ್ಪಾದಿಸುತ್ತದೆ.  16.15 ಎನ್​ಎಮ್​@ 6500 ಆರ್​ಪಿಎಂ ಗರಿಷ್ಟ ಟಾರ್ಕ್​ ಅನ್ನು ಉತ್ಪಾದಿಸುತ್ತದೆ. ಆಫ್​ ರೋಡಿಗೆ ಈ ಬೈಕ್​ ಹೇಳಿದ ಮಾಡಿಸಿದ ಹಾಗಿದೆ.

ಹೀರೋ ಎಕ್ಸ್​ಪಲ್ಸ್​ 200ಟಿ ಬೈಕ್​ ಸೆಲ್ಫ್​​​​ ಹಾಗೂ ಕಿಕ್​ ಸ್ಟಾರ್ಟಿಂಗ್​ ಹೊಂದಿದೆ. 5 ಸ್ಪೀಡ್​​ ಕಾಂಸ್ಟಂಟ್​​ ಮೆಶ್​ ಗಿಯರ್​ ಬಾಕ್ಸ್​​ ಇದರಲ್ಲಿದೆ. ಮುಂಭಾಗದಲ್ಲಿ ಆಂಟಿ ಫಿಕ್ಸನ್​ಬುಶ್​ ಜೊತೆಗೆ ಟೆಲಿಸ್ಕಾಪಿಕ್​, ರಿಯರ್​-7 ಸ್ಟೆಪ್​ ರೈಡರ್​ ಅಡೆಸ್ಟೆಬಲ್​​ ಮೊನೊಶಾಕ್​ ಸಸ್ಪೆಂಶನ್​​ ನೀಡಿದೆ.

ಬೈಕಿನ ಫಂಟ್​​ ಸಿಂಗಲ್​​ ಚಾನೆಲ್​ ಎಬಿಎಸ್​​ 276ಎಮ್​ಎಮ್​ ಡಿಸ್ಕ್​​​​, ರಿಯರ್​-220ಎಮ್​ಎಮ್​ ಡಿಸ್ಕ್​​ ಬ್ರೆಕ್ಸ್​ ಹೊಂದಿದೆ. ನೂತನ ಬೈಕಿನ ಬೆಲೆ 1,12,800 ರೂ ನಿಗದಿಪಡಿಸಿದೆ. ಬಿಎಸ್​4 ಎಂಜಿನ್​ ಹೊಂದಿರುವ ಹೀರೋ ಎಕ್ಸ್​ಪಲ್ಸ್​ ಬೆಲೆ 95,500 ರೂ. ಆಗಿದ್ದು, ಬಿಎಸ್​6 ಎಕ್ಸ್​ಪಲ್ಸ್​ ಬೆಲೆ 17,300 ರೂ ಹೆಚ್ಚಳವಾಗಿದ್ದನ್ನು ಕಾಣಬಹುದಾಗಿದೆ. ಈ ಬೈಕ್​ ಕೆಂಪು, ಪ್ಯಾಂಥರ್​ ಬ್ಲ್ಯಾಕ್​ ಮತ್ತು ಮ್ಯಾಟಿಯೊ ಶೀಲ್ಡ್​ಗೋಲ್ಡ್​ ಬಣ್ಣದಲ್ಲಿ ಖರೀದಿಸಲು ಸಿಗಲಿದೆ.
Youtube Video

ರಾಯಲ್ ಎನ್​ಫೀಲ್ಡ್​​ ​ಹಿಮಾಲಯ (ಬಿಎಸ್​6)

ರಾಯಲ್ ಎನ್​ಫೀಲ್ಡ್​​ ​ಹಿಮಾಲಯ (ಬಿಎಸ್​6) ಎಂಜಿನ್​​ ಹೊಂದಿರುವ ಬೈಕ್​  411ಸಿಸಿ ಎಂಜಿನ್​ ಹೊಂದಿದ್ದು, 24.31ಪಿಎಸ್​ ಪವರ್​ 32 ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಡಬಲ್​ ಡಿಸ್ಕ್​ ಹೊಂದಿರುವ ಈ ಬೈಕ್​ ಡುಯೆಲ್​ ಚಾನೆಲ್​​​ ಹೊಂದಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಜಿಪಿಎಸ್​​ ಕನೆಕ್ಷನ್​, ಡಿಜಿಟಲ್​ ಕಂಪಾಸ್​​, ಟೆಂಪರೇಚರ್​ ರೇಡ್​ಔಟ್​​, ಗೇರ್​ ಪೊಷಿಶನ್​ ಇಂಡಿಕೇಟರ್​, ಫ್ಯುಯೆಲ್​​ ಗೇಜ್​, ಟಚ್​ಮೀಟರ್​, ಸ್ಪೀಡ್​ ಮೀಟರ್​ ಇದರಲ್ಲಿದೆ. ಹಿಮಾಲಯ ಬಿಎಸ್​6 ಎಂಜಿನ್ ಬೈಕ್​ ಬೆಲೆ 2,01,314 ರೂ ಆಗಿದೆ.
Published by: Harshith AS
First published: March 15, 2021, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories