Hero Ev Scooter: ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಉಚಿತವಾಗಿ ಪಡೆಯಿರಿ..! ಹೇಗೆ ಗೊತ್ತಾ..?

Hero Electric Scooter: ಕಂಪನಿಯು ಪ್ರತಿದಿನ ಒಬ್ಬರು ಅದೃಷ್ಟಶಾಲಿ ಗ್ರಾಹಕರನ್ನು ಘೋಷಿಸುತ್ತದೆ, ಆ ಗ್ರಾಹಕರು ತಮ್ಮಿಷ್ಟದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಉಚಿತವಾಗಿ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.

Hero Electric Scooter

Hero Electric Scooter

  • Share this:
    Hero Electric scooter for free: ಈಗ ದೇಶಾದ್ಯಂತ ಹಬ್ಬಗಳ ಸಾಲು ಸಾಲು. ಅದರಲ್ಲೂ, ದಸರಾ - ದೀಪಾವಳಿಯಂತಹ ಪ್ರಮುಖ ಭಾರತೀಯ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಜನಸಾಮಾನ್ಯರಿಗೆ ಮಾತ್ರವಲ್ಲ, ಮಾರಾಟಗಾರರಿಗೂ ಹಬ್ಬವೋ ಹಬ್ಬ. ಈ ಸಮಯದಲ್ಲಿ ಹಲವು ವಸ್ತುಗಳಿಗೆ ವಿವಿಧ ಆಫರ್‌ಗಳನ್ನು ಘೋಷಿಸಲಾಗುತ್ತದೆ. ಇದೇ ರೀತಿ, ಈ ವರ್ಷದ ಹಬ್ಬದ ಋತುವಿನಲ್ಲಿ ಹೀರೋ ಎಲೆಕ್ಟ್ರಿಕ್ (Hero Electric ) ಮಂಗಳವಾರ ಭಾರತದಲ್ಲಿ ತನ್ನ ಸಂಪೂರ್ಣ ಶ್ರೇಣಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಶ್ರೇಣಿಗಳಿಗೆ ತನ್ನ 30 ದಿನಗಳಲ್ಲಿ, 30 ಬೈಕುಗಳ ಹಬ್ಬದ ಕೊಡುಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತು.

    ಇದೇನಪ್ಪಾ 30 ದಿನಗಳಲ್ಲಿ, 30 ಬೈಕುಗಳ ಹಬ್ಬದ ಕೊಡುಗೆ ಅಂತೀರಾ.. ? ಹೊಸ ಹಬ್ಬದ ಆಫರ್‌ನ ಭಾಗವಾಗಿ, ಅದೃಷ್ಟಶಾಲಿ ಗ್ರಾಹಕರು ಭಾರತದ ಎಲ್ಲಾ 700+ ಡೀಲರ್‌ಶಿಪ್‌ಗಳಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಗೆ ಉಚಿತವಾಗಿ ಸವಾರಿ ಮಾಡುವ ಅಥವಾ ಮನೆಗೆ ಉಚಿತವಾಗಿ ತೆಗೆದುಕೊಂಡು ಹೋಗುವ ಅವಕಾಶ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯು ಪ್ರತಿದಿನ ಒಬ್ಬರು ಅದೃಷ್ಟಶಾಲಿ ಗ್ರಾಹಕರನ್ನು ಘೋಷಿಸುತ್ತದೆ, ಆ ಗ್ರಾಹಕರು ತಮ್ಮಿಷ್ಟದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಉಚಿತವಾಗಿ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.

    ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವ ಎಲ್ಲಾ ಗ್ರಾಹಕರು ಸ್ವಯಂಚಾಲಿತವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಕಂಪನಿ ಘೋಷಿಸಿದೆ. ಇನ್ನು, ಈ ಭರ್ಜರಿ ಆಫರ್‌ ಯಾವಾಗಿನಿಂದ ಅಂತೀರಾ..? ಈಗಾಗಲೇ ಆರಂಭವಾಗಿದೆ.. ತಡ ಮಾಡಬೇಡಿ..

    ಹೌದು, ಹೊಸ ಪ್ರಕಟಣೆ ಅಕ್ಟೋಬರ್ 7 ರಿಂದ ನವೆಂಬರ್ 7 ರವರೆಗೆ ಮಾನ್ಯವಾಗಿರುತ್ತದೆ. ಹೊಸ ಸ್ಪರ್ಧೆಯ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ನಂತರ ಸಂಪೂರ್ಣ ಎಕ್ಸ್ ಶೋರೂಂ ಬೆಲೆಯನ್ನು ಮರುಪಾವತಿ ಅಥವಾ ರೀಫಂಡ್‌ ಮಾಡಲಾಗುತ್ತದೆ.

    ಈ ಸಂಬಂಧ ಮಾತನಾಡಿದ ಹೀರೋ ಎಲೆಕ್ಟ್ರಿಕ್ ಸಿಇಒ ಸೋಹಿಂದರ್ ಗಿಲ್, "ಹಸಿರು ಚಲನಶೀಲತೆ ಪರಿಹಾರಗಳನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸುವ ಸಲುವಾಗಿ, ಹೀರೋ ಎಲೆಕ್ಟ್ರಿಕ್‌ ಕಂಪನಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನವನ್ನು ಖರೀದಿಸಲು ಬಯಸುವ ದೇಶಾದ್ಯಂತದ ಗ್ರಾಹಕರಿಗೆ ಅನನ್ಯ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಹೀರೋ ಎಲೆಕ್ಟ್ರಿಕ್ ಕುಟುಂಬವನ್ನು ವಿಸ್ತರಿಸಲು ಮತ್ತು ಸಂಭ್ರಮಾಚರಣೆಯ ಭಾಗವಾಗಿ 30 ಅದೃಷ್ಟಶಾಲಿ ಗ್ರಾಹಕರು ತಮ್ಮ ಇಚ್ಛೆಯ ಎಲೆಕ್ಟ್ರಿಕ್ 2 ವೀಲರ್‌ (ದ್ವಿಚಕ್ರ ವಾಹನ) ಅನ್ನು ಉಚಿತವಾಗಿ ಚಲಾಯಿಸಲು ಇದು ಒಂದು ರೋಮಾಂಚಕಾರಿ ಸಮಯವಾಗಿದೆ. ನಾವೆಲ್ಲರೂ ಒಂದು ಮಹಾನ್ ಹಬ್ಬದ ಋತುವಿಗೆ ಸಜ್ಜಾಗಿದ್ದು, ಅದು ಭಾರತಕ್ಕೆ ವಿದ್ಯುತ್ ವಾಹನ ಕ್ರಾಂತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಚಾಲನೆ ನೀಡುತ್ತದೆ’’ ಎಂದು ಅವರು ಹೇಳಿದ್ದಾರೆ.

    ಇನ್ನು, ಹೀರೋ ಎಲೆಕ್ಟ್ರಿಕ್ ತನ್ನ ದ್ವಿಚಕ್ರ ವಾಹನಗಳ ಬುಕ್ಕಿಂಗ್‌ಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಸೇವೆಗಳನ್ನು ನೀಡುತ್ತಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಗ್ರಾಹಕರು ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಬಹುದು, ಅಥವಾ ಭಾರತದಲ್ಲಿರುವ ಹೀರೋ ಡೀಲರ್‌ಶಿಪ್‌ಗೆ ಹೋಗಿಯೂ ಖರೀದಿಸಬಹುದು ಎಮದು ಕಂಪನಿ ಹೇಳಿಕೊಂಡಿದೆ.

    Read Also: JioFiber vs Airtel vs BSNL: 1 ಸಾವಿರಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಬ್ರಾಡ್​ಬ್ಯಾಂಡ್ ಪ್ಲಾನ್​ಗಳು..

    ಅಲ್ಲದೆ, ಗ್ರಾಹಕರಿಗೆ ಖರೀದಿ ಅನುಭವವನ್ನು ಸುಲಭವಾಗಿಸಲು ಕೈಗೆಟುಕುವ ಇಎಂಐಗಳೊಂದಿಗೆ ಸುಲಭ ಹಣಕಾಸು ಆಯ್ಕೆಗಳನ್ನು ಕಂಪನಿಯು ಒದಗಿಸುತ್ತದೆ. ಇದು ತನ್ನ ಎಲ್ಲಾ ಉತ್ಪನ್ನಗಳನ್ನು ಹೋಂ ಡೆಲಿವರಿಯೊಂದಿಗೆ 5 ವರ್ಷಗಳ ವಿಸ್ತೃತ ಖಾತರಿ ಅವಧಿಯನ್ನೂ ನೀಡುತ್ತದೆ.
    First published: