Electric vehicle: ಪೆಟ್ರೋಲ್‌ ಬೆಲೆ ಜಾಸ್ತಿಯಾಗಿದೆ, ಈಗಿರುವ ನಿಮ್ಮ ಕಾರನ್ನೇ ಎಲೆಕ್ಟ್ರಿಕ್ ಕಾರ್ ಆಗಿ ಚೇಂಜ್ ಮಾಡ್ಕೊಳ್ಳಿ! ಹೀಗೆ ಮಾಡಿ ಸಾಕು

ನಿಮ್ಮ ಇಂಧನ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವ ಹೆಚ್ಚಿನ ಕಂಪನಿಗಳು ಹೈದರಾಬಾದ್‌ನಲ್ಲಿವೆ ಎಂದು ಹೇಳಬಹುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್(Petrol) ಮತ್ತು ಡೀಸೆಲ್ (Diesel) ಬೆಲೆ ನೋಡಿ ನೀವು ನಿಮ್ಮ ಮನಸ್ಸಿನಲ್ಲಿ ಒಮ್ಮೆಯಾದರೂ “ಏನಪ್ಪಾ ಇದು ಇಂಧನ ಬೆಲೆ ಹೀಗೆ ಹೆಚ್ಚುತ್ತಿದೆ, ಇದೆಲ್ಲವನ್ನು ಬಿಟ್ಟು ಎಲೆಕ್ಟ್ರಿಕ್ ಕಾರನ್ನು ತೆಗೆದುಕೊಳ್ಳುವುದು ಉತ್ತಮ” ಎಂದು ಅಂದು ಕೊಂಡಿರುತ್ತೀರಿ.ಈಗಂತೂ ಎಲೆಕ್ಟ್ರಿಕ್ ಕಾರುಗಳು(Electric cars) ಮತ್ತು ದ್ವಿಚಕ್ರ ವಾಹನಗಳು ಬಂದಿದ್ದು, ಅವುಗಳಲ್ಲಿ ಓಡಾಡುವುದರಿಂದ ವಾಯು ಮಾಲಿನ್ಯವು (Air Pollution) ಸಹ ಆಗುವುದಿಲ್ಲ. ಒಟ್ಟಿನಲ್ಲಿ ನಮ್ಮ ಜೇಬಿಗೆ ಮತ್ತು ಪರಿಸರಕ್ಕೂ ಎಲೆಕ್ಟ್ರಿಕ್ ವಾಹನಗಳು(Environment) ಸೂಕ್ತವಾದ ಆಯ್ಕೆಯಾಗಿದೆ.

ಈಗ ನೀವು ನಿಮ್ಮ ಬಳಿ ಇರುವಂತಹ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಮಾರಿ ನಂತರ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವುದು ನಿಮ್ಮ ಜೇಬಿಗೆ ತುಂಬಾ ಭಾರ ಎನ್ನಿಸುತ್ತಿದ್ದರೆ, ಇಲ್ಲಿದೆ ಒಂದು ಮಾರ್ಗ. ಈಗ ನಿಮ್ಮ ಬಳಿ ಇರುವಂತಹ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ.

ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತನೆ
ದೇಶದಲ್ಲಿ ಹೆಚ್ಚುತ್ತಿರುವ ಇಂಧನ ವೆಚ್ಚವು ದೀರ್ಘಾವಧಿಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಹೆಚ್ಚು ಮಿತವ್ಯಯಕಾರಿಯನ್ನಾಗಿ ಮಾಡುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಗಿಂತ ಹೆಚ್ಚು ದುಬಾರಿಯಾಗಿರುವುದರಿಂದ ನೀವು ನಿಮ್ಮ ಬಳಿಯಿರುವ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿಕೊಳ್ಳಬಹುದು.

ಇದನ್ನೂ ಓದಿ: ಒಂದು ಬಾರಿ ಚಾರ್ಜ್​ ಮಾಡಿದ್ರೆ 1 ಸಾವಿರ ಕಿ.ಮೀ ಕ್ರಮಿಸುತ್ತೆ! ಏನ್​ ಸಖತ್ತಾಗಿದೆ ಗುರು ಈ ಕಾರು!

ನಿಮ್ಮ ಬಳಿ ಇರುವ ವಾಹನಗಳಿಗೆ ಸುಮಾರು 4-5 ಲಕ್ಷ ರೂ. ವೆಚ್ಚದಲ್ಲಿ ನಿಮ್ಮ ಇಂಧನ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುವ ಕಂಪನಿಗಳಿವೆ. ಮೋಟರ್‌ನ ವ್ಯಾಟ್ ಶಕ್ತಿ ಮತ್ತು ಸ್ಥಾಪಿತ ಬ್ಯಾಟರಿ ಸಾಮರ್ಥ್ಯವು ಬೆಲೆಯನ್ನು ನಿರ್ಧರಿಸುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಟಿವಿ ಮಾಧ್ಯಮದ ವರದಿಯ ಪ್ರಕಾರ, 12 ಕಿಲೋ ವ್ಯಾಟ್ ಲಿಥಿಯಂ-ಅಯಾನ್ ಬ್ಯಾಟರಿ ಮತ್ತು 20 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್‌ಗೆ ವೆಚ್ಚವು 4 ಲಕ್ಷ ರೂಪಾಯಿಯವರೆಗೆ ಬರಬಹುದು.

ಇಂಧನ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಹೇಗೆ ಪರಿವರ್ತಿಸುತ್ತಾರೆ?
ನಿಮ್ಮ ಇಂಧನ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವ ಹೆಚ್ಚಿನ ಕಂಪನಿಗಳು ಹೈದರಾಬಾದ್‌ನಲ್ಲಿವೆ ಎಂದು ಹೇಳಬಹುದು. ಈ ವಾಹನಗಳನ್ನು ಹೀಗೆ ಪರಿವರ್ತಿಸಿದಾಗ ಬಹುತೇಕವಾಗಿ ಎಲ್ಲಾ ಯಾಂತ್ರಿಕ ಭಾಗಗಳನ್ನು ಬದಲಾಯಿಸಲಾಗುತ್ತದೆ. ಇಂಧನ ಟ್ಯಾಂಕ್, ಎಂಜಿನ್, ಎಂಜಿನ್‌ಗೆ ಶಕ್ತಿ ತಲುಪಿಸುವ ಕೇಬಲ್ ಎಲ್ಲವನ್ನೂ ರೋಲರ್, ಕಂಟ್ರೋಲರ್, ಮೋಟರ್, ಬ್ಯಾಟರಿ ಮತ್ತು ಬ್ಯಾಟರಿ ಚಾರ್ಜರ್‌ನಂತಹ ಎಲೆಕ್ಟ್ರಿಕ್ ಭಾಗಗಳಿಂದ ಬದಲಾಯಿಸಲಾಗುತ್ತದೆ. ಒಟ್ಟು ಪ್ರಕ್ರಿಯೆಯು 7 ದಿನಗಳವರೆಗೆ ತೆಗೆದುಕೊಳ್ಳಬಹುದು.

ಈ ಪರಿವರ್ತನೆಯ ನಂತರ ಪ್ರತಿ ಕಿಲೋಮೀಟರ್‌ಗೆ ನೀವು ಪಡೆಯುವ ವ್ಯತ್ಯಾಸದ ಬಗ್ಗೆ ತಿಳಿಯೋಣ ಬನ್ನಿ, ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್‌ನಲ್ಲಿ ಚಲಿಸುವ ಟಾಟಾ ನೆಕ್ಸನ್‌ನ ಉದಾಹರಣೆಯನ್ನು ನಾವು ಇಲ್ಲಿ ಬಳಸಬಹುದು.

ಇಂಧನ ಮತ್ತು ಎಲೆಕ್ಟ್ರಿಕ್ ವಾಹನದ ವ್ಯತ್ಯಾಸ ತಿಳಿಯಿರಿ
ನೆಕ್ಸನ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಡಿಸೆಂಬರ್ 2019ರಲ್ಲಿ ಪರಿಚಯಿಸಲಾಯಿತು. ನೆಕ್ಸನ್ ಇಂಧನ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ 16 ರಿಂದ 22 ಕಿಲೋಮೀಟರ್ ಮೈಲೇಜ್ ಒದಗಿಸುತ್ತದೆ. ಪ್ರತಿ ಲೀಟರ್‌ಗೆ 100 ರೂಪಾಯಿ ಮತ್ತು ಮೈಲೇಜ್ ಅನ್ನು ಪ್ರತಿ ಲೀಟರ್‌ಗೆ 16 ಕಿಲೋ ಮೀಟರ್ ಎಂದು ಪರಿಗಣಿಸಿದರೆ, ಕಾರಿನ ವೆಚ್ಚವು ಕಿಲೋಮೀಟರ್‌ಗೆ ಸುಮಾರು 6.25 ಪೈಸೆಗಳಷ್ಟಿರುತ್ತದೆ. ಡೀಸೆಲ್ ಲೀಟರ್‌ಗೆ 95 ರೂಪಾಯಿ ಮತ್ತು ಪ್ರತಿ ಲೀಟರ್‌ಗೆ ಮೈಲೇಜ್ ಅನ್ನು 22 ಕಿಲೋ ಮೀಟರ್ ಎಂದು ಪರಿಗಣಿಸಿರುವುದರಿಂದ, ವೆಚ್ಚವು ಪ್ರತಿ ಕಿಲೋಮೀಟರ್‌ಗೆ 4.31 ಪೈಸೆಗಳಷ್ಟು ಬರುತ್ತದೆ.

ಇದನ್ನೂ ಓದಿ: Electric SUV: ಡಿಮ್ಯಾಂಡಪ್ಪೋ ಡಿಮ್ಯಾಂಡು... ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಕಂಡ ಎಸ್‍ಯುವಿಗಳ ಪಟ್ಟಿ ಇಲ್ಲಿದೆ

ಈಗ ನೆಕ್ಸನ್‌ನ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ, ನಾವು ಪ್ರತಿ ಯೂನಿಟ್‌ಗೆ 6 ರೂಪಾಯಿ ವಿದ್ಯುತ್ ವೆಚ್ಚವೆಂದು ಪರಿಗಣಿಸಿದರೆ, ಸಂಪೂರ್ಣವಾಗಿ ಚಾರ್ಜ್ ಮಾಡಲು 181.2 ರೂಪಾಯಿ ಬೇಕಾಗುತ್ತದೆ ಮತ್ತು ಸುಮಾರು 300 ಕಿಲೋ ಮೀಟರ್‌ವರೆಗೆ ಓಡುತ್ತದೆ. ಈ ರೀತಿಯಾಗಿ, ಪ್ರತಿ ಕಿಲೋಮೀಟರ್‌ಗೆ ಅದರ ವೆಚ್ಚವು 60 ಪೈಸೆಗಳ ಹತ್ತಿರ ಬರುತ್ತದೆ.
Published by:vanithasanjevani vanithasanjevani
First published: