Hero Electric-Jio bp: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆ ಹೆಚ್ಚಳಕ್ಕೆ ಜಿಯೋ-ಬಿಪಿ ಜೊತೆ ಹೀರೋ ಎಲೆಕ್ಟ್ರಿಕ್‌ ಒಪ್ಪಂದ

ಜಿಯೋ-ಬಿಪಿ ಮತ್ತು ಹೀರೋ ಎಲೆಕ್ಟ್ರಿಕ್‌ ಆ್ಯಪ್‌ಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ, ಎರಡೂ ಕಂಪನಿಗಳು ತಾವು ಎಲೆಕ್ಟ್ರಿಫಿಕೇಶನ್‌ನಲ್ಲಿ ಹೊಂದಿರುವ ಅನುಭವವನ್ನು ಬಳಸಿಕೊಳ್ಳಲಿವೆ ಮತ್ತು ಗ್ರಾಹಕ ಅನುಭವವನ್ನು ಉತ್ತಮಗೊಳಿಸಲು ಇದನ್ನು ಬಳಸಿಕೊಳ್ಳಲಿವೆ.

ಜಿಯೋ-ಬಿಪಿ

ಜಿಯೋ-ಬಿಪಿ

  • Share this:
    ಮುಂಬೈ, 26 ಆಗಸ್ಟ್‌ 2022: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle) ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಿಯೋ ಬಿಪಿ (Jio BP) ಜೊತೆಗೆ ಹೀರೋ ಎಲೆಕ್ಟ್ರಿಕ್‌ (Hero Electric) ಒಪ್ಪಂದ ಮಾಡಿಕೊಳ್ಳಲಿದೆ. ಈ ಪ್ರಸ್ತಾವಿತ ಒಪ್ಪಂದದ ಅಡಿಯಲ್ಲಿ ಹೀರೋ ಎಲೆಕ್ಟ್ರಿಕ್‌ ಗ್ರಾಹಕರು ಜಿಯೋ-ಬಿಪಿ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ನೆಟ್‌ವರ್ಕ್ (Network) ಅನ್ನು ಬಳಸಬಹುದಾಗಿದೆ.

    ಜಿಯೋ-ಬಿಪಿ ಮತ್ತು ಹೀರೋ ಎಲೆಕ್ಟ್ರಿಕ್‌ ಆ್ಯಪ್‌ಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ, ಎರಡೂ ಕಂಪನಿಗಳು ತಾವು ಎಲೆಕ್ಟ್ರಿಫಿಕೇಶನ್‌ನಲ್ಲಿ ಹೊಂದಿರುವ ಅನುಭವವನ್ನು ಬಳಸಿಕೊಳ್ಳಲಿವೆ ಮತ್ತು ಗ್ರಾಹಕ ಅನುಭವವನ್ನು ಉತ್ತಮಗೊಳಿಸಲು ಇದನ್ನು ಬಳಸಿಕೊಳ್ಳಲಿವೆ.

    ಜಿಯೋ-ಬಿಪಿ ಪಲ್ಸ್‌ ಬ್ರ್ಯಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ಸ್ಟೇಷನ್‌ಗಳನ್ನು ಜಿಯೋ-ಬಿಪಿ ನಿರ್ವಹಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಆ್ಯಪ್‌ ಮೂಲಕ ಗ್ರಾಹಕರು ಸುಲಭವಾಗಿ ಸಮೀಪದ ಸ್ಟೇಷನ್‌ಗಳನ್ನು ಕಂಡುಕೊಳ್ಳಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್‌ ಮಾಡಬಹುದು. ಅಲ್ಲದೆ, ಭಾರತದ ಅತಿದೊಡ್ಡ ಇವಿ ನೆಟ್‌ವರ್ಕ್‌ ಆಗುವ ದೃಷ್ಟಿಕೋನ ಹೊಂದಿರುವ ಜಿಯೋ ಬಿಪಿ, ಎಲೆಕ್ಟ್ರಿಕ್ ವಾಹನ ಮೌಲ್ಯ ಸರಪಣಿಯಲ್ಲಿ ಎಲ್ಲ ಪಾಲುದಾರರಿಗೂ ಅನುಕೂಲವನ್ನು ಕಲ್ಪಿಸುವ ವ್ಯವಸ್ಥೆ ರೂಪಿಸಲಿದೆ.

    ಇದನ್ನೂ ಓದಿ: Dosa Printer: ಮಾರುಕಟ್ಟೆಗೆ ಬಂದಿದೆ ದೋಸೆ ಪ್ರಿಂಟ್​ ಮಾಡುವ ಯಂತ್ರ! ಖರೀದಿಸಲು ಕ್ಯೂ ನಿಂತ ಮಹಿಳೆಯರು

    Electric Vehicles: ಎಲೆಕ್ಟ್ರಿಕ್​ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್​ ಅಪ್​ಡೇಟ್​! ಸೆಪ್ಟೆಂಬರ್​ 1 ರಿಂದ ಹೊಸ ನಿಯಮ ಜಾರಿ

    ಮೊದಲೆಲ್ಲಾ ದ್ವಿಚಕ್ರ ವಾಹನ (Two Wheler) ಕೊಂಡುಕೊಳ್ಳುವುದು ಅಂದರೆ ವಿಮಾನ ಕೊಂಡುಕೊಳ್ಳುವಂತೆ ಫೀಲ್​ ಇತ್ತು. ಹಣ (Money) ಹೆಚ್ಚು ಅಂತೇನಲ್ಲ. ಅದೊಂದು ರೀತಿಯ ಪ್ರತಿಷ್ಠೆ ಎಂದರೆ ತಪ್ಪಾಗಲ್ಲ. ಈಗೆಲ್ಲಾ ಎಲ್ಲೇ ನೋಡಿದರೂ ಗಾಡಿಗಳದ್ದೇ ಅಬ್ಬರ. ಪ್ರತಿ ಮನೆ (House) ಗೂ ಕಡಿಮೆ ಅಂದರೆ ಎರಡು ದ್ವಿಚಕ್ರ ವಾಹಗಳಿರುತ್ತೆ. ಈಗೆಲ್ಲಾ ಗಾಡಿ ಖರೀದಿಸುವುದು 5 ನಿಮಿಷದ ಕೆಲಸ. ಯಾರೂ ಬೇಕಾದರೂ ದ್ವಿಚಕ್ರ ವಾಹನ ಖರೀದಿ ಮಾಡಬಹುದು. ಅದ್ರಲ್ಲೂ ಈಗ ಎಲೆಕ್ಟ್ರಿಕ್​ ವಾಹನಗಳ (Electric Vehicles) ಅಬ್ಬರ ಎಂದರೇ ತಪ್ಪಾಗಲ್ಲ. ಹೆಚ್ಚು ಜನರು ಎಲೆಕ್ಟ್ರಿಕ್​ ವಾಹನಗಳ ಮೊರೆ ಹೋಗುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಸಬ್ಸಿಡಿ (Electric Vehicle Subsidy) ಮತ್ತು ಪಿಎಲ್‌ಐ (PLI) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಬಿಗಿಗೊಳಿಸಿದೆ.

    ಸಬ್ಸಿಡಿ ನಿಯಮಗಳಲ್ಲಿ ಬದಲಾವಣೆ!

    ಇಲ್ಲಿಯವರೆಗೆ, ಕಂಪನಿಗಳು ARI ಅಥವಾ ITR ನಲ್ಲಿ ಇ-ವಾಹನಗಳನ್ನು ಪರೀಕ್ಷಿಸುತ್ತಿವೆ. ಕಂಪನಿಗಳು ಇ-ವಾಹನಗಳಿಗೆ ಭಾಗಗಳನ್ನು ಸೋರ್ಸಿಂಗ್ ಮತ್ತು ಪರೀಕ್ಷೆ ಮಾಡುವ ಮೂಲಕ ಸಬ್ಸಿಡಿ ನೀಡುತ್ತಿವೆ. ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾದ ಘಟನೆಗಳು ನಡೆದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಗ್ರಾಹಕರ ಸುರಕ್ಷತೆ ಮತ್ತು ಇ-ವಾಹನಗಳ ನ್ಯೂನತೆಗಳ ಬಗ್ಗೆ ಗಮನ ಹರಿಸಿದೆ.

    ಗುಣಮಟ್ಟದ ಬಿಡಿ ಭಾಗಗಳ ಬಗ್ಗೆ ಹೆಚ್ಚಿನ ಗಮನ!

