ಮಾರುಕಟ್ಟೆಗೆ ಹೊಸ ಹೀರೋ ಇ-ಸ್ಕೂಟರ್​​: ಒಂದು ಬಾರಿ ಚಾರ್ಜ್​ ಮಾಡಿದರೆ 100 ಕಿ.ಮೀ ಮೈಲೇಜ್​

ಕೇಂದ್ರ ಸರ್ಕಾರ ಇಲೆಕ್ಟ್ರಾನಿಕ್ ವಾಹನಗಳನ್ನು ಜಾರಿಗೆ ತರುವಲ್ಲಿ ಹೆಚ್ಚು ಒತ್ತು ನೀಡುತ್ತಿದ್ದು, ಅನೇಕ ಕಂಪೆನಿಗಳು ಇಲೆಕ್ಟ್ರಾನಿಕ್ ವಾಹನಳನ್ನು ಬಿಡುಗಡೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಹೀರೋ ಇಲೆಕ್ಟ್ರಿಕ್​ ಕಂಪೆನಿ ಕೂಡ ಇಲೆಕ್ಟ್ರಾನಿಕ್​​​​ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

Updated:August 21, 2019, 2:54 PM IST
ಮಾರುಕಟ್ಟೆಗೆ ಹೊಸ ಹೀರೋ ಇ-ಸ್ಕೂಟರ್​​: ಒಂದು ಬಾರಿ ಚಾರ್ಜ್​ ಮಾಡಿದರೆ 100 ಕಿ.ಮೀ ಮೈಲೇಜ್​
ಆಪ್ಟಿಮಾ ಇಆರ್
  • Share this:
ಹೀರೋ ಕಂಪೆನಿ ಆಪ್ಟಿಮಾ ಇಆರ್​ ಹಾಗೂ ಎನ್​ವೈಎಕ್ಸ್​ ಇಆರ್​ ಹೆಸರಿನ ಇಲೆಕ್ಟ್ರಿಕ್​ ಸ್ಕೂಟರ್​​ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರ ಇಲೆಕ್ಟ್ರಾನಿಕ್ ವಾಹನಗಳನ್ನು ಜಾರಿಗೆ ತರುವಲ್ಲಿ ಹೆಚ್ಚು ಒತ್ತು ನೀಡುತ್ತಿದ್ದು, ಅನೇಕ ಕಂಪೆನಿಗಳು ಇಲೆಕ್ಟ್ರಾನಿಕ್ ವಾಹನಳನ್ನು ಬಿಡುಗಡೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಹೀರೋ ಇಲೆಕ್ಟ್ರಿಕ್​ ಕಂಪೆನಿ ಕೂಡ ಇಲೆಕ್ಟ್ರಾನಿಕ್​​​​ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಹೀರೋ ಬಿಡುಗಡೆಗೊಳಿಸಿದ ಆಪ್ಟಿಮಾ ಇಆರ್ ಸ್ಕೂಟರ್​  ಬೆಲೆ 71,543 (ಎಕ್ಸ್​ ಶೋರೂಂ ಬೆಲೆ) ಆಗಿದೆ. ಅಂತೆಯೇ, ಎನ್​ವೈಎಕ್ಸ್​ ಸ್ಕೂಟರ್​ ಬೆಲೆ 68,721(ಎಕ್ಸ್​ ಶೋರೂಂ ಬೆಲೆ) ರೂ ಎಂದು ನಿಗದಿ ಪಡಿಸಿದೆ. ನೂತನ ಸ್ಕೂಟರ್​ನಲ್ಲಿ  ಡ್ಯುಯೆಲ್​ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ 100 ಕಿ.ಮಿ ಮೈಲೇಜ್​ ನೀಡಲಿದೆ. ​ಇದನ್ನೂ ಓದಿ: ರಾಜ್ಯದ ಬಿಜೆಪಿ ಮುಖಂಡರನ್ನು ಒಗ್ಗೂಡಿಸಿಕೊಂಡು ಹೋಗುವ ವಿಶ್ವಾಸವಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು

ಈ ಕುರಿತು ಹೀರೋ ಇಲೆಕ್ಟ್ರಿಕ್​ ಇಂಡಿಯಾ ಕಂಪೆನಿ ಸಿಇಓ ಸೋಹಿಂದರ್​ ಗಿಲ್ ಮಾತನಾಡಿ ‘ ನಾವು ಗ್ರಾಹಕರಿಗಾಗಿ ಹಿರೋ ಇಲೆಕ್ಟ್ರಾನಿಕ್​ ವಾಹನವನ್ನು ಪರಿಚಯಿಸಲು ಮುಂದಾಗಿದ್ದೇವೆ.  ಬಿಡುಗಡೆಗೊಳಿಸಲಾದ ಇ-ಸ್ಕೂಟರ್​ನಲ್ಲಿ ಉತ್ತಮ ಕಾರ್ಯದಕ್ಷತೆ ನೀಡಲಿದೆ‘ ಎಂದು ಹೇಳಿದರು.

ಕೇಂದ್ರ ಸರ್ಕಾರ ಇಲೆಕ್ಟ್ರಾನಿಕ್​ ವಾಹನಗಳ ತಯಾರಿಕೆಗೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮುಂದಿನ 10 ವರ್ಷದಲ್ಲಿ ಭಾರತ ಪೆಟ್ರೋಲ್​ ವಾಹನಗಳಿಂದ ಇಲೆಕ್ಟ್ರಿಕ್​ ವಾಹನಗಳ ಬಳಕೆಗೆ ಮೊರೆ ಹೋಗಲು ಸಾಧ್ಯವಿದೆ ಎಂದು ಹೇಳಿದ್ದಾರೆ.
First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