    ಗುಣಮಟ್ಟವಿಲ್ಲದ ಬಿಡಿ ಭಾಗಗಳನ್ನು ಅಳವಡಿಸಿ ಕಂಪನಿಗಳು ವಾಹನಗಳನ್ನು ತಯಾರಿಸುತ್ತಿವೆ ಎಂದು ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿತ್ತು. ಕೆಲವೆಡೆ ವಿದ್ಯುತ್​ ಚಾಲಿತ ವಾಹನಗಳಿಗೆ ಬೆಂಕಿ ಹಚ್ಚಿಕೊಂಡಿದ್ದ ಘಟನೆಗಳು ಆಗಾಗ ನಡೆಯುತ್ತಿವೆ. ಜೊತೆಗೆ ಹಲವು ಮಂದಿ ಎಲೆಕ್ಟಿಕ್​ ವಾಹನಗಳಿಗೆ ತಮ್ಮ ಕೈಯಾರೆ ಬೆಂಕಿ ಇಟ್ಟಿದ್ದರು. ಅದೇ ಸಮಯದಲ್ಲಿ, ಪರೀಕ್ಷೆಗೆ ಕಳುಹಿಸಲಾದ ವಾಹನಗಳಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸುವ ಮೂಲಕ ಕಂಪನಿಗಳು ಪ್ರಮಾಣೀಕರಣವನ್ನು ಪಡೆಯುತ್ತವೆ ಎಂದು ನಂಬಲಾಗಿತ್ತು. ಅದೇ ವೇಳೆ ಗ್ರಾಹಕರಿಗೆ ನೀಡುವ ಇ-ವಾಹನಗಳಲ್ಲಿ ಕಡಿಮೆ ಗುಣಮಟ್ಟದ ಬಿಡಿ ಭಾಗಗಳನ್ನು ಬಳಸಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರ ಸಬ್ಸಿಡಿ ಮತ್ತು ಪಿಎಲ್‌ಐ ಯೋಜನೆ ನಿಯಮಗಳನ್ನು ಬಿಗಿಗೊಳಿಸಿದೆ.

    ಇದನ್ನೂ ಓದಿ: Honda Shine Celebration: ಹೋಂಡಾ ಶೈನ್​ ಸೆಲೆಬ್ರೇಷನ್​ ಎಡಿಷನ್​ ಬಿಡುಗಡೆ! ಇದು ಗಣೇಶ ಹಬ್ಬದ ಉಡುಗೊರೆ

    ಹೊಸ ನಿಯಮಗಳಿಂದ ಏನು ಪ್ರಯೋಜನ?

    ಸರ್ಕಾರದ ಹೊಸ ನಿಯಮಗಳ ಪ್ರಕಾರ, ಪ್ರತಿ ಇ-ವಾಹನದಲ್ಲಿ ಬಳಸುವ ಬಿಡಿಭಾಗಗಳ ಮೂಲದ ಸಂಪೂರ್ಣ ಮಾಹಿತಿಯನ್ನು ಕಂಪನಿಗಳು ಒದಗಿಸಬೇಕಾಗುತ್ತದೆ. CNBC TV18 ವರದಿಯ ಪ್ರಕಾರ, ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಅನ್ನು ಈಗ FAME-2 ಗೆ ಲಿಂಕ್ ಮಾಡಬೇಕಾಗುತ್ತದೆ. ಇದು ಇ-ವಾಹನಗಳನ್ನು ಸುರಕ್ಷಿತವಾಗಿಸುವುದಲ್ಲದೆ ಸ್ಥಳೀಯ ಬಿಡಿಭಾಗಗಳ ತಯಾರಕರನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಿಂದ ವಾಹನಗಳಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳ ಬಳಕೆ ಮತ್ತು ಕಾರುಗಳಿಗೆ ಬೆಂಕಿ ಹಚ್ಚುವ ಘಟನೆಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ನಂಬಿದೆ.

    ಎಲೆಕ್ಟ್ರಿಕ್ ವಾಹನ ತಯಾರಕರು ಇ-ವಾಹನಗಳಲ್ಲಿ ಬಳಸುವ ಭಾಗಗಳ ಮೂಲ ಕಂಪನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಚಾರ್ಟರ್ಡ್ ಅಕೌಂಟೆಂಟ್‌ನಿಂದ ಪ್ರಮಾಣೀಕರಿಸಬೇಕು. ಇದು ಕಂಪನಿಗಳು ಕಡಿಮೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸುವುದನ್ನು ವಿರೋಧಿಸುತ್ತದೆ ಮತ್ತು ಇ-ವಾಹನಗಳಲ್ಲಿ ಉತ್ತಮ ಭಾಗಗಳನ್ನು ಬಳಸುತ್ತದೆ. CNBC TV18 ವರದಿಯ ಪ್ರಕಾರ, ಇ-ವಾಹನಗಳಿಗೆ ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಸೆಪ್ಟೆಂಬರ್ 1, 2022 ರಿಂದ ಜಾರಿಗೆ ತರಲಾಗುವುದು.
    Published by:Harshith AS
    First published: